For Quick Alerts
ALLOW NOTIFICATIONS  
For Daily Alerts

ಕುಳ್ಳಗಿರುವ ಮಹಿಳೆಯರು ಎದುರಿಸುತ್ತಿರುವ ಕಿರಿಕಿರಿ ಸಮಸ್ಯೆಗಳು

|

ಮಹಿಳೆಯರು ಎಂದರೆ ಸೌಂದರ್ಯದ ಪ್ರತೀಕ. ಮಹಿಳೆಯರ ಹಾಜರಿ ಅಥವಾ ಪ್ರಸ್ತುತಿಯು ಸಂಭ್ರಮವನ್ನು ಉಂಟುಮಾಡುವುದು. ಹೆಣ್ಣಿನ ನಿಲುವು ಉತ್ತಮವಾಗಿರಲಿ ಅಥವಾ ಅನುಚಿತವೇ ಆಗಿರಲಿ ಹೇಗಿದ್ದರೂ ಸರಿ. ಅವಳಿಗೆ ಸರಿಸಾಟಿಯಾಗಿ ಯಾರೂ ನಿಲ್ಲಲು ಸಾಧ್ಯವಿಲ್ಲ. ಅವಳ ನೋಟ, ಒಡನಾಟ, ಮಾತು ಎಲ್ಲವೂ ಆಕರ್ಷಣೆಯಿಂದ ಕೂಡಿರುತ್ತವೆ. ಮಹಿಳೆಯರಲ್ಲಿ ಎತ್ತರವಾದ ನಿಲುವು, ಸುಂದರವಾದ ಮೈಕಟ್ಟು, ಬಣ್ಣ, ಆಕರ್ಷಣೆ, ಸೌಂದರ್ಯ ಎಲ್ಲವೂ ವಿಶೇಷ ಆಕರ್ಷಣೆಗೆ ಕಾರಣವಾಗಿರುತ್ತವೆ. ಅಂತಹ ಮಹಿಳೆಯರು ಫ್ಯಾಷನ್, ಚಲನಚಿತ್ರ ಸೇರಿದಂತೆ ಇನ್ನಿತರ ಆಧುನಿಕ ಕ್ಷೇತ್ರದಲ್ಲಿ ಗಮ್ಯವಾದ ಸ್ಥಾನವನ್ನೂ ಪಡೆದುಕೊಳ್ಳುವರು.

ಹಾಗಂತ ಎತ್ತರ ಇಲ್ಲದದ ಮಹಿಳೆಯರೇನು ಕಮ್ಮಿ ಎಂದುಕೊಳ್ಳಬೇಡಿ. ಎತ್ತರದ ನಿಲುವು ಇಲ್ಲದ ಮಹಿಳೆಯರು ಯಾವುದಕ್ಕೂ ಕಡಿಮೆಯಾಗಿರುವುದಿಲ್ಲ. ಎತ್ತರ ಒಂದೇ ಅವರಿಗೆ ಸಮಸ್ಯೆ ಎಂದೆನಿಸಬಹುದೇ ಹೊರತು ಬೇರಾವುದೂ ಸಮಸ್ಯೆ ಎಂದು ಭಾವಿಸುವುದಿಲ್ಲ. ಕಡಿಮೆ ನಿಲುವನ್ನು ಹೊಂದಿರುವ ಮಹಿಳೆಯರು ಸಹ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಆಕರ್ಷಣೆ ಹಾಗೂ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅವರ ನಿಲುವು ಚಿಕ್ಕದಾಗಿದ್ದರೆ ಎತ್ತರದ ಹಿಮ್ಮಡಿ ಉಳ್ಳ ಚಪ್ಪಲಿ ಅಥವಾ ಸ್ಯಾಂಡಲ್ ಗಳನ್ನು ಧರಿಸುತ್ತಾರೆ. ಆಗ ಎತ್ತರದ ನಿಲುವನ್ನು ಪಡೆದುಕೊಂಡಿರುವಂತೆ ಶೋಭಿಸುವರು. ಆಧುನಿಕ ಪ್ರಪಂಚದಲ್ಲಿ ಇರುವ ನಮಗೆ ಕೆಲವು ಕೃತಕ ವ್ಯವಸ್ಥೆಯನ್ನು ಹೊಂದುವ ಮೂಲಕ ನಮ್ಮ ನ್ಯೂನತೆಯನ್ನು ಸುಲಭವಾಗಿ ಮರೆಮಾಚಬಹುದು.

Annoying Problems Faced By Women Having Short Height

ಕೆಲವು ಅಧ್ಯಯನಗಳ ಪ್ರಕಾರ ಉಷ್ಣವಲಯದ ಮಹಿಳೆಯರು ಸಾಮಾನ್ಯವಾಗಿ ಐದು ಅಡಿ ಎತ್ತರವನ್ನು ಹೊಂದಿರುತ್ತಾರೆ. ಒಂದು ಸರಾಸರಿ ಎಣಿಕೆಯ ಅಂಕಿಅಂಶದ ಪ್ರಕಾರ ಕಡಿಮೆ ಎತ್ತರ ಇರುವ ಮಹಿಳೆಯರ ಸಂಖ್ಯೆ ಅತೀ ಕಡಿಮೆ ಎಂದು ಹೇಳಲಾಗಿದೆ. ಮಹಿಳೆಯರ ಎತ್ತರವು ಅವರ ಸೌಂದರ್ಯವನ್ನು ಪ್ರತಿನಿಧಿಸುವುದರ ಜೊತೆಗೆ ಅವರ ಆಂತರಿಕ ಆರೋಗ್ಯ ಸಮಸ್ಯೆ ಹಾಗೂ ಕೆಲವು ಕಿರಿಕಿರಿಗಳಿಗೂ ಒಳಗಾಗುವರು ಎಂದು ಹೇಳಲಾಗಿದೆ.

ದೈಹಿಕ ನಿಲುವನ್ನು ವ್ಯಕ್ತಿ ತಾನಾಗಿಯೇ ಸೃಷ್ಟಿಸಿಕೊಳ್ಳುವುದಲ್ಲ. ಅದು ಆನುವಂಶಿಯ ಗುಣ ಹಾಗೂ ವಾತಾವರಣದ ಪ್ರಭಾವದಿಂದ ಕೂಡಿರುತ್ತದೆ. ವ್ಯಕ್ತಿಯ ದೇಹದಲ್ಲಿ ಉಂಟಾಗುವ ಅನೇಕ ಬದಲಾವಣೆಗಳು ವಿಭಿನ್ನ ರೀತಿಯಲ್ಲಿ ಅನುಕೂಲ ಹಾಗೂ ಅನಾನುಕೂಲವನ್ನು ಸೃಷ್ಟಿಸುತ್ತವೆ. ಹೀಗೆ ನೈಸರ್ಗಿಕ ದತ್ತವಾಗಿ ಬಂದ ಎತ್ತರದ ನಿಲುವಿನ ಆಧಾರದ ಮೇಲೆ ಮಹಿಳೆಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಅಧ್ಯಯನ ತಿಳಿಸುತ್ತದೆ.

ಕಡಿಮೆ ಎತ್ತರದ ನಿಲುವನ್ನು ಹೊಂದಿರುವ ಮಹಿಳೆಯರಲ್ಲಿ ಏಳು ಬಗೆಯ ಸಮಸ್ಯೆ ಎದುರಾಗುವುದು. ಅದಕ್ಕೆ ಮಹಿಳೆಯರು ಸೂಕ್ತ ತಯಾರಿ ಹಾಗೂ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು ಎಂದು ಹೇಳುತ್ತಾರೆ. ನೀವು ಅಥವಾ ನಿಮ್ಮವರು ಐದು ಅಡಿ ಎತ್ತರಕ್ಕಿಂತ ಕಡಿಮೆ ನಿಲುವನ್ನು ಹೊಂದಿದ್ದರೆ ಈ ರೀತಿಯ ಕಿರಿಕಿರಿಗಳನ್ನು ಎದುರಿಸಬೇಕಾಗಬಹುದು.

1. ನಿಮ್ಮನ್ನು ಚಿಕ್ಕವರು ಎಂದು ಗ್ರಹಿಸುತ್ತಾರೆ

1. ನಿಮ್ಮನ್ನು ಚಿಕ್ಕವರು ಎಂದು ಗ್ರಹಿಸುತ್ತಾರೆ

ಎತ್ತರದಲ್ಲಿ ನೀವು ಐದು ಅಡಿಗಿಂತ ಕಡಿಮೆ ಇದ್ದರೆ ನೋಡುಗರಿಗೆ ಚಿಕ್ಕವರು ಎಂದು ತಪ್ಪಾಗಿ ಭಾಸವಾಗುತ್ತದೆ. ನೀವು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಸಹ ಜನರು ಕೇಳಬಹುದು. ನಿಮ್ಮ ಸ್ನೇಹಿತರು ಅಥವಾ ಆಪ್ತರ ಜೊತೆಗೆ ಅಪರಿಚಿತರ ಮನೆಗೆ ಹೋದಾಗ ಅವರು ನಿಮಗೆ ಕಾಫಿ, ಟೀ ಕೇಳುವ ಬದಲು ಹಾಲು, ಹಾರ್ಲಿಕ್ಸ್ ನಂತಹ ಪಾನೀಯಗಳನ್ನು ಕೇಳಬಹುದು. ಬಹುತೇಕ ಸಂದರ್ಭದಲ್ಲಿ ನಿಮ್ಮವರೂ ಸಹ ನಿಮಗೆ ಏನೂ ತಿಳಿಯದು, ಸುಮ್ಮನಿರು ಎಂದು ಹೇಳಬಹುದು. ಅಲ್ಲದೆ ಕೆಲವು ಕೆಲಸ ಕಾರ್ಯಗಳ ನಿರ್ವಹಣೆ ನಿಮ್ಮಿಂದ ಆಗದು ಎಂದು ನಿಮ್ಮನ್ನು ತಿರಸ್ಕರಿಸಬಹುದು.

2. ದಿನನಿತ್ಯ ಕೆಲವು ಸಂಗತಿಗಳು ಸಮಸ್ಯೆ ಎನಿಸುವುದು

2. ದಿನನಿತ್ಯ ಕೆಲವು ಸಂಗತಿಗಳು ಸಮಸ್ಯೆ ಎನಿಸುವುದು

ನಿಲುವು ಚಿಕ್ಕದಾಗಿದ್ದರೆ ಎತ್ತರದಲ್ಲಿ ಇಡುವ ವಸ್ತುಗಳನ್ನು ತೆಗೆಯಲು ಸಾಕಷ್ಟು ಕಷ್ಟವಾಗುವುದು. ಅಡುಗೆ ಮನೆಯಲ್ಲಿ ಅತ್ಯಂತ ಎತ್ತರದಲ್ಲಿ ಡಬ್ಬ ಹಾಗೂ ಪಾತ್ರೆಗಳನ್ನು ಇಟ್ಟರೆ ಅದನ್ನು ತೆಗೆಯಲು ಸಾಕಷ್ಟು ಸಾಹಸವನ್ನು ಮಾಡಬೇಕಾಗುವುದು. ಸ್ನಾನ ಗೃಹದಲ್ಲಿ ಜೋಡಿಸಿರುವ ಕನ್ನಡಿಯನ್ನು ನೋಡಲು ತುದಿ ಬೆರಳಿನ ಸಹಾಯ ಪಡೆದು ನೋಡಿದರೂ ಮುಖವನ್ನು ನೋಡಲು ಸಾಧ್ಯವಾಗದೆ ಹೋಗುವುದು. ಎತ್ತರದಲ್ಲಿ ಇರುವ ವಸ್ತುವನ್ನು ಪಡೆಯಲು ಸದಾ ಇತರರ ಮೊರೆ ಹೋಗಬೇಕು. ಇಲ್ಲದೆ ಸ್ಟೂಲ್ ಮತ್ತು ಏಣಿಯನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು.

 3. ಬಟ್ಟೆಗಳ ಆಯ್ಕೆ ಕಷ್ಟ

3. ಬಟ್ಟೆಗಳ ಆಯ್ಕೆ ಕಷ್ಟ

ಐದು ಅಡಿಗಿಂತ ಕಡಿಮೆ ನಿಲುವು ಇರುವವರಿಗೆ ಕಾಡುವ ಸಮಸ್ಯೆಗಳಲ್ಲಿ ಬಟ್ಟೆ ಆಯ್ಕೆಯೂ ಒಂದು ಪ್ರಮುಖವಾದ ಸಂಗತಿ. ನಿಲುವು ಕಡಿಮೆ ಇರುವುದರಿಂದ ವಯಸ್ಕರ ಉಡುಗೆಯು ಇವರಿಗೆ ಸರಿ ಹೊಂದುವುದಿಲ್ಲ. ಮಕ್ಕಳಿಗಾಗಿ ಮಾಡಿರುವ ಉಡುಗೆಗಳು ನಿಮ್ಮ ವಯಸ್ಸಿಗೆ ಹಾಗೂ ದೇಹಕ್ಕೂ ಹೊಂವುದಿಲ್ಲ. ಪ್ಯಾಂಟ್, ಮ್ಯಾಕ್ಸಿ ಸ್ಕರ್ಟ್, ಜೀನ್ಸ್, ಸಾರಿ ಯಾವುದೇ ಇರಲಿ ನಿಮಗೆ ಹೊಂದಿಸಿಕೊಳ್ಳಲು ಹಾಗೂ ಉತ್ತಮವಾದ್ದನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಕಷ್ಟಪಡಬೇಕಾಗುವುದು. ಆಧುನಿಕ ಉಡುಗೆ ಅಥವಾ ಸಾಂಪ್ರದಾಯಿಕ ಉಡುಗೆಯೇ ಆಗಿರಲಿ. ಎರಡರಲ್ಲೂ ಹೊಂದಾಣಿಕೆ ಕಾಣುವುದು ಅತ್ಯಂತ ಕಷ್ಟದ ಸಂಗತಿ.

4. ಸಭೆ ಸಮಾರಂಭದಲ್ಲಿ ಆಸನದ ತೊಂದರೆ

4. ಸಭೆ ಸಮಾರಂಭದಲ್ಲಿ ಆಸನದ ತೊಂದರೆ

ಸಭೆ- ಸಮಾರಂಭ ಎಂದಮೇಲೆ ಸಾಕಷ್ಟು ಜನರು ಬಂದಿರುತ್ತಾರೆ. ಆ ಜನ ಜಂಗುಳಿಯ ನಡುವೆ ವೇದಿಕೆಯ ಮುಂಭಾಗದಲ್ಲಿಯೇ ನಿಮಗೆ ಆಸನ ದೊರೆತಿದ್ದರೆ ಅದು ನಿಮ್ಮ ಅದೃಷ್ಟವಾಗುವುದು. ಅದೇ ನಿಮಗೆ ನಾಲ್ಕೈದು ಸಾಲಿನ ಹಿಂದೆ ಆಸನ ದೊರೆಯಿತು ಎಂದರೆ ಆಗ ನೀವು ವೇದಿಕೆಯ ಮೇಲೆ ನಡೆಯುವ ಸನ್ನಿವೇಶ ಹಾಗೂ ದೃಶ್ಯಗಳನ್ನು ನೋಡಲು ಸಾದ್ಯವಾಗುವುದಿಲ್ಲ. ಏನಿದ್ದರೂ ಕಿವಿಯಲ್ಲಿ ಕೇಳಿಸಿಕೊಂಡಿರುವುದೇ ಹೆಚ್ಚಾಗುವುದು. ನೋಡಲು ಎದುರಿಗೆ ಕುಳಿತವರ ತಲೆ ಹಾಗೂ ದೇಹವೇ ಅಡ್ಡ ಗೋಡೆಯಂತೆ ಆಗುವುದು.

5. ಚಿಕ್ಕವರು ನಿಮಗಿಂತ ಹಿರಿಯರಾಗಿ ಕಾಣುತ್ತಾರೆ

5. ಚಿಕ್ಕವರು ನಿಮಗಿಂತ ಹಿರಿಯರಾಗಿ ಕಾಣುತ್ತಾರೆ

ಮನೆಯಲ್ಲಿ ನೀವು ಗಿಡ್ಡ ನಿಲುವನ್ನು ಹೊಂದಿದ್ದೀರಿ, ನಿಮ್ಮ ಸಹೋದರ ಅಥವಾ ಸಹೋದರಿಯು ನಿಮ್ಮ ನಿಲುವಿಗಿಂತ ಎತ್ತರವನ್ನು ಪಡೆದುಕೊಂಡಿದ್ದರೆ, ಆಗ ನೀವು ವಯಸ್ಸಿನಲ್ಲಿ ದೊಡ್ಡವರಾದರೂ ನೋಟದಲ್ಲಿ ಅವರಿಗಿಂತ ಚಿಕ್ಕವರಾಗಿಯೇ ಕಾಣುವಿರಿ. ನಿಮಗಿಂತ ಐದು-ಆರು ವರ್ಷ ಚಿಕ್ಕವರೂ ಸಹ ದೊಡ್ಡವರಾಗಿ ಕಾಣುವರು. ಆಗ ಸ್ನೇಹಿತರು, ಸಂಬಂಧಿಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ನಿಮಗೆ ಕಿರಿಕಿರಿ ಉಂಟಾಗುವುದು. ಜೊತೆಗೆ ಗಿಡ್ಡ ನಿಲುವು ಹೊಂದಿರುವದೇ ಒಂದು ಪಾಪ ಎನ್ನುವ ಭಾವನೆಯೂ ಕೆಲವು ಬಾರಿ ಕಾಡುವ ಸಾಧ್ಯತೆಗಳಿರುತ್ತವೆ.

6. ನಿಮ್ಮನ್ನು ಉದ್ದೇಶ ಪೂರ್ವಕವಾಗಿ ತಮಾಷೆ ಮಾಡಬಹುದು

6. ನಿಮ್ಮನ್ನು ಉದ್ದೇಶ ಪೂರ್ವಕವಾಗಿ ತಮಾಷೆ ಮಾಡಬಹುದು

ನೋಡಲು ಕುಳ್ಳಗೆ ಅಥವಾ ಗಿಡ್ಡವಾದ ನಿಲುವನ್ನು ಹೊಂದಿದ್ದರೆ ಮಗುವೆಂದು ತಮಾಷೆ ಮಾಡುವರು. ಸಹೋದರರು, ಸ್ನೇಹಿತರು, ಬಂಧುಗಳು ಅಥವಾ ನೆರೆಹೊರೆಯವರು, ನಿಮ್ಮ ಗಿಡ್ಡವಾದ ದೇಹ, ಕೈ-ಕಾಲು, ತಲೆ ಹೀಗೆ ಅಂಗಾಂಗಗಳ ಬಗ್ಗೆಯೂ ತಮಾಷೆಯಾಗಿ ಮಾತನಾಡುವರು. ಪದೇ ಪದೇ ಹೇಳುವ ನಿಮ್ಮ ಬಗೆಗಿನ ತಮಾಷೆ ನಿಮಗೆ ಕಿರಿಕಿರಿ ಹಾಗೂ ಹತಾಷೆ ಉಂಟುಮಾಡುವುದು. ಅಲ್ಲದೆ ಎಲ್ಲರೊಂದಿಗೆ ಬೆರೆಯಲು ಹಾಗೂ ಸಂವಹನ ನಡೆಸಲು ನೀವು ಹಿಂದೇಟು ಹಾಕಬಹುದು. ನಿಮ್ಮವರ ಬಗ್ಗೆಯೂ ನಿಮಗೆ ಪ್ರೀತಿ ಕಡಿಮೆ ಆಗುವ ಸಾಧ್ಯತೆಗಳು ಇರುತ್ತವೆ.

7. ಆರೋಗ್ಯದಲ್ಲಿ ತೊಂದರೆ

7. ಆರೋಗ್ಯದಲ್ಲಿ ತೊಂದರೆ

ಗಿಡ್ಡವಾದ ನಿಲುವು ಹೊಂದಿದ್ದರೆ ವೈಜ್ಞಾನಿಕವಾಗಿ ಸಾಮನ್ಯ ಹೆರಿಗೆ ಉಂಟಾಗಲು ಸಾಕಷ್ಟು ತೊಂದರೆ ಉಂಟಾಗುವುದು ಎಂದು ಹೇಳಲಾಗುತ್ತದೆ. ಆದರೆ ಕಡಿಮೆ ನಿಲುವನ್ನು ಹೊಂದಿರುವ ಎಷ್ಟೋ ಮಹಿಳೆಯರು ಸಾಮಾನ್ಯ ಹೆರಿಗೆಯನ್ನು ಹೊಂದಿರುವ ಉದಾಹರಣೆಗಳು ಇವೆ. ದೇಹದಲ್ಲಿ ಕೊಬ್ಬುಗಳ ಸಂಗ್ರಹ ಅಥವಾ ದೇಹ ದಪ್ಪವಾದಾಗ ನಿಲುವು ಇನ್ನಷ್ಟು ಗಿಡ್ಡವಾಗಿ ಕಾಣುವುದು. ಜೊತೆಗೆ ಆಂತರಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಚರ್ಮದಲ್ಲಿ ಹಿಗ್ಗುವಿಕೆಯು ನೋವನ್ನು ಉಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಯಸ್ಸಾದಂತೆ ಮೊಣಕಾಲು ನೋವು, ಸೊಂಟ ನೋವು, ಹೊಟ್ಟೆ ಭಾಗದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗುವುದನ್ನು ನಾವು ಪರಿಶೀಲಿಸಬಹುದು.

English summary

Annoying Problems Faced By Women Having Short Height

Several researches have revealed that in a country like India that has a tropical climate, women have an average height of 5 feet. But there are also women, who are shorter than this. Though such women can rock in high heels and save money by picking clothes from kids' section, there are other grave issues that needs to be addressed if we are looking forward to an inclusive society.
Story first published: Friday, September 20, 2019, 17:22 [IST]
X
Desktop Bottom Promotion