For Quick Alerts
ALLOW NOTIFICATIONS  
For Daily Alerts

ಮನೆಯ ಪ್ರವೇಶ ದ್ವಾರದ ಬಳಿ ಈ ವಸ್ತುಗಳಿಟ್ಟರೆ ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ನೆಲೆಸುತ್ತದೆ

|
ಮನೆಯ ಪ್ರವೇಶ ದ್ವಾರದ ಬಳಿ ಈ ವಸ್ತುಗಳಿಟ್ಟರೆ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿ | Oneindia kannada

ಜೀವನದಲ್ಲಿ ನಾವು ಎಷ್ಟೆಲ್ಲಾ ಕಷ್ಟಪಟ್ಟು ದುಡಿಯುವುದು ಹಣ, ನೆಮ್ಮದಿ, ಸಂತೋಷಕ್ಕಾಗಿ. ಆದರೆ ಕೆಲವು ಸಣ್ಣಪುಟ್ಟ ತಪ್ಪುಗಳಿಂದಲೇ ಅದೆಷ್ಟೋ ಸಂತೋಷದ ಕ್ಷಣಗಳನ್ನು, ಆರ್ಥಿಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಅಂತಹ ತಪ್ಪುಗಳಲ್ಲಿ ಮನೆಯ ವಾಸ್ತು ಸಹ ಪ್ರಮುಖವಾದದ್ದು.

ವಾಸ್ತು ಮನೆಗೆ ಹಾಗೂ ಜೀವನಕ್ಕೆ ಶುಭ ಸೂಚನೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಾಸ್ತು ಎನ್ನುವುದು ವೈಜ್ಞಾನಿಕವಾಗಿ ಸತ್ಯವಾಗಿದ್ದು, ಪ್ರಾಯೋಗಿಕವಾಗಿಯೂ ಹಲವರ ಬಾಳಲ್ಲಿ ಸಕಾರಾತ್ಮಕ ಶಕ್ತಿಯನ್ನು ನೀಡಿದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ.

ಮನೆಯ ವಾಸ್ತು ಚೆನ್ನಾಗಿದ್ದರೆ ಮನೆಯೊಳಗಿನ ಮನಸ್ಸುಗಳು ನೆಮ್ಮದಿಯಾಗಿರುತ್ತದೆ ಮತ್ತು ಲಕ್ಷ್ಮೀ ಸಹ ನೆಲೆಸುತ್ತಾಳೆ. ಮನೆಯ ವಾಸ್ತು ಜತೆಗೆ ವಾಸ್ತು ಪ್ರಕಾರ ಇಡುವ ಕೆಲವು ವಸ್ತುಗಳು ಸಹ ಮನೆಗೆ ಅದೃಷ್ಟ ತರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಹೌದು, ವಾಸ್ತು ವಿಜ್ಞಾನದ ಪ್ರಕಾರ ಮನೆಯ ಪ್ರಮುಖ ಬಾಗಿಲ ಮುಂದೆ ಈ ಆರು ವಸ್ತುಗಳನ್ನು ಇಟ್ಟರೆ ಐಶ್ವರ್ಯ, ಆರ್ಥಿಕ ಅಭಿವೃದ್ಧಿ ಮತ್ತು ಆರೋಗ್ಯ ಸದಾ ನಮ್ಮದಾಗುತ್ತದೆ. ಯಾವವು ಈ ಆರು ವಸ್ತುಗಳು ಎಂಬ ಕುತೂಹಲವೇ, ಮುಂದೆ ಲೇಖನ ಓದಿ.

ಅಲಂಕಾರಿಕ ನೀರು ಮತ್ತು ಹೂವಿನ ಮಡಿಕೆ

ಅಲಂಕಾರಿಕ ನೀರು ಮತ್ತು ಹೂವಿನ ಮಡಿಕೆ

ನೀರಿನಿಂದ ತುಂಬಿದ ಗಾಜಿನ ಅಥವಾ ಮಣ್ಣಿನ ಮಡಿಕೆಯಲ್ಲಿ ಹೂವು ಅಥವಾ ಹೂವಿನ ದಳಗಳನ್ನು ಹಾಕಿ ಮನೆಯ ಪ್ರವೇಶ ದ್ವಾರದ ಬಳಿ ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ವಾಸ್ತು ಪ್ರಕಾರ ತುಂಬಾ ಒಳ್ಳೆಯದು. ನೀರಿನ ಕುಂಡವು ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ, ಅಲ್ಲದೇ ಮನೆಯ ಪ್ರವೇಶದ್ವಾರವನ್ನೂ ಅಂದಗಾಣಿಸುತ್ತದೆ. ಇನ್ನೂ ಮುಖ್ಯವಾಗಿ ನೀರು ಶಾಖ ಮತ್ತು ವಿದ್ಯುತ್‌ ಶಕ್ತಿಯ ಕೆಟ್ಟ ವಾಹಕ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದನ್ನು ಇದು ತಡೆಯುತ್ತದೆ. ಇದು ನಿಮ್ಮ ಮನೆ ಮತ್ತು ಕುಟುಂಬ ಸದಸ್ಯರ ಆರೋಗ್ಯ ಉತ್ತಮವಾಗಿಡಲು ಸಹ ಸಹಾಯ ಮಾಡುತ್ತದೆ. ಇನ್ನೇಕೆ ತಡ ಮನೆಯ ಮುಂದೊಂದು ಚೆಂದವಾದ ಹೂಜಿಯನ್ನಿಡಿ.

ಕೆಟ್ಟ ದೃಷ್ಟಿ ತಡೆಯುವ ಬಾಗಿಲ ತೋರಣ

ಕೆಟ್ಟ ದೃಷ್ಟಿ ತಡೆಯುವ ಬಾಗಿಲ ತೋರಣ

ಹಬ್ಬ-ಹರಿದಿನಗಳಲ್ಲಿ ಬಾಗಿಲಿಗೆ ತೋರಣವನ್ನು ಕಟ್ಟುವುದು ಹಿಂದೂ ಸಂಪ್ರದಾಯದಲ್ಲಿರುವ ಬಹುಮುಖ್ಯ ವಾಡಿಕೆ. ಆದರೆ ಇದು ಮನೆಗೆ ಎಷ್ಟೆಲ್ಲಾ ಸಕಾರಾತ್ಮಕತೆಯನ್ನು ತಂದುಕೊಡುತ್ತದೆ ಎಂದರೆ ನೀವು ಅಚ್ಚರಿಪಡುತ್ತೀರಿ. ಮಾವಿನ ಎಲೆ, ಅಶ್ವತ್ಥ ಎಲೆ ಅಥವಾ ಅಶೋಕ ಮರದ ಎಲೆಗಳಿಂದ ಸಿದ್ಧಪಡಿಸಿದ ತೋರಣವನ್ನು ಮನೆಯ ಬಾಗಿಲಿಗೆ ಹಾಕುವುದರಿಂದ ಮನೆಯ ಒಳಗೆ ಪ್ರವೇಶಿಸಬಹುದಾದ ನಕಾರಾತ್ಮಕ ಕಂಪನಗಳನ್ನು ಹೀರಿಕೊಳ್ಳುತ್ತದೆ ಅಥವಾ ಮನೆಯ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಈ ಮೂಲಕ ನಿಮ್ಮ ಮನೆಯನ್ನು ದುಷ್ಟ ಕಣ್ಣುಗಳಿಂದ ರಕ್ಷಿಸಬಹುದು. ಅಲ್ಲದೇ ವೈಜ್ಞಾನಿಕವಾಗಿ ಮನೆಯ ಒಳಗೆ ಕ್ರಿಮ-ಕೀಟಗಳು ನುಸುಳದಂತೆ ಸಹ ಇದು ತಡೆಯುತ್ತದೆ. ಎಲೆ ಒಣಗಿದ ನಂತರ ಮತ್ತೆ ಹೊಸದಾಗಿ ತೋರಣವನ್ನು ಮತ್ತೆ ಕಟ್ಟಬಹುದು.

ಲಕ್ಷ್ಮಿ ಪಾದುಕೆ

ಲಕ್ಷ್ಮಿ ಪಾದುಕೆ

ಲಕ್ಷ್ಮೀ ದೇವಿಯ ಪಾದುಕೆಯ ಚಿತ್ರ(ಸ್ಟಿಕ್ಕರ್) ಅನ್ನು ಮನೆಯ ಹೊಸಲು ಅಥವಾ ಪ್ರವೇಶ ದ್ವಾರದ ಬಳಿ ಹಾಕುವ ಸಂಪ್ರದಾಯವನ್ನು ಹಿಂದಿನಿಂದಲೂ ಹಿಂದೂಗಳು ಪಾಲಿಸಿಕೊಂಡು ಬಂದಿದ್ದಾರೆ. ಹಿಂದೆ ಚಿತ್ರವನ್ನು ಬಣ್ಣಗಳನ್ನು ಬಳಸಿ ಬರೆಯುತ್ತಿದ್ದರು ಆದರೆ ಈಗ ಸಿದ್ಧ ಸ್ಟಿಕ್ಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಮನೆಯ ಪ್ರವೇಶದ ಬಳಿ ಹಾಕಿದರೆ ಮನೆಗೆ ಸಂಪತ್ತು, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಅಲ್ಲದೇ, ಲಕ್ಷ್ಮೀ ಪಾದುಕೆಗಳ ಮೂಲಕ ದೇವಾನು ದೇವತೆಗಳ ಗಮನವನ್ನು ಸೆಳೆದಂತಾಗುತ್ತದೆ.

ಮತ್ತು ಇದು ಗ್ರಹಗಳ ಚಲನೆಯ ದುಷ್ಪರಿಣಾಮಗಳನ್ನು ಸಹ ಕಡಿಮೆ ಮಾಡುತ್ತದೆ.

ಮನೆ ಬಾಗಿಲಿಗೆ ಸ್ವಸ್ತಿಕ್

ಮನೆ ಬಾಗಿಲಿಗೆ ಸ್ವಸ್ತಿಕ್

ಮನೆಯ ಪ್ರವೇಶದ್ವಾರದಲ್ಲಿ ಸ್ವಸ್ತಿಕ್ ಹಾಕುವುದು ಮನೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಗೃಹಕ್ಕೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಸ್ವಸ್ತಿಕ್ ಸಂಕೇತವು ರೋಗಗಳು ಮತ್ತು ದುಖಃವನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಮನೆಯ ಪ್ರವೇಶದ ಬಳಿ ಸ್ವಸ್ಥಿಕ್ ಸಂಕೇತವನ್ನು ಹಾಕುವ ಮೂಲ ಅಶುಭಗಳನ್ನು ತೆಗೆದುಹಾಕಿ.

ದೊಡ್ಡ ಪ್ರವೇಶ ದ್ವಾರ

ದೊಡ್ಡ ಪ್ರವೇಶ ದ್ವಾರ

ನಿಮ್ಮ ಮನೆಗೆ ಬೃಹತ್ ಆದ ಪ್ರವೇಶ ದ್ವಾರ ಇದ್ದರೆ ಇದು ಶುಭದ ಸಂಕೇತ. ಅದರಲ್ಲೂ ಮನೆಯ ಬಾಗಿಲು ಪ್ರದಕ್ಷಿಣೆ ಹಾಕುವ ರೀತಿ ಇದ್ದರೆ ಇದು ಸಹ ಮನೆಗೆ ಬರಬಹುದಾದ ನಕಾರಾತ್ಮಕತೆಗಳನ್ನು ತೊಡೆದುಹಾಕುತ್ತದೆ. ಮನೆಯ ಬಾಗಿಲು ಕೆಳಗಿನಿಂದ ಮೇಲೆ ಎತ್ತರದಲ್ಲಿದ್ದರೆ ಮನೆಯೊಳಗೆ ಬೆಳಕು ಪ್ರಕಾಶಮಾವಾಗಿ ಪ್ರವೇಶಿಸಲು ಸಹ ಸಹಕಾರಿ.

English summary

Vastu Tips in Kannada: Keeping These Things At Your Home Entrance Can Bring Prosperity And Wealth

Vastu is the science of ensuring good vibes in your house and life. And because it is a science, it is very practical and logical to implement too. According to Vastu Shastra, if you keep these 6 things at your main entrance gate, they will ensure prosperity, financial growth and wealth in your life. Take a look!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more