For Quick Alerts
ALLOW NOTIFICATIONS  
For Daily Alerts

2019ರ ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು ಹಾಗೂ ರಾಶಿಚಕ್ರದ ಪ್ರಕಾರ ಶುಭ ದಿನಗಳು

|

ಪವಿತ್ರವಾದ ಬಂಧವನ್ನು ಬೆಸೆಯುವ ವಿವಾಹ ಎಲ್ಲರ ಜೀವನದಲ್ಲೂ ಅತೀ ಅಮೂಲ್ಯವಾದ ಘಳಿಗೆ. ವಧು-ವರ ಇಬ್ಬರೂ ಪರಸ್ಪರ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಡುವ ಘಳಿಗೆಗೆ ಇಡೀ ಕುಟುಂಬ, ಸ್ನೇಹಿತರು, ಬಂಧು-ಬಾಂಧವರು ಸಾಕ್ಷಿಯಾಗುತ್ತಾರೆ. ಇಂತಹ ಸುಮಧುರವಾದ ಜೀವನದ ಪವಿತ್ರ ಘಟ್ಟಕ್ಕೆ ಹಿರಿಯರು ಶುಭಘಳಿಗೆ ಅಥವಾ ಶುಭ ಮುಹೂರ್ತವನ್ನು ನಿಗದಿ ಮಾಡುತ್ತಾರೆ. ಈ ಅವಧಿಯಲ್ಲಿ ವಿವಾಹವಾದರೆ ಇಬ್ಬರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ, ಸುದೀರ್ಘವಾದ ನೆಮ್ಮದಿಯ ಜೀವನ ಇವರದ್ದಾಗಿರುತ್ತದೆ ಎಂದು ಹಿಂದೂ ಸಂಪ್ರದಾಯದಲ್ಲಿ ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಪದ್ಧತಿ.

 

2019ರ ವರ್ಷಾಂತ್ಯದ ಮಾಸ ಡಿಸೆಂಬರ್‌ನಲ್ಲಿ ವಿವಾಹಕ್ಕೆ ಯಾವೆಲ್ಲಾ ದಿನ ಒಳ್ಳೆಯದು, ಯಾವ ಶುಭ ಮುಹೂರ್ತವಿದೆ ಎಂದು ಮುಂದಿನ ಲೇಖನದಲ್ಲಿ ತಿಳಿಯೋಣ. ಹಿಂದೂ ಪಂಚಾಗದ ಪ್ರಕಾರ ಡಿಸೆಂಬರ್‌ ವಿವಾಹಕ್ಕೆ ಅತೀ ಅಮೂಲ್ಯವಾದ ನಾಲ್ಕು ಶುಭ ಮುಹೂರ್ತಗಳಿಗೆ. ಅವುಗಳೆಂದರೆ:

ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು

1. 5 ಡಿಸೆಂಬರ್‌: ಗುರುವಾರ

1. 5 ಡಿಸೆಂಬರ್‌: ಗುರುವಾರ

2019ನೇ ಸಾಲಿನ ಡಿಸೆಂಬರ್‌ 5ನೇ ಗುರುವಾರದಂದು ಮದುವೆಗೆ ಶುಭ ಮುಹೂರ್ತವಿದೆ.

ಮುಹೂರ್ತ: ಸಂಜೆ 8.08ರಿಂದ ಮರುದಿನ ಡಿಸೆಂಬರ್‌ 6ರ ಬೆಳಿಗ್ಗೆ 7.00 ಗಂಟೆಯ ವರೆಗೆ.

ನಕ್ಷತ್ರ: ಉತ್ತರ ಭಾದ್ರಪದ

ತಿಥಿ: ನವಮಿ, ದಶಮಿ

2. 6 ಡಿಸೆಂಬರ್‌: ಶುಕ್ರವಾರ

2. 6 ಡಿಸೆಂಬರ್‌: ಶುಕ್ರವಾರ

2019ನೇ ಸಾಲಿನ ಡಿಸೆಂಬರ್‌ 6ನೇ ಶುಕ್ರವಾರದಂದು ವಿವಾಹಕ್ಕೆ ಶುಭ ಮುಹೂರ್ತವಿದೆ.

ಮುಹೂರ್ತ: ಬೆಳಿಗ್ಗೆ 7.00ರಿಂದ ಸಂಜೆ 4.32ರ ವರೆಗೆ.

ನಕ್ಷತ್ರ: ಉತ್ತರ ಭಾದ್ರಪದ

ತಿಥಿ: ದಶಮಿ

3. 11 ಡಿಸೆಂಬರ್‌: ಬುಧವಾರ
 

3. 11 ಡಿಸೆಂಬರ್‌: ಬುಧವಾರ

2019ನೇ ಸಾಲಿನ ಡಿಸೆಂಬರ್‌ 11ನೇ ಬುಧವಾರದಂದು ಮದುವೆಗೆ ಶುಭ ಮುಹೂರ್ತವಿದೆ.

ಮುಹೂರ್ತ: ಸಂಜೆ 10.54ರಿಂದ ಮರುದಿನ ಡಿಸೆಂಬರ್‌ 12ರ ಬೆಳಿಗ್ಗೆ 7.04ರ ವರೆಗೆ.

ನಕ್ಷತ್ರ: ರೋಹಿಣಿ

ತಿಥಿ: ಪೂರ್ಣಿಮಾ

4. 12 ಡಿಸೆಂಬರ್‌: ಗುರುವಾರ

4. 12 ಡಿಸೆಂಬರ್‌: ಗುರುವಾರ

2019ನೇ ಸಾಲಿನ ಡಿಸೆಂಬರ್‌ 12ನೇ ಗುರುವಾರದಂದು ಮದುವೆಗೆ ಶುಭ ಮುಹೂರ್ತವಿದೆ.

ಮುಹೂರ್ತ: ಬೆಳಿಗ್ಗೆ 7.04ರಿಂದ ಮರುದಿನ ಡಿಸೆಂಬರ್‌ 13ರ ಬೆಳಿಗ್ಗೆ 6.19ರ ವರೆಗೆ.

ನಕ್ಷತ್ರ: ಮೃಗಶೀರ್ಷ

ತಿಥಿ: ಪ್ರತಿಪಾದ

ರಾಶಿಚಕ್ರದ ಪ್ರಕಾರ ವಿವಾಹಕ್ಕೆ ಇರುವ ಶುಭ ದಿನಾಂಕಗಳು

ರಾಶಿಚಕ್ರದ ಪ್ರಕಾರ ವಿವಾಹಕ್ಕೆ ಇರುವ ಶುಭ ದಿನಾಂಕಗಳು

ಮೇಷ ರಾಶಿ: ಮದುವೆಗೆ ಯಾವುದೇ ಶುಭ ದಿನ ಇಲ್ಲ.

ವೃಷಭ ರಾಶಿ: 1,2,3,6,7,8,11 ಮತ್ತು 12

ಮಿಥುನ ರಾಶಿ: 1,2,3,6,7,8, 11 ಮತ್ತು 12

ಕರ್ಕ ರಾಶಿ: 2,3,6,7,8,11 ಮತ್ತು 12

ಸಿಂಹ ರಾಶಿ:1,2,3,6,11 ಮತ್ತು 12

ಕನ್ಯಾ ರಾಶಿ:1,2,3,6,11 ಮತ್ತು 12

ತುಲಾ ರಾಶಿ: 2,3,6,7 ಮತ್ತು 8

ವೃಶ್ಚಿಕ ರಾಶಿ: 1,2,6,7,8,11 ಮತ್ತು 12

ಧನು ರಾಶಿ: ಯಾವುದೇ ಶುಭ ಮುಹೂರ್ತ ಇಲ್ಲ

ಮಕರ ರಾಶಿ: 1,2,6,7,8,11 ಮತ್ತು 12

ಕುಂಭ ರಾಶಿ:1,2,3,6,7 ಮತ್ತು 8

ಮೀನ ರಾಶಿ:1,2,3,6,7,8,11 ಮತ್ತು 12

English summary

Auspicious Wedding Dates In The Month Of December 2019

As we all know, one of the most important aspects of a wedding celebration is finalizing the auspicious marriage dates and we at BoldskyKannada.com have made your workload easy. Below are the dates that are auspicious as per the Hindu Calendar. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more