For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ (08-12-2019)

|

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ ರಾಶಿ

ಮೇಷ ರಾಶಿ

ನಿಮ್ಮ ಕೆಲಸಕಾರ್ಯಗಳು ಚೆನ್ನಾಗಿ ಸಾಗುವುದರಿಂದ ಖುಷಿಯಾಗುವಿರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿ ನಿಮ್ಮ ಗುರಿ ತಲುಪಲು ಸಾಧ್ಯವಾಗುವುದು. ಕುಟುಂಬದಲ್ಲಿ ಕೆಲವೊಂದು ನಿಮ್ಮ ಜವಾಬ್ದಾರಿಯನ್ನು ಇಂದೇ ಪೂರ್ಣಗೊಳಿಸುವುದು ಒಳ್ಳೆಯದು. ಕುಟುಂಬದವರ ಬೆಂಬಲ ನಿಮಗಿರುತ್ತದೆ. ವೈವಾಹಿಕ ಜೀವನ ಹಾಗೂ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಧನ ಲಾಭವಾಗಲಿದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 29

ಅದೃಷ್ಟದ ಸಮಯ: ಸಂಜೆ 5.40ರಿಂದ ರಾತ್ರಿ 9.45ರವರೆಗೆ

ವೃಷಭ

ವೃಷಭ

ಕೆಲವು ತೊಂದರೆಗಳು ಎದುರಾಗಬಹುದು ಆದರೆ ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ಮನೆಯಲ್ಲಿ ಹಿರಿಯರು ನಡೆದುಕೊಳ್ಳುವ ರೀತಿ ನಿಮಗೆ ಬೇಜಾರು ಆಗಬಹುದು, ಆದರೆ ತೆಲೆಕೆಡಿಸಿಕೊಳ್ಳಬೇಡಿ, ಎಲ್ಲವೂ ಸರಿಯಾಗುವುದು. ಈ ದಿನ ಧನ ಲಾಭ ಪ್ರಾಪ್ತಿಯಾಗುವುದು. ಕೆಲವೊಂದು ಭಿನ್ನಾಭಿಪ್ರಾಯವಿದ್ದರೂ ಕುಟುಂಬ ಜೀವನ ಚೆನ್ನಾಗಿ ಸಾಗುತ್ತದೆ. ಸಂಗಾತಿಯೊಂದಿಗೆ ಜಗಳವಾಡಬೇಡಿ. ಸ್ನೇಹಿತರ ಬೆಂಬಲ ಕೂಡ ನಿಮಗೆ ಸಿಗುವುದು.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 31

ಅದೃಷ್ಟದ ಸಮಯ: ಮಧ್ಯಾಹ್ನ 2.30ರಿಂದ ಸಂಜೆ 6.40ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಹಳೆಯ ಕಹಿ ನೆನಪು ಮರೆತು ಭವಿಷ್ಯದ ಕಡೆ ಗಮನ ನೀಡಿ. ಸುಮ್ಮನೆ ಚಿಂತೆ ಮಾಡಿ ಕೂರುವುದರಿಂದ ಪ್ರಯೋಜನವಿಲ್ಲ, ಈ ದಿನ ಯಾವುದೋ ಕಾರಣಕ್ಕೆ ಅಸಮಧಾನ ಉಂಟಾಗಬಹುದು, ಆದರೂ ತಾಳ್ಮೆಯಿಂದ ಇರಲು ಪ್ರಯತ್ನಿಸಿ. ಹಣದ ತೊಂದರೆ ಉಂಟಾದರೂ ಚಿಂತಿಸಬೇಕಾಗಿಲ್ಲ, ಈ ಸಮಸ್ಯೆ ಬೇಗನೆ ಸರಿ ಹೋಗುವುದು. ಮನೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಮಾತನಾಡುವ ಮುನ್ನ ಯೋಚಿಸಿ ಪದಗಳನ್ನು ಪ್ರಯೋಗಿಸಿ. ಎಲ್ಲಾ ಸವಾಲುಗಳ ನಡುವೆಯೂ ನಿಮಗೆ ಕೆಲಸ ಪೂರೈಸಲು ಸಾಧ್ಯವಾಗುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಕೆಲಸದ ವಿಷಯದಲ್ಲಿ ತುಮಬಾ ಮಹತ್ವದ ದಿನವಾಗಿದೆ. ಕೆಲಸಕ್ಕಾಗಿ ಹುಡುಕುತ್ತಿದ್ದರೆ ಇಂದು ಕೆಲಸ ದೊರೆಯುವ ಸಾಧ್ಯತೆ ಇದೆ. ಕೈಯಲ್ಲಿ ಇರುವ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಹೋಗಲು ಇಚ್ಛಿಸುವುದಾದರೆ ಇದರ ಬಗ್ಗೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ವೈಯಕ್ತಿಕ ಜೀವನ ಸುಖಕರವಾಗಲಿದೆ, ಹಣಕಾಸಿನ ಸ್ಥಿತಿಯೂ ಉತ್ತಮವಾಗಿದೆ. ಅಧಿಕ ಹಣ ಖರ್ಚು ಮಾಡಿದರೂ ಚಿಂತಿಸಬೇಕಾಗಿಲ್ಲ. ವೈವಾಹಿಕ ಜೀವನ ಖುಷಿಯಾಗಿರುವುದು, ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 3

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ ರಾತ್ರೊ 10-10ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ನಿವು ಈ ದಿನ ತುಂಬಾ ತಾಳ್ಮೆಯಿಂದ ಇರಬೇಕು. ಆಫೀಸ್‌ನಲ್ಲಿ ಬಾಸ್ ಜತೆ ವಾದ ಮಾಡಲು ಹೀಗಬೇಡಿ, ಇದರಿಂದ ನಿಮಗೇ ತೊಂದರೆ. ವ್ಯಾಪಾರಿಗಳಾಗಿದ್ದರೆ ಹೊಸ ಕಾರ್ಯಗಳಿಗೆ ಹಣ ಹೂಡಿಕೆಗೆ ಸೂಕ್ತ ಸಮಯವಲ್ಲ, ಕೆಲವೊಂದು ಸವಾಲುಗಳೂ ಕೂಡ ಎದುರಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಕುಟಂಬದಲ್ಲಿ ನೆಮ್ಮದಿ ಇರುತ್ತದೆ.

ಅದೃಷ್ಟದ ಬಣ್ಣ:ನೀಲಿ

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ

ಕನ್ಯಾ

ಕನ್ಯಾ

ಈ ದಿನ ಶುಭಕರವಾಗಿದ್ದು ಧನ ಲಾಭ ಪ್ರಾಪ್ತಿಯಾಗುವುದು. ಯಾವುದಾದರೂ ಚಿಕ್ಕ ಹೂಡಿಕೆ ಮಾಡ ಬಯಸುವುದಾದರೆ ಮಾಡಿ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರಬಹುದು, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿ. ಅವಾಹಿತರಾಗಿದ್ದರೆ ಹೊಸ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಕೆಲವೊಂದು ಆರೋಗ್ಯ ಸಮಸ್ಯೆಯೂ ಎದುರಾಗಬಹುದು.

ಅದೃಷ್ಟದ ಬಣ್ಣ: ಕಡು ಪಿಂಕ್

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಬೆಳಗ್ಗೆ 4.20ರಿಂದ ರಾತ್ರಿ 9.5

ತುಲಾ

ತುಲಾ

ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ನೀವಿಂದು ನಿಮ್ಮ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುವಂತೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತೀರಿ. ವ್ಯಾಪಾರಿಗಳಾಗಿದ್ದರೆ ಕೆಲವೊಮದು ಸಮಸ್ಯೆ ಎದುರಾಗಬಹುದು, ನಿಮ್ಮ ಪ್ರತಿಸ್ಪರ್ಧಿ ನಿಮಗಿಂತ ಲಾಭಗಳಿಸಬಹುದು, ಆದರೆ ಚಿಂತಿಸಬೇಕಾಗಿಲ್ಲ, ಈ ರೀತಿ ತುಂಬಾ ದಿನ ಇರಲ್ಲ. ಕುಟುಂಬದವರೊಂದಿಗೆ ಖುಷಿಯಾಗಿ ಸಮಯ ಕಳೆಯುವಿರಿ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಬೆಳಗ್ಗೆ 9.55ರಿಂದ ಮಧ್ಯಾಹ್ನ 2.30ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಗ್ರಹಗತಿಗಳು ನಿಮಗೆ ಅನುಕೂಲಕರವಾಗಿದೆ. ನಿಮಗೆ ಸಹದ್ಯೋಗಿಗಳ ಕಡೆಯಿಂದ ಗೌರವ, ಪ್ರಶಂಸೆ ದೊರೆಯವುದು. ನೀವು ತೆಗೆದುಕೊಳ್ಳುವ ನಿರ್ಧಾರ ಒಳಿತನ್ನು ತರುತ್ತದೆ. ಸಂಗಾತಿಯೊಂದಿಗೆ ಅಗೌರವದಿಂದ ಮಾತನಾಡಿದರೆ ವೈವಾಹಿಕ ಜೀವದಲ್ಲಿ ಕಲಹ ಉಂಟಾಗಬಹುದು, ಆದ್ದರಿಂದ ಮಾತನಾಡುವಾಗ ಜಾಗ್ರತೆ ವಹಿಸಿ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆ ಗಮನ ಕೊಡಿ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ

ಧನು ರಾಶಿ

ಧನು ರಾಶಿ

ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಈ ದಿನ ಹಾಳಾಗಬಹುದು. ಈ ರೀತಿ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಿರಬಹುದು. ಹಣಕಾಸಿನ ಸ್ಥಿತಿ ಇಂದು ಮಿಶ್ರವಾಗಿರುವುದರಿಂದ ಯಾವುದೇ ಹೂಡಿಕೆಯಲ್ಲಿ ತೊಡಗಿಕೊಳ್ಳದಿರುವುದೇ ಒಳ್ಳೆಯದು. ಕೋರ್ಟ್‌ ಸಂಬಂಧಿತ ಸಮಸ್ಯೆಯಿದ್ದರೆ ವಕೀಲರ ಸಹಾಯ ಪಡೆಯಿರಿ. ಸಂಗಾತಿಯೊಂದಿಗೆ ಖುಷಿಯಾಗಿರುತ್ತೀರಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ಸಮಯ: ಮಧ್ಯಾಹ್ನ 1ರಿಂದ ರಾತ್ರಿ 9ರವರೆಗೆ

ಮಕರ ರಾಶಿ

ಮಕರ ರಾಶಿ

ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಭೂಮಿ ವ್ಯವಹಾರ ಮಾಡಬಹುದು. ಕೌಟಂಬಿಕ ಬದುಕಿನಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಬಹುದು. ನೀವು ಕೊಪಗೊಳ್ಳದಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನೀವು ಈ ದಿನ ಬ್ಯುಸಿಯಾಗಿರುವುದರಿಂದ ಸಮಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.

ಅದೃಷ್ಟದ ಬಣ್ಣ: ತಿಳಿ ಪಿಂಕ್ ಬಣ್ಣ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಬೆಳಗ್ಗೆ 5 ಗಂಟೆಯಿಂದ ಸಂಜೆ 3.30ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಅವಾಹಿತರಾಗಿದ್ದರೆ ಈ ವಾರ ನಿಮ್ಮ ಜೀವನದಲ್ಲಿ ಅಚ್ಚರಿಯ ಘಟನೆ ನಡೆಯಲಿದೆ. ನಿಮ್ಮ ಸ್ನೇಹಿತ/ಸ್ನೇಹಿತೆ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂಬುವುದು ತಿಳಿಯುತ್ತದೆ. ನಿಮ್ಮ ನಿರ್ಧಾರ ಏನೇ ಆಗಿರಲಿ, ಅವರಸ ಪಡಬೇಡಿ, ನಿಧಾನಕ್ಕೆ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಮದುವೆಯಾಗಿದ್ದರೆ ಸಂಗಾತಿಯೊಂದಿಗೆ ಪ್ರಯಾಣ ಮಾಡುವಿರಿ, ತುಂಬಾ ಸಮಯದ ಬಳಿಕ ಇಬ್ಬರು ಖುಷಿ-ಖುಷಿಯಾಗಿ ಕಳೆಯಲು ಸಮಯ ಸಿಗುತ್ತದೆ, ಇದರಿಂದ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಹೆಚ್ಚಾಗುವುದು. ಕೆಲಸದ ಕ್ಷೇತ್ರದಲ್ಲಿ ಉತ್ತಮ ಫಲ ಸಿಗುವುದು. ಈ ವಾರ ವ್ಯಾಪಾರಿಗಳಿಗೆ ತುಂಬಾ ಒಳ್ಳೆಯದು. ಕಷ್ಟದ ಸಂದರ್ಭದಲ್ಲಿ ಸ್ನೇಹಿತರ ಬೆಂಬಲ ಸಿಗುವುದು.

ವಿದ್ಯಾರ್ಥಿಯಾಗಿದ್ದರೆ ಈ ವಾರ ಒಳ್ಳೆಯದಿದೆ, ನಿಮ್ಮ ಅಧ್ಯಯನಗಳು ನಿಯಮಿತ ವೇಗದಲ್ಲಿ ಪ್ರಗತಿಯಾಗುತ್ತವೆ.

ಅದೃಷ್ಟದ ಬಣ್ಣ: ಕೇಸರಿ

ಅದೃಷ್ಟದ ಸಂಖ್ಯೆ: 35

ಅದೃಷ್ಟದ ಸಮಯ: ಬೆಳಗ್ಗೆ 7ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ. ವ್ಯವಹಾರದಲ್ಲಿ ಲಾಭ ದೊರೆಯಲಿದೆ, ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತದೆ ಹಾಗೂ ಉಳಿತಾಯ ಕೂಡ ಮಾಡಬಹುದು. ಈ ವಾರ ಖರ್ಚುಗಳು ಸ್ವಲ್ಪ ಅಧಿಕವಾಗಿರುವುದರಿಂದ ಖರ್ಚಿನ ಮಿತಿಯ ಕಡೆಗೆ ಗಮನ ಹರಿಸಿ. ಕೆಲಸದ ಜಾಗದಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ನಿಮ್ಮ ಸಹದ್ಯೋಗಿಗಳು ನಿಮಗೆ ಪೈಪೋಟಿ ನೀಡುವುದರಿಂದ ಬಾಸ್‌ನ ನಂಬಿಕೆ ಗಳಿಸಲು ಅದಿಕ ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಒಳ್ಳೆಯ ಅವಕಾಶಗಳು ಕೈಜಾರಬಹುದು.

ಅದೃಷ್ಟದ ಬಣ್ಣ: ಕೆನೆ ಬಣ್ಣ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಸಮಯ: ಬೆಳಗ್ಗೆ 8 ಗಂಟೆಯಿಂದ ಸಂಜೆ 2. 30ರವರೆಗೆ

English summary

Daily Horoscope 8 Dec 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer"
Story first published: Sunday, December 8, 2019, 5:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more