For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ 2022: 50 ವರ್ಷಗಳ ನಂತರ ಶೋಭನ್ ಯೋಗ ವೃಷಭ, ಮೀನ ರಾಶಿಗಳಿಗೆ ಹಣಕಾಸಿನ ಲಾಭ

|

ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯ ದಿನ ಆಚರಿಸುವ ವಿಶೇಷ ದಿನ ಅಕ್ಷಯ ತೃತೀಯ. ಈ ದಿನ ಮಾಡುವ ಕೆಲಸಗಳು, ಖರೀದಿ, ಶುಭ ಕಾರ್ಯಗಳಿಂದ ಸಮೃದ್ಧಿ, ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯವನ್ನು ಭಗವಾನ್ ವಿಷ್ಣು, ದೇವತೆ ಲಕ್ಷ್ಮಿ ಮತ್ತು ಭಗವಾನ್ ಗಣೇಶನನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಆಭರಣಗಳನ್ನು ಖರೀದಿಸುವುದರ ಜೊತೆಗೆ, ಈ ದಿನ ಮದುವೆ ಮತ್ತು ನಿಶ್ಚಿತಾರ್ಥವನ್ನು ಸಹ ಮಂಗಳಕರವೆಂದು ಹೇಳಲಾಗುತ್ತದೆ. ರಿಯಲ್ ಎಸ್ಟೇಟ್, ವಾಹನಗಳಲ್ಲೂ ಹೂಡಿಕೆ ಮಾಡಬಹುದು.

 Akshaya Tritiya 2022 And Shobhan Yoga After 50 Years: These Zodiac Signs to Get Financial Benefits in Kannada

ಅದರಲ್ಲೂ ಈ ವರ್ಷ 2022ರಲ್ಲಿ ಮೇ 3ರಂದು ರೋಹಿಣಿ ನಕ್ಷತ್ರದ ಶೋಭನ್ ಯೋಗದಲ್ಲಿ ಅಕ್ಷಯ ತೃತೀಯ ಬಂದಿದೆ. ಅಂದರೆ ಮೂರು ಗ್ರಹಗಳ ಶುಭ ಸಂಯೋಜನೆಯು ಈ ವರ್ಷದ ಅಕ್ಷಯ ತೃತೀಯದಂದು ಆಗುತ್ತಿದ್ದು, ಈ ಶುಭಯೋಗವು 50 ವರ್ಷಗಳ ನಂತರ ಘಟಿಸುತ್ತಿದೆ.

ಅಕ್ಷಯ ತೃತೀಯ 2022: ಗ್ರಹಗಳ ವಿಶೇಷ ಸಂಯೋಗ

2022 ರ ಅಕ್ಷಯ ತೃತೀಯದಲ್ಲಿ, ಮಂಗಳ ಗ್ರಹವು ರೋಹಿಣಿ ನಕ್ಷತ್ರದ ಶೋಭನ ಯೋಗದಲ್ಲಿರುತ್ತದೆ. ಈ ದಿನ ಚಂದ್ರನು ತನ್ನ ವೃಷಭ ರಾಶಿಯಲ್ಲಿರುತ್ತಾನೆ. ಮತ್ತೊಂದೆಡೆ, ಶುಕ್ರನು ತನ್ನ ಉತ್ಕೃಷ್ಟ ಚಿಹ್ನೆ ಮೀನದಲ್ಲಿ ಇರುತ್ತದೆ ಹಾಗೂ ಶನಿಯು ಸ್ವರಾಶಿಯಾದ ಕುಂಭ ರಾಶಿಯಲ್ಲಿ ಇರುತ್ತಾನೆ. ಗುರು ಕೂಡಾ ಮೀನ ರಾಶಿಯಲ್ಲಿ ಇರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ಗ್ರಹಗಳು ಏಕಕಾಲದಲ್ಲಿ ಅನುಕೂಲಕರ ಸ್ಥಾನದಲ್ಲಿರುವುದು ಬಹಳ ವಿಶೇಷ. ಅಕ್ಷಯ ತೃತೀಯ ಎಂದರೆ ಎಲ್ಲ ಶುಭ ಕಾರ್ಯಗಳಿಗೂ ಹೇಳಿ ಮಾಡಿಸಿದ ದಿನವಾಗಿದೆ. ಅಂಥದರಲ್ಲಿ ಈ ಬಾರಿ ಗ್ರಹಗಳ ಈ ಶುಭ ಸಂಯೋಗವೂ ಸೇರಿ ಶೋಭನ್ ಯೋಗ ಬರುತ್ತಿದ್ದು ಈ ದಿನದ ಮಹತ್ವವನ್ನು ಹೆಚ್ಚಿಸುತ್ತಿದೆ, ಶುಭ ಕಾರ್ಯಗಳಿಗೆ ಮತ್ತಷ್ಟು ವಿಶೇಷವಾದ ದಿನವಾಗಿದೆ.

ಈ ಶೋಭನ್ ಯೋಗದಲ್ಲಿ ಸಂಭವಿಸುತ್ತಿರುವ ಅಕ್ಷಯ ತೃತೀಯದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ, ಯಾರಿಗಿದೆ ಅದೃಷ್ಟ, ಯಾರೆಲ್ಲಾ ಎಚ್ಚರವಹಿಸಬೇಕು ಮುಂದೆ ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಆರ್ಥಿಕ ಲಾಭವಿದೆ, ಸಣ್ಣ ಪ್ರಯಾಣ ಇರಬಹುದು, ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ ಎಚ್ಚರ.

ವೃಷಭ ರಾಶಿ

ವೃಷಭ ರಾಶಿ

ಅಶಾಂತಿಯ ಭಾವನೆ ಇರುತ್ತದೆ ಮತ್ತು ನೀವು ಬುದ್ಧಿವಂತಿಕೆಯಿಂದ ವಿಷಯಗಳನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಆರ್ಥಿಕ ಲಾಭಗಳು ಇರುತ್ತವೆ ಆದರೆ ಸ್ವಲ್ಪ ಉಪಯೋಗವಾಗುತ್ತದೆ.

ಮಿಥುನ ರಾಶಿ

ಮಿಥುನ ರಾಶಿ

ನಿಮಗೆ ರಕ್ತದೊತ್ತಡ, ತಲೆನೋವು, ಕೀಲುನೋವು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಮತ್ತು ನೀವು ಅಶಾಂತಿ ಅನುಭವಿಸಬಹುದು.

ಕರ್ಕ ರಾಶಿ

ಕರ್ಕ ರಾಶಿ

ನೀವು ಬಹಳಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ ಆದರೆ ಯಾವುದೇ ಪ್ರತಿಫಲವಿಲ್ಲದೆ. ಈ ದಿನ ಮಾಡಿದ ನಿಮ್ಮ ಒಳ್ಳೆಯ ಕಾರ್ಯಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ.

ಸಿಂಹ ರಾಶಿ

ಸಿಂಹ ರಾಶಿ

ಇದು ತುಂಬಾ ಒಳ್ಳೆಯ ದಿನವಾಗಿರುತ್ತದೆ ಮತ್ತು ನಿಮಗೆ ಕೆಲವು ಒಳ್ಳೆಯ ಸುದ್ದಿ ಇರುತ್ತದೆ. ಕೆಲವು ಒಳ್ಳೆಯ ಕಾರ್ಯಗಳಿಂದ ನೀವು ಹೆಸರು ಗಳಿಸಲು ಸಾಧ್ಯವಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ನೀವು ಸಣ್ಣ ಆರೋಗ್ಯ ಸಮಸ್ಯೆಗಳು ಅಥವಾ ಮೂಗೇಟುಗಳನ್ನು ಹೊಂದಿರಬಹುದು. ಆದ್ದರಿಂದ, ಜಾಗರೂಕರಾಗಿರಿ. ಆರ್ಥಿಕವಾಗಿ ನೀವು ಸ್ಥಿರವಾಗಿರುತ್ತೀರಿ.

ತುಲಾ ರಾಶಿ

ತುಲಾ ರಾಶಿ

ಅನಿರೀಕ್ಷಿತವಾಗಿ ಅವಘಡ ಸಂಭವಿಸಬಹುದು ದಿನವಿಡೀ ಜಾಗರೂಕರಾಗಿರಿ. ನಿಮ್ಮ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವು ಇಂದು ಹೆಚ್ಚಾಗಬಹುದು. ಯಾವುದೇ ರೀತಿಯ ಜನಸಂದಣಿ ಅಥವಾ ಕೂಟದಿಂದ ನಿಮ್ಮನ್ನು ದೂರವಿಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳು ದಿನವಿಡೀ ಹೊಡೆಯುತ್ತವೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಏಕೆಂದರೆ ಅದು ತಪ್ಪು ಎಂದು ನಂತರ ನಿಮಗೆ ತಿಳಿಯುತ್ತದೆ.

ಧನು ರಾಶಿ

ಧನು ರಾಶಿ

ನೀವು ದಿನವಿಡೀ ಸಂತೋಷವಾಗಿರುತ್ತೀರಿ, ಆದರೂ ಕೆಲವು ಸಣ್ಣ ಆಹಾರ ಸಂಬಂಧಿತ ಸಮಸ್ಯೆಗಳು ಇರಬಹುದು. ನಿಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯತನ ಇರುತ್ತದೆ.

ಮಕರ ರಾಶಿ

ಮಕರ ರಾಶಿ

ಕೆಲಸ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳು ನಿಮ್ಮದಾಗಬಹುದು ಮತ್ತು ನೀವು ಇಂದು ಉತ್ತಮ ಪ್ರೇಮ ಜೀವನವನ್ನು ಹೊಂದಿರುತ್ತೀರಿ. ಬಹುತೇಕ ವಿಷಯಗಳು ಸಾಮಾನ್ಯವಾಗಿರುತ್ತವೆ.

ಕುಂಭ ರಾಶಿ

ಕುಂಭ ರಾಶಿ

ನಿಮ್ಮ ಮನೆಯಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಪ್ರಾರಂಭಿಸಬಹುದು. ಒಟ್ಟಿನಲ್ಲಿ ಇದು ಒಳ್ಳೆಯ ದಿನವಾಗಿರುತ್ತದೆ. ನೀವು ಇಡೀ ದಿನ ಮನಸ್ಸಿನ ಶಾಂತಿ ಮತ್ತು ನೆಮ್ಮದಿಯನ್ನು ಹೊಂದಿರುತ್ತೀರಿ.

ಮೀನ ರಾಶಿ

ಮೀನ ರಾಶಿ

ಆರ್ಥಿಕ ಲಾಭಗಳಿರುತ್ತವೆ ಮತ್ತು ನೀವು ಹೊಸದನ್ನು ಪ್ರಾರಂಭಿಸಬಹುದು. ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವಿರುತ್ತದೆ ಮತ್ತು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

English summary

Akshaya Tritiya 2022 And Shobhan Yoga After 50 Years: These Zodiac Signs to Get Financial Benefits in Kannada

Akshaya Tritiya 2022: Shobhan Yoga Occurs on Same Day After 50 Years; These Zodiac Signs Will Get Financial benefits. Read more.
Story first published: Friday, April 29, 2022, 17:50 [IST]
X
Desktop Bottom Promotion