Just In
Don't Miss
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭೋಗಿ 2021: ದಿನಾಂಕ, ಮಹತ್ವ ಹಾಗೂ ಇತಿಹಾಸದ ಸಂಪೂರ್ಣ ಮಾಹಿತಿ
ಭೋಗಿ ಹಬ್ಬವು ಮಕರ ಸಂಕ್ರಾಂತಿ ಅಥವಾ ಪೊಂಗಲ್ ಎಂದು ಕರೆಯಲ್ಪಡುವ ಸುಗ್ಗಿಯ ಹಬ್ಬದ ಮೊದಲ ದಿನ ಆಚರಿಸಲಾಗುತ್ತದೆ. ಇದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಪ್ರತಿವರ್ಷ ಜನವರಿಯಲ್ಲಿ ಬರುತ್ತದೆ.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ನಾಲ್ಕು ದಿನಗಳ ಮಕರ ಸಂಕ್ರಾಂತಿ ಹಬ್ಬದ ಮೊದಲ ದಿನವೇ ಈ ಭೋಗಿ ಹಬ್ಬ. ಈ ದಿನದಂದು ವಿಶೇಷವಾಗಿ ವರುಣದೇವನನ್ನುಪೂಜಿಸಲಾಗುತ್ತದೆ. ಭೋಗಿ ಉತ್ಸವ, ಥಾಯ್ ಪೊಂಗಲ್, ಮಟ್ಟು ಪೊಂಗಲ್ ಮತ್ತು ಕಾನುಮ್ ಪೊಂಗಲ್ನೊಂದಿಗೆ ಇದರ ಆಅಚರಣೆಗಳು ಕೊನೆಗೊಳ್ಳುತ್ತವೆ.
ಹಾಗಾದ್ರೆ ಬನ್ನಿ ಭೋಗಿ 2021ರ ದಿನಾಂಕ,ಮಹತ್ವ ಮತ್ತು ಅದರ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಭೋಗಿ ೨೦೨೧ರ ದಿನಾಂಕ:
ಹಳೆಯದನ್ನು ತ್ಯಜಿಸಿ, ಜೀವನದಲ್ಲಿ ಹೊಸ ಅದೃಷ್ಟ ಮತ್ತು ಸಮೃದ್ಧಿಯನ್ನು ತರುವ ಈ ಭೋಗಿ ಹಬ್ಬ ಈ ವರ್ಷ ಈ ಭೋಗಿ ಹಬ್ಬ ಜನವರಿ ೧೪ರಂದು ಆಚರಿಸಲಾಗುತ್ತದೆ. ಪೊಂಗಲ್ ಆಚರಣೆಯ ಮೊದಲ ದಿನ ಭೋಗಿ ಆಗಿದ್ದು, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಇದು ಜನವರಿ ೧೩-೧೬ರ ನಡುವೆ ಬರುತ್ತದೆ.

ಭೋಗಿಯ ಇತಿಹಾಸ:
ಮಳೆಯ ದೇವತೆಯಾಗಿರುವ ವರುಣದೇವ ಇಂದ್ರನನ್ನು ಗೌರವಿಸಲು ಭೋಗಿ ಹಬ್ಬವನ್ನು ಭಾರಿ ಉತ್ಸಾಹದಿಂದ ಆಚರಿಸಲಾಗುತ್ತದೆ. ರೈತರು ಮುಂಬರುವ ಋತುವಿನಲ್ಲಿ ಉತ್ತಮ ಮಳೆ ಪಡೆಯಬೇಕೆಂದು ಈ ದೇವರನ್ನು ಪ್ರಾರ್ಥಿಸುತ್ತಾರೆ. ಏಕೆಂದರೆ ಅವರು ಭೂಮಿಗೆ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾರೆ ಎಂಬ ನಂಬಿಕೆಯಿದೆ. ಮುಂಬರುವ ವರ್ಷದ ಸುಗ್ಗಿಗಾಗಿ ಆಶೀರ್ವಾದ ಪಡೆಯಲು ರೈತರು ಇಂದ್ರನನ್ನು ಪೂಜಿಸುವುದಕ್ಕಾಗಿ ಈ ದಿನವನ್ನು ಇಂದ್ರನ್ ಎಂತಲೂ ಕರೆಯುತ್ತಾರೆ.

ಭೋಗಿಯ ಮಹತ್ವ:
ಈ ಸಂದರ್ಭದಲ್ಲಿ ಜನರು ತಮ್ಮ ನೇಗಿಲುಗಳು ಮತ್ತು ಇತರ ಕೃಷಿ ಉಪಕರಣಗಳನ್ನು ಸಹ ಪೂಜಿಸುತ್ತಾರೆ. ಜನರು ತಮ್ಮ ಮನೆಯಿಂದ ಹಳೆಯ ಮತ್ತು ಅನುಪಯುಕ್ತ ವಸ್ತುಗಳನ್ನು ಮರ ಮತ್ತು ಸೆಗಣಿಯ ಬೆರಣಿಗಳನ್ನು ಹಾಕಿದ ಬೆಂಕಿಗೆ ಎಸೆಯುತ್ತಾರೆ. ಈ ಪದ್ಧತಿಯನ್ನು 'ಭೋಗಿ ಮಂತಲು' ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಜೀವನದಿಂದ ಹಳೆಯ ಮತ್ತು ಋಣಾತ್ಮಕ ವಿಷಯಗಳನ್ನು ತೊಡೆದುಹಾಕಲು ಮತ್ತು ಹೊಸದಾಗಿ ಜೀವನ ಪ್ರಾರಂಭಿಸುವುದನ್ನು ಸಂಕೇತಿಸುತ್ತದೆ.

ಭೋಗಿಯ ಆಚರಣೆ:
ಭೋಗಿಯನ್ನು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಪೆಡ್ಡಾ ಪಾಂಡುಗ ಎಂದೂ ಕರೆಯುತ್ತಾರೆ. ಈ ಸುಗ್ಗಿಯ ಹಬ್ಬವನ್ನು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಭೋಗಿ ಹಬ್ಬವನ್ನು ಆಚರಿಸಲು, ಜನರು ಪರಸ್ಪರ ಭೋಗಿ ಸಂಕ್ರಾಂತಿ ಶುಭ ಹಾರೈಸುತ್ತಾರೆ. ಅವರು ತಮ್ಮ ಮನೆಯ ಮುಂದೆ ರಂಗೋಲಿ ಬಿಡಿಸುತ್ತಾರೆ. ಜನರು ತಮ್ಮ ಮನೆಗಳಲ್ಲಿ ಮಾಡಿದ ಭಕ್ಷ್ಯಗಳನ್ನು ನೆರೆಹೊರೆಯವರು ಮತ್ತು ಕುಟುಂಬಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಜನರು ಈ ದಿನ ಹೊಸ ಬಟ್ಟೆಗಳನ್ನು ಧರಿಸಿ ಪವಿತ್ರ ಬೆಂಕಿಯ ಸುತ್ತಲೂ ಜಪಿಸುತ್ತಾರೆ. ಜನರು ತಮ್ಮ ಮನೆಯನ್ನು ಹೂಮಾಲೆ ಮತ್ತು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಇದರಿಂದ ಅವರ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ. ಜನರು ಕೃಷಿ ತ್ಯಾಜ್ಯವನ್ನು ದೀಪೋತ್ಸವದಲ್ಲಿ ಸುಡುತ್ತಾರೆ. ಇದು ಚಳಿಗಾಲದಲ್ಲಿ ಶಾಖವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ದಿನ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿ, ಕಬ್ಬು ಮತ್ತು ಅರಶಿನದೊಂದಿಗೆ ಆಹಾರವನ್ನು ತಯಾರಿಸಲಾಗುತ್ತದೆ. ಈ ದಿನವನ್ನು ಉತ್ತರ ಭಾರತದಲ್ಲಿ ಗಾಳಿಪಟ ಹಬ್ಬ, ರಂಗೋಲಿ ತಯಾರಿಕೆ ಮತ್ತು ಗ್ರಾಮೀಣ ಕ್ರೀಡೆಗಳಾದ ಗಾಳಿಪಟ ಹಾರಿಸುವುದು, ಕೋಳಿ ಕಾದಾಟಗಳು ಮತ್ತು ಬುಲ್ ಫೈಟಿಂಗ್ ಮುಂತಾದ ಚಟುವಟಿಕೆಗಳಿಂದ ಗುರುತಿಸಲಾಗುತ್ತದೆ.