Just In
- 5 hrs ago
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- 7 hrs ago
ಭಾನುವಾರದ ದಿನ ಭವಿಷ್ಯ (15-12-2019)
- 17 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 19 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
Don't Miss
- News
ಭಾರತೀಯ ಸೇನೆ ಕೈಸೇರಿದ ಅಮೆರಿಕದ ಅತ್ಯಾಧುನಿಕ ರೈಫಲ್ಸ್
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ನಾ ನೋಡಿದ ಸಿನಿಮಾ 'ಒಡೆಯ' ವಿಮರ್ಶೆ: ಇಷ್ಟವಾಗಿದ್ದು, ಕಷ್ಟವಾಗಿದ್ದು
- Technology
2019ರಲ್ಲಿ ವಾಟ್ಸಪ್ ಸೇರಿರುವ ಕೆಲವು ಅಚ್ಚರಿಯ ಫೀಚರ್ಸ್ ಬಗ್ಗೆ ನಿಮಗೆ ಗೊತ್ತಾ?
- Sports
ಐಎಸ್ಎಲ್: ಅಜೇಯ ಬೆಂಗಳೂರಿಗೆ ಮುಂಬೈ ವಿರುದ್ಧ ವಿಜಯದ ಹಂಬಲ
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮಕ್ಕಳ ದಿನಾಚರಣೆ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು
ದೇಶದ ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಸುದಿನ ಮತ್ತೆ ಬಂದಿದೆ. ನವೆಂಬರ್ ಅಂದರೆ ಮಕ್ಕಳ ಪಾಲಿಗೆ ಹಬ್ಬದ ತಿಂಗಳು. ಇಡೀ ದೇಶವೇ ಮಕ್ಕಳನ್ನು ಗೌರವದಿಂದ ಕಾಣುವ ದೇಶದ ಹಬ್ಬ ಮಕ್ಕಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 14 ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನ. ಅವರ ಸವಿನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಆ ದಿನವನ್ನು ಮೀಸಿಲಿಡಲಾಗಿದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು
ಶಾಲೆ, ಕಾಲೇಜುಗಳಲ್ಲಿ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಅವರ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ. ಹಾಗಾದ್ರೆ ಮಕ್ಕಳ ದಿನಾಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಯಾವುದು? ಮಕ್ಕಳ ದಿನಾಚರಣೆಯ ಇತಿಹಾಸ ಏನು?

ಪ್ರೀತಿಯಿಂದ ನೆಹರೂರನ್ನು ‘ಚಾಚಾ’ ಎಂದ ಮಕ್ಕಳು
ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರೂ ಬಯಸುತ್ತಿದ್ದರಂತೆ. ಆದ್ದರಿಂದಲೇ ಮಕ್ಕಳೆಲ್ಲರಿಗೂ ನೆಹರೂ ಎಂದಿಗೂ ಪ್ರೀತಿಯ ಚಾಚಾ ಆಗಿ ಇರುತ್ತಿದ್ದರು. ಮಕ್ಕಳು ಸಹ ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾ ಅಗಿಯೇ ಹೆಚ್ಚು ಹೆಸರುವಾಸಿ.

ಮೊದಲ ಪ್ರಧಾನಿಯ ಹೇಳಿಕೆ
ಮಕ್ಕಳನ್ನು ದೇಶದ ಮುಂದಿನ ಭವಿಷ್ಯ ಎಂದಿದ್ದರು ನೆಹರೂ. "ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ರೀತಿ ಅವರನ್ನು ಯಾವ ರೀತಿ ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ" ಎಂದು ನೆಹರೂ ಆಗಾಗ ವಿವರಿಸುತ್ತಿದ್ದರು.

ವಿದ್ಯಾಸಂಸ್ಥೆ ತೆರೆದ ನೆಹರೂ
ಮಕ್ಕಳ ಶಿಕ್ಷಣಕ್ಕೆ ನೆಹರೂ ಯಾವಾಗಲೂ ಒತ್ತು ನೀಡುತ್ತಿದ್ದರು. ದೇಶದಲ್ಲಿ ಕಾಲೇಜುಗಳ ಸ್ಥಾಪನೆಗೆ ನೆಹರೂ ಬಹಳ ಕೊಡುಗೆ ನೀಡಿದ್ದಾರೆ. ಇಂದಿಗೂ ನೆಹರೂ ವಿಶ್ವವಿದ್ಯಾಲಯವು ದೇಶದ ಅತ್ಯುತ್ತಮ ಶಾಲೆ ಎಂದೇ ಪರಿಗಣಿಸಲ್ಪಡುತ್ತದೆ.

ಮಕ್ಕಳಿಗೆ ಮೀಸಲಾದ ನೆಹರೂ ಹುಟ್ಟಿದ ದಿನ
1964ರಲ್ಲಿ ನೆಹರೂ ಅವರು ಕೊನೆಯುಸಿರೆಳೆದ ನಂತರ ಅವರು ಹುಟ್ಟಿದ ದಿನವನ್ನು ಅವರು ಪ್ರೀತಿಸುತ್ತಿದ್ದ ವ್ಯಕ್ತಿಗಳಿಗೆ ಮೀಸಲಿಡಬೇಕು ಎಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಅವರು ಹುಟ್ಟಿದ ದಿನ ನವೆಂಬರ್ 14ನ್ನು ಮಕ್ಕಳಿಗಾಗಿ ಮೀಸಲಿಟ್ಟು ಪ್ರತಿವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಶಾಲಾ-ಕಾಲೇಜುಗಳಲ್ಲಿ ಚಟುವಟಿಕೆಗಳು
ಪ್ರತಿ ವರ್ಷ ಶಾಲೆ ಮತ್ತು ಕಾಲೇಜುಗಳಲ್ಲಿ ಈ ದಿನದಂದು ಮಕ್ಕಳಿಗಾಗಿ ಸಾಕಷ್ಟು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆಟಗಳು, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಮಕ್ಕಳಿಗಾಗಿ ಶಾಲಾಕಾಲೇಜುಗಳಲ್ಲಿ ಮಾಡುವುದು ಸರ್ವೇಸಾಮಾನ್ಯ. ಮಕ್ಕಳಿಗೋಸ್ಕರ ಕೆಲವು ಶಾಲಾ ಕಾಲೇಜುಗಳಲ್ಲಿ ಉಡುಗೊರೆಯನ್ನು ಕೂಡ ನೀಡಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಸಿಹಿ ಹಂಚಿ, ಪುಸ್ತಕ ವಿತರಣೆ ಮಾಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ನವೆಂಬರ್ 20 ಸಾರ್ವತ್ರಿಕ ಮಕ್ಕಳ ದಿನ
ನವೆಂಬರ್ 20 ರಂದು ವಿಶ್ವಸಂಸ್ಥೆ ಘೋಷಣೆಯಂತೆ ಸಾರ್ವತ್ರಿಕ ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಆಚರಿಸುವ ದಿನವಾದರೆ ನವೆಂಬರ್ 14 ನಮ್ಮ ದೇಶದ ಪಾಲಿನ ಮಕ್ಕಳಿಗೆ ಹಬ್ಬದ ದಿನ.

ಹಿರಿಯರ ಸಂಕಲ್ಪ ಹೀಗಿರಲಿ
ಈ ದಿನ ಪೋಷಕರಾಗಿ ಮಾಡಬೇಕಿರುವ ಪ್ರಮುಖ ಜವಾಬ್ದಾರಿಯೆಂದರೆ ಮಕ್ಕಳ ಬೆಳವಣಿಗೆಗೆ ನಿಮ್ಮ ಕೊಡುಗೆ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು. ದೇಶದ ಪ್ರತಿ ಮಗುವಿಗೂ ಕೂಡ ಶಿಕ್ಷಣ ದೊರಕುವಂತಾಗಬೇಕು. ಲಾಲನೆ-ಪಾಲನೆಯಲ್ಲಿ ಯಾವುದೇ ಕೊರತೆಯಾಗಬಾರದು. ಮಕ್ಕಳಿಗೆ ಉತ್ತಮ ಅರ್ಹತೆ ಬರುವ ನಿಟ್ಟಿನಲ್ಲಿ ಹಿರಿಯರು ಶ್ರಮವಹಿಸಬೇಕು.

ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು
ರಾಷ್ಟ್ರವನ್ನು ಒಂದು ಕಟ್ಟಲಾಗುತ್ತಿರುವ ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆಗಳಂತೆ!. ನಾವೆಷ್ಟು ಉತ್ತಮವಾದ ಇಟ್ಟಿಗೆಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣವಾಗುತ್ತದೆ. ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು ಎಂದಾದರೆ ಪ್ರತಿಯೊಬ್ಬ ಹಿರಿಯರೊಳಗಿರುವ ಮಗುವೂ ಜೀವಂತವಾಗಿರಬೇಕು ಮತ್ತು ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯ ದೊರೆಯಬೇಕು.