For Quick Alerts
ALLOW NOTIFICATIONS  
For Daily Alerts

ಆಯುಧ ಪೂಜೆ: ಎಷ್ಟು ಹೊತ್ತಿಗೆ ಪೂಜೆ ಮಾಡಬೇಕು? ಆಯುಧ ಪೂಜೆಯ ಮಹತ್ವವೇನು?

|

ನವರಾತ್ರಿಯ 9ನೇ ದಿನ ಮಾಡುವ ಆಯುಧ ಪೂಜೆಯನ್ನು ಆಚರಿಸಲಾಗುವುದು.ಈ ದಿನ ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೃಷಿ ಉಪಕರಣಗಳು, ಗಾಡಿಗಳು, ಯಂತ್ರಗಳನ್ನು ಪೂಜಿಸಲಾಗುವುದು.

ಆಯುಧ ಪೂಜೆಯಂದು ನಾವು ಮಾಡುವ ವೃತ್ತಿಗೆ ಅನುಗುಣವಾಗಿ ಆಯುಧಗಳನ್ನು ಪೂಜಿಸುತ್ತೇವೆ. ಕೃಷಿಕನಿಗೆ ಕತ್ತಿ, ಗುದ್ದಲಿ, ಪಿಕಾಸು ಇವುಗಳು ಪೂಜಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುವವನಿಗೆ ಲ್ಯಾಪ್‌ಟಾಪ್ ಅವಶ್ಯಕ ಅದನ್ನು ಪೂಜಿಸುತ್ತಾರೆ, ಇನ್ನು ಡ್ರೈವರ್‌ಗಳು ಗಾಡಿಯನ್ನು, ಟೈಲರಿಂಗ್ ಮಾಡುವವರು ಹೊಲಿಗೆ ಯಂತ್ರಗಳನ್ನು ಹೀಗೆ ತಮ್ಮ ವೃತ್ತಗೆ ಸಹಾಯವಾಗುವ ಉಪಕರಣಗಳನ್ನು ಪೂಜಿಸಲಾಗುವುದು.

Ayudha Puja 2022

ಹೀಗಾಗಿ ನಮ್ಮ ಬದುಕು ನಡೆಸಲು ಅನಕೂಲಕರವಾಗಿರುವ ಉಪಕರಣಗಳನ್ನುಪೂಜಿಸಲಾಗುವುದು. ಈ ವರ್ಷ ಅಕ್ಟೋಬರ್‌ 4ರಂದು ಆಯುಧ ಪೂಜೆ ಮಾಡಲಾಗುವುದು, ಪೂಜೆಗೆ ಶುಭ ಮುಹೂರ್ತ ಯಾವಾಗ, ಪೂಜಾ ವಿಧಿ-ವಿಧಾನಗಳೇನು ಎಂದು ನೋಡೋಣ:

ಆಯುಧ ಪೂಜಾ ಮುಹೂರ್ತ

ಆಯುಧ ಪೂಜಾ ಮುಹೂರ್ತ

ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 3 ಸಂಜೆ 4:35ರಿಂದ

ನವಮಿ ತಿಥಿ ಮುಕ್ತಾಯ: ಅಕ್ಟೋಬರ್ 4 ಮಧ್ಯಾಹ್ನ 2:20ರವರೆಗೆ

 ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ

ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ

ದುರ್ಗೆಯು ಚಾಮುಂಡಿಯ ಅವತಾರ ತಾಳಿ ರಾಕ್ಷಸ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.

ಆಯುಧ ಪೂಜೆ ಬರೀ ಪೂಜೆಯಲ್ಲ, ನಮ್ಮ ಭಾವನೆಯೊಂದಿಗೂ ಸಂಬಂಧವಿದೆ

ಆಯುಧ ಪೂಜೆ ಬರೀ ಪೂಜೆಯಲ್ಲ, ನಮ್ಮ ಭಾವನೆಯೊಂದಿಗೂ ಸಂಬಂಧವಿದೆ

ಆಯುಧ ಪೂಜೆ ಯಾವುದೋ ಆಯುಧವಿಟ್ಟು ಪೂಜೆ ಮಾಡುವುದಲ್ಲ, ನಾವು ನಮ್ಮ ವೃತ್ತಿ ಬದುಕಿಗೆ ಬಳಸುವ ಆಯುಧ-ಉಪಕರಣಗಳನ್ನು ಪೂಜಿಸಲಾಗುವುದು, ಆದ್ದರಿಂದ ಈ ಪೂಜೆಗೂ ನಮ್ಮ ಭಾವನೆಗಳಿಗೂ ತುಂಬಾನೇ ಸಂಬಂಧವಿದೆ. ನಮಗೆ ಅನ್ನ ಹಾಕುತ್ತಿರುವ, ನಮ್ಮ ಬದುಕನ್ನು ಮತ್ತಷ್ಟು ಸರಳವಾಗಿಸಿರುವ ಉಪಕರಣಗಳನ್ನು ಪೂಜಿಸಲಾಗುವುದು.

 ಆಯುಧ ಪೂಜೆಯನ್ನು ಹೇಗೆ ಆಚರಿಸಬೇಕು?

ಆಯುಧ ಪೂಜೆಯನ್ನು ಹೇಗೆ ಆಚರಿಸಬೇಕು?

ಆಯುಧ ಪೂಜೆಯ ಹಿಂದಿನ ದಿನವೇ ಮನೆಯನ್ನು ಶುದ್ಧ ಮಾಡಬೇಕು. ಎಲ್ಲಾ ಉಪಕರಣಗಳನ್ನು ಶುದ್ಧ ಮಾಡಬೇಕು. ನಂತರ ಅವುಗಳಿಗೆ ಕುಂಕುಮ ಹಚ್ಚಿ, ಆರತಿ ಎತ್ತಬೇಕು. ಗಾಡಿಯ ಮುಂದೆ ಕುಂಬಳಕಾಯಿಗೆ ಕುಂಕುಮ, ನಾಣ್ಯ ಹಾಕಿ ಅದನ್ನು ಗಾಡಿ ಮುಂದೆ ಒಡೆಯಲಾಗುವುದು. ಈ ದಿನ ಕಬ್ಬು, ಬಾಳೆಹಣ್ಣು, ಅವಲಕ್ಕಿ, ಸಿಹಿ ತಿನಿಸುಗಳನ್ನು ಬಳಸಿ ಪ್ರಸಾದ ತಯಾರಿಸಲಾಗುವುದು.

English summary

Ayudha Puja 2022 Date, Shubh Muhurat, Rituals, Puja Vidhi, History and Significance

Ayudha Puja 2022: Here are Date,Shubh Muhurat for Puja, Puja Vidhi, History and Significance, read on....
X
Desktop Bottom Promotion