Just In
- 15 min ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 3 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಧವಾರದ ದಿನ ಭವಿಷ್ಯ: ಯಾವ ರಾಶಿಗಳಿಗೆ ಈ ದಿನ ಅದೃಷ್ಟ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ಸಂವತ್ಸರ:
ಶಾರ್ವರಿ
ಆಯನ:
ಉತ್ತರಾಯಣ
ಋತು:
ವಸಂತ
ಮಾಸ:
ಚೈತ್ರ
ತಿಥಿ:
ಏಕಾದಶಿ
ನಕ್ಷತ್ರ:
ಧನಿಷ್ಠಾ
ಪಕ್ಷ:
ಕೃಷ್ಣ
ಪಕ್ಷ
ರಾಹುಕಾಲ:
ಮಧ್ಯಾಹ್ನ
12:22ರಿಂದ
01:54ರವರೆಗೆ
ಗುಳಿಗಕಾಲ:
ಬೆಳಗ್ಗೆ
10:49ರಿಂದ
ಮಧ್ಯಾಹ್ನ
12:22ರವರೆಗೆ
ಯಮಗಂಡಕಾಲ:
ಬೆಳಗ್ಗೆ
07:44
ರಿಂದ
09:17ರವರೆಗೆ
ದುರ್ಮುಹೂರ್ತ:
ಬೆಳಗ್ಗೆ
11:57ರಿಂದ
ಮಧ್ಯಾಹ್ನ
12:46ರವರೆಗೆ
ಮಧ್ಯಾಹ್ನ
03:00
ರಿಂದ
ಸಂಜೆ
06:11ರವರೆಗೆ
ಸೂರ್ಯೋದಯ:
ಬೆಳಗ್ಗೆ
06:13ಕ್ಕೆ
ಸೂರ್ಯಾಸ್ತ:
ಸಂಜೆ
06:31ಕ್ಕೆ
ಮೇಷ ರಾಶಿ
ಕೆಲಸದ ವಿಷಯದಲ್ಲಿ ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣವಾಗಿ ಸಮರ್ಪಿತರಾಗಿರಬೇಕು ಮತ್ತು ಹಿರಿಯ ಅಧಿಕಾರಿಗಳಿಗೆ ಯಾವುದೇ ರೀತಿಯ ದೂರು ನೀಡಬೇಡಿ. ನೀವು ದೊಡ್ಡ ಉದ್ಯಮಿಯಾಗಿದ್ದರೆ ಇಂದು ನೀವು ದೊಡ್ಡ ಕ್ಲೈಂಟ್ನೊಂದಿಗೆ ಸಂಪರ್ಕ ಸಾಧಿಸಬಹುದು. ಮುಂದಿನ ದಿನಗಳಲ್ಲಿ ನೀವು ಖಂಡಿತವಾಗಿಯೂ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ. ನಿಮ್ಮ ಮುಂದಿನ ಯೋಜನೆಗಳಲ್ಲಿ ಯಾವುದೇ ರೀತಿಯ ಅಡಚಣೆಯನ್ನು ನೀವು ಬಯಸದಿದ್ದರೆ ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿಮಗೆ ಸೂಚಿಸಲಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಪೋಷಕರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನೀವು ತುಂಬಾ ಉಲ್ಲಾಸದಿಂದ ಇರುವಿರಿ.
ಉತ್ತಮ ಬಣ್ಣ: ಕಡು ಹಸಿರು
ಶುಭ ಸಂಖ್ಯೆ: 4
ಒಳ್ಳೆಯ ಸಮಯ: ಸಂಜೆ 5 ರಿಂದ ರಾತ್ರಿ 8:30 ರವರೆಗೆ
ವೃಷಭ ರಾಶಿ
ಆಹಾರದ ತೊಂದರೆಯಿಂದಾಗಿ ಇಂದು ಹೊಟ್ಟೆಯ ಸಮಸ್ಯೆ ಇರಬಹುದು. ಹೆಚ್ಚು ಅಸಡ್ಡೆ ಮಾಡದಿರುವುದು ಉತ್ತಮ. ವಿಶೇಷವಾಗಿ ಹೊರಗಿನ ಆಹಾರವನ್ನು ತಿನ್ನುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗುತ್ತದೆ. ಹಣದ ಪರಿಸ್ಥಿತಿಯಲ್ಲಿಕುಸಿತ ಸಾಧ್ಯವಿದೆ. ನೀವು ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ನೀವು ನಿಮ್ಮ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಕೆಲಸದ ಮುಂಭಾಗದಲ್ಲಿ ಇಂದು ಉತ್ತಮ ದಿನವಾಗಿದೆ. ಉದ್ಯೋಗಿಗಳು ಕಚೇರಿಯಲ್ಲಿ ಹೊಸದನ್ನು ಕಲಿಯಬಹುದು. ಅಲ್ಲದೆ, ಸಹೋದ್ಯೋಗಿಗಳೊಂದಿಗೆ ನಿಮ್ಮ ಒಡನಾಟವೂ ಸುಧಾರಿಸುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಮುಂದುವರೆಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನೀವು ಮನೆಯ ಸದಸ್ಯರೊಂದಿಗೆ ಏನಾದರೂ ಸಮಸ್ಯೆಯಿದ್ದರೆ ಅದನ್ನು ಮಾತಿನ ಮೂಲಕ ಪರಿಹರಿಸಿ.
ಉತ್ತಮ ಬಣ್ಣ: ಆಕಾಶ
ಶುಭ ಸಂಖ್ಯೆ: 1
ಶುಭ ಸಮಯ: ಬೆಳಗ್ಗೆ 7:30 ರಿಂದ ರಾತ್ರಿ 8 ರವರೆಗೆ
ಮಿಥುನ ರಾಶಿ
ನೀವು ದೊಡ್ಡ ಉದ್ಯಮಿಯಾಗಿದ್ದರೆ ಕಾನೂನು ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇದ್ದಕ್ಕಿದ್ದಂತೆ ಇಂದು ನೀವು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ಇಂದು ನೀವು ಅಗತ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗಬಹುದು. ವಿದ್ಯಾರ್ಥಿಗಳು ತಮ್ಮ ಶ್ರಮದ ಸರಿಯಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ನೀವು ಇತ್ತೀಚೆಗೆ ಯಾವುದೇ ಪರೀಕ್ಷೆಯನ್ನು ನೀಡಿದ್ದರೆ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಮನೆಯ ಅಲಂಕಾರವನ್ನು ಬದಲಾಯಿಸಲು ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಹೆಚ್ಚುವುದು. ಪ್ರೇಮಿಗಳು ನಿಮ್ಮ ಪ್ರೇಮಿಯ ಬೆಂಬಲ ಪಡೆಯುವಿರಿ. ಆರೋಗ್ಯದ ಬಗ್ಗೆ ಹೇಳುವುದಾದರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 25
ಶುಭ ಸಮಯ: ಸಂಜೆ 6 ರಿಂದ 9 ರವರೆಗೆ
ಕರ್ಕ ರಾಶಿ
ಕಚೇರಿಯಲ್ಲಿ ಬಹುಶಃ ನಿಮ್ಮ ಬಾಸ್ನ ಮನಸ್ಥಿತಿ ಸರಿಯಾಗಿಲ್ಲದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಬಗ್ಗೆ ಹೆಚ್ಚು ಗಮನಹರಿಸಲು ನಿಮಗೆ ಸೂಚಿಸಲಾಗಿದೆ. ಸ್ವಲ್ಪ ಅಜಾಗರೂಕತೆಯು ನಿಮ್ಮ ಮುಖ್ಯಸ್ಥನ ಕೋಪವನ್ನು ಪ್ರಚೋದಿಸುತ್ತದೆ. ಹಾರ್ಡ್ವೇರ್ ವ್ಯಾಪಾರಿಗಳಿಗೆ ಇಂದು ಬಹಳ ಲಾಭದಾಯಕವಾಗಲಿದೆ. ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವಹಾರವು ಬೆಳೆಯುತ್ತದೆ. ಹಣದ ದೃಷ್ಟಿಯಿಂದ ಈ ದಿನ ದುಬಾರಿಯಾಗಲಿದೆ. ಇತರರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ತುಂಬಿರುತ್ತವೆ. ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಮತ್ತೊಂದೆಡೆ, ಸಣ್ಣ ವಿಷಯಕ್ಕೆ ಸಂಗಾತಿಯೊಂದಿಗೆ ಮನಸ್ತಾಪ ಬರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಇತ್ತೀಚೆಗೆ ಆಪರೇಷನ್ ಮಾಡಿಸಿದ್ದರೆ ಇಂದು ನೀವು ಹೆಚ್ಚು ಜಾಗರೂಕರಾಗಿರಬೇಕು.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 20
ಶುಭ ಸಮಯ: ಬೆಳಗ್ಗೆ 10:35 ರಿಂದ ಸಂಜೆ 7 ರವರೆಗೆ
ಸಿಂಹ ರಾಶಿ
ಇಂದು ಕೆಲಸದಲ್ಲಿ ಉತ್ತಮ ಫಲಿತಾಂಶದ ದಿನವಾಗಿರುತ್ತದೆ, ವಿಶೇಷವಾಗಿ ನೀವು ಇತ್ತೀಚೆಗೆ ಹೊಸ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರೆ ಅಥವಾ ನಿಮಗೆ ಬಡ್ತಿ ನೀಡಿದ್ದರೆ, ಇಂದು ನಿಮಗೆ ತುಂಬಾ ಶುಭ ದಿನವಾಗಿದೆ. ವ್ಯಾಪಾರಿಗಳು ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಬಹುದು, ವಿಶೇಷವಾಗಿ ನೀವು ಬಟ್ಟೆ ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಆಂತರಿಕ ಜವಾಬ್ದಾರಿಗಳು ಸ್ವಲ್ಪ ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ, ಆದ್ದರಿಂದ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಇಂದು ಆರ್ಥಿಕ ರಂಗದಲ್ಲಿ ಮಿಶ್ರ ದಿನವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು. ನೀವು ಉತ್ತಮ ಆರೋಗ್ಯದಲ್ಲಿರುತ್ತೀರಿ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 35
ಶುಭ ಸಮಯ: ಮಧ್ಯಾಹ್ನ 2:30 ರಿಂದ 6 ರವರೆಗೆ
ಕನ್ಯಾ ರಾಶಿ
ವ್ಯಾಪಾರ ಸಹವರ್ತಿಗಳು ತಮ್ಮ ವ್ಯವಹಾರ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ನೀವು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಮಾಡಲು ಹೊರಟಿದ್ದರೆ, ಆತುರಪಡಬೇಡಿ. ಇದಲ್ಲದೆ, ನೀವು ಹಣಕಾಸಿನ ವಿಷಯಗಳಲ್ಲೂ ಜಾಗರೂಕರಾಗಿರಬೇಕು. ನೌಕರರಿಗೆ ಈ ದಿನ ಸಾಮಾನ್ಯವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಇಂದು ನೀವು ನಿಮ್ಮ ತಂದೆಯೊಂದಿಗೆ ಉತ್ತಮ ಸಮಯವನ್ನು ಹೇಳುವಿರಿ. ನೀವು ಅವರಿಂದ ಕೆಲವು ಉತ್ತಮ ಸಲಹೆಗಳನ್ನು ಸಹ ಪಡೆಯಬಹುದು, ಅದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿದೆ. ಬರಬೇಕಿದ್ದ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯಒಳ್ಳೆಯದಾಗಿರುತ್ತದೆ.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 12
ಶುಭ ಸಮಯ: ಬೆಳಗ್ಗೆ 4:15 ರಿಂದ ಸಂಜೆ 5 ರವರೆಗೆ
ತುಲಾ ರಾಶಿ
ಉದ್ಯೋಗಿಗಳು ಕಚೇರಿಯಲ್ಲಿ ಬಹಳ ಜಾಗರೂಕರಾಗಿರಲು ಸೂಚಿಸಲಾಗಿದೆ. ಕೆಲವು ಅಸೂಯೆ ಪಟ್ಟ ಸಹೋದ್ಯೋಗಿಗಳು ನಿಮ್ಮ ಕೆಲವು ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು. ಇದಲ್ಲದೆ, ಅವರು ನಿಮ್ಮ ಮೇಲಧಿಕಾರಿಯ ಮುಂದೆ ನಿಮ್ಮ ವ್ಯಕ್ತಿತ್ವವನ್ನು ಕಳಂಕಿಸಲು ಸಹ ಪ್ರಯತ್ನಿಸಬಹುದು. ಇಂದು ವ್ಯಾಪಾರಿಗಳಿಗೆ ಮಿಶ್ರ ಫಲಿತಾಂಶವಾಗಲಿದೆ. ಬಹುಶಃ ಇಂದು ನೀವು ತುಂಬಾ ಶ್ರಮಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯತೆ ಇರಬಹುದು. ಆದಾಗ್ಯೂ, ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಮನೆಯ ಸದಸ್ಯರಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 9
ಶುಭ ಸಮಯ: ಮಧ್ಯಾಹ್ನ 3 ರಿಂದ 7 ರವರೆಗೆ
ವೃಶ್ಚಿಕ ರಾಶಿ
ಆರ್ಥಿಕ ದೃಷ್ಟಿಕೋನದಿಂದ ಈ ದಿನ ಅಷ್ಟು ಉತ್ತಮವಲ್ಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ವೆಚ್ಚಗಳ ಹೆಚ್ಚಳವು ನಿಮ್ಮ ಬಜೆಟ್ ಅನ್ನು ಹಾಳುಮಾಡುತ್ತದೆ. ಚಿಂತನಶೀಲವಾಗಿ ಖರ್ಚು ಮಾಡಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಸಾಕಷ್ಟು ತೊಂದರೆಗೆ ಸಿಲುಕಬಹುದು. ಕೆಲಸದ ಬಗ್ಗೆ ಹೇಳುವುದಾದರೆ ನಿಮಗೆ ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸವನ್ನು ನಿಯೋಜಿಸಿದ್ದರೆ, ನೀವು ನಿಮ್ಮ ಕೆಲಸವನ್ನು ಎಲ್ಲಾ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತೀರಿ. ಈ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯಬಹುದು. ವ್ಯಾಪಾರಸ್ಥರು ಇಂದು ಹೆಚ್ಚು ಪ್ರಯಾಣಿಸಬೇಕಾಗಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನೀವು ಮನೆಯ ಹಿರಿಯರ ಆಶೀರ್ವಾದ ಪಡೆಯುತ್ತೀರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀವು ಹೆಚ್ಚು ಒತ್ತು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಮಾನಸಿಕ ಒತ್ತಡವು ನಿಮ್ಮನ್ನು ದೈಹಿಕವಾಗಿ ದುರ್ಬಲಗೊಳಿಸುತ್ತದೆ.
ಉತ್ತಮ ಬಣ್ಣ: ಗಾಢ ಹಳದಿ
ಶುಭ ಸಂಖ್ಯೆ: 31
ಶುಭ ಸಮಯ: ಬೆಳಗ್ಗೆ 8:15 ರಿಂದ ಸಂಜೆ 6 ರವರೆಗೆ
ಧನು ರಾಶಿ
ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘಕಾಲದಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ, ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ನಿಮಗೆ ಬೇಕಾದ ಕೆಲಸವನ್ನು ನೀವು ಪಡೆಯಬಹುದು. ವ್ಯವಹಾರ-ಸಂಪರ್ಕಿತ ಜನರು ಯಾವುದೇ ದೊಡ್ಡ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿಯ ಲಕ್ಷಣಗಳೂ ಇವೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ನೀವು ಮನೆಯ ಸದಸ್ಯರೊಂದಿಗೆ ಬಹಳ ಮೋಜಿನ ಸಮಯವನ್ನು ಹೊಂದಿರುತ್ತೀರಿ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡುತ್ತೀರಿ. ನಿಮ್ಮ ಆರೋಗ್ಯದ ಹೇಳುವುದಾದರೆ ಸ್ವಲ್ಪ ದಿನದಿಂದ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು.
ಶುಭ ಬಣ್ಣ: ನೇರಳೆ
ಶುಭ ಸಂಖ್ಯೆ: 44
ಶುಭ ಸಮಯ: ಸಂಜೆ 6 ರಿಂದ 11 ರವರೆಗೆ
ಮಕರ ರಾಶಿ
ನೀವು ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ವಿಷಾದಿಸಬೇಕಾಗುವುದು. ವ್ಯಾಪಾರಸ್ಥರು ಇಂದು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಆಂತರಿಕ ಜವಾಬ್ದಾರಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ನಿಮ್ಮ ತಪ್ಪು ವರ್ತನೆ ನಿಮ್ಮ ಪ್ರೀತಿಪಾತ್ರರನ್ನು ಅತೃಪ್ತಿಗೊಳಿಸಬಹುದು. ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಇಲ್ಲದಿದ್ದರೆ ನಿಮ್ಮ ಪ್ರೀತಿಪಾತ್ರರು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ. ಆರ್ಥಿಕ ರಂಗದಲ್ಲಿಈ ದಿನ ಅಷ್ಟು ಸರಿಯಿಲ್ಲ, ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ಜನ ಸಂದಣಿ ಇರುವ ಕಡೆ ಹೋಗಬೇಡಿ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 23
ಶುಭ ಸಮಯ: ಬೆಳಗ್ಗೆ 7:15 ರಿಂದ ಮಧ್ಯಾಹ್ನ 12 ರವರೆಗೆ
ಕುಂಭ ರಾಶಿ
ಕೆಲಸದ ದೃಷ್ಟಿಯಿಂದ ನೀವಿಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಉದ್ಯೋಗಿಗಳು ಕಚೇರಿಯಲ್ಲಿ ದೊಡ್ಡ ಗೌರವವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ನೀವು ಉತ್ತಮ ಕೊಡುಗೆಯನ್ನು ಪಡೆಯಬಹುದು. ವ್ಯಾಪಾರಿಗಳು ಇಂದು ದೊಡ್ಡ ಹೂಡಿಕೆ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೆಲಸವು ಸಾರಿಗೆಯೊಂದಿಗೆ ಸಂಪರ್ಕ ಹೊಂದಿದ್ದರೆ ನೀವು ಉತ್ತಮ ಲಾಭವನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ಯಾರ ಸಲಹೆಯನ್ನೂ ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಪರಸ್ಪರ ತಿಳುವಳಿಕೆ ಉತ್ತಮವಾಗಿರುತ್ತದೆ. ಪೋಷಕರ ಸಂಪೂರ್ಣ ಬೆಂಬಲ ಸಿಗುತ್ತದೆ ಮತ್ತು ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯ ಎಂದು ನಿರೀಕ್ಷಿಸಲಾಗಿದೆ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 11
ಒಳ್ಳೆಯ ಸಮಯ: ಸಂಜೆ 4:40 ರಿಂದ 10:05 ರವರೆಗೆ
ಮೀನ ರಾಶಿ
ಇಂದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಉಳಿಸಿಕೊಳ್ಳಲು ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು, ಜವಾಬ್ದಾರಿಗಳ ಹೊರೆ ಸ್ವಲ್ಪ ಹೆಚ್ಚಾಗಬಹುದು. ಕಾರ್ಯನಿರ್ವಹಣೆಯ ವಿಷಯ ಬಂದಾಗ, ಸೋಮಾರಿತನವನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಇಂದು ನೀವು ಮನೆಯ ಸದಸ್ಯರೊಬ್ಬರ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುವಿರಿ.ಇತರರ ವಿಷಯದಲ್ಲಿ ಹೆಚ್ಚು ಮಾತನಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುವಿರಿ. ಮಾನಸಿಕವಾಗಿ ಸ್ವಲ್ಪ ಗೊಂದಲ ಉಂಟಾಗುತ್ತದೆ. ಹವಾಮಾನದಲ್ಲಿನ ಬದಲಾವಣೆಯಿಂದ ಆರೋಗ್ಯ ಕ್ಷೀಣಿಸುವ ಸಾಧ್ಯತೆಯಿದೆ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 13
ಶುಭ ಸಮಯ: ಬೆಳಗ್ಗೆ 6 ರಿಂದ ಮಧ್ಯಾಹ್ನ 12:45 ರವರೆಗೆ