For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ: ಯಾವ ರಾಶಿಗಳಿಗೆ ಈ ದಿನ ಅದೃಷ್ಟ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ತಿಥಿ: ತ್ರಿಯೋದಶಿ
ನಕ್ಷತ್ರ: ಪೂರ್ವ ಭಾದ್ರಪದ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ10:49ರಿಂದ ಮಧ್ಯಾಹ್ನ 12:21ರವರೆಗೆ
ಗುಳಿಗಕಾಲ: ಬೆಳಗ್ಗೆ 07:43ರಿಂದ 09:16ರವರೆಗೆ
ಯಮಗಂಡಕಾಲ: ಮಧ್ಯಾಹ್ನ 03:26 ರಿಂದ ಸಂಜೆ 04: 59ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:39 ರಿಂದ 09:28ರವರೆಗೆ
ಮಧ್ಯಾಹ್ನ 12:46 ರಿಂದ 01:35ರವರೆಗೆ

ಸೂರ್ಯೋದಯ: ಬೆಳಗ್ಗೆ 06:11ಕ್ಕೆ
ಸೂರ್ಯಾಸ್ತ: ಸಂಜೆ 06:32ಕ್ಕೆ

 ಮೇಷ ರಾಶಿ

ಮೇಷ ರಾಶಿ

ನೀವು ವ್ಯಾಪಾರ ಮಾಡಿದರೆ ಈ ದಿನವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ, ವಿಶೇಷವಾಗಿ ನೀವು ಐಷಾರಾಮಿ ವಸ್ತುಗಳ ವ್ಯಾಪಾರಿ ಆಗಿದ್ದರೆ ನೀವು ಅಪಾರ ಆರ್ಥಿಕ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲವು ಹೆಚ್ಚುವರಿ ಕಾರ್ಯಗಳನ್ನು ನಿಯೋಜಿಸಬಹುದು. ನಿಮ್ಮ ಕಾರ್ಯಗಳನ್ನು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸಲು ನೀವು ಪ್ರಯತ್ನಿಸುವುದು ಉತ್ತಮ ಮತ್ತು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಿಂದ ಹಿಂದೆ ಸರಿಯಬೇಡಿ. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿವೆ. ನಿಮ್ಮ ಪ್ರೀತಿಪಾತ್ರರ ನಡುವೆ ಇದ್ದರೂ ಇಂದು ಒಂಟಿತನ ಕಾಡುವುದು. ಚಿಕ್ಕ ವಿಷಯಕ್ಕೆ ಅಸಮಧಾನ ಉಂಟಾಗಬಹುದು. ಆದರೆ ನಿಮ್ಮ ಕೋಪ ನಿಯಂತ್ರಿಸುವುದು ಉತ್ತಮ, ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಸಮಸ್ಯೆ ಹೆಚ್ಚಬಹುದು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ಇಂದು ನೀವು ಹಣ ಉಳಿತಾಯ ಮಾಡುವಿರಿ. ಅನಾರೋಗ್ಯ ಇದ್ದರೆ ಆರೋಗ್ಯ ಸುಧಾರಿಸುವ ಸಾಧ್ಯತೆಯಿದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 26

ಒಳ್ಳೆಯ ಸಮಯ: ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಮೊದಲನೆಯದಾಗಿ ನೀವು ಉದ್ಯಮಿಯಾಗಿದ್ದರೆ ಇಂದು ಲಾಭ ಗಳಿಸುವ ಸಾಧ್ಯತೆ ಇದೆ. ವಿಶೇಷವಾಗಿ ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೆ, ನಿಮ್ಮ ವ್ಯವಹಾರವು ಬೆಳೆಯುವ ಬಲವಾದ ಸಾಧ್ಯತೆಯಿದೆ. ಉದ್ಯೋಗಿಗಳು ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ. ಇಂದು, ನಿಮ್ಮ ಸಣ್ಣ ಅಜಾಗರೂಕತೆಯು ನಿಮಗೆ ದೊಡ್ಡ ತೊಂದರೆಯನ್ನುಂಟು ಮಾಡುತ್ತದೆ. ಹಣದ ವಿಷಯದಲ್ಲಿ ಇಂದು ಮಿಶ್ರ ದಿನವಾಗಿರುತ್ತದೆ. ಹಣ ಇರುತ್ತದೆ ಆದರೆ ವೆಚ್ಚ ಕೂಡ ಅಧಿಕವಿರುತ್ತದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ. ಅಸಡ್ಡೆ ಮಾಡಬೇಡಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 11

ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

 ಮಿಥುನ ರಾಶಿ

ಮಿಥುನ ರಾಶಿ

ಇಂದು ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭವಾಗಲಿದೆ. ಉದ್ಯೋಗಸ್ಥರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ನಿಮ್ಮ ಸಂಬಳ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆದರೆ ಈ ವ್ಯಾಪಕ ಜಾಗತಿಕ ಸಾಂಕ್ರಾಮಿಕದ ರೋಗದ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಜೀವನ ಸಂಗಾತಿಯ ಮನಸ್ಥಿತಿ ಸಾಕಷ್ಟು ಚೆನ್ನಾಗಿರುತ್ತದೆ. ನೀವು ಅವರಿಂದ ಸುಂದರವಾದ ಉಡುಗೊರೆಯನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಸಾಮಾನ್ಯವಾಗಿರಲಿದೆ.

ಶುಭ ಬಣ್ಣ: ನೇರಳೆ

ಶುಭ ಸಂಖ್ಯೆ: 26

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ವ್ಯಾಪಾರಿಗಳು ಇಂದು ದೊಡ್ಡ ಹಣಕಾಸಿನ ವಹಿವಾಟು ನಡೆಸಲು ಹೊರಟಿದ್ದರೆ ನಿಮ್ಮ ಸಣ್ಣ ನಷ್ಟವು ನಿಮ್ಮ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ಇಂದು ಆರ್ಥಿಕ ನಷ್ಟವನ್ನು ಭರಿಸಬೇಕಾಗಬಹುದು. ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಬಾಸ್ ಕಚೇರಿಯಲ್ಲಿ ಕೆಲಸವನ್ನು ನಿಯೋಜಿಸಿದರೆ, ನೀವು ಅದನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಯಾವುದೇ ಕೆಲಸವನ್ನು ಇಂದು ಅಪೂರ್ಣವಾಗಿ ಬಿಡಬೇಡಿ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ಖರ್ಚಿನ ಮೇಲೆ ಕಣ್ಣಿಡಿ. ಇಂದು ಸಂಗಾತಿಯೊಂದಿಗೆ ಚಿಕ್ಕ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.

ಉತ್ತಮ ಬಣ್ಣ: ತಿಳಿ ಕೆಂಪು

ಶುಭ ಸಂಖ್ಯೆ: 45

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ. ಇದ್ದಕ್ಕಿದ್ದಂತೆ ಹಳೆಯ ಪ್ರಕರಣ ಹೊರಬರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ, ಇಲ್ಲದಿದ್ದರೆ ವಿಷಯವು ದೊಡ್ಡದಾಗಬಹುದು. ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ವ್ಯಾಪಾರ ಸಹವರ್ತಿಗಳಿಗೆ ಸೂಚಿಸಲಾಗುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ನಿಮ್ಮ ಪಾಲುದಾರರೊಂದಿಗೆ ವಾದಗಳನ್ನು ತಪ್ಪಿಸಿ. ಪರಸ್ಪರರ ಮೇಲೆ ನಿಮ್ಮ ನಂಬಿಕೆಯನ್ನು ಬಲಪಡಿಸಿ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಬಹುದು. ಆರ್ಥಿಕ ದೃಷ್ಟಿಯಿಂದ ಈ ದಿನವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆದಾಗ್ಯೂ, ನೀವು ಸಾಲ ನೀಡುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತಡದಿಂದಾಗಿ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 14

ಒಳ್ಳೆಯ ಸಮಯ: ಸಂಜೆ 5:25 ರಿಂದ 9 ರವರೆಗೆ

 ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ವ್ಯಾಪಾರಿಗಳಿಗೆ ಸರಾಸರಿ ದಿನವಾಗಲಿದೆ. ನಿಮ್ಮ ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ನಿಮ್ಮ ವ್ಯವಹಾರದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ನೀವು ಯೋಜಿಸುತ್ತಿದ್ದರೆ ಅದಕ್ಕೆ ಈ ದಿನವು ಸರಿಯಾಗಿಲ್ಲ. ಈ ರಾಶಿಯ ನಿರುದ್ಯೋಗಿಗಳು ಇಂದು ಯಾವುದೇ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಉದ್ಯೋಗಿಗಳು ಕಷ್ಟಪಟ್ಟು ಕೆಲಸ ಮಾಡಿದರೆ ಶೀಘ್ರದಲ್ಲೇ ನಿಮಗೆ ಯಶಸ್ಸು ದೊರೆಯುವುದು. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಅಸಭ್ಯ ವರ್ತನೆಯು ಪ್ರೀತಿಪಾತ್ರರನ್ನು ಅತೃಪ್ತಿಗೊಳಿಸುತ್ತದೆ. ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿದೆ. ಆರೋಗ್ಯದ ಬಗ್ಗೆ ಹೇಳುವುದಾದರ ತಡರಾತ್ರಿ ಕಡಿಮೆ ನಿದ್ದೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 16

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

 ತುಲಾ ರಾಶಿ

ತುಲಾ ರಾಶಿ

ಇಂದು ವೈವಾಹಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಿವಾದ ಉಂಟಾದರೆ ನಿಮ್ಮನ್ನು ಶಾಂತವಾಗಿರಿಸಿಕೊಳ್ಳುವುದು ಉತ್ತಮ, ಇದರ ಜೊತೆಗೆ ನಿಮ್ಮ ಮಾತಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳುವಂತೆ ಸೂಚಿಸಲಾಗುತ್ತದೆ. ಹಣದ ಪರಿಸ್ಥಿತಿ ಕುಸಿತದಿಂದಾಗಿ ನೀವು ತುಂಬಾ ಚಿಂತೆ ಮಾಡುತ್ತೀರಿ. ಹಳೆಯ ಸಾಲವನ್ನು ಮರುಪಾವತಿಸುವ ಒತ್ತಡ ಹೆಚ್ಚಾಗಬಹುದು. ಕೆಲಸದ ಮುಂಭಾಗದಲ್ಲಿ ಇಂದು ಸಾಮಾನ್ಯವಾಗಿರಲಿದೆ. ಕಚೇರಿಯಲ್ಲಿ ನಿಮ್ಮ ಎಲ್ಲಾ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಮತ್ತೊಂದೆಡೆ, ವ್ಯಾಪಾರಸ್ಥರಿಗೆ ಯಾವುದೇ ದೊಡ್ಡ ಲಾಭ ದೊರೆಯುವುದಿಲ್ಲ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ಕಷ್ಟಪಟ್ಟು ಕೆಲಸ ಮಾಡಲು ನಿಮಗೆ ಸೂಚಿಸಲಾಗುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಹೊಟ್ಟೆ ಉಬ್ಬರದ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 36

ಶುಭ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ನಿಮಗೆ ಆತುರ ಮತ್ತು ಭೀತಿಯನ್ನು ತಪ್ಪಿಸಲು ಸೂಚಿಸಲಾಗಿದೆ ಇಲ್ಲದಿದ್ದರೆ ನೀವು ಗಾಯಗೊಳ್ಳಬಹುದು. ಕೆಲಸದ ಕುರಿತು ಹೇಳುವುದಾದರೆ ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಲಿದೆ. ಇದ್ದಕ್ಕಿದ್ದಂತೆ ನೀವು ಕೆಲಸಕ್ಕೆ ಪ್ರಯಾಣಿಸಬೇಕಾಗಬಹುದು. ನೀವು ಪಟ್ಟಣದಿಂದ ಹೊರಗೆ ಹೋಗಬೇಕಾಗಬಹುದು. ಇಂದು ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನೀವು ಇಂದು ಯಶಸ್ಸನ್ನು ಪಡೆಯದಿರಬಹುದು, ಆದರೆ ನೀವು ನಿರಾಶೆಗೊಳ್ಳಬೇಕಾಗಿಲ್ಲ, ನಿಮ್ಮ ಪ್ರಯತ್ನಗಳನ್ನು ಮುಂದುವರಿಸಿ, ಶೀಘ್ರದಲ್ಲೇ ನೀವು ಸರಿಯಾದ ಫಲವನ್ನು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 7

ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

 ಧನು ರಾಶಿ

ಧನು ರಾಶಿ

ಪ್ರೇಮಿಗಳಿಗೆ ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ತುಂಬಾ ರೋಮ್ಯಾಂಟಿಕ್ ಆಗಲಿದೆ. ನಿಮ್ಮ ಸಂಗಾತಿಯೊಂದಿಗೆ ಕೆಲವು ದಿನದಿಂದ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗದಿದ್ದರೆ ಇಂದು ಅವರಿಗಾಗಿ ಸಮಯ ಮೀಸಲಿಡಲು ಸಾಧ್ಯವಾಗುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಹಣದ ಪರಿಸ್ಥಿತಿಯಲ್ಲಿ ಏಳಿಗೆ ಉಂಟಾಗಬಹುದು. ಆಸ್ತಿ-ಸಂಬಂಧಿತ ಪ್ರಯೋಜನಗಳ ಬಲವಾದ ಸಾಧ್ಯತೆಯಿದೆ. ಆಮದು ರಫ್ತು ವ್ಯವಹಾರ ಮಾಡುವ ಜನರಿಗೆ ಇಂದು ಪ್ರಯೋಜನಕಾರಿಯಾಗಲಿದೆ. ಮತ್ತೊಂದೆಡೆ, ಆಸ್ತಿಯಲ್ಲಿ ಕೆಲಸ ಮಾಡುವ ಜನರು ಉತ್ತಮ ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ತುಂಬಾ ಶ್ರಮಿಸಬೇಕಾಗಬಹುದು. ನಿಮ್ಮ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಕೆಲಸದ ಜೊತೆಗೆ, ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು.

ಉತ್ತಮ ಬಣ್ಣ: ಗಾಢ ಹಳದಿ

ಶುಭ ಸಂಖ್ಯೆ: 18

ಶುಭ ಸಮಯ: ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ

ಮಕರ ರಾಶಿ

ಮಕರ ರಾಶಿ

ಕೆಲಸದ ಬಗ್ಗೆ ಹೇಳುವುದಾದರೆ ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ಸಿಗಬಹುದು. ಈ ಅವಕಾಶದ ಲಾಭವನ್ನು ನೀವು ಪಡೆದುಕೊಂಡರೆ, ನೀವು ಶೀಘ್ರದಲ್ಲೇ ದೊಡ್ಡ ಲಾಭ ಪಡೆಯಬಹುದು. ಸರ್ಕಾರಿ ಉದ್ಯೋಗಿಗಳು ಅಪೇಕ್ಷಿತ ವರ್ಗಾವಣೆಯನ್ನು ಪಡೆಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ನಿಮ್ಮ ಆದಾಯವೂ ಹೆಚ್ಚಾಗಬಹುದು, ವ್ಯಾಪಾರಸ್ಥರ ಆರ್ಥಿಕ ಸಮಸ್ಯೆ ಬಗೆಹರಿಯುವುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ಸದಸ್ಯರು ನಿಮಗೆ ಪ್ರೀತಿ ಮತ್ತು ಬೆಂಬಲವನ್ನುನೀಡುತ್ತಾರೆ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಯಾವುದೇ ಸಕಾರಾತ್ಮಕ ಬದಲಾವಣೆ ಇಂದು ನಿಮ್ಮ ವೈವಾಹಿಕ ಜೀವನದಲ್ಲಿಯೂ ಆಗಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 5

ಒಳ್ಳೆಯ ಸಮಯ: ಸಂಜೆ 6:45 ರಿಂದ 10 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಇಂದು ನೀವು ಒಬ್ಬ ಪ್ರಮುಖ ವ್ಯಕ್ತಿಯನ್ನು ಭೇಟಿ ಮಾಡಬಹುದು. ನಿಮ್ಮ ಭೇಟಿ ಬಹಳ ಸ್ಮರಣೀಯವಾಗಿರುತ್ತದೆ. ಕೆಲಸದ ಬಗ್ಗೆ ಹೇಳುವುದಾದರೆ ಈ ದಿನ ಉದ್ಯೋಗಿಗಳಿಗೆ ಬಹಳ ಶುಭವಾಗಲಿದೆ. ನಿಮ್ಮ ಬಾಸ್ ಸ್ವಲ್ಪ ಸಮಯದಿಂದ ನಿಮ್ಮ ಕೆಲಸದಲ್ಲಿ ತೃಪ್ತರಾಗದಿದ್ದರೆ, ಇಂದು ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಅವರ ಮೆಚ್ಚುಗೆ ಪಡೆಯಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರಿಗೆ ನಿಮಗೆ ಮಿಶ್ರ ದಿನವಾಗಲಿದೆ. ಹಣದ ವ್ಯವಹಾರದಲ್ಲಿಹುಷಾರಾಗಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯ ಅಲಂಕಾರದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 35

ಶುಭ ಸಮಯ: ಬೆಳಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ

ಮೀನ ರಾಶಿ

ಇಂದು ನೀವು ಆಲಸ್ಯ, ಸೋಮಾರಿತನ ಮತ್ತು ಆಯಾಸವನ್ನು ಅನುಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು. ಇದು ನಿಮಗೆ ಉಲ್ಲಾಸವನ್ನುಂಟು ಮಾಡುತ್ತದೆ. ಇಂದು ನೀವು ಕಚೇರಿಯಲ್ಲಿ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಬಹಳ ಶ್ರಮಿಸಬೇಕಾಗಬಹುದು. ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ಮಕ್ಕಳ ಸಂಬಂಧಿತ ಯಾವುದೇ ಆತಂಕವು ನಿಮ್ಮನ್ನು ಕಾಡಬಹುದು. ಅದೇ ಸಮಯದಲ್ಲಿ ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಇಂದು ನೀವು ಆಪ್ತ ಸ್ನೇಹಿತನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ಸಮತೋಲಿತವಾಗಿ ವರ್ತಿಸಬೇಕು. ಅಲ್ಲದೆ ನಿಮ್ಮ ಪದಗಳನ್ನು ನೀವು ಬಹಳ ಚಿಂತನಶೀಲವಾಗಿ ಬಳಸಬೇಕಾಗುತ್ತದೆ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 30

ಶುಭ ಸಮಯ: ಮಧ್ಯಾಹ್ನ 1 ರಿಂದ 7 ರವರೆಗೆ

English summary

Dina Bhavishya 09 April 2021

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Friday, April 9, 2021, 5:01 [IST]
X