For Quick Alerts
ALLOW NOTIFICATIONS  
For Daily Alerts

ಭೀಮನ ಅಮವಾಸ್ಯೆ ವ್ರತ 2021: ಪೂಜೆಗೆ ಶುಭ ಮುಹೂರ್ತ ಯಾವಾಗ?

|

ಆಷಾಢಮಾಸದಲ್ಲಿ ಬರುವ ಕೊನೆಯ ಅಮವಾಸ್ಯೆಗೆ ತುಂಬಾ ಪ್ರಾಶಸ್ತ್ಯ ಇದೆ. ಆಗಸ್ಟ್ 08 ನೇ ತಾರೀಕು ಆಷಾಢ ಮಾಸದ ಕೊನೆಯ ಅಮವಾಸ್ಯೆ ಬಂದಿದ್ದು ಇದನ್ನು ಭೀಮನ ಅಮವಾಸ್ಯೆಯಂದು ಆಚರಿಸಲಾಗುವುದು. ಈ ಅಮವಾಸ್ಯೆಯನ್ನು ಸತಿ ಸಂಜೀವಿನಿ ವ್ರತ, ಭೀಮನ ಅಮವಾಸ್ಯೆಯ ವ್ರತ, ಜ್ಯೋತಿಸ್ತಂಭ ವ್ರತ ಎಂದು ಕೂಡ ಕರೆಯಲಾಗುವುದು.

Bheemana amavasya vrata

ಇದನ್ನು ನವವಧು ಹಾಗೂ ಅವಾಹಿತ ಹೆಣ್ಣು ಮಕ್ಕಳು ಆಚರಿಸುತ್ತಾರೆ. ತಮಗೆ ಉತ್ತಮವಾದ ಸಂಗಾತಿ ಸಿಗಬೇಕೆಂದು ಅವಾಹಿತ ಹೆಣ್ಣು ಮಕ್ಕಳು ವ್ರತ ಮಾಡಿದರೆ, ನವವಧು ಗಂಡನ ಆರೋಗ್ಯಕ್ಕಾಗಿ, ಸಂತಾನ ಪ್ರಾಪ್ತಿಗಾಗಿ ಈ ವ್ರತ ಮಾಡುತ್ತಾಳೆ.

ಭೀಮನ ಅಮವಾಸ್ಯೆಯೆಂದು ಪೂಜೆಗೆ ಶುಭ ಸಮಯ

ಭೀಮನ ಅಮವಾಸ್ಯೆಯೆಂದು ಪೂಜೆಗೆ ಶುಭ ಸಮಯ

2021 ಭೀಮನ ಅಮಾವಾಸ್ಯೆ ಶುಭ ದಿನ: ಆಗಸ್ಟ್‌ 8, ಭಾನುವಾರ

ರಾಹುಕಾಲ: ಸಂಜೆ 5:27 ರಿಂದ ಸಂಜೆ 7:07 ರವರೆಗೆ

ಅಭಿಜಿತ್‌ ಮುಹೂರ್ತ: ಮಧ್ಯಾಹ್ನ 12 ರಿಂದ 12:35 ರವರೆಗೆ

ದುರ್ಮುಹೂರ್ತ ಆರಂಭ: ಸಂಜೆ 5:20 ರಿಂದ ಸಂಜೆ 6: 13 ರವರೆಗೆ

ಪೂಜೆಗೆ ಶುಭ ಸಮಯ: 2021 ರ ಬೆಳಗ್ಗೆ 8 ರಿಂದ ಮಧ್ಯಾಹ್ನ 12:53 ರವರೆಗೆ

ರಾಹುಕಾಲ ಹೊರತು ಪಡಿಸಿ ಉಳಿದ ಸಮಯದಲ್ಲಿ ಪೂಜೆ ಸಲ್ಲಿಸಬಹುದು
ಭೀಮನ ಅಮವಾಸ್ಯೆ ಆಚರಣೆಯ ಹಿಂದಿರುವ ಪೌರಾಣಿಕ ಕತೆ

ಭೀಮನ ಅಮವಾಸ್ಯೆ ಆಚರಣೆಯ ಹಿಂದಿರುವ ಪೌರಾಣಿಕ ಕತೆ

ಶಿವನು ಪಾರ್ವತಿಯನ್ನು ವರಿಸಿದ್ದು ಭೀಮನ ಅಮವಾಸ್ಯೆಯಂದು ಹೇಳಲಾಗುತ್ತದೆ. ಅಲ್ಲದೆ ಮತ್ತೊಂದು ಕತೆ ಕೂಡ ಹೇಳುತ್ತಾರೆ. ವೃದ್ಧ ದಂಪತಿಗಳು ತಮ್ಮ ಪ್ರಾಯಕ್ಕೆ ಬಂದ ಮಗಳನ್ನು ಮದುವೆಯಾಗಿದ್ದ ಮಗನ ಬಳಿ ಬಿಟ್ಟು ಕಾಧಿಗೆ ತೆರಳುತ್ತಾರೆ. ಕಾಶಿಗೆ ಹೋಗುವಾಗ ತಾವು ಹಿಂತಿರುಗಿ ಬರದಿದ್ದರೆ ಆಕೆಗೆ ಮದುವೆ ಮಾಡುವಂತೆ ಹೇಳುತ್ತಾರೆ. ಆದರೆ ಆತ ಹಣ ಖರ್ಚಾಗುತ್ತದೆ ಎಂದು ತಂಗಿಗೆ ಮದುವೆ ಮಾಡುವುದೇ ಇಲ್ಲ. ಒಂದು ದಿನ ರಾಜನ ಮಗ ಸಾವನ್ನಪ್ಪುತ್ತಾನೆ.

ಆತ ಹಣ ಉಳಿತಾಯ ಮಾಡಲು ತನ್ನ ತಂಗಿಯನ್ನು ಆ ಹೆಣದ ಜೊತೆ ಮದುವೆ ಮಾಡುತ್ತಾನೆ. ಸೈನಿಕರು ಹೆಣವನ್ನು ಸುಡಲು ಬಾಗೀರಥಿ ನದಿಯ ಸಮೀಪಕ್ಕೆ ಬರುತ್ತಾರೆ. ಆದರೆ ಆಗ ಜೋರಾಗಿ ಮಳೆ ಬರುತ್ತದೆ. ಎಲ್ಲರೂ ಓಡಿ ಹೋಗುತ್ತಾರೆ, ಆಕೆ ಮಾತ್ರ ತನ್ನ ಪೋಷಕರನ್ನು ನೆನೆದು ವ್ರತ ಮಾಡುತ್ತಾಳೆ ಸ್ನಾನವನ್ನು ಮಾಡಿ ನದಿ ತಟದಿಂದ ಮಣ್ಣನ್ನು ತೆಗೆದುಕೊಂಡು ಎರಡು ಕಾಳಿಕಾಂಬ ದೀಪಗಳನ್ನು ಮಾಡುತ್ತಾಳೆ.

ಬಿದ್ದ ಮರದಿಂದ ನಾರನ್ನು ಸಿದ್ಧ ಮಾಡುತ್ತಾಳೆ ಮತ್ತು ಪೋಷಕರು ಅನುಸರಿಸುವ ವಿಧಾನವನ್ನು ಆಕೆ ಕೂಡ ಅನುಸರಿಸುತ್ತಾಳೆ. ಕಡುಬಿನ ಬದಲಿಗೆ ಆಕೆ ಮಣ್ಣಿನ ಮುದ್ದೆಗಳನ್ನು ತಯಾರಿಸುತ್ತಾಳೆ. ಆಕೆ ಪೂಜೆಯನ್ನು ಮಾಡುತ್ತಿರುವಾಗ ಯುವ ದಂಪತಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುತ್ತಾರೆ. ಶವದ ಮುಂದೆ ಆಕೆ ಪೂಜೆಯನ್ನು ಏಕೆ ಮಾಡುತ್ತಿದ್ದಾಳೆ ಎಂದು ಆ ಯುವ ದಂಪತಿ ಹುಡುಗಿಯನ್ನು ಕೇಳುತ್ತಾರೆ.

ತನ್ನ ವಿಧಿಯನ್ನು ಆ ದಂಪತಿಗಳಿಗೆ ಆಕೆ ವಿವರಿಸುತ್ತಾಳೆ ಮತ್ತು ತಾನೀಗ ಒಂಟಿಯಾಗಿದ್ದು ಮಣ್ಣಿನ ಮುದ್ದೆಗಳನ್ನು ಒಡೆಯುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ. ಯುವಕನು ಅದನ್ನು ತಾನು ಒಡೆಯುವುದಾಗಿ ಹೇಳುತ್ತಾನೆ.

ಆ ಮುದ್ದೆಯನ್ನು ಒಡೆದು ಆತ ದೀರ್ಘ ಸುಮಂಗಲಿ ಭವ ಎಂದು ಹರಸುತ್ತಾನೆ. ಆಗ ಹುಡುಗಿಯು ನಗುತ್ತಾ ತನ್ನ ಪತಿ ಮರಣ ಹೊಂದಿದ್ದು ಇದು ಹೇಗೆ ನಡೆಯಲು ಸಾಧ್ಯ ಎಂದು ಕೇಳುತ್ತಾಳೆ.

ಮರಣ ಹೊಂದಿದ ರಾಜಕುಮಾರನತ್ತ ಅವರು ನೋಡಿ ಆತ ನಿದ್ದೆ ಮಾಡಿದ್ದು ನೀನು ಏಕೆ ಅವನನ್ನು ಎಚ್ಚರಗೊಳಿಸಬಾರದು ಎಂದು ಕೇಳುತ್ತಾರೆ. ಹೋಗಿ ಅವನನ್ನು ಎಬ್ಬಿಸು ಎಂದು ಹೇಳುತ್ತಾರೆ. ಆಶ್ಚರ್ಯದಿಂದ ಆಕೆ ರಾಜಕುಮಾರನನ್ನು ನೋಡುತ್ತಾಳೆ ಮತ್ತು ಆತ ಕಣ್ಣುಗಳನ್ನು ತೆರೆಯುತ್ತಾನೆ.

ಆ ದಂಪತಿ ಶಿವ ಪಾರ್ವತಿ ಆಗಿರುತ್ತಾರೆ. ಆದ್ದರಿಂದ ಈ ದಿನ ಗಂಡನ ಪೂಜೆ ಮಾಡಿದರೆ ಆತನ ಆಯುಷ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು.

ವ್ರತದ ಆಚರಣೆ ಹೇಗೆ?

ವ್ರತದ ಆಚರಣೆ ಹೇಗೆ?

ಈ ವ್ರತವನ್ನು ಒಮ್ಮೆ ಮಾಡಿದರೆ ಐದು ವರ್ಷ, ಒಂಬತ್ತು ಅಥವಾ ಹದಿನಾರು ವರ್ಷ ಮಾಡಬೇಕು. ಈ ದಿನ ಗಂಡನ ಪಾದಕ್ಕೆ ನಮಸ್ಕರಿಸಿ, ಪೂಜೆ ಸಲ್ಲಿಸುತ್ತಾರೆ.

ಪೂಜೆ ವಿಧಾನ ಹೇಗೆ?

ಒಂದು ತಟ್ಟೆಯಲ್ಲಿ ಧ್ಯಾನ ಹಾಕಿ, ಅದರ ಮೇಲೆ ಎರಡು ದೀಪ ಇಟ್ಟು, ತುಪ್ಪ ಹಾಕಿ ಶಿವ-ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸಬೇಕು.

 ಗೌರಿ ದಾರದ ಮಹತ್ವ

ಗೌರಿ ದಾರದ ಮಹತ್ವ

ಪೂಜಾ ಸಾಮಾಗ್ರಿ:

ಮಣೆ / ಮಂಟಪ,

ಭೀಮೇಶ್ವರ ದೇವರ ಪಟ

* ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ

* ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು

* ಅರಿಶಿನ, ಕುಂಕುಮ, ಮಂತ್ರಾಕ್ಷತೆ

* ಶ್ರೀಗಂಧ, ಊದಿನ ಕಡ್ಡಿ

* ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ

* ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ

* ನೈವೇದ್ಯ - ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ

*ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ.

ಗೌರಿ ದಾರದ ಮಹತ್ವ

ಬಿಳಿಯ ನೂಲಿಗೆ ಅರಿಶಿಣ ಹಚ್ಚಿ 9 ಗಂಟಿನ ಗೌರಿ ದಾರ ಮಾಡಬೇಕು, ಅದಕ್ಕೆ ಪೂಜೆ ಮಾಡಿ ಮನಸ್ಸಿನಲ್ಲಿ ಸಂಕಲ್ಪ ತೆಗೆದುಕೊಂಡು ಕೈಗೆ ಸುತ್ತಬೇಕು. ಗಂಡನ ಆರೋಗ್ಯ, ಸಂತಾನಭಾಗ್ಯ ಈ ರೀತಿಯ ಸಂಕಲ್ಪ ಕೈಗೊಳ್ಳುತ್ತಾರೆ.

English summary

Bheemana amavasya vrata 2021: Date, Puja Vidhi, Pooja Timings and Significance

Bheemana amavasya vrata, Here are pooja timing and significance, read on,
X
Desktop Bottom Promotion