For Quick Alerts
ALLOW NOTIFICATIONS  
For Daily Alerts

ವಿವಾಹ ಪಂಚಮಿ 2021: ವೈವಾಹಿಕ ಜೀವನದ ಸಮಸ್ಯೆಗೆ ಜ್ಯೋತಿಶಾಸ್ತ್ರದ ಸರಳ ಪರಿಹಾರಗಳು

|

ಮದುವೆ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಪವಿತ್ರ ಬಂಧ, ಇದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ನಂಬಲಾಗಿದೆ. ಸಂತೋಷದ ವೈವಾಹಿಕ ಬದುಕು ಪ್ರತಿಯೊಂದು ದಂಪತಿಯ ಕನಸಿನ ಬದುಕಾಗಿರುತ್ತದೆ. ಅವರು ಜೀವನಕ್ಕಾಗಿ ಪರಸ್ಪರ ಪ್ರೀತಿಸುವ ಮತ್ತು ಬೆಂಬಲಿಸುವ ಭರವಸೆ ನೀಡುತ್ತಾರೆ. ಆದ್ದರಿಂದ, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಒಬ್ಬರ ಸಂಪೂರ್ಣ ಯೋಗಕ್ಷೇಮದ ಮೇಲೆ ಆಳವಾದ ಪರಿಣಾಮ ಬೀರಬಹುದು. ಗೊಂದಲದ ಮದುವೆಯು ನಿಮ್ಮ ಜೀವನದ ಪ್ರತಿಯೊಂದು ಅಂಶವನ್ನು ತೊಂದರೆಗೊಳಿಸಬಹುದು.

marriage
ಆದರೂ, ಸಂಬಂಧ ಎಂದ ಮೇಲೆ ಜಗಳ, ಕೋಪ ಮುನಿಸು ಇದ್ದೇ ಇರುತ್ತದೆ. ಆದರೆ ಯಾವುದೇ ಮುನಿಸು, ಜಗಳ ದೀರ್ಘಕಾಲದವರೆಗೆ ಮುಂದುವರಿದರೆ ಅಥವಾ ಪ್ರೀತಿ ಸಂತೋಷದ ಬದುಕಿಗಿಂತ ನೋವಿನ ಬದುಕೇ ಹೆಚ್ಚಾದರೆ ಯಾರಿಗಾದರೂ ಸಂಬಂಧದ ಮೇಲೆ ತಾತ್ಸಾರ ಆರಂಭವಾಗುತ್ತದೆ. ವಿವಾಹ ಪಂಚಮಿ ವಿಶೇಷ ದಂಪತಿಗಳ ನಡುವೆ ಸಂಬಂಧಕ್ಕೆ ಬಿರುಕು ಮೂಡದಂತೆ ತಡೆಯುವ ಜ್ಯೋತಿಶಾಸ್ತ್ರದ ಪರಿಹಾರಗಳು ಯಾವುದು, ಹೇಗೆ, ಶಾಂತಿಯುತ ವೈವಾಹಿಕ ಜೀವನಕ್ಕೆ ಜ್ತೋತಿಶಾಸ್ತ್ರದ ಸಲಹೆಗಳು ಯಾವುವು ಎಂಬುದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ:
ದುರ್ಬಲ ಮಂಗಳ

ದುರ್ಬಲ ಮಂಗಳ

ದಂಪತಿಗಳ ನಡುವಿನ ಭಿನ್ನಾಭಿಪ್ರಾಯದ ಕಾರಣಗಳಲ್ಲಿ ಒಂದು ದುರ್ಬಲ ಮಂಗಳ ಗ್ರಹ. ಈ ಗ್ರಹವನ್ನು ಬಲಪಡಿಸಲು ಮತ್ತು ಅದರಿಂದ ಉಂಟಾಗುವ ವೈವಾಹಿಕ ಸಮಸ್ಯೆಗಳನ್ನು ತಪ್ಪಿಸಲು, ಒಬ್ಬರು ಶುಕ್ಲ ಪಕ್ಷದ ಆರಂಭದಲ್ಲಿ 'ಓಂ ಅಂಗ ಅಂಗಾರಕಾಯ ನಮಃ' ಎಂದು ಜಪಿಸಬೇಕು ಮತ್ತು ನೀವು ಶ್ರೀಗಂಧದ ಜಪಮಾಲೆಯನ್ನು ಕೈಯಲ್ಲಿ ಇಟ್ಟುಕೊಳ್ಳಬೇಕು.

ಅಕ್ಕಿ ಅಥವಾ ಹಿಟ್ಟು ದಾನ ಮಾಡಿ

ಅಕ್ಕಿ ಅಥವಾ ಹಿಟ್ಟು ದಾನ ಮಾಡಿ

ನಿಮ್ಮ ಸಂಗಾತಿಯ ನಡುವೆ ಹೆಚ್ಚಿನ ನಂಬಿಕೆಯನ್ನು ಬೆಳೆಸಲು ಮತ್ತು ಪ್ರೀತಿಯನ್ನು ಬಲಪಡಿಸಲು, ನೀವು ಪ್ರತಿ ಗುರುವಾರದಂದು ಪುರೋಹಿತರು, ಸಂತರು, ಫಕೀರರು ಅಥವಾ ಬಡವರಿಗೆ ದಾನ ಮಾಡಬೇಕು.

ಎಣ್ಣೆಯನ್ನು ದಾನ ಮಾಡಿ

ಎಣ್ಣೆಯನ್ನು ದಾನ ಮಾಡಿ

ನಿಮ್ಮ ಸಂಗಾತಿಯ ನಡುವೆ ಆಗಾಗ್ಗೆ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೆ, ನೀವು ಪ್ರತಿ ಶನಿವಾರ ಎಣ್ಣೆಯನ್ನು ದಾನ ಮಾಡಬೇಕು. ಇದಲ್ಲದೆ, ಈ ದಿನ ನೀವು ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು.

ಬಾದಾಮಿ ದಾನ ಮಾಡಿ

ಬಾದಾಮಿ ದಾನ ಮಾಡಿ

ನಿಮ್ಮ ಮತ್ತು ಸಂಗಾತಿಯ ನಡುವಿನ ತಿಳುವಳಿಕೆ, ಸಂಬಂಧವನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವೆಂದರೆ ಬಾದಾಮಿಗಳನ್ನು ಬಡವರಿಗೆ ಮತ್ತು ಅಗತ್ಯವಿರುವವರಿಗೆ ದಾನ ಮಾಡುವುದು. ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರತಿ ಭಾನುವಾರ ಇದನ್ನು ಮಾಡಿ.

ಅಂಗವಿಕಲರಿಗೆ ಸಹಾಯ ಮಾಡಿ

ಅಂಗವಿಕಲರಿಗೆ ಸಹಾಯ ಮಾಡಿ

ವಿಶೇಷವಾಗಿ ನಿಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಅಂಗವಿಕಲರಿಗೆ ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಆಹಾರ ಮತ್ತು ಬಟ್ಟೆಗಳೊಂದಿಗೆ ಧಾರ್ಮಿಕ ಪುಸ್ತಕ, 7 ಬಗೆಯ ಧಾನ್ಯಗಳು ಮತ್ತು ತೆಂಗಿನಕಾಯಿಯನ್ನು ದಾನ ಮಾಡಲು ಪ್ರಯತ್ನಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಇರುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ.

ಮಂತ್ರಗಳನ್ನು ಪಠಿಸಿ

ಮಂತ್ರಗಳನ್ನು ಪಠಿಸಿ

ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಮತ್ತು ಯಾವುದೇ ಭಿನ್ನಾಭಿಪ್ರಾಯ ಅಥವಾ ಜಗಳವನ್ನು ತೊಡೆದುಹಾಕಲು, ಸೂರ್ಯಾಸ್ತದ ನಂತರ ಪೂರ್ವ ದಿಕ್ಕಿಗೆ ಅಭಿಮುಖವಾಗಿ 'ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ' ಎಂದು ಪಠಿಸಬೇಕು.

ಮದುವೆ ಆಗ ಬಯಸುವವರಿಗೆ ಜನರಿಗೆ ಪರಿಹಾರ

ಮದುವೆ ಆಗ ಬಯಸುವವರಿಗೆ ಜನರಿಗೆ ಪರಿಹಾರ

ನಿಶ್ಚಿತಾರ್ಥ ಮಾಡಿಕೊಂಡಿರುವ ಅಥವಾ ಮದುವೆಯಾಗಲಿರುವ ದಂಪತಿಗಳಿಗೆ ಇಬ್ಬರ ನಡುವೆ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳಲು ಕೆಲವು ಪರಿಹಾರಗಳಿವೆ, ಇದರ ಮೂಲಕ ಅವರು ಸಂತೋಷದಾಯಕ ಮತ್ತು ಯಶಸ್ವಿ ದಾಂಪತ್ಯವನ್ನು ಆನಂದಿಸುತ್ತಾರೆ.

ಅರಳಿಮರ ನೆಡಿ

ಅರಳಿಮರ ನೆಡಿ

ಭವಿಷ್ಯದ ವಧು ಮತ್ತು ವರರು ತಮ್ಮ ಸಂಗಾತಿಯೊಂದಿಗೆ ಸಂತೋಷದ ಭವಿಷ್ಯವನ್ನು ಆನಂದಿಸಲು ಪ್ರತಿಯೊಬ್ಬರು ಅರಳಿ ಮರವನ್ನು ನೆಟ್ಟು 11 ದಿನಗಳ ಕಾಲ ನೀರು ಹಾಕಬೇಕು.

ಆಗ್ನೇಯ ಗೋಡೆಯ ಮೇಲೆ ದೀಪವನ್ನು ಬೆಳಗಿಸಿ

ಆಗ್ನೇಯ ಗೋಡೆಯ ಮೇಲೆ ದೀಪವನ್ನು ಬೆಳಗಿಸಿ

ವಧು ಮತ್ತು ವರ ತಮ್ಮ ಮನೆಯ ಆಗ್ನೇಯ ಗೋಡೆಯ ಮೇಲೆ ಮೇಣದಬತ್ತಿ ಅಥವಾ ಮಣ್ಣಿನ ದೀಪವನ್ನು ಬೆಳಗಿಸಬೇಕು. ತಮ್ಮ ಭವಿಷ್ಯದ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪ್ರೀತಿಯನ್ನು ಹೊಂದಲು ಅವರು ಬೆಳಿಗ್ಗೆ ಮತ್ತು ಸಂಜೆ ಇದನ್ನು ಮಾಡಬೇಕು.

ನಿಮ್ಮ ಮದುವೆಯ ದಿನದಂದು ದಾನ ಮಾಡಿ

ನಿಮ್ಮ ಮದುವೆಯ ದಿನದಂದು ದಾನ ಮಾಡಿ

ವಧು ಮತ್ತು ವರನು 8 ಕನ್ಯೆಯರಿಗೆ 7 ವಿಧದ ಧಾನ್ಯಗಳು, ತೆಂಗಿನಕಾಯಿ, ಆಹಾರ ಮತ್ತು ಕೆಂಪು ಬಟ್ಟೆಯನ್ನು ತಮ್ಮ ಮದುವೆಯ ದಿನದಂದು ದಾನ ಮಾಡಬೇಕು. ದಂಪತಿಗಳು ಪ್ರೀತಿ, ಸಂತೋಷ ಮತ್ತು ಅದೃಷ್ಟದಿಂದ ಆಶೀರ್ವದಿಸಲ್ಪಡುತ್ತಾರೆ.

ಸೂರ್ಯನಿಗೆ ಪ್ರಾರ್ಥನೆಗಳನ್ನು ಸಲ್ಲಿಸಿ

ಸೂರ್ಯನಿಗೆ ಪ್ರಾರ್ಥನೆಗಳನ್ನು ಸಲ್ಲಿಸಿ

ವಧು ಅಥವಾ ವರನು ಸೂರ್ಯನನ್ನು ಪ್ರತಿದಿನ ಮತ್ತು ಭಕ್ತಿಯಿಂದ ಪೂಜಿಸಬೇಕು. ಸಕ್ಕರೆ, ರೋಲಿ, ಅಕ್ಕಿ ಮತ್ತು ಕೆಂಪು ಹೂವುಗಳನ್ನು ಬೆರೆಸಿದ ನೀರನ್ನು ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಅರ್ಪಿಸಿ ಸಂತೋಷದ ಬದುಕು ನಿಮ್ಮದಾಗಿಸಿಕೊಳ್ಳಿ.

English summary

Do it Yourself Astrological remedies to get rid of different problems in life in kannada

Here we are discussing about Do it Yourself Astrological remedies to get rid of different problems in life in kannada. Read more.
Story first published: Wednesday, December 8, 2021, 16:44 [IST]
X
Desktop Bottom Promotion