Just In
Don't Miss
- News
ಕಾಳಿ ಪೋಸ್ಟರ್ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್ ಆಗ್ರಹ
- Automobiles
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
- Technology
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ವರ್ಕ್ ಫ್ರಂ ಹೋಂ: ಪ್ರಯೋಜನದ ಜೊತೆ ತೊಂದರೆಯೂ ಇದೆ, ಏಕೆ?
ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿದ್ದೇ ಸಾಕಷ್ಟು ಕ್ಷೇತ್ರಗಳಲ್ಲಿ ಯಾರೂ ಊಹಿಸಲೂ ಸಾಧ್ಯವಾಗದಂಥ ಬದಲಾವಣೆಯಾಗಿದೆ ಈಗಲೂ ಆಗುತ್ತಿದೆ. ಇಂಥಾ ನೂರಾರು ಬದಲಾವಣೆಗಳಲ್ಲಿ ಕಚೇರಿಯಲ್ಲಿ ಕೆಲಸ ಮಾಡುವ ಬದಲಾಗಿ ತಿಂಗಳಾನುಗಟ್ಟಲೆ ಮನೆಯಲ್ಲೇ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಹ ಒಂದು.
ಆರಂಭದಲ್ಲಿ ಬಹುತೇಕ ಉದ್ಯೋಗಿಗಳು ಸಂತೋಷದಿಂದಲೇ ಸ್ವೀಕರಿಸಿದರು ದಿನಕಳೆದಂತೆ ಮನೆಯಿಂದಲೇ ಕೆಲಸ ಕೆಲವು ಸಮಸ್ಯೆ, ಗೊಂದಲ, ಏಕಾಂತದಲ್ಲಿ ಕೆಲಸ ಮಾಡುವ ಅವಕಾಶ ಇಲ್ಲದಿರುವುದಕ್ಕೆ ಬೇಸರಿಸಿಕೊಂಡದ್ದೂ ಇದೆ.
ಕೆಲವು ಕಚೇರಿಗಳು ಈಗಾಗಲೇ ಆರಂಭವಾಗಿದ್ದರೂ, ಇನ್ನೂ ಹಲವಾರು ಕಚೇರಿಗಳು ಈ ವರ್ಷ ಪೂರ್ತಿ ಮನೆಯಿಂದಲೇ ಕೆಲಸ ಮಾಡುವಂತೆ ಕಚೇರಿ ಹೇಳಿದೆ. ಆದರೆ, ಮನೆಯಿಂದಲೇ ಕೆಲಸ ಮಾಡುವುದರಿಂದ ಸಾಕಷ್ಟು ಅನುಕೂಲಗಳಿದ್ದರೂ, ಅಷ್ಟೇ ಅನಾನುಕೂಲಗಳು ಇದೆ. ನಾವಿಲ್ಲಿ, ಮನೆಯಿಂದ ಕೆಲಸ ಮಾಡುವುದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
ಮನೆಯಿಂದಲೇ ಕೆಲಸ ಮಾಡುವುದರಿಂದ ಆಗುವ ಅನುಕೂಲಗಳು

ಅನುಕೂಲಕ್ಕೆ ತಕ್ಕ ವೇಳಾಪಟ್ಟಿ
ಮನೆಯಿಂದಲೇ ಕೆಲಸ ಮಾಡಿದರೆ ನೀವು ಯಾವುದೇ ಕ್ಷಣದಲ್ಲಿ ವಿರಾಮಗಳನ್ನು ತೆಗೆದುಕೊಳ್ಳಬಹುದು. ಸಾಧ್ಯವಿದ್ದರೆ ಕಚೇರಿ ಕೆಲಸಗಳನ್ನು ನಿಮಗೆ ಅನುಕೂಲಕರ ಸಮಯದಲ್ಲಿ ಮೊದಲೇ ಮುಗಿಸಿಕೊಳ್ಳಬಹುದು. ಕುಟುಂಬ ಸದಸ್ಯರು, ಸ್ನೇಹಿತರು ಕರೆ ಮಾಡಿದಾಗ ಯಾವುದೇ ಭಯ, ಆತುರವಿಲ್ಲದೆ ಮಾತನಾಡಬಹುದು. ನೀವು ಬಯಸುವ ಯಾವುದೇ ಸಮಯದಲ್ಲಿ ತಿಂಡಿ, ಊಟ ಸೇವಿಸಬಹುದು.

ನಮಗೆ ಬೇಕಾದಂಥ ಸುತ್ತಲಿನ ಪರಿಸರ
ನೀವು ಕೆಲಸ ಮಾಡುವಾಗ ನೀವು ಬಯಸಿದ ರೀತಿಯಲ್ಲಿ ಹಾಡನ್ನು ಕೇಳಬಹುದು, ಇಷ್ಟಬಂದಂತೆ ಸಂಗೀತ ಹಾಕಿಕೊಂಡು ಕೆಲಸ ಮಾಡಬಹುದು. ನಿಮ್ಮ ಕೆಲಸಕ್ಕೆ ಧಕ್ಕೆ ಬರದಂತೆ ಗಮನದಲ್ಲಿಟ್ಟುಕೊಂಡು ಪರಿಸರವನ್ನು ಸೃಷ್ಟಿಸಿಕೊಳ್ಳಬಹುದು. ಇತರೆ ಸ್ನೇಹಿತರ ಜತೆ ಸೇರಿ ಸಹ ಒಟ್ಟಾಗಿ ಕೆಲಸ ಮಾಡಬಹುದು.

ಕಚೇರಿಗೆ ಒಪ್ಪುವ ಬಟ್ಟೆಯೇ ಧರಿಸಬೇಕೆಂದಿಲ್ಲ
ಕಚೇರಿಗೆ ಹೋಗಬೇಕೆಂದರೆ ನಿತ್ಯ ಬಟ್ಟೆಗಳನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಬೇಕು. ಅವುಗಳ ಕಾಳಜಿ, ಡ್ರೈ ಕ್ಲೀನ್ ಅಬ್ಬಾ ಎಷ್ಟೊಂದು ಕೆಲಸ ಇರುತ್ತಿತ್ತು. ಅಷ್ಟೇ ಅಲ್ಲದೇ ಹೊಸ ಹೊಸ ಬಟ್ಟೆಗಳ ಶಾಪಿಂಗ್ ಬೇರೆ. ಆದರೆ ಮನೆಯಿಂದ ಕೆಲಸ ಮಾಡುವುದರಿಂದ ಈ ಗೋಜಲೇ ಇರುವುದಿಲ್ಲ, ನಮಗೆ ಹಿತ ಎನಿಸುವ ಮನೆಯಲ್ಲಿ ಧರಿಸುವ ಬಟ್ಟೆಗಳಿಂದಲೇ ಕೆಲಸ ಮಾಡಬಹುದು.

ವೀಕೆಂಡ್ ಪ್ಲಾನ್
ಕೊರೊನಾ ಇದ್ದರೂ ಮುನ್ನೆಚ್ಚರಿಕೆ ವಹಿಸಿ ನಮಗೆ ಇಷ್ಟಬಂದಂತೆ ವೀಕೆಂಡ್ ಪ್ಲಾನ್ ಮಾಡಬಹುದು. ನಮ್ಮ ಹಳ್ಳಿಗಳಿಗೆ ಹೋಗಿ ಬರಬಹುದು. ಕಚೇರಿಯ ಯಾವುದೇ ಗೊಂದಲ ಇರುವುದಿಲ್ಲ, ನೆಮ್ಮದಿಯಾಗಿ ವಾರಾಂತ್ಯವನ್ನು ಕಳೆಯಬಹುದು.

ಹಣ ಉಳಿಸಿ
ಕಚೇರಿಗೆ ಹೋಗುವ ವೇಳೆ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿತ್ಯ ಕನಿಷ್ಟ ಇಂತಿಷ್ಟು ಹಣ ಖರ್ಚಾಗುತ್ತಿರುತ್ತದೆ. ಸಹೋದ್ಯೋಗಿಗಳ ಜತೆ ಕಾಫಿ, ಸ್ನ್ಯಾಕ್ಸ್, ಕೆಲವು ದಿನ ಮಧ್ಯಾಹ್ನದ ಊಟಕ್ಕೆ ಹೀಗೆ ಒಂದಿಲ್ಲೊಂದು ಕಾರಣದಿಂದ ಹಣ ಖರ್ಚಾಗುತ್ತಿರುತ್ತದೆ. ಅಲ್ಲದೇ, ಹೊರಗಿನ ತಿಂಡಿಯಿಂದ ಅನಾರೋಗ್ಯ ಸಹ ಕಾಡುತ್ತದೆ. ಆದರೀಗ ಮನೆಯಿಂದ ಕೆಲಸ ಮಾಡುವುದರಿಂದ ನಿತ್ಯ ಮನೆಯಲ್ಲೇ ತಿಂಡಿ, ಊಟ ಎಲ್ಲವನ್ನೂ ಮಾಡಬಹುದು. ಹಣ ಉಳಿಸಬಹುದು, ಸ್ನೇಹಿತರ ಜತೆ ಹೊರಗೆ ಹೋಗಿ ಖರ್ಚಾಗುವುದು ಸಹ ತಪ್ಪುತ್ತದೆ.

ಪ್ರೀತಿಪಾತ್ರರ ಜೊತೆ ಸಮಯ ಕಳೆಯಬಹುದು
ಮೊದಲೆಲ್ಲಾ ಮಕ್ಕಳು, ಮಡದಿ, ಪತಿ, ಪೋಷಕರ ಜತೆ ಸಮಯ ಕಳೆಯಲು ಸಾಕಷ್ಟು ಒದ್ದಾಡಬೇಕಿತ್ತು. ವಾರಾಂತ್ಯಕ್ಕೆ ಕಾಯಬೇಕಿತ್ತು ಅಥವಾ ರಜೆ ಹಾಕಿಕೊಳ್ಳಬೇಕಿತ್ತು. ಆದರೀಗ ಇದರ ಚಿತ್ರಣ ಸಂಪೂರ್ಣ ಬದಲಾಗಿದೆ, ದಿನವಿಡೀ ಮನೆಯಲ್ಲಿ ಮಕ್ಕಳು ಕುಟುಂಬದ ಜತೆ ಸಮಯ ಕಳೆಯಬಹುದು. ಎಲ್ಲದರ ನಡುವೆ ಕಚೇರಿ ಕೆಲಸವನ್ನು ಸಹ ನಿಭಾಯಿಸಬಹುದು.

ಮನೆಯಿಂದ ಕೆಲಸ ಮಾಡುವುದರಿಂದ ಆಗುವ ಅನಾನುಕೂಲಗಳು
ಕ್ರಮಬದ್ಧ ಕೆಲಸ ಕಷ್ಟ
ನಾವು ಕಚೇರಿಯಲ್ಲಿ ಮಾಡುವಂತೆ ಕ್ರಮಬದ್ಧವಾಗಿ ಕೆಲಸ ಮಾಡುವುದು ಕಷ್ಟ. ಕಚೇರಿಯಲ್ಲಿ ಕೆಲಸ ಮಾಡುವಷ್ಟು ಪರಿಣಾಮಕಾರಿಯಾಗಿ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದು ಎಂದರೆ ತಪ್ಪಾಗಲಾರದು. ನಿಮ್ಮ ವೇಳಾಪಟ್ಟಿ ಮತ್ತು ಪ್ರಕ್ರಿಯೆಗಳನ್ನು ಕಚೇರಿಯಲ್ಲಿ ಮಾಡುವಂತೆ ಕಚೇರಿಯ ಹೊರಗೆ ಮಾಡುವುದು ಕಠಿಣವಾಗಿರುತ್ತದೆ.

ಪ್ರಮುಖ ಕರೆಗಳು ಮಿಸ್ ಆಗಬಹುದು
ಓಹ್, ನನಗೆ ಕಚೇರಿಯ ಕರೆ ಇದೆ, ನಾನು ಮೀಟಿಂಗ್ ನಲ್ಲಿದ್ದೇನೆ, ಮಕ್ಕಳಿಗೆ ಕೊಠಡಿ ಒಳಗೆ ಬರದಂತೆ ನೋಡಿಕೊಳ್ಳಿ ಇಂಥಾ ಮಾತುಗಳನ್ನು ಕೆಲಸ ಮಾಡುವವರು ಮನೆಯಲ್ಲಿ ಆಡಿರುವುದು ಸರ್ವೇ ಸಾಮಾನ್ಯ. ಅಂದರೆ ಮನೆಯಲ್ಲಿ ಕಚೇರಿ ಕೆಲಸ ಮಾಡುವುದರಿಂದ ಸಂಪೂರ್ಣ ಗಮನವಿಟ್ಟು ಮಾಡಲಾಗುತ್ತಿಲ್ಲ, ಕೆಲವು ಬಾರಿ ಮನೆಯ ಕೆಲಸಗಳ ನಡುವೆ ಕಚೇರಿಯ ಪ್ರಮುಖವಾದ ಕರೆಗಳು, ಮೀಟಿಂಗ್ ತಪ್ಪಿಹೋಗಬಹುದು.

ಬೇಸರ/ಏಕಾಂತ
ಮನೆಯಲ್ಲೇ ಕೆಲಸ ಮಾಡುವುದರಿಂದ ಕೆಲವು ಬಾರಿ ಏಕಾಂತ ಕಾಡಬಹುದು. ಕಚೇರಿಯಲ್ಲಾದರೆ ಸಹೋದ್ಯೋಗಿಗಳ ಜತೆ ಸಮಯ ಕಳೆಯುವುದು, ಕೆಲವು ಸಮಯ ಹರಟುವುದು, ಒಟ್ಟಾಗಿ ಊಟ ಮಾಡುವುದು ಹೀಗೆ ಮನಸ್ಸಿಗೆ ಕೆಲಸದ ಒತ್ತಡ ಅಷ್ಟೇನು ಅನಿಸದು ಅಥವಾ ಕೆಲಸದ ಕುರಿತು ಇರುವ ಕೆಲವು ಗೊಂದಲಗಳನ್ನು ಸುಲಭವಾಗಿ ಪರಿಹಿರಿಕೊಳ್ಳಬಹುದು. ಆದರೆ ಮನೆಯಲ್ಲೇ ಕೆಲಸ ಮಾಡುವುದರಿಂದ ಇದೆಲ್ಲವೂ ಮಿಸ್ ಆಗ್ತಿದೆ.