For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ (19-09-2019)

|
ದಿನ ಭವಿಷ್ಯ - Astrology 19-09-2019 - Your Day Today

ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು.

ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಕುಟುಂಬದ ವಿಷಯದಲ್ಲಿ ಇಂದು ನಿಮಗೆ ಶಾಂತಿಯುತವಾದ ಹಾಗೂ ಅನುಕೂಲಕರವಾದ ದಿನ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಸದೃಢರಾಗುತ್ತೀರಿ. ಕೆಲವು ಅನಿರೀಕ್ಷಿತ ಸಂಗತಿಗಳು ಜೀವನದ ಪತವನ್ನು ಬದಲಿಸಬಹುದು. ಹೊಸ ಬದಲಾವಣೆಯು ಇಂದು ನಿಮಗೆ ಅತ್ಯುತ್ತಮ ದಿನವನ್ನಾಗಿ ಮಾಡುವುದು. ನವ ವಿವಾಹಿತರಿಗೆ ಇಂದು ಅದ್ಭುತ ದಿನವಾಗುವುದು. ಇಂದು ನೀವು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಮುಕ್ತವಾದ ಭಾವನೆಯಿಂದ ಬದುಕುವುದು ಜೀವನದಲ್ಲಿ ಅತ್ಯಂತ ಸಂತೋಷವನ್ನು ತರುವುದು. ಹಾಗಾಗಿ ನೀವು ಈ ದಿನವನ್ನು ಸಂಪೂರ್ಣವಾಗಿ ಆನಂದಿಸಬಹುದು. ದಂಪತಿಗಳ ನಡುವೆ ಇರುವ ಪರಸ್ಪರ ತಿಳುವಳಿಕೆಯು ವಿಷಯವನ್ನು ವಿಶೇಷಗೊಳಿಸುವುದು. ಉದ್ಯೋಗದ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಉತ್ತಮ ಸಹಕಾರ ದೊರೆಯುವುದು. ಅಂತೆಯೇ ಅನುಕೂಲಕರ ಸ್ಥಿತಿಯನ್ನು ಎದುರಿಸುವಿರಿ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಅದು ನಿಮಗೆ ನಿರಾಳತೆಯನ್ನು ನೀಡುವುದು. ಉದ್ಯಮಿಗಳಿಗೆ ಸಾಮಾನ್ಯ ದಿನವಾಗುವುದು. ಒಟ್ಟಾರೆ ಇಂದು ನಿಮಗೆ ಆರೋಗ್ಯಕರವಾದ ದಿನ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ನಂಬರ್: 24

ಅದೃಷ್ಟದ ಸಮಯ: ಮಧ್ಯಾಹ್ನ 2:20 ರಿಂದ ಸಂಜೆ 9:15ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಜನರನ್ನು ಸುಲಭವಾಗಿ ನಂಬಬೇಡಿ. ನಿಮ್ಮ ಅಸಹಾಯಕತೆ ಯನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಆರೋಗ್ಯದ ದೃಷ್ಟಿಯಿಂದ ನಿಮಗೆ ಇಂದು ದುರಾದೃಷ್ಟದ ದಿನ. ವಾತಾವರಣದ ವೈಪರೀತ್ಯವು ಕೆಲವು ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತವೆ. ಆರೋಗ್ಯದಲ್ಲಿ ತೊಂದರೆ ಬಗ್ಗೆ ಚಿಕಿತ್ಸೆ ಪಡೆಯುವುದು ಸೂಕ್ತ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಯ ಬಗ್ಗೆ ನಿಷ್ಕಾಳಜಿ ತೋರದಿರಿ. ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ತಪ್ಪಿಸಿ. ಇಂದು ನೀವು ಯಾವುದೇ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡದಿರಿ. ಇಂದು ನಿಮಗೆ ಬಿಡುವಿಲ್ಲದ ದಿನವಾಗುವುದು. ಆರೋಗ್ಯದ ಬಗ್ಗೆ ಆದಷ್ಟು ಮುನ್ನೆಚ್ಚರಿಕೆ ವಹಿಸಿ.

ಅದೃಷ್ಟದ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟದ ನಂಬರ್: 42

ಅದೃಷ್ಟದ ಸಮಯ: ಸಂಜೆ 5:15 ರಿಂದ ರಾತ್ರಿ 8:30ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಕೆಲವು ಯೋಜನೆಗಳು ಕೈಗೆಟುಕುವುದು. ನಿಮ್ಮ ಪ್ರೀತಿಪಾತ್ರರು ನಿಮಗೆ ವಿಶೇಷ ಭಾವನೆ ಮೂಡಿಸುವುದರಿಂದ ನೀವು ಬಿಡುವಿಲ್ಲದ ಮತ್ತು ಸಂತೋಷದ ದಿನವನ್ನು ಅನುಭವಿಸುವಿರಿ. ನಿಮ್ಮ ಆತ್ಮ ವಿಶ್ವಾಸವು ನಿಮಗೆ ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡುತ್ತದೆ. ಜೀವನದ ಬಗ್ಗೆ ನಿಮ್ಮ ಸಕಾರಾತ್ಮಕ ನಿಲುವು ಸಹಕಾರಕ್ಕೆ ದೊರೆಯುವುದರಿಂದ ನೀವು ಅತ್ಯಂತ ಎತ್ತರದ ಸ್ಥಾನವನ್ನು ಪಡೆದುಕೊಳ್ಳುವಿರಿ. ಕೆಲಸದ ವಿಷಯದಲ್ಲಿ ಸಣ್ಣ ಸವಾಲುಗಳು ನಿಮ್ಮನ್ನು ಕಾಡಬಹುದು. ಅದರಿಂದ ಯಾವುದೇ ತೊಂದರೆ ಉಂಟಾಗದು. ಕುಟುಂಬವೇ ನಿಮ್ಮ ಶಕ್ತಿ ಎನ್ನುವುದನ್ನು ನೀವು ತಿಳಿದುಕೊಳ್ಳುವಿರಿ. ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಕಷ್ಟದ ದಿನ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಅದು ನಿಮಗೆ ಉತ್ತಮ ಆತ್ಮವಿಶ್ವಾಸವನ್ನು ನೀಡುವುದು.

ಅದೃಷ್ಟದ ಬಣ್ಣ: ತುಕ್ಕಿನ ಬಣ್ಣ

ಅದೃಷ್ಟದ ನಂಬರ್: 16

ಅದೃಷ್ಟದ ಸಮಯ: ಮಧ್ಯಾಹ್ನ 12:30 ರಿಂದ ರಾತ್ರಿ 7:45ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ಸ್ಪರ್ಧಾರತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಉತ್ತಮ ಗ್ರಹಗತಿಗಳ ಕಾರಣದಿಂದ ಹಣಕಾಸಿನ ವಿಷಯದಲ್ಲಿ ಅನುಕೂಲಕರ ದಿನವಾಗುವುದು. ಅಲ್ಲದೆ ಉತ್ತಮ ಲಾಭವನ್ನು ಪಡೆದುಕೊಳ್ಳುವಿರಿ. ಹೊಸ ವ್ಯವಹಾರವನ್ನು ಕೈಗೊಳ್ಳಲು ಮುಂದಾದವರಿಗೆ ಯಶಸ್ಸು ದೊರೆಯುವುದು. ಕಾರ್ಪೋರೇಟ್ ವಲಯದಲ್ಲಿ ಇರುವವರಿಗೆ ಉತ್ತಮ ಲಾಭ ದೊರೆಯುವುದು. ವಿದ್ಯಾರ್ಥಿಗಳು ಬಹಳ ಸಮಯದ ನಂತರ ನಿರಾಳತೆಯನ್ನು ಕಾಣುವರು. ನಿಮ್ಮ ಪರಿಶ್ರಮವನ್ನು ಎಲ್ಲರೂ ಮೆಚ್ಚುವರು. ಮುಖ್ಯಸ್ಥರು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ನಿಮ್ಮ ಸಹೋದ್ಯೋಗಿಗಳು ಸಹ ಪ್ರಮುಖ ವಿಷಯಗಳ ಕುರಿತು ನಿಮ್ಮ ಸಲಹೆಯನ್ನು ಪಡೆದುಕೊಳ್ಳುವರು. ಸಂಗಾತಿಯ ಬೆಂಬಲದೊಂದಿಗೆ ಕುಟುಂಬದ ವಿಷಯವು ಉತ್ತಮವಾಗಿರುತ್ತದೆ. ಜೀವನದ ಪ್ರಮುಖ ವಿಷಯಗಳಿಗೆ ಹೆಚ್ಚು ಶ್ರಮವನ್ನು ವಹಿಸಿ. ಎಣ್ಣೆಯುಕ್ತ ಆಹಾರದಿಂದ ದೂರವಿರಿ. ನಿಮ್ಮ ಒಟ್ಟಾರೆ ವಿಷಯಗಳು ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಪೀಚ್

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಮುಂಜಾನೆ 9:45 ರಿಂದ ಮಧ್ಯಾಹ್ನ 4:10ರ ವರೆಗೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಹಣಕಾಸಿನ ವಿಷಯದಲ್ಲಿ ಹಿರಿಯರ ಸಹಾಯ ಹಾಗೂ ಸಲಹೆಯನ್ನು ಪಡೆಯಿರಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ಉಂಟಾಗುವುದರಿಂದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ಕಂಡುಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲೂ ನಿಮ್ಮ ಸಹೋದ್ಯೋಗಿಗಳು ಸಹಕಾರ ನೀಡುವುದರಿಂದ ಕೆಲಸವನ್ನು ಆನಂದದಿಂದ ನಿರ್ವಹಿಸುವಿರಿ. ಹಠಾತ್ ಬದಲವಣೆಯನ್ನು ನೀವು ನಿಮ್ಮ ಜೀವನದಲ್ಲಿ ಕಾಣುವಿರಿ. ಅನಿರೀಕ್ಷಿತ ಪ್ರವಾಸವು ಜೀವನದಲ್ಲಿ ಹಠಾತ್ ಬದಲಾವಣೆಯನ್ನು ತರುತ್ತದೆ. ಆಕ್ರಮಣಕಾರಿ ಪ್ರವೃತ್ತಿ ನಿಮ್ಮ ಪರಿಸ್ಥಿತಿಯನ್ನು ಹಾಳುಮಾಡುವುದು. ಹಣಕಾಸಿನ ವಿಷಯದಲ್ಲಿ ಮಿಶ್ರ ಫಲವನ್ನು ಪಡೆದುಕೊಳ್ಳುವಿರಿ. ಆರೋಗ್ಯ ಉತ್ತಮವಾಗಿರಲು ಎಣ್ಣೆಯುಕ್ತ ಆಹಾರವನ್ನು ಸೇವಿಸದಿರಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 6:15ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಹಳೆಯ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಸಮಯ. ತಾಯಿಯ ಆರೋಗ್ಯದ ಕಡೆಗೆ ಗಮನ ನೀಡಬೇಕು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ನೀವು ಇತರರಿಗೆ ಸಹಾಯ ಮಾಡುವಿರಿ. ಒಟ್ಟಾರೆಯಾಗಿ ಇಂದು ನಿಮಗೆ ಅನುಕೂಲಕರವಾದ ದಿನ ಎನ್ನಬಹುದು. ನಿಮ್ಮ ನಿರೀಕ್ಷೆಗೆ ತಕ್ಕಂತೆ ನಿಮ್ಮ ಬದುಕು ಸಾಗುವುದು. ನೀವು ದಿನವಿಡೀ ಸಕಾರಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗ ಬದಲಾವಣೆ ಹಾಗೂ ವೇತನ ಹೆಚ್ಚಳದ ವಿಷಯವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಕುಟುಂಬಕ್ಕಾಗಿ ಏನನ್ನಾದರೂ ಯೋಜಿಸಬಹುದು. ಅವರಿಗೆ ವಿಶೇಷ ಭಾವನೆ ಬರುವುದು. ಉದ್ಯಮಿಗಳು ಇಂದು ಉತ್ತಮ ಲಾಭವನ್ನು ಪಡೆದುಕೊಳ್ಳುವರು. ದಿನದ ಆರಂಭವನ್ನು ಯೋಗ ಮತ್ತು ಧ್ಯಾನದಿಂದ ಮಾಡಿ. ಈದಿನವು ಸಕ್ರಿಯವಾಗಿ ಸಾಗುವುದು.

ಅದೃಷ್ಟದ ಬಣ್ಣ: ಬೀಜ್

ಅದೃಷ್ಟದ ಸಂಖ್ಯೆ: 39

ಅದೃಷ್ಟದ ಸಮಯ: ಮುಂಜಾನೆ 9:45 ರಿಂದ ಸಂಜೆ 5:55ರ ವರೆಗೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ಭೂಮಿಗೆ ಸಂಬಂಧಿಸಿದ ವ್ಯವಹಾರ ನಡೆಸುವವರು ಹೊಸ ಯೋಜನೆಯನ್ನು ಕೈಗೊಳ್ಳುವರು. ಜನರನ್ನು ಸುಲಭವಾಗಿ ನಂಬುವ ನಿಮ್ಮ ಅಭ್ಯಾಸವು ನಿಮಗೆ ತಪ್ಪನ್ನು ಸಾಭೀತುಪಡಿಸುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವುದರಿಂದ ನಿಮಗೆ ಈ ದಿನ ಉತ್ತಮವಾಗಿರುತ್ತದೆ. ಇಂದು ನೀವು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಕೈಗೊಳ್ಳುವುದರ ಮೂಲಕ ಸಂತಸವನ್ನು ಅನುಭವಿಸುವಿರಿ. ಕೆಲಸದಲ್ಲಿ ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ. ನವ ವಿವಾಹಿತರು ಪರಸ್ಪರ ಸಮಯ ನೀಡುವುದರ ಮೂಲಕ ಸಂತೋಷವನ್ನು ಹಂಚಿಕೊಳ್ಳುವರು. ಮಕ್ಕಳು ಕ್ರೀಡೆ, ಶಿಕ್ಷಣ ಹಾಗೂ ಸಾಂಸ್ಕøತಿಕ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡುವರು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ವಾದಕ್ಕೆ ಇಳಿಯಬೇಡಿ. ಹೊಟ್ಟೆಯ ಕೆಳಭಾಗದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಉತ್ತಮ ವಾಕಿಂಗ್ ಮಾಡುವುದರ ಮೂಲಕ ದಿನವನ್ನು ಆರಂಭಿಸಿ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 32

ಅದೃಷ್ಟದ ಸಮಯ: ಬೆಳಿಗ್ಗೆ 4:30 ರಿಂದ ಸಂಜೆ 6:00ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ಗ್ರಹಗತಿಗಳ ಉತ್ತಮ ಸಹಕಾರದಿಂದ ಇಂದು ನೀವು ಸಾಕಷ್ಟು ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಮೂಲದಿಂದ ಲಾಭವನ್ನು ಪಡೆದುಕೊಳ್ಳುವಿರಿ. ಇಂದು ನೀವು ಉತ್ತಮ ಸಮಯಗಳೊಂದಿಗೆ ಆಹ್ಲಾದಕರ ದಿನವನ್ನಾಗಿ ಕಳೆಯುವಿರಿ. ಹೆಚ್ಚುವರಿ ಆದಾಯದ ಮೂಲವು ನಿಮಗೆ ಪ್ರಯೋಜನಕಾರಿಯಾಗಿದೆ. ಹಣಕಾಸಿನ ಹೊರೆಯಿಂದ ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣವನ್ನು ಕೈಗೊಳ್ಳಲು ಯೋಜಿಸುವರು. ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಇರುವವರಿಗೆ ಇಂದು ಕಷ್ಟದ ದಿನವಾಗಲಿದೆ. ಅನೇಕ ತೊಂದರೆಯನ್ನು ಅನುಭವಿಸಬೇಕಾಗುವುದು. ನವ ವಿವಾಹಿತರಿಗೆ ಪ್ರಣಯದ ದಿನ. ನೀವು ನಿಮ್ಮ ಸ್ನೇಹಿತರೊಂದಿಗೆ ಅದ್ಭುತ ಸಮಯವನ್ನು ಕಳೆಯುವಿರಿ. ಗಾಸಿಪ್ ಗಳಿಂದ ದೂರ ಇರಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 41

ಅದೃಷ್ಟದ ಸಮಯ: ಸಂಜೆ 5:40 ರಿಂದ ಮಧ್ಯಾಹ್ನ 11:00ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಕುಟುಂಬದಲ್ಲಿ ನಿಕಟ ಸಂಬಂಧಿಗಳು ಹಸ್ತಕ್ಷೇಪ ಮಾಡುವುದರಿಂದ ಕಿರಿಕಿರಿ ಉಂಟಾಗಬಹುದು. ಶಾಂತಿಯುತವಾದ ಜೀವನ ನಡೆಸಲು ಕೆಲವು ವಿಷಯಗಳನ್ನು ನಿರ್ಲಕ್ಷಿಸಿ. ಒಡ ಹುಟ್ಟಿದವರ ಬೆಂಬಲ ದೊರೆಯದು. ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ. ಇಂದು ನೀವು ಕುಟುಂಬದ ಸದಸ್ಯರೊಂದಿಗೆ ವಾದ ಮಾಡುವುದರ ಮೂಲಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಇದರಿಂದ ವಿಷಯಗಳು ಪ್ರತಿಕೂಲವಾಗಿರುತ್ತದೆ. ಇಂದು ಕಚೇರಿಯಲ್ಲಿ ನಿಮಗೆ ನಿಧಾನ ಗತಿಯ ದಿನ. ನಿಮ್ಮ ಮೇಲಾಧಿಕಾರಿಯು ನೀವು ಕೆಲಸವನ್ನು ಪೂರ್ಣಗೊಳಿಸದೆ ಇರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಬಹುದು. ಸಮಸ್ಯೆಗಳು ದಿನದ ಕೊನೆಯ ಹಂತದಲ್ಲಿ ಶಮನವಾಗುತ್ತಾ ಬರುವುದು. ದಿನದ ಆರಂಭವನ್ನು ಧ್ಯಾನದಿಂದ ಪ್ರಾರಂಭಿಸಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 24

ಅದೃಷ್ಟದ ಸಮಯ: ಮುಂಜಾನೆ 8:30 ರಿಂದ ಮಧ್ಯಾಹ್ನ 12:00ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಪ್ರೀತಿ ಪಾತ್ರರೊಂದಿಗೆ ಕೆಲವು ವಿಷಯದಲ್ಲಿ ಸಂಘರ್ಷವನ್ನು ಮಾಡುವಿರಿ. ಅದು ನಿಮ್ಮ ಮನಸ್ಸಿಗೆ ಹೆಚ್ಚಿನ ನೋವನ್ನು ಉಂಟುಮಾಡುವುದು. ಇದರಿಂದ ನೀವು ಸಂಬಂಧದ ಮಹತ್ವವನ್ನು ಅರ್ಥಮಾಡಿಕೊಳ್ಳುವಿರಿ. ಕುಟುಂಬ ಹಾಗೂ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಅದು ಹಿಂದಿನಿಂದಲೂ ಅಗತ್ಯವಾದ ಸಂಗತಿಯಾಗಿದೆ. ಮಕ್ಕಳಿಂದ ನೀವು ಸಂತೋಷದ ಸುದ್ದಿಯನ್ನು ಕೇಳುವಿರಿ. ತಂದೆಯ ಅನಾರೋಗ್ಯದ ಸ್ಥಿತಿ ಕುಟುಂಬದಲ್ಲಿ ಅಸಮಧಾನ ಉಂಟುಮಾಡುವುದು. ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಮಗೆ ಲಾಭದಾಯಕವಾದ ದಿನ. ಕೆಲಸದಲ್ಲೂ ಸಾಮಾನ್ಯವಾದ ದಿನ. ಹೊಸ ಯೋಜನೆಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುವಿರಿ. ಲಕ್ಷ್ಮಿ ದೇವಿಯ ಪೂಜೆ ಮಾಡುವುದರ ಮೂಲಕ ಸಮೃದ್ಧಿಯನ್ನು ಪಡೆದುಕೊಳ್ಳಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 35

ಅದೃಷ್ಟದ ಸಮಯ: ಮುಂಜಾನೆ 5:30ರಿಂದ ಸಂಜೆ 3:10ರ ವರೆಗೆ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕೆಲಸದ ಒತ್ತಡ ಹಾಗೂ ಒಂದಿಷ್ಟು ಹೊಸ ಯೋಜನೆಯ ಪ್ರಯುಕ್ತ ನೀವು ನಿಮ್ಮವರ ಜೊತೆಗೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಕಠಿಣವಾದ ದಿನವಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕುಟುಂಬದವರೊಂದಿಗೆ ಸ್ವಲ್ಪ ಸಮಯ ದೂರ ಉಳಿಯಬೇಕಾಗುವುದು. ಇದು ಬಾಂಧವ್ಯದಲ್ಲಿ ವಿವಾದಕ್ಕೆ ಕಾರಣವಾಗುವುದು. ಸಂಹನದ ಅಂತರದಿಂದ ನಿಮ್ಮ ಸಂಗಾತಿ ಮನನೊಂದುಕೊಳ್ಳುವ ಸಾಧ್ಯತೆಗಳಿವೆ. ಕ್ರೀಡೆ ಹಗೂ ಸಂಗೀತದಲ್ಲಿ ಮುಂದಿರುವ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡುವರು. ಸಂಗಾತಿಯ ಕಿರಿಕಿರಿ ವರ್ತನೆಯು ನಿರಾಸೆಯನ್ನುಂಟುಮಾಡುತ್ತದೆ. ಪರಿಸ್ಥಿತಿಗಳನ್ನು ಅತ್ಯಂತ ತಾಳ್ಮೆಯಿಂದ ನಿರ್ವಹಿಸಬೇಕು. ನೀವು ಶಾಂತ ಮತ್ತು ಸಹನೆಯ ಪ್ರವೃತ್ತಿ ಹೊಂದುವುರ ಮೂಲಕ ದಿನದ ಪರಿಸ್ಥಿತಿಯನ್ನು ನಿಭಾಯಿಸಬಹುದು.

ಅದೃಷ್ಟದ ಬಣ್ಣ: ಗ್ರೀನ್

ಅದೃಷ್ಟದ ಸಂಖ್ಯೆ: 18

ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ರಾತ್ರಿ 8:30ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಉದ್ಯೋಗ ಕ್ಷೇತ್ರದಲ್ಲಿ ಉಂಟಾಗುವ ಒತ್ತಡದಿಂದ ನೀವು ಉದ್ಯೋಗ ಬದಲಾವಣೆಗೆ ಮುಂದಾಗಬಹುದು. ನೀವು ನಿಮ್ಮ ಮನೋಭಾವದ ಸುಧಾರಣೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುವಿರಿ. ನಿಮ್ಮ ವರ್ತನೆಯಿಂದಾಗಿ ಕೆಲಸದಲ್ಲಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುವಿರಿ. ಅದರ ಸುಧಾರಣೆಗೆ ನೀವು ಹೊಸ ಯೋಜನೆ ಕೈಗೊಳ್ಳುವಿರಿ. ತೀವ್ರವಾದ ವೇಳಾ ಪಟ್ಟಿ ಹಾಗೂ ಕೆಲಸದ ಒತ್ತಡವು ನಿಮಗೆ ಕಿರಿಕಿರಿಯನ್ನು ಉಂಟುಮಾಡುವುದು. ಹೂಡಿಕೆಯಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವಿರಿ. ವಿಹಾರದ ವಿಷಯವು ನಿಮಗೆ ಅದೃಷ್ಟವನ್ನು ತಂದುಕೊಡುವುದು. ತಾಳ್ಮೆಯಿಂದ ಇರುವುದಕ್ಕೆ ಪ್ರತಿಫಲ ದೊರೆಯುವುದು. ನಿಮ್ಮ ಸಂಗಾತಿಯು ನಿಮಗೆ ವಿಶೇಷ ದಿನವನ್ನು ಕಲ್ಪಿಸುವುದರ ಮೂಲಕ ದಿನವನ್ನು ಉತ್ತಮಗೊಳಿಸುತ್ತಾರೆ. ಇಂದು ನಿಮಗೆ ಆರೋಗ್ಯಕರ ದಿನವಾಗಿರುತ್ತದೆ. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ದೊರೆಯುವುದು. ಜೊತೆಗೆ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 42

ಅದೃಷ್ಟದ ಸಮಯ: ಮುಂಜಾನೆ 7:15 ರಿಂದ ಸಂಜೆ 6:30ರ ವರೆಗೆ.

English summary

Daily Horoscope 19 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more