For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ (07-12-2019)

|

ಶನಿವಾರ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ಇವನು ವಾನರ ಮತ್ತು ಅಂಜನಾದೇವಿಯ ಸುಪುತ್ರ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಶನಿವಾರದಂದು ಪೂಜಿಸಲಾಗುತ್ತದೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಡಿಸೆಂಬರ್ 7ರ ರಾಶಿಫಲಗಳ ಕುರಿತು ಏನು ಹೇಳಿದೆಯೆಂದು ಜ್ಯೋತಿಷ್ಯಿ ನಮ್ಮೊಂದಿಗೆ ಹೇಳಿರುವುದನ್ನು ಬೋಲ್ಡ್‌ಸ್ಕೈ ನಿಮಗೆ ನೀಡುತ್ತಿದೆ ನೋಡಿ:

 

ಸಂವತ್ಸರ: ವಿಕಾರಿನಾಮ

ಆಯನ: ದಕ್ಷಿಣಾಯನ

ಋತು: ಹೇಮಂತ

ಮಾಸ: ಮಾರ್ಗಶಿರ

ಪಕ್ಷ: ಶುಕ್ಲ

ತಿಥಿ: ನವಮಿ

ನಕ್ಷತ್ರ: ಪೂರ್ವ ಭದ್ರ

ರಾಹುಕಾಲ: ಬೆಳಗ್ಗೆ 9.20ರಿಂದ 10.44ವರೆಗೆ

ಯಮಗಂಡಕಾಲ: ಮಧ್ಯಾಹ್ನ 1.31ರಿಂದ 2.54ರವರೆಗೆ

ಗುಳಿಕಕಾಲ: ಬೆಳಿಗ್ಗೆ 6.33ರಿಂದ 7.57ರವರೆಗೆ

ದುರ್ಮುಹೂರ್ತ: ಬೆಳಿಗ್ಗೆ 6.33ರಿಂದ7.18ರವರೆಗೆ ಮತ್ತು 7.18ರಿಂದ 8.3ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.33

ಸೂರ್ಯಾಸ್ತ: ಸಂಜೆ 5.41

ಮೇಷ ರಾಶಿ

ಮೇಷ ರಾಶಿ

ಇಂದು ಮಿತ್ರರ ಜತೆ ವೈಚಾರಿಕ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅವರ ಜತೆಗೆ ಚೆನ್ನಾಗಿ ಮಾತನಾಡಿ. ಇಲ್ಲದಿದ್ದರೆ ಇಡೀ ದಿನ ಇದೇ ವಿಷಯವೇ ನಿಮ್ಮನ್ನು ಕೊರೆಯುತ್ತಿರುತ್ತದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಇಂದು ನಿಮ್ಮ ಸಂಗಾತಿಯೊಂದಿಗೆ ವರ್ಣರಂಜಿತವಾಗಿ ಕಳೆಯುತ್ತೀರಿ, ಹಾಗೂ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ . ಇವತ್ತು ಹೊಸದೊಂದು ಮಾರ್ಗ ಅಥವಾ ಸೂತ್ರ ದೊರೆಯುವುದರಿಂದ ನಿಮ್ಮ ದೊಡ್ಡ ಚಿಂತೆ ದೂರವಾಗುವುದು. ಇನ್ನು ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯಲಿದ್ದು, ವ್ಯಾಪಾರ ವೃದ್ಧಿಸಲಿದೆ. ಪರಿವಾರದಲ್ಲಿ ಶಾಂತಿ ನೆಲೆಸಿರುತ್ತದೆ. ಕೋರ್ಟ್ ಕಚೇರಿ ವಿಷಯಗಳಲ್ಲಿ ಜಯ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ.

ಅದೃಷ್ಟ ಬಣ್ಣ: ಗಾಢ ಹಸಿರು

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 11 ರಿಂದ ಸಂಜೆ 3ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇವತ್ತು ನಿಮ್ಮ ಮುಂದೆ ವಿಚಿತ್ರ ಘಟನೆ ನಡೆಯಬಹುದು, ಅದನ್ನು ನಿಭಾಯಿಸಲು ನೀವು ಅಸಮರ್ಥರಾಗಬಹುದು. ಈ ಕಾರಣದಿಂದಾಗ ಕಚೇರಿಯಲ್ಲಿ ಕೋಪಗೊಳ್ಳುವಿರಿ, ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲಿ ನೀವು ನೀಡಿದ ಸಲಹೆ ಫಲಕಾರಿಯಾಗುವುದರಿಂದ ನಿಮ್ಮ ವರ್ಚಸ್ಸು ಹೆಚ್ಚಾಗಿದೆ. ಇಂದು ನಿಮ್ಮ ವೈವಾಹಿಕ ಜೀವನದ ಒಂದು ಒಳ್ಳೆಯ ದಿನವಾಗಲಿದೆ. ನಿಮ್ಮ ಜೀವನ ಸಂಗಾತಿಯ ಪ್ರೀತಿ ಹಾಗೂ ಸಹಕಾರದಿಂದ ಪ್ರತಿಕೂಲವನ್ನು ಸುಲಭವಾಗಿ ಎದುರಿಸುವಿರಿ. ಈ ದಿನ ಆರ್ಥಿಕ ಲಾಭ ದೊರೆಯಲಿದೆ. ಇಂದು ಯಾತ್ರೆ ಮಾಡಲು ಶುಭವಲ್ಲದ ಕಾರಣ, ದೂರ ಪ್ರಯಾಣ ಮಾಡಬೇಡಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಮಧ್ಯಾಹ್ನ 1.15ರಿಂದ ಸಂಜೆ 7.20ರವರೆಗೆ

ಮಿಥುನ ರಾಶಿ
 

ಮಿಥುನ ರಾಶಿ

ನಿಮ್ಮ ಕೋಪ ಹಾಗೂ ಹಠಮಾರಿ ಸ್ವಭಾವದಿಂದಾಗಿ ನಿಮಗೆ ತೊಂದರೆ ಉಂಟಾಗಬಹುದು, ಅದನ್ನು ತಡೆಯಲು ನಿಮ್ಮ ಸ್ವಭಾವವನ್ನು ಬದಲಾಯಿಸುವುದು ಒಳ್ಳೆಯದು. ಯಾರೊಂದಿಗೆ ಹೆಚ್ಚು ತರ್ಕ ಮಾಡಲು ಹೋಗಬೇಡಿ. ವೈವಾಹಿಕ ಜೀವನ ಸುಖಕರವಾಗಿರಲಿದೆ. ನೀವಿಂದು ಸಂಗಾತಿ ಜತೆಗೆ ಖುಷಿಯಾಗಿ ಕಳೆಯುವಿರಿ. ವ್ಯಾಪಾರಸ್ಥರಾಗಿದ್ದರೆ ವ್ಯಾಪಾರದಲ್ಲಿ ಲಾಭ ಉಂಟಾಗಲಿದೆ. ಹಳೆಯ ವ್ಯವಹಾರದಿಂದ ಲಾಭ ದೊರೆಯಲಿದೆ. ಸಂಜೆ ಸ್ನೇಹಿತರ ಜತೆ ಕಳೆಯಲು ಸಮಯ ಸಿಗಲಿದೆ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಮಧ್ಯಾಹ್ನ 1ರಿಂದ ಸಂಜೆ 3ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ವಿದ್ಯಾರ್ಥಿಗಳಿಗೆ ಈ ದಿನ ಅಷ್ಟು ಒಳ್ಳೆಯದಲ್ಲ. ಅನಾರೋಗ್ಯದ ಕಾರಣ ಓದಿನ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ಓದಲು ಸಾಧ್ಯವಾಗುತ್ತಿಲ್ಲ ಎಂದು ನಿರಾಸೆ ಪಡದೆ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಪೋಷಕರಲ್ಲಿ ವೈಚಾರಿಕ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತೀರಿ. ಪೋಷಕರ ವಿರುದ್ಧ ಮಾತನಾಡಬೇಡಿ, ಇದರಿಂದ ನಿಮಗೇ ನಷ್ಟವಾಗಲಿದೆ. ಆರ್ಥಿಕ ದೃಷ್ಟಿಯಿಂದ ಉಂಟಾಗುವುದಾದರೆ ಸ್ಥಿತಿ ಉತ್ತಮವಾಗಿದೆ. ಇತ್ತೀಚೆಗೆ ಪ್ರಾರಂಭಿಸಿದ ಕೆಲಸ ಅಥವಾ ಹೂಡಿಕೆಯಿಂದ ಲಾಭ ಪಡೆಯುವಿರಿ. ಪ್ರೇಮಿಗಳಿಗೆ ಇಂದು ಒಳ್ಳೆಯ ದಿನವಾಗಿದೆ. ನಿಮ್ಮ ವಿದೇಶ ಪ್ರಯಾಣದ ಕನಸ್ಸು ಶೀಘ್ರದಲ್ಲಿಯೇ ನೆರವೇರಲಿದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಸಂಜೆ 3.20ರಿಂದ ರಾತ್ರಿ 9.5ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಈ ದಿನ ಯಾವುದೇ ಕೆಲಸ ಮಾಡುವಾಗ ತುಂಬಾ ಯೋಚಿಸಿ ಮಾಡಬೇಕಾಗುತ್ತದೆ, ಇದರಿಂದ ಮುಂದೆ ತೊಂದರೆ ಉಂಟಾಗುವುದು ತಪ್ಪುತ್ತದೆ. ಮನೆಯಲ್ಲಿ ಶಾಂತಿ ಲಭಿಸಲಿದೆ ಹಾಗೂ ಮನೆಯವರು ಎಲ್ಲರೂ ಜತೆಯಾಗಿ ಸಮಯ ಕಳೆಯುವಿರಿ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. ಕಚೇರಿಯಲ್ಲಿ ಮಾಡಲು ಉಳಿದಿದ್ದ ಕೆಲಸ ಇಮದು ಪೂರ್ಣವಾಗುವುದು ಹಾಗೂ ನಿಮಗೆ ಪ್ರಶಂಸೆಯೂ ದೊರೆಯುವುದು. ಇವತ್ತು ಪ್ರೇಮಿಗಳಿಗೆ ಸ್ವಲ್ಪ ಕಠಿಣವಾ ದಿನವಾಗಿದೆ. ಪ್ರೇಮಿ ಜತೆ ಮಾತನಾಡುವಾಗ ಜಾಗ್ರತೆವಹಿಸಿ, ಮಾತಿಗೆ ಮಾತು ಬೆಳೆದು ಜಗಳ ಉಂಟಾಗಬಹುದು, ಇದರಿಂದ ಇಬ್ಬರು ದೂರವಾಗಬಹುದು, ಆದ್ದರಿಂದ ತಾಳ್ಮೆಯಿಂದ ಇರಿ. ನಿ ಈ ದಿನ ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ನೀವಿತ್ತು ಉತ್ತಮ ಕಾರ್ಯ ಮಾಡಲು ಮನಸ್ಸು ಮಾಡುತ್ತೀರಿ. ಸ್ನೇಹಿತರನ್ನು ಭೇಟಿಯಾಗಿ ಅವರ ಜತೆ ಖುಷಿಯಾಗಿ ದಿನ ಕಳೆಯುವಿರಿ.

ಅದೃಷ್ಟ ಬಣ್ಣ: ತಿಳಿ ಹಳದಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಸಂಜೆ 5.30ರಿಂದ ರಾತ್ರಿ 8ರವರೆಗೆ

 ಕನ್ಯಾ

ಕನ್ಯಾ

ನೀವಿಂದು ನಿಮ್ಮ ವಿಷಯದ ಕಡೆ ಹೆಚ್ಚು ಗಮನ ಕೊಡಿ, ಬೇರೆಯವರ ವಿಚಾರದಲ್ಲಿ ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಹೋದರೆ ಟೀಕೆಗೆ ಒಳಗಾಗುವಿರಿ, ಇದರಿಂದ ನಿಮಗೆ ನೋವುಂಟಾಗುವುದು ಹಾಗೂ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುವುದು. ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಹೇಳುವುದಾದರೆ ಇವತ್ತು ಧನ ಲಾಭ ಪ್ರಾಪ್ತಿಯಾಗಲಿದೆ. ಪರಿವಾರದವರೊಂದಿಗೆ ಖುಷಿಯಾಗಿರುವಿರಿ. ನಿಮ್ಮ ಸಂಗಾತಿಯ ಮೇಲಿದ್ದ ಪ್ರೀತಿ ಹೆಚ್ಚಾಗುವುದು. ನೀವು, ನಿಮ್ಮ ಜೀವನ ಸಂಗಾತಿ ಸೇರಿಕೊಂಡು ಇವತ್ತು ಮಹತ್ವವಾದ ನಿರ್ಣಯವನ್ನು ತೆಗೆದುಕೊಳ್ಳುವಿರಿ. ನಿಮ್ಮ ಆರೋಗ್ಯ ಸ್ಥಿತಿಯೂ ಉತ್ತಮವಾಗಿರಲಿದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 1

ಅದೃಷ್ಟ ಸಮಯ: ಮಧ್ಯಾಹ್ನ 1.30ರಿಂದ ರಾತ್ರಿ 8ರವರೆಗೆ

ತುಲಾ ರಾಶಿ

ತುಲಾ ರಾಶಿ

ನಿಮಗೆ ಇವತ್ತು ದೊಡ್ಡ ಸನ್ಮಾನ, ಪ್ರಶಸ್ತಿಗಳು ದೊರೆಯಲಿದೆ. ಜನರು ನಿಮ್ಮನ್ನು ಹೊಗಳುತ್ತಾರೆ, ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಇವತ್ತು ನೀವು ಖುಷಿಯಾಗಿರುವಿರಿ. ದಾಂಪತ್ಯ ಜೀವನ ಸಾಮಾನ್ಯವಾಗಿರಲಿದೆ. ಜೀವನ ಸಂಗಾತಿಯೊಂದಿಗೆ ಖುಷಿಯಾಗಿರುವಿರಿ. ಹಣಕಾಸಿನ ವಿಷಯದಲ್ಲಿ ಸ್ವಂತ ನಿರ್ಣಯ ತೆಗೆದುಕೊಳ್ಳಬಹುದು. ಬೇರೆಯವರ ಜೀವನದಲ್ಲಿ ನಿಮ್ಮ ಅಭಿಪ್ರಾಯವನ್ನು ಹೇಳಲು ಹೋಗಬೇಡಿ. ನೀವು ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದೀರಿ, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ದಿನವಾಗಿದೆ. ಕಚೇರಿಯಲ್ಲಿ ಅಧಿಕ ಕೆಲಸದ ಒತ್ತಡವಿರುವುದಿಲ್ಲ. ನೀವಿಂದು ಆಧ್ಯಾತ್ಮಕವಾಗಿ ಸ್ವಲ್ಪ ತೊಡಗಿಕೊಳ್ಳುವುದು ಒಳ್ಳೆಯದು. ಸಂಗಾತಿಯೊಂದಿಗೆ ರೆಸ್ಟೋರೆಂಟ್‌, ಶಾಪಿಂಗ್ ಅಂತ ಹೋಗಲು ಸಮಯ ಸಿಗುವುದು. ಪ್ರೇಮಿಗಳಿಗೆ ಒಳ್ಳೆಯ ದಿನವಾಗಿದೆ. ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಕ್ಷಣವನ್ನು ಕಳೆಯುವಿರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಗ್ಗೆ 7ರಿಂದ ಸಂಜೆ 5ರವರೆಗೆ

ವೃಶ್ಚಿಕ

ವೃಶ್ಚಿಕ

ತೊಡಗಿಸಿಕೊಂಡಿದ್ದ ಕಾರ್ಯಗಳಿಗೆ ಸ್ವಲ್ಪ ಗಮನ ಕೊಡುವುದು ಒಳ್ಳೆಯದು. ಮದುವೆಯಾದವರಿಗೆ ಈ ದಿನ ತುಂಬಾ ಒಳ್ಳೆಯ ದಿನವಾಗಿದೆ. ಸಂಗಾತಿಯೊಂದಿಗೆ ಖುಷಿಯಾಗಿರುವಿರಿ. ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಲ್ಲ, ಓದಿನ ಕಡೆ ಗಮನ ಕಡೆ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಶಾಂತಿ ಇರಲಿದೆ. ಹೊಸ ಕೆಲಸ ಮಾಡಲು ಇದು ಶುಭ ದಿನವಾಗಿದೆ. ಸ್ವಲ್ಪ ಹಣ ಖರ್ಚಾಗುವ ಸಾಧ್ಯತೆ ಇದೆ, ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ಬೆಳಗ್ಗೆ 8.20ರಿಂದ ಸಂಜೆ 3ರವರೆಗೆ

ಧನುರಾಶಿ

ಧನುರಾಶಿ

ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಂದು ಪರಿಹಾರವಾಗಲಿದೆ. ನೀವು ಕೆಲಸ ನಿಭಾಯಿಸಿದ ರೀತಿ ನೋಡಿ ನಿಮ್ಮ ಸುತ್ತಲಿರುವವರು ಆಶ್ಚರ್ಯಪಡುವಂತಾಗುವುದು, ಇದರಿಂದಾಗಿ ಪ್ರಶಂಸೆ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಹೆಚ್ಚಿನದನ್ನು ನಿರೀಕ್ಷಿಸಬೇಡಿ, ನಿರೀಕ್ಷಿಸಿದರೆ ನಿಮಗೆ ನಿರಾಸೆ ಉಂಟಾಗುವುದು. ಇನ್ನು ರೊಮ್ಯಾಂಟಿಕ್‌ ಜೀವನದಲ್ಲ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿಯ ಕೋಪ ಜಗಳಕ್ಕೆ ತಿರುಗಬಹುದು, ಆದ್ದರಿಂದ ಎಚ್ಚರವಾಗಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ಅದೃಷ್ಟ ಬಣ್ಣ: ಕಡು ಕೆಂಪು

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಬೆಳಗ್ಗೆ 6.20ರಿಂದ ರಾತ್ರಿ 9 ಗಂಟೆಯವರೆಗೆ

ಮಕರರಾಶಿ

ಮಕರರಾಶಿ

ನಿಮ್ಮ ಸಂಗಾತಿಯೊಂದಿಗಿನ ಭಾವನಾತ್ಮಕವಾದ ಸಂಬಂಧ ಮತ್ತಷ್ಟು ಅಧಿಕವಾಗುವುದು. ನಿಮ್ಮ ಪ್ರೀತಿ ಪಾತ್ರರಿಗೆ ಏನಾದರೂ ಉಡುಗೊರೆ ಕೊಳ್ಳುವ ಸಾಧ್ಯತೆ ಇದೆ. ರೊಮ್ಯಾಂಟಿಕ್‌ ಜೀವನ ಕೂಡ ಚೆನ್ನಾಗಿ ಇರಲಿದೆ. ಸಂಗಾತಿಯೊಂದಿಗೆ ಯಾವುದೇ ವೈಮನಸ್ಸು ಉಂಟಾಗದಿರಲು ಅವರ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಮಾತುಗಳ ಮೇಲೆ ನಿಗಾ ಇಡಿ, ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ಕೈ ಬೀರುವುದು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಸಂಜೆ 4 ಗಂಟೆಯಿಂದ ರಾತ್ರಿ 8.15ರವರೆಗೆ

ಕುಂಭರಾಶಿ

ಕುಂಭರಾಶಿ

ಕುಟುಂಬದ ಜತೆ ಅಧಿಕ ಸಮಯ ಕಳೆಯಲು ಸಾಧ್ಯವಾಗದೆ ಹೋಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಹೊಸ ಯೋಜನೆಗಳನ್ನು ರೂಪಿಸುವಿರಿ, ಇದರಲ್ಲಿ ಹಿರಿಯರ ಸಲಹೆ ಪಡೆದರೆ ಲಾಭ ಉಂಟಾಗುತ್ತದೆ. ತುಂಬಾ ದಿನಗಳಿಂದ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ದಿನವಾಗಿದ್ದು ಜಾಬ್‌ ಆಫರ್‌ ಸಿಗಬಹುದು. ತಪ್ಪು ಗ್ರಹಿಕೆಯಿಂದಾಗಿ ವೈವಾಹಿಕ ಜೀವನದಲ್ಲಿ ಸ್ವಲ್ಪ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ನಿಮ್ಮ ಸಂಗಾತಿ ಮುಂದೆ ಎಲ್ಲಾ ಹೇಳಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಸಂಜೆ 3.30ರಿಂದ ರಾತ್ರಿ 10 ಗಂಟೆಯವರೆಗೆ

ಮೀನರಾಶಿ

ಮೀನರಾಶಿ

ನಿಮ್ಮ ಹಣಕಾಸಿನ ತೊಂದರೆ ಕೊನೆಯಾಗಲಿದೆ, ನೀವು ಸಾಲವನ್ನು ಮರುಪಾವತಿ ಮಾಡುವಿರಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಗಳು ನುಸಳಲು ಬಿಡಬೇಡಿ. ನೀವು ಒಳ್ಳೆಯದು ಯೋಚಿಸಿದರೆ ಒಳ್ಳೆಯದೇ ಆಗುತ್ತದೆ. ಸಮಯವನ್ನು ಸದುಪಯೋಗ ಪಡಿಸಿ, ಭವಿಷ್ಯದ ಬಗ್ಗೆ ಯೋಜನೆ ರೂಪಿಸಿ. ಮಧ್ಯಾಹ್ನ ಮೇಲೆ ಸ್ನೇಹಿತರ ಜತೆ ಹೊರಗಡೆ ಸುತ್ತಾಡುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯ ಸ್ಥಿತಿ ಸುಧಾರಿಸಲಿದೆ, ಇದರಿಂದಾಗಿ ಮಾನಸಿಕ ಒತ್ತಡ ಕಡಿಮೆಯಾಗುವುದು, ಅವರನ್ನು ಆರೈಕೆ ಮಾಡಿ.

ಅದೃಷ್ಟ ಬಣ್ಣ: ಮೆರೂನ್

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಬೆಳಗ್ಗೆ 5.20ರಿಂದ ಮಧ್ಯಾಹ್ನ 3.30ರವರೆಗೆ

English summary

Daily Horoscope 7 Dec 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, December 7, 2019, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more