For Quick Alerts
ALLOW NOTIFICATIONS  
For Daily Alerts

ಸುರಕ್ಷತೆ ಮುಖ್ಯ, ಬೈಕ್ ಹಿಂದೆ ಕುಳಿತ ನಾಯಿಗೆ ಹೆಲ್ಮೆಟ್!

|

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮದ ಕುರಿತು ಹೆಚ್ಚಿನವರು ಜಾಗರೂಕರಾಗಿದ್ದಾರೆ. ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಎನ್ನುತ್ತಿದ್ದಾರೆ. ಇದರ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಇದೀಗ ತಮಿಳುನಾಡಿನಲ್ಲಿ ಬೈಕ್ ಸವಾರನ ಹಿಂದೆ ಕುಳಿತಿದ್ದ ನಾಯಿ ಕೂಡ ಹೆಲ್ಮೆಟ್ ಹಾಕಿ ಸವಾರಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಯಿಯನ್ನು ಬೈಕ್ ಅಥವಾ ಸ್ಕೂಟರ್ ಮುಂಭಾಗದಲ್ಲಿ ಕೂರಿಸಿರುವ ವಿಡಿಯೋ ಸಾಕಷ್ಟು ನೋಡಿದ್ದೇವೆ. ಆದರೆ ಬೈಕ್ ಸವಾರನಂತೆ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿರುವುದು ಇದೇ ಮೊದಲು. ಪ್ರಮೋದ್ ಮಾಧವ್ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ತಮಿಳುನಾಡಿನಲ್ಲಿ ಸುರಕ್ಷತೆಗಾಗಿ ನಾಯಿ ಹೆಲ್ಮೆಟ್ ಧರಿಸಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲೇ ನೆಟ್ಟಿಗರ ಗಮನಸೆಳೆದಿದೆ. ಇಷ್ಟೇ ಅಲ್ಲ ದೇಶದಲ್ಲೇ ಸಂಚಲನ ಮೂಡಿಸಿದೆ.

ತಮಿಳುನಾಡಿನ ಟ್ರಾಫಿಕ್ ರಸ್ತೆಯಲ್ಲಿ ಬೈಕ್ ಸವಾರನ ಹಿಂದೆ ನಾಯಿ, ಮನುಷ್ಯರಂತೆ ಕುಳಿತಿದೆ. ನಾಯಿ ತನ್ನ ಎರಡು ಕೈಗಳನ್ನು ಸವಾರನ ಭುಜದ ಮೇಲಿಟ್ಟಿದೆ. ಇಷ್ಟೇ ಅಲ್ಲ ಹೆಲ್ಮೆಟ್ ಧರಿಸಿ ಎಲ್ಲರಂತೆ ರಸ್ತೆಯಲ್ಲಿ ಸಂಚರಿಸುವ ದೃಶ್ಯ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಾಯಿ ಹೇಗೆ ಬ್ಯಾಲೆನ್ಸ್ ಮಾಡಿ ಕುಳಿತಿದೆ ಅನ್ನೋದು ಕೂಡ ಚರ್ಚೆಯಾಗುತ್ತಿದೆ.

ಇದರ ಜೊತೆಗೆ ಈ ವಿಡಿಯೋಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವರು ನಾಯಿಯ ಹೆಲ್ಮೆಟ್ ಪ್ರಯಾಣಕ್ಕೆ ಮೆಚ್ಚುಗೆ ಹಾಗೂ ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಇನ್ನು ಹಲವರು ನಾಯಿಯನ್ನು ಈ ರೀತಿ ಬೈಕ್ ಮೇಲೆ ಕೂರಿಸಿಕೊಂಡು ಪ್ರಯಾಣ ಮಾಡುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ಬೈಕ್ ಸವಾರ, ನಾಯಿ ಹಾಗೂ ಇತರರ ಸುರಕ್ಷತೆ ಮುಖ್ಯ. ಸಾರ್ವಜನಿಕ ರಸ್ತೆಯಲ್ಲಿ ಈ ರೀತಿಯ ಸರ್ಕಸ್ ಸರಿಯಲ್ಲ ಎಂದು ಟೀಕಿಸಿದ್ದಾರೆ.

English summary

Dog wearing helmet going in bike video goes viral

Here is Internet sensation video of Dog wearing helmet in Tamil Nadu watch this. Dog was wearing helmet sitting behind bike rider as a human watch this
Story first published: Thursday, January 9, 2020, 11:30 [IST]
X
Desktop Bottom Promotion