For Quick Alerts
ALLOW NOTIFICATIONS  
For Daily Alerts

90ನೇ ವಾಯುಪಡೆ ದಿನ: ನಮ್ಮ ವಾಯುಪಡೆ ಕುರಿತು ಹೆಮ್ಮೆ ಹುಟ್ಟಿಸುವ ಆಸಕ್ತಿಕರ ಸಂಗತಿಗಳಿವು

|

ಅಕ್ಟೋಬರ್ 8ರಂದು 90ನೇ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಭಾರತದ ಶಕ್ತಿ ವಾಯುಪಡೆ, ಸೇನಾಪಡೆ, ನೌಕಾಪಡೆ. ಈ ಮೂರು ಘಟಕಗಳು ಭಾರತದ ರಕ್ಷಣೆಗೆ ಹಗಲಿರಳು ಶ್ರಮಿಸುತ್ತಿದೆ.

ಭಾರತೀಯ ವಾಯುಪಡೆ ದಿನವನ್ನು ಪ್ರಥಮ ಬಾರಿಗೆ 1932 ಅಕ್ಟೋಬರ್‌ 8ರಂದು ಆಚರಿಸಲಾಯಿತು. ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ತೋರಿದ ಸಾಹಸ ಅದ್ಭುತ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್‌ ವಿಜಯ್‌, ಆಪರೇಷನ್‌ ಮೇಘದೂತ್‌, ಆಪರೇಷನ್‌ ಕ್ಯಾಕ್ಟಸ್‌, ಆಪರೇಷನ್‌ ಪೂಮಲೈ, ಆಪರೇಷನ್‌ ರಾಹತ್‌ ಮುಂತಾದವುಗಳು ಪ್ರಮುಖವಾಗಿವೆ.

ಅಲ್ಲದೆ ದೇಶದಲ್ಲಿ ಪ್ರಕೃತಿ ವಿಕೋಪಗಳು ಉಂಟಾದಾಗ ತಕ್ಷಣ ರಕ್ಷಣೆಗೆ ಧಾವಿಸಿ, ಜನರ ನೆರವಿಗೆ ನಿಲ್ಲುತ್ತದೆ, 28/11 ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ವಾಯುಸೇನೆ ಪರಾಕ್ರಮ ಎಂಥದ್ದು ಎಂಬುವುದನ್ನು ಇಡೀ ದೇಶವೇ ನೋಡಿದೆ.

ಭಾರತೀಯ ವಾಯುಪಡೆ ಕುರಿತ ಕೆಲ ಆಸಕ್ತಿಕರ ಸಂಗತಿಗಳು ಇಲ್ಲಿವೆ ನೋಡಿ:

ಜಾಗತಿಕ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ

ಜಾಗತಿಕ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ

1932ರಲ್ಲಿ ಭಾರತೀಯ ವಾಯುಪಡೆ ಸ್ಥಾಪನೆಯಾಯಿತು. ಅಂದಿನಿಂದ ಐಎಎಫ್​ ಹಲವಾರು ಪ್ರಮುಖ ಯುದ್ಧಗಳಲ್ಲಿ ಹಾಗೂ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. 1938ರಲ್ಲಿ ಪ್ರಾರಂಭವಾದ ದ್ವಿತೀಯಾ ಮಹಾಯುದ್ಧದಲ್ಲಿ ಆಗ ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ಭಾಗವಹಿಸಿತ್ತು. ಇದರಲ್ಲಿ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಬ್ರಿಟಿಷ್​ ಸೈನ್ಯಕ್ಕೆ ಸಹಾಯ ಮಾಡಿತು. ಐಎಎಫ್​ ಬ್ರಿಟಿಷ್​ ಸಾಮ್ರಾಜ್ಯದ ಸಹಾಯಕ ವಾಯುಪಡೆಯ ಒಂದು ಭಾಗವಾಗಿ ಸ್ಥಾಪಿತವಾದರೂ, ಕ್ರಮೇಣ ಅಂದರೆ 1947ರಲ್ಲಿ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಒಂದು ಭಾಗವಾಗಿ ಮಾರ್ಪಟ್ಟಿತು.

ಇಂಡಿಯನ್‌ ಏರ್‌ಫೋರ್ಸ್‌ ಎಂದು ಯಾವಾಗ ಕರೆಯಲ್ಪಟ್ಟಿತು?

ಇಂಡಿಯನ್‌ ಏರ್‌ಫೋರ್ಸ್‌ ಎಂದು ಯಾವಾಗ ಕರೆಯಲ್ಪಟ್ಟಿತು?

1947ರ ನಂತರ ಭಾರತೀಯ ವಾಯುಪಡೆಗೆ ರಾಯಲ್ ಇಂಡಿಯನ್ ಏರ್​ಫೋರ್ಸ್​​​ ಎಂದು ಹೆಸರಿಡಲಾಗಿತ್ತು. 1950ರಲ್ಲಿ ರಾಯಲ್ ಹೆಸರನ್ನು ತೆಗೆದು ಹಾಕಿ, ಇಂಡಿಯನ್ ಏರ್​ಪೋರ್ಸ್​​ ಎಂದಷ್ಟೇ ಉಳಿಸಿಕೊಳ್ಳಲಾಯಿತು.

ಸುಪ್ರೀಂ ಕಮಾಂಡರ್ ಹುದ್ದೆ

ಸುಪ್ರೀಂ ಕಮಾಂಡರ್ ಹುದ್ದೆ

ಭಾರತೀಯ ಸಂವಿಧಾನದ ಪ್ರಕಾರ, ರಾಷ್ಟ್ರಪತಿಗಳು ವಾಯುಪಡೆಯ ಸುಪ್ರೀಂ ಕಮಾಂಡರ್ ಹುದ್ದೆಯನ್ನು ಅಲಂಕರಿಸುತ್ತಾರೆ. ಮುಂದಿನ ಸ್ಥಾನದಲ್ಲಿ ಚೀಫ್​​ ಆಫ್​​ ಏರ್​​ ಸ್ಟಾಫ್​, ಏರ್​​ ಚೀಫ್​ ಮಾರ್ಷಲ್ ಬರುತ್ತಾರೆ. ಪ್ರಮುಖ ಕಾರ್ಯಾಚರಣೆಗಳ ನಿರ್ಧಾರವನ್ನು ತೆಗೆದುಕೊಳ್ಳುವ ಜವಾಬ್ದಾರಿ ಏರ್​​ ಚೀಫ್ ಮಾರ್ಷಲ್​​ ಅವರ ಮೇಲಿದೆ.

 ಭಾರತದಲ್ಲಿರುವ ವಾಯುಸೇನಾ ಬಲ

ಭಾರತದಲ್ಲಿರುವ ವಾಯುಸೇನಾ ಬಲ

ನಮ್ಮಲ್ಲಿ ಒಟ್ಟು 60 ವಾಯುಪಡೆ ನಿಲ್ದಾಣಗಳಿವೆ. ವಾಯು ಸೇನೆಯಲ್ಲಿ 1,39,576 ಸಕ್ರಿಯ ಅಧಿಕಾರಿಗಳಿದ್ದು, 1,40,000 ಮಂದಿ ಮೀಸಲು ಪಡೆಯಲ್ಲಿದ್ದಾರೆ. ಜತೆಗೆ ಸುಮಾರು 1,500 ಯುದ್ಧ ವಿಮಾನಗಳಿದ್ದು, ಸುಮಾರು 227 ಸುಖೋಯ್‌-30, 5 ರಫೇಲ್‌, 17 ತೇಜಸ್‌, 54 ಮಿಗ್‌-21, 65 ಮಿಗ್‌-29, 51 ಮಿರಾಜ್‌-2,000, 106 ಜಾಗ್ವಾರ್‌ ಭಾರತೀಯ ವಾಯು ಸೇನೆಯ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಾಗಿವೆ.

ಗರುಡ್‌ ಕಮಾಂಡೋ ವಾಯು ಪಡೆಯ ವಿಶೇಷ ಕಮಾಂಡೋ ಪಡೆ. 2004ರಲ್ಲಿ ಆರಂಭವಾದ ಇದು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತದೆ. ಕಮಾಂಡೋ ಪಡೆ ಗಳಲ್ಲೇ ಅತೀ ಸುದೀರ್ಘ‌ ತರಬೇತಿಯನ್ನು ಗರುಡ್‌ ನಲ್ಲಿ ನೀಡಲಾಗುತ್ತದೆ. ಹಲವು ರಕ್ಷಣ ಕಾರ್ಯಾ ಚರಣೆಗಳನ್ನು ನಡೆಸಿದ ಹಿರಿಮೆ ಇದಕ್ಕಿದೆ.

ಹಿಂಡನ್‌ ಹಿರಿಮೆ

ಹಿಂಡನ್‌ ಹಿರಿಮೆ

ವಾಯುಪಡೆಯ ಹಿಂಡನ್‌ ವಾಯು ನಿಲ್ದಾಣ ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆ. ಗಾಜಿಯಾಬಾದ್‌ನಲ್ಲಿರುವ ಇದು ವೆಸ್ಟರ್ನ್ ಏರ್‌ ಕಮಾಂಡ್‌ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 9 ಸಾವಿರ ಅಡಿಯ ಅತೀ ದೊಡ್ಡ ರನ್‌ವೇ ಹೊಂದಿದೆ. ಇದು ವಿಶ್ವದ 8ನೇ ಅತೀ ದೊಡ್ಡ ವಾಯುನೆಲೆಯೂ ಹೌದು.

ರಫೇಲ್ ಸೇರ್ಪಡೆ

ಭಾರತೀಯ ವಾಯಯಸೇನಾ ಪಡೆಗೆ ರಫೇಲ್ ಯುದ್ಧ ವಿಮಾನಗಳು ಕೂಡ ಸೇರ್ಪಡೆಗೊಂಡಿದ್ದು ವಾಯು ಸೇನಾ ಬಲ ಹೆಚ್ಚಿದೆ.

ವಾಯು ಸೇನೆಯ ಧ್ಯೇಯ ವಾಕ್ಯ

ಭಾರತೀಯ ವಾಯು ಸೇನೆಯು 'ನಭ ಸ್ಪರ್ಶಂ ದೀಪ್ತಂ' (Touch the Sky with Glory) ಎಂಬ ಧ್ಯೇಯೋಕ್ತಿಯನ್ನು ಹೊಂದಿದೆ. ಇದನ್ನು ಭವದ್ಗೀತೆಯ 11ನೇ ಅಧ್ಯಾಯದಿಂದ ತೆಗೆಯಲಾಗಿದೆ.

Read more about: india life ಭಾರತ ಜೀವನ
English summary

Indian Air Force Day 2022: Date, history, significance and interesting facts about the Indian Air Force in Kannada

Air Force Day 2020 : Interesting Facts about IAF, Read on...
X
Desktop Bottom Promotion