For Quick Alerts
ALLOW NOTIFICATIONS  
For Daily Alerts

Akshaya Tritiya 2021 : ಪೂಜಾ ವಿಧಿ, ಶುಭ ಮುಹೂರ್ತ, ಲಕ್ಷ್ಮಿ ಕುಬೇರ ಮಂತ್ರ

|

ಅಕ್ಷಯ ತೃತೀಯ ಎಂಬುವುದು ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. 2021, ಮೇ 14ರಂದು ಅಕ್ಷಯ ತೃತೀಯ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.

ಅಕ್ಷಯ ತೃತೀಯ ಎಂದರೆ ಶುಭದ ಸಂಕೇತವಾಗಿದೆ. ಅಕ್ಷಯ ಎಂದರೆ ಕೊನೆಯಿಲ್ಲ ಎಂದರ್ಥ. ಆದ್ದರಿಂದ ಈ ದಿನ ಯಾವುದೇ ಒಳ್ಳೆಯ ಕಾರ್ಯಕ್ಕೆ ಅಥವಾ ಚಿನ್ನ, ಬೆಳ್ಳಿ ಖರೀದಿಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ದಿನದಂದು ನೀವು ಏನು ಮಾಡಿದರೂ ಅದು ದುಪ್ಪಟ್ಟವಾಗುವುದು ಎಂಬ ನಂಬಿಕೆಯಿದೆ.

Akshaya Tritiya 2021, Akshaya Tritiya Puja Vidhi, Akshaya Tritiya Shubh Muhurat Timings

ಈ ದಿನ ಹೊಸ ಗಾಡಿ, ಆಸ್ತಿ, ಚಿನ್ನಾಭರಣಗಳನ್ನು ಕೊಳ್ಳಲು ಮಾತ್ರವಲ್ಲ ದಾನಕ್ಕೂ ತುಂಬಾ ಶ್ರೇಷ್ಠವಾಗಿದೆ. ಈ ದಿನ ದಾನ ಮಾಡಿದರೆ ಇದರಿಂದ ಶುಭ ಫಲ ದೊರೆಯುವುದು. ಅಲ್ಲದೆ ಈ ದಿನ ವಿವಾಹವಾಗುವವರ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ. ನಾವು ಈ ಲೇಖನದಲ್ಲಿ ಅಕ್ಷಯ ತೃತೀಯ ಪೂಜಾ ವಿಧಿ, ಶುಭ ಮುಹೂರ್ತ, ಲಕ್ಷ್ಮಿ ಕುಬೇರ ಪೂಜೆ, ಪೂಜೆಗೆ ಬೇಕಾಗುವ ಸಾಮಗ್ರಿ ಇವುಗಳ ಕುರಿತು ಹೇಳಲಾಗಿದೆ ನೋಡಿ:

ಅಕ್ಷಯ ತೃತೀಯ ಪೂಜಾ ಮುಹೂರ್ತ

ಅಕ್ಷಯ ತೃತೀಯ ಪೂಜಾ ಮುಹೂರ್ತ

ಅಕ್ಷಯ ತೃತೀಯ ತಿಥಿ: ಮೇ 14, 20201 ಬೆಳಗ್ಗೆ 05:38ಕ್ಕೆ

ಪೂಜಾ ಮುಹೂರ್ತ: ಮೇ 14, 20201 ಬೆಳಗ್ಗೆ 06:04ರಿಂದ ಮಧ್ಯಾಹ್ನ 12:35ರವರೆಗೆ

ಅಕ್ಷಯ ತೃತೀಯ ತಿಥಿ ಮುಕ್ತಾಯ:ಮೇ 15, 2021 ಬೆಳಗ್ಗೆ 07:59ಕ್ಕೆ

ಚಿನ್ನ ಕೊಳ್ಳಲು ಶುಭ ಸಮಯ: ಮೇ 14, 2021 ಬೆಳಗ್ಗೆ 06:04ರಿಂದ ಸಂಜೆ 06:04ರವರೆಗೆ

ಅಕ್ಷಯ ತೃತೀಯಾ ಪೂಜಾ ವಿಧಿ

ಅಕ್ಷಯ ತೃತೀಯಾ ಪೂಜಾ ವಿಧಿ

ಬೆಳಗ್ಗೆ ಎದ್ದು ಸ್ನಾನ ಮಾಡಿ, ಮನೆಯನ್ನು ಶುದ್ಧ ಮಾಡಿ ವಿಷ್ಣು, ಮಹಾ ಲಕ್ಮೀ, ಕುಬೇರನ ಫೋಟೋ ಅಥವಾ ಮೂರ್ತಿಗಳನ್ನು ಒರೆಸಿ. ನಂತರ ವಿಷ್ಣು ಹಾಗೂ ಲಕ್ಷ್ಮಿಗೆ ಅಭಿಷೇಕ ಮಾಡಿ. ವಿಷ್ಣುವಿಗೆ ಶ್ರೀಗಂಧ, ಲಕ್ಷ್ಮಿಗೆ ಕುಂಕುಮ ಅರ್ಪಿಸಿ. ಹೂಗಳನ್ನು ಅರ್ಪಿಸಿ. ನವದಾನ್ಯಗಳು ಹಾಗೂ ಮನೆಯಲ್ಲಿ ತಯಾರಿಸಿದ ಸಿಹಿ ಅಡಿಗೆಯಿಂದ ನೈವೇದ್ಯ ಅರ್ಪಿಸಿ. ಈ ದಿನ ವಿಷ್ಣು, ಲಕ್ಷ್ಮಿ, ಕುಬೇರ ಮಂತ್ರ ಪಠಿಸಿ.

ಪೂಜೆಗೆ ಬೇಕಾಗುವ ಸಾಮಗ್ರಿ

ಪೂಜೆಗೆ ಬೇಕಾಗುವ ಸಾಮಗ್ರಿ

ಹಾಲು

ಜೇನು

ತುಪ್ಪ

ಮೊಸರು

ಸಕ್ಕರೆ

ನೀರು

ತುಳಸಿ

ಶ್ರೀಗಂಧ

ಕುಂಕುಮ

ಹೂಗಳು

ಅಕ್ಷಯ ತೃತೀಯ ಪೂಜೆಯ ಪ್ರಯೋಜನಗಳು

ಅಕ್ಷಯ ತೃತೀಯ ಪೂಜೆಯ ಪ್ರಯೋಜನಗಳು

* ವಿಷ್ಣು, ಲಕ್ಷ್ಮಿ, ಕುಬೇರನ ಕೃಪೆಗೆ ಪಾತ್ರರಾಗುವಿರಿ.

* ಐಶ್ವರ್ಯ, ಅದೃಷ್ಟ ಲಭಿಸುವುದು

* ವೃತ್ತಿಯಲ್ಲಿ ಬೆಳವಣಿಗೆಯಾಗುವುದು

ಅಕ್ಷಯ ತೃತೀಯದಂದು ಈ ಮಂತ್ರ ಪಠಿಸಿ

ಅಕ್ಷಯ ತೃತೀಯದಂದು ಈ ಮಂತ್ರ ಪಠಿಸಿ

ವಿಷ್ಣು ಮಂತ್ರ

ತ್ವಮೇವ ಮಾತಾ ಚ ಪಿತಾ ತ್ವಮೇವ

ತ್ವಮೇವ ಬಂಧುಶ್‌ ಚ ಸಖಾ ತ್ವಮೇವ

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

ತ್ವಮೇವ ಸರ್ವಂ ಮಮ ದೇವದೇವ

ಲಕ್ಷ್ಮಿ ಮಂತ್ರ

ಲಕ್ಷ್ಮೀ ಸ್ತ್ರೋತ್ರ ಸುಮನಸವಂದಿತ ಮಾಧವಿ

ಚಂದ್ರ ಸಹೋದರಿ ಹೇಮಮಯೀ

ಮುನಿಗಣ ಮಂಡಿತ ಮೋಕ್ಷ ಪ್ರದಾಯಿನಿ

ಮಂಜುಳಾ ಭಾಷಿಣಿ ವೇದನುತೆ

ಪಂಕಜವಾಸಿನಿ ದೇವಸುಪೂಜಿತ

ಸದ್ಗುಣ ವರ್ಷಿಣಿ ಸನ್ನಿಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ

ಆದಿಲಕ್ಷ್ಮೀ ಸದಾ ಪಾಲಯಮಾಂ...

ಆಯೋ ಕಲಿ ಕಲ್ಮಶ ನಾಶಿನಿ ಕಾಮಿನಿ ವೈದಿಕ ರೂಪಿಣಿ

ಕುಬೇರ ಮಂತ್ರ

ಲಕ್ಷ್ಮಿ ಕುಬೇರ ಮಂತ್ರ: .

"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"

ಮಹಾಲಕ್ಷ್ಮಿ ಮಂತ್ರ:

"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ"

ಕುಬೇರ ಮಂತ್ರ:

ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ

English summary

Akshaya Tritiya 2021 Puja Vidhi, Shubh Muhurat Timings, Lakshmi Kuber Puja Mantra, Samagri, Aarti in kannada

Akshaya Tritiya 2021 Puja Vidhi, Shubh Muhurat Timings, Lakshmi Kuber Puja Mantra, Samagri, Aarti in kannada...
X
Desktop Bottom Promotion