For Quick Alerts
ALLOW NOTIFICATIONS  
For Daily Alerts

ಮಾರ್ಚ್ 2021ರಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು: ಈ ತಿಂಗಳಿನಲ್ಲಿ 11 ದಿನಗಳು ತುಂಬಾನೇ ವಿಶೇಷ

|

ಶಿವರಾತ್ರಿ, ಹೋಳಿ ಹಬ್ಬದ ನಿರೀಕ್ಷೆ ಮಾಡುತ್ತಿರುವವರಿಗೆ ಮಾರ್ಚ್‌ ತಿಂಗಳು ತುಂಬಾನೇ ವಿಶೇಷವಾಗಿದೆ. ಈ ಹಬ್ಬಗಳು ಇದೇ ಮಾರ್ಚ್‌ ತಿಂಗಳಿನಲ್ಲಿದೆ. ಅದಲ್ಲದೆ ರಾಮನವಮಿ ಹಬ್ಬವೂ ಇದೇ.

2021ರ ಮಾರ್ಚ್‌ ತಿಂಗಳಿನಲ್ಲಿ ಬರುವ ಹಬ್ಬ -ಹರಿದಿನಗಳು, ವ್ರತ, ಸಂಕಷ್ಠಿ ಇವುಗಳ ಕುರಿತು ಮಾಹಿತಿ ಇಲ್ಲಿದೆ:

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ ಪ್ರಧಾನ ಆಚಾರ್ಯ ಶ್ರೀನಿವಾಸ್ ರಾವ್ (ಗುರೂಜಿ)

ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಮೋಸ, ಗಂಡ-ಹೆಂಡತಿ ಕಿರಿಕಿರಿ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಹೀಗೆ ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ .

ವಿಶೇಷ ಸೂಚನೆ: ತಾಂಬೂಲ ಪ್ರಶ್ನೆ, ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಜ್ಯೋತಿಷ್ಯ ತಿಳಿಸುವರು ಶ್ರೀ ಕೇರಳಿಯ ಅಥರ್ವಣ ವೇದದ ಶಾಸ್ತ್ರೀಯ ಪೂಜಾ ಪದ್ಧತಿಯಿಂದ (5) ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ, ನಂಬಿ ಕರೆ ಮಾಡಿ ಪರಿಹಾರ ಶತಸಿದ್ಧ :ವಿಳಾಸ:#27 ,12th main 4th block Jayanagar Bangalore ☎️9986623344

ಮಾರ್ಚ್‌ 2, ಮಂಗಳವಾರ: ಸಂಕಷ್ಠಿ ಚತುರ್ಥಿ

ಮಾರ್ಚ್‌ 2, ಮಂಗಳವಾರ: ಸಂಕಷ್ಠಿ ಚತುರ್ಥಿ

ಈ ದಿನ ವಿಘ್ನ ನಿವಾರಕನ ಆರಾಧನೆ ಮಾಡಲಾಗುವುದು. ಸಂಕಷ್ಠಿ ಆಚರಿಸುವುದರಿಂದ ಸಂಕಲ್ಪ ನೆರವೇರುವುದು, ಸಕಲ ಕಷ್ಟಗಳು ದೂರವಾಗುವುದು. ಈ ದಿನ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.

ಮಾರ್ಚ್ 9, ಮಂಗಳವಾರ: ವಿಜಯ ಏಕಾದಶಿ

ಮಾರ್ಚ್ 9, ಮಂಗಳವಾರ: ವಿಜಯ ಏಕಾದಶಿ

ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪ ಕಾರ್ಯಗಳಿಗೆ, ಪ್ರಾಯಶ್ಚಿತ ಆಗಬೇಕಾದರೆ ಏಕಾದಶಿ ವ್ರತ ಆಚರಿಸಬೇಕು. ವಿಜಯ ಏಕಾದಶಿ ಆಚರಿಸುವುದರಿಂದ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಹೊಂದಬಹುದು.

ಮಾರ್ಚ್ 10, ಬುಧವಾರ: ಪ್ರದೋಷ ವ್ರತ

ಮಾರ್ಚ್ 10, ಬುಧವಾರ: ಪ್ರದೋಷ ವ್ರತ

ಈ ವ್ರತ ಆಚರಣೆ ಮಾಡುವುದರಿಂದ ಶಿವ-ಪಾರ್ವತಿ ಆಶೀರ್ವಾದ ನಿಮ್ಮ ಮೇಲಿರುವುದು. ಈ ದಿನ ಉಪವಾಸವಿದ್ದು ವ್ರತ ಆಚರಣೆ ಮಾಡಿದರೆ ಯಾವುದೇ ದೋಷವಿದ್ದರೂ ನಿವಾರಣೆಯಾಗುತ್ತೆ.

ಮಾರ್ಚ್‌ 11, ಗುರುವಾರ: ಮಹಾ ಶಿವರಾತ್ರಿ

ಮಾರ್ಚ್‌ 11, ಗುರುವಾರ: ಮಹಾ ಶಿವರಾತ್ರಿ

ಈ ದಿನ ಪರಶಿವನಿಗೆ ಮೀಸಲಾದ ದಿನ. ಮಹಾಶಿವರಾತ್ರಿಯದು ಉಪವಾಸಿದ್ದು, ಜಾಗರಣೆ ಮಾಡಿ ಶಿವನ ನಾಮ ಹೇಳುತ್ತಾ ಆಚರಣೆ ಮಾಡಲಾಗುವುದು. ಹಿಂದೂಗಳ ಪ್ರಮುಖ ಹಬ್ಬವಾಗಿರುವ ಶಿವ ರಾತ್ರಿಯನ್ನು ಸಡಗರದಿಂದ ಆಚರಿಸಲಾಗುವುದು.

ಮಾರ್ಚ್ 13, ಫಾಲ್ಗುಣ ಅಮವಾಸ್ಯೆ

ಮಾರ್ಚ್ 13, ಫಾಲ್ಗುಣ ಅಮವಾಸ್ಯೆ

ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಫಾಲ್ಗುಣ ಅಮವಾಸ್ಯೆಯೆಂದು ಆಚರಿಸಲಾಗುವುದು. ಈ ದಿನ ಉಪವಾಸ ವ್ರತ ಮಾಡಿದರೆ ಸಂತೋಷ, ಸಂಪತ್ತು, ಅದೃಷ್ಟ ಲಭಿಸುತ್ತದೆ. ಈ ದಿನ ಸ್ವರ್ಗಸ್ಥರಾದ ಹಿರಿಯರಿಗೆ ತರ್ಪಣ ನೀಡಲಾಗುವುದು. ಇದು ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಬಂದರೆ ಇದರ ಪ್ರಭಾವ ಸೂರ್ಯಗ್ರಹಣಕ್ಕಿಂತಲೂ ಅಧಿಕವಾಗಿರುತ್ತದೆ.

ಮಾರ್ಚ್‌ 14 ಭಾನುವಾರ: ಮೀನ ಸಂಕ್ರಾಂತಿ

ಮಾರ್ಚ್‌ 14 ಭಾನುವಾರ: ಮೀನ ಸಂಕ್ರಾಂತಿ

ಹಿಂದೂ ಕ್ಯಾಲೆಂಡರ್‌ನ 12ನೇ ತಿಂಗಳಿನ ಪ್ರಾರಂಭದ ದಿನವನ್ನು ಮೀನ ಸಂಕ್ರಾಂತಿ ಎಂದು ಆಚರಿಸಲಾಗುವುದು. ಈ ದಿನ ಸೂರ್ಯ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ದಾನ, ಧರ್ಮ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಮಾರ್ಚ್ 25, ಗುರುವಾರ: ಅಮಲಾಕಿ ಏಕಾದಶಿ

ಮಾರ್ಚ್ 25, ಗುರುವಾರ: ಅಮಲಾಕಿ ಏಕಾದಶಿ

ಫಾಲ್ಗುಣಿ ತಿಂಗಳ 11ನೇ ದಿನ ಈ ಏಕಾದಶಿ ಆಚರಿಸಲಾಗುವುದು. ಈ ದಿನ ನೆಲ್ಲಿಕಾಯಿ ಗಿಡವನ್ನು ಪೂಜಿಸಲಾಗುವುದು. ಇದು ಹೋಳಿ ಹಬ್ಬದ ಪ್ರಾರಂಭದ ದಿನವೂ ಆಗಿದೆ.

26, ಶುಕ್ರವಾರ: ಪ್ರದೋಷ ವ್ರತ

26, ಶುಕ್ರವಾರ: ಪ್ರದೋಷ ವ್ರತ

ಈ ದಿನ ಶಿವ-ಪಾರ್ವತಿಯನ್ನು ಪೂಜಿಸಲಾಗುವುದು. ಪ್ರದೋಷ ವ್ರತದಿಂದ ಉಪವಾಸವಿದ್ದು ಶಿವನಿಗೆ ಪೂಜೆ ಸಲ್ಲಿಸಿದರು ಶುಭ ಉಂಟಾಗುವುದು ಎಂಬ ನಂಬಿಕೆ.

28, ಭಾನುವಾರ: ಹೋಳಿಕಾ ದಹನ್, ಫಾಲ್ಗುಣಿ ಪೂರ್ಣಿಮಾ ವ್ರತ

28, ಭಾನುವಾರ: ಹೋಳಿಕಾ ದಹನ್, ಫಾಲ್ಗುಣಿ ಪೂರ್ಣಿಮಾ ವ್ರತ

ದುಷ್ಟ ಶಕ್ತಿಯನ್ನು ದೂರ ಮಾಡುವುದರ ಸಂಕೇತವಾಗಿ ಹೋಳಿಕಾ ದಹನ್ ಆಚರಿಸಲಾಗುವುದು. ಇದನ್ನು ಉತ್ತರ ಭಾರತದ ಕಡೆ ಹೆಚ್ಚಾಗಿ ಆಚರಿಸಲಾಗುದು.

29, ಸೋಮವಾರ : ಹೋಳಿ

29, ಸೋಮವಾರ : ಹೋಳಿ

ರಂಗಿನ ಹಬ್ಬ ಹೋಳಿ. ವಿವಿಧ ಬಣ್ಣಗಳಂತೆ ಬದುಕು ಕೂಡ ರಂಗೇರಲಿ ಎಂದು ಹಾರೈಸುವ ದಿನ.

31, ಬುಧವಾರ: ಸಂಕಷ್ಟಿ ಚತುರ್ಥಿ

31, ಬುಧವಾರ: ಸಂಕಷ್ಟಿ ಚತುರ್ಥಿ

ಈ ದಿನ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲಾಗುವುದು. ಗಣೇಶನಿಗೆ ಗರಿಕೆ ಹುಲ್ಲು ಅರ್ಪಿಸಿ ಪೂಜಿಸಿ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ ಪ್ರಧಾನ ಆಚಾರ್ಯ ಶ್ರೀನಿವಾಸ್ ರಾವ್ (ಗುರೂಜಿ)

ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಮೋಸ, ಗಂಡ-ಹೆಂಡತಿ ಕಿರಿಕಿರಿ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಹೀಗೆ ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ .

ವಿಶೇಷ ಸೂಚನೆ: ತಾಂಬೂಲ ಪ್ರಶ್ನೆ, ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಜ್ಯೋತಿಷ್ಯ ತಿಳಿಸುವರು ಶ್ರೀ ಕೇರಳಿಯ ಅಥರ್ವಣ ವೇದದ ಶಾಸ್ತ್ರೀಯ ಪೂಜಾ ಪದ್ಧತಿಯಿಂದ (5) ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ, ನಂಬಿ ಕರೆ ಮಾಡಿ ಪರಿಹಾರ ಶತಸಿದ್ಧ :ವಿಳಾಸ:#27 ,12th main 4th block Jayanagar Bangalore ☎️9986623344

English summary

Festivals And Vrats In The Month Of March 2021

Festivals and Vrats in the month of March 2021, Read on,
X