For Quick Alerts
ALLOW NOTIFICATIONS  
For Daily Alerts

ಜೂನ್‌ 6ಕ್ಕೆ ಅಪರಾ ಏಕಾದಶಿ: ಪೂಜಾವಿಧಿ ಹಾಗೂ ವ್ರತ ಕತೆಯ ಮಹತ್ವವೇನು?

|

ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿಯಂದು ಕರೆಯುತ್ತಾರೆ. ಈ ವರ್ಷ ಅಪರಾ ಏಕಾದಶಿಯನ್ನು ಜೂ. 6ಕ್ಕೆ ಆಚರಿಸಲಾಗುವುದು.

ಅಪರಾ ಏಕಾದಶಿ ಆಚರಣೆ ಮಾಡುವುದರಿಂದ ಜೀವನದಲ್ಲಿರುವ ದುಃಖ, ಕಷ್ಟ ಇವೆಲ್ಲಾ ದೂರವಾಗಿ ನೆಮ್ಮದಿಯ ಬದುಕು ಸಿಗುವುದು ಎಂಬ ನಂಬಿಕೆ. ಈ ಏಕಾದಶಿಯಂದು ಶ್ರೀ ವಿಷ್ಣುವಿನ ಮತ್ತೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುವುದು. ಈ ದಿನ ವ್ರತ ಪಾಲಿಸುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು.

ಅಪರಾ ಏಕಾದಶಿಯ ಪೂಜಾ ವಿಧಿ, ಪೂಜೆಗೆ ಬೇಕಾದ ಸಾಮಗ್ರಿಗಳು, ಈ ವ್ರತದ ಹಿಂದಿರುವ ಪೌರಾಣಿಕ ಕತೆ ಇವುಗಳ ಬಗ್ಗೆ ತಿಳಿಯೋಣ:

ಅಪರಾ ಏಕಾದಶಿ ಸಮಯ

ಅಪರಾ ಏಕಾದಶಿ ಸಮಯ

ಏಕಾದಶಿ ತಿಥಿ ಪ್ರಾರಂಭ: ಜೂನ್ 5, ಬೆಳಗ್ಗೆ 04:5ಕ್ಕೆ

ಏಕಾದಶಿ ತಿಥಿ ಮುಕ್ತಾಯ: ಜೂನ್ 6, ಬೆಳಗ್ಗೆ 06:19ಕ್ಕೆ

ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ

ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ

* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬಕೆಟ್‌ ನೀರಿಗೆ ಗಂಗಾ ಜಲ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ.

* ನಂತರ ಮಡಿ ಬಟ್ಟೆ ಧರಿಸಿ.

* ದೇವರಿಗೆ ತುಪ್ಪ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ.

* ನಂತರ ವಿಷ್ಣುವನ್ನು ಪೂಜಿಸಿ

* 'ಓಂ ನಮೋ ಭಗವತೀ ವಾಸುದೇವಾಯ' ಅಂತ ಮಂತ್ರ ಪಠಿಸುತ್ತಾ ದೇವರಿಗೆ ನೀರು, ಹಣ್ಣು, ಹೂ, ಸುಗಂಧ ದ್ರವ್ಯಗಳನ್ನ ಅರ್ಪಿಸಿ.

* ನಂತರ ದೇವರಿಗೆ ನೈವೇದ್ಯ ಅರ್ಪಿಸಿ.

* ದೇವರಿಗೆ ವೀಳ್ಯೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಶ್ರೀಗಂಧ, ಅರಿಶಿಣ-ಕುಂಕುಮ ಅರ್ಪಿಸಿ

* ನಂತರ ಅಪರಾ ಏಕಾದಶಿ ಕತೆ ಓದಿ ಅಥವಾ ವಿಷ್ಣು ಸಹಸ್ರನಾಮ ಜಪ ಮಾಡಿ.

ಅಪರಾ ಏಕಾದಶಿ ಕತೆ

ಅಪರಾ ಏಕಾದಶಿ ಕತೆ

ಶ್ರೀ ಕೃಷ್ಣ ಯುಧಿಷ್ಠಿರನಿಗೆ " ಹೇ ರಾಜ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರಾ ಏಕಾದಶಯೆಂದು. ಈ ಏಕಾದಶಿ ವ್ರತ ಆಚರಿಸಿದರೆ ಅಪಾರ ಧನ ಲಭಿಸುವುದು, ಪಾಪಗಳಿಂದ ಮುಕ್ತಿ ಸಿಗುವುದು

* ಯಾರು ಪರಸ್ತ್ರೀ ಜೊತೆಗಿನ ಸಂಬಂಧ ಹೊಂದಿರುತ್ತರೋ ಅವರು ಸುಳ್ಳು ಮತನಾಡುವುದು, ಅಸತ್ಯವನ್ನು ನುಡಿಯುವವರೂ ಆಗಿರುತ್ತಾರೆ. ಈ ವ್ರತ ಪಾಲಿಸಿದರೆ ಆ ಪಾಪಗಳಿಗೆ ಮುಕ್ತಿ ಸಿಗುವುದು.

* ಯಾರು ಯುದ್ಧ ಮಾಡುವಾಗ ಹೇಡಿಯಂತೆ ಓಡಿ ಹೋಗುತ್ತಾನೋ, ಅವನಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಈ ವ್ರತ ಪಾಲಿಸಿದರೆ ಅಂಥವರಿಗೆ ಸ್ವರ್ಗ ಸಿಗುವುದು.

* ಗುರುವಿನ ನಿಂದಿಸಿದ ಶಿಷ್ಯನ ಪಾಪವು ಈ ವ್ರತ ಆಚರಣೆಯಿಂದ ತೊಳೆದು ಹೋಗುತ್ತದೆ.

* ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯ ಸ್ನಾನದ ಫಲ, ಪಿತೃ ದರ್ಪಣ ಮಾಡುವ ಪುಣ್ಯ ಫಲದಷ್ಟೇ ಈ ವ್ರತಾಚರಣೆಯಿಂದ ಪುಣ್ಯ ಲಭಿಸುವುದು.

* ಯಜ್ಞ-ಯಾಗ ಮಾಡುವಾಗ ಸಿಗುವ ಫಲ ಅಪರಾ ಏಕಾದಶಿ ಆಚರಣೆಯಿಂದ ಲಭಿಸುವುದು.

ಈ ವ್ರತ ಎಲ್ಲಾ ವ್ರತಕ್ಕಿಂತ ಶ್ರೇಷ್ಠವಾದದ್ದು. ಈ ದಿನ ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣು ಪದವಿಯು ಪ್ರಾಪ್ತಿಯಾಗುವುದು ಎಂದು ಶ್ರೀ ಕೃಷ್ಣ ಹೇಳಿದ್ದಾನೆ'

ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ

ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ

ಶ್ರೀ ಕೃಷ್ಣನು " ಇದನ್ನು ನಾನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಅಪರಾ ಏಕಾದಶಿ ವ್ರತ ಓದುವುದರಿಂದ ಅಥವಾ ಕೇಳುವುದರಿಂದ ಕೂಡ ಪಾಪ ವಿಮೋಚನೆಯಾಗುವುದು" ಎಂದಿದ್ದಾನೆ.

English summary

Apara Ekadashi 2021 Puja Vidhi, Vrat Katha, Samagri and Importance in Kannada

Apara Ekadashi 2021 Puja Vidhi, Vrat Katha, Samagri and Importance in Kannada, read on...
Story first published: Saturday, June 5, 2021, 17:43 [IST]
X
Desktop Bottom Promotion