For Quick Alerts
ALLOW NOTIFICATIONS  
For Daily Alerts

ಸಾಲದಿಂದ ಮುಕ್ತಿ ಪಡೆಯಬೇಕೆ? ಜ್ಯೋತಿಷ್ಯಶಾಸ್ತ್ರದ ಈ ವಿಧಾನಗಳನ್ನು ಪಾಲಿಸಿ

|

ಸಾಲ ಹೊನ್ನ ಶೂಲವಯ್ಯ...' ಎಂದು ಶರಣರೊಬ್ಬರು ಹೇಳಿದ್ದರು. ಯಾಕೆಂದರೆ ಸಾಲದಲ್ಲಿ ಸಿಲುಕಿರುವಂತಹ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಸುಖಿಯಾಗಿರಲು ಸಾಧ್ಯವಿಲ್ಲ. ಯಾವಾಗಲೂ ಅವನನ್ನು ಸಾಲಗಾರರು ಕಾಡುತ್ತಲಿರುವರು. ಸಾಲವಿಲ್ಲದೆ ಇರುವಂತಹ ವ್ಯಕ್ತಿ ಜಗತ್ತಿನಲ್ಲೇ ಶ್ರೀಮಂತ ಎಂದು ಹೇಳಲಾಗುತ್ತದೆ.

ನೀವು ಕೂಡ ಬಲೆಯಲ್ಲಿ ಸಿಲುಕಿದ ಮೀನಿನಂತೆ ಸಾಲದಲ್ಲಿ ಬಿದ್ದು ಒದ್ದಾಡುತ್ತಿದ್ದೀರಾ? ಸಾಲ ಮರುಪಾವತಿ ಮಾಡಲು ನಿಮಗೆ ತುಂಬಾ ಕಷ್ಟವಾಗುತ್ತಿದೆಯಾ? ಸಾಲವು ನಿಮ್ಮ ದಿನನಿತ್ಯದ ಜೀವನದ ಮೇಲೆ ಸಮಸ್ಯೆ ಉಂಟು ಮಾಡುತ್ತಲಿದೆಯಾ? ಸಾಲ ಮರುಪಾವತಿ ಮಾಡಲು ಕೆಲವೊಂದು ಸಮಸ್ಯೆಗಳು ನಿಮಗೆ ಪದೇ ಪದೇ ಅಡ್ಡಿಯಾಗುತ್ತಲಿದೆಯಾ? ನಿಮ್ಮ ಜನ್ಮ ಕುಂಡಲಿ ಅಥವಾ ಜಾತಕವನ್ನು ನೋಡಿಕೊಂಡು ಇದನ್ನು ತಿಳಿಯಬಹುದಾಗಿದೆ.

ಒಬ್ಬನ ಜಾತಕದಲ್ಲಿ ಇರುವಂತಹ ಕೆಲವೊಂದು ರೀತಿಯ ಗೃಹಗತಿ ಸಂಯೋಜನೆಗಳಿಂದಾಗಿ ಸಾಲ ಮರುಪಾವತಿ ವಿಚಾರದಲ್ಲಿ ತುಂಬಾ ಕಷ್ಟವಾಗುತ್ತಿರಬಹುದು. ಈ ಲೇಖನದಲ್ಲಿ ಕೊಟ್ಟಿರುವಂತಹ ಕೆಲವೊಂದು ಜೋತಿಷ್ಯಶಾಸ್ತ್ರದ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಣೆ ಆಗುವುದು ಮತ್ತು ಸಾಲ ಮರುಪಾವತಿ ಮಾಡಲು ಸುಲಭವಾಗುವುದು. ಇದನ್ನು ನೀವು ತುಂಬಾ ಶ್ರದ್ಧೆಯಿಂದ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿರುವುದು.

ಸಾಲದಿಂದ ಮುಕ್ತವಾಗಲು ಜೋತಿಷ್ಯದ ಕೆಲವು ಪರಿಹಾರಗಳು

ಸೂರ್ಯ ದೇವರನ್ನು ಪೂಜಿಸಿ

ಸೂರ್ಯ ದೇವರನ್ನು ಪೂಜಿಸಿ

ಜಗತ್ತಿಗೆ ಬೆಳಕು ಕೊಡುವವರು ಹಾಗೂ ಕಣ್ಣಿಗೆ ಕಾಣುವಂತಹ ಏಕೈಕ ದೇವರು ಸೂರ್ಯ ದೇವರು. ಸೂರ್ಯ ದೇವರನ್ನು ಪೂಜಿಸಿದರೆ ಹಲವಾರು ಸಮಸ್ಯೆಗಳು ನಿವಾರಣೆ ಆಗುವುದು. ಇದರಲ್ಲಿ ಸಾಲ ಮರುಪಾವತಿ ಕೂಡ ಸೇರಿಕೊಂಡಿದೆ. ಸಾಲದಿಂದ ಮುಕ್ತಿ ಪಡೆಯಲು ನೀವು ಪ್ರತಿನಿತ್ಯವೂ ಸೂರ್ಯ ದೇವರನ್ನು ಪೂಜಿಸಿ. ಸೂರ್ಯೋದಯದ ವೇಳೆ ಜಲ ಸಮರ್ಪಣೆ ಮಾಡಿ. ಕೆಂಪು ಮೆಣಸಿನ 11 ಬೀಜಗಳನ್ನು ನೀರಿಗೆ ಹಾಕಿ ಅದನ್ನು ಸೂರ್ಯ ದೇವರಿಗೆ ಅರ್ಪಿಸಿ.

ಓಂ ಆದಿತ್ಯಾಯ ನಮಃ

ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಸೂರ್ಯ ದೇವರನ್ನು ಈ ರೀತಿಯಾಗಿ ಪ್ರಾರ್ಥಿಸಿ.

ವಿಷ್ಣುವಿನ ದೇವಸ್ಥಾನದಲ್ಲಿ ಬಾಳೆ ಗಿಡ ನೆಡಿ

ವಿಷ್ಣುವಿನ ದೇವಸ್ಥಾನದಲ್ಲಿ ಬಾಳೆ ಗಿಡ ನೆಡಿ

ವಿಷ್ಣುವಿನ ದೇವಸ್ಥಾನದಲ್ಲಿ ನೀವು ಎರಡು ಬಾಳೆಗಿಡ(ಗಂಡು ಮತ್ತು ಹೆಣ್ಣು)ವನ್ನು ನೆಡಬೇಕು. ಇದಕ್ಕೆ ಪ್ರತಿನಿತ್ಯವು ನೀರು ಹಾಕಿ, ಅದರ ಆರೈಕೆ ಮಾಡಬೇಕು. ಬಾಳೆಗಿಡವು ಗೊನೆ ಹಾಕಲು ಆರಂಭಿಸಿದ ವೇಳೆ ನಿಮ್ಮ ಸಾಲ ಕೂಡ ಕರಗುತ್ತಾ ಹೋಗುವುದು. ಇದರ ಹಣ್ಣನ್ನು ನೀವು ತಿನ್ನಬಾರದು, ಇದನ್ನು ಬಡಬಗ್ಗರಿಗೆ ದಾನ ಮಾಡಿ.

ರಾಶಿಗೆ ಅನುಗುಣವಾಗಿ ಹರಳನ್ನು ಧರಿಸಿ

ರಾಶಿಗೆ ಅನುಗುಣವಾಗಿ ಹರಳನ್ನು ಧರಿಸಿ

ಗೃಹಗತಿಯು ದುರ್ಬಲವಾಗಿದ್ದರೆ ಆಗ ಸಾಲದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದಕ್ಕಾಗಿ ನೀವು ಒಬ್ಬ ಜೋತಿಷ್ಯಿಯನ್ನು ಭೇಟಿ ಮಾಡಿ, ನಿಮ್ಮ ಜಾತಕಕ್ಕೆ ಹೊಂದಿಕೊಳ್ಳುವ ಹರಳನ್ನು ಸೂಚಿಸಲು ಹೇಳಿ. ಹರಳಿನಿಂದಾಗಿ ದುರ್ಬಲ ಗೃಹಗತಿಯು ಸಾಮಾನ್ಯವಾಗುವುದು ಮತ್ತು ಆದಷ್ಟು ಬೇಗನೆ ಎಲ್ಲವೂ ನಿಮ್ಮ ಪರವಾಗಿ ಇರುವುದು.

ಶುಕ್ರವಾರ ಆಹಾರ ದಾನ ಮಾಡಿ

ಶುಕ್ರವಾರ ಆಹಾರ ದಾನ ಮಾಡಿ

ಪ್ರತೀ ಶುಕ್ರವಾರದಂದು ನೀವು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿ. ಐದು ವಾರಗಳ ತನಕ ನೀವು ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು.

ಹುಣಸೆ ಮರದ ಸಣ್ಣ ತುಂಡನ್ನು ಇಟ್ಟುಕೊಳ್ಳಿ

ಹುಣಸೆ ಮರದ ಸಣ್ಣ ತುಂಡನ್ನು ಇಟ್ಟುಕೊಳ್ಳಿ

ಹುಣಸೆ ಮರದ ಕೊಂಬೆಯ ಸಣ್ಣ ತುಂಡನ್ನು ನೀವು ಲಾಕರ್, ಕಪಾಟು ಅಥವಾ ನೀವು ಹಣ ಇಡುವಂತಹ ಜಾಗದಲ್ಲಿ ಇಡಬಹುದು. ಇದರಿಂದ ನಿಮ್ಮ ಸಂಪಾದನೆಯು ಹೆಚ್ಚಾಗುವುದು ಮತ್ತು ಖರ್ಚು ಕಡಿಮೆ ಆಗುವುದು.

ಅಶೋಕ ಮರ ನೆಡಿ

ಅಶೋಕ ಮರ ನೆಡಿ

ಮನೆಯಲ್ಲಿ ನೀವು ಒಂದು ಅಶೋಕ ಮರವನ್ನು ನೆಟ್ಟು ಪ್ರತಿನಿತ್ಯವು ಅದಕ್ಕೆ ನೀರುಣಿಸಿ.

ಮನೆ ಮತ್ತು ಕಚೇರಿ ಸ್ವಚ್ಛವಾಗಿರಲಿ

ಮನೆ ಮತ್ತು ಕಚೇರಿ ಸ್ವಚ್ಛವಾಗಿರಲಿ

ನಿಮ್ಮ ಮನೆ ಹಾಗೂ ಕಚೇರಿಯು ಯಾವಾಗಲೂ ಸ್ವಚ್ಛ ಹಾಗೂ ಒಪ್ಪಓರಣವಾಗಿರಲಿ. ಮೇಲ್ಛಾವಣಿಯು ಕಸ ಮತ್ತು ಬೇಡದ ವಸ್ತುಗಳಿಂದ ಕೂಡಿರಬಾರದು. ಇದನ್ನು ಸ್ವಚ್ಛ ಮಾಡಿದರೆ ಆಗ ನೀವು ಅನಿರೀಕ್ಷಿತ ಖರ್ಚನ್ನು ದೂರ ಮಾಡಬಹುದು.

ಹನುಮಂತ ದೇವರನ್ನು ಪ್ರಾರ್ಥಿಸಿ

ಹನುಮಂತ ದೇವರನ್ನು ಪ್ರಾರ್ಥಿಸಿ

ಇದು ಸ್ವಲ್ಪ ಕಠಿಣ ವಿಧಾನವಾದರೂ ಪರಿಣಾಮಕಾರಿ ಆಗಿ ಕೆಲಸ ಮಾಡಲಿದೆ. ಹನುಮಾನ್ ಚಾಲೀಸ್ ಮಂತ್ರವನ್ನು ಪ್ರತಿನಿತ್ಯವು 108 ಸಲ 40 ದಿನಗಳ ಕಾಲ ಜಪಿಸಬೇಕು. ಇದಕ್ಕಾಗಿ ನೀವು ಮನೆಯ ಸದಸ್ಯರ ಬೆಂಬಲ ಪಡೆಯಬಹುದು. ಹೀಗೆ ಮಾಡುವ ವ್ಯಕ್ತಿಯು 40 ದಿನಗಳ ಕಾಲ ಬ್ರಹ್ಮಚಾರ್ಯ ಪಾಲಿಸಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಬೆಳ್ಳುಳ್ಳಿ, ಈರುಳ್ಳಿ ಅಥವಾ ಮಾಂಸಹಾರವನ್ನು 40 ದಿನಗಳ ಕಾಲ ನಿಷೇಧಿಸಿ. ಇದರ ಬಳಿಕ ನೀವು ಒಂದು ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕಡಲೆ ಮತ್ತು ಹಲ್ವಾ ಅರ್ಪಿಸಬಹುದು.

ಅಶ್ವತ್ಥ ಮರಕ್ಕೆ ನೀರುಣಿಸಿ

ಅಶ್ವತ್ಥ ಮರಕ್ಕೆ ನೀರುಣಿಸಿ

ಸಾಲದಿಂದ ಮುಕ್ತಿ ಪಡೆಯಬೇಕು ಎಂದು ನೀವು ಆಲೋಚನೆ ಮಾಡಿದರೆ ಆಗ ನೀವು ಸುಮಾರು 6 ಶನಿವಾರ ಅಶ್ವತ್ಥ ಮರಕ್ಕೆ ನೀರುಣಿಸಿ. ಸಮಾಧಿಯಲ್ಲಿರುವ ಬಾವಿಯಿಂದ ತಂದಿರುವ ನೀರಿನಿಂದ ಮಾತ್ರ ಈ ಆಚರಣೆ ಮಾಡಬಹುದಾಗಿದೆ.

English summary

Astrology Remedies for Debt Removal or Loan Repayment

Are you always in some kind of debt? Do you find difficulty in repaying your loan despite your best efforts? Is your debt causing problems in your routine life? There are several reasons that can be attributed to the problems in paying back debts. The main ones can be revealed by a reading of your birth chart or Kundali.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more