For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಮಹಿಳೆಯರು ಹೀಗೆಲ್ಲಾ ಮಾಡಿದರೆ ಮನೆಗೆ ಬಡತನ ಅಂತೆ

|

ಒಬ್ಬ ಮಹಿಳೆ ತನ್ನ ಕುಟುಂಬವನ್ನು ಸರ್ವ ವಿಧದಲ್ಲೂ ಪಾಲನೆ ಮಾಡಬಲ್ಲಳು. ಆಕೆಯಿಂದಲೇ ಮನೆಗೆ ಶ್ರೀರಕ್ಷೆ, ಆಕೆಯಿಂದಲೇ ಕುಟುಂಬವೊಂದು ಪರಿಪೂರ್ಣ ಎನಿಸಿಕೊಳ್ಳುವುದು. ಮನೆಯಲ್ಲಿ ನೆಮ್ಮದಿ ನೆಲೆಸುವುದು. ಮನೆಯ ಪ್ರತಿಯೊಂದು ವಿಷಯದಲ್ಲೂ ಆಕೆ ಬಹಳಷ್ಟು ಮುತುವರ್ಜಿ ವಹಿಸುತ್ತಾಳೆ.

ಹೆಣ್ಣು ಹೇಗೆ ಕುಟುಂಬಕ್ಕೆ ಬೆನ್ನೆಲುಬೋ ಹಾಗೇ ಕುಟುಂಬದ ತೊಡಕೂ ಆಗಬಹುದು! ಹೆಣ್ಣು ಮುನಿದರೆ ಮಾರಿ ಒಲಿದರೆ ನಾರಿ ಎಂಬ ಮಾತನ್ನು ಕೇಳಿಲ್ಲವೇ?! ಆದರೆ ಹೆಣ್ಣು ನಾರಿಯಾಗಿ ಒಲಿಯುವುದೇ ಜಾಸ್ತಿ! ಆಕೆ ವಾಸ್ತುವನ್ನು ಅನುಸರಿಸುವುದರ ಮೂಲಕ ಕೂಡ ಮನೆಗೆ ಶೋಭೆಯನ್ನು ತರಬಲ್ಲಳು.

ವಾಸ್ತು ಶಾಸ್ತ್ರದ ಪ್ರಕಾರ ಮಹಿಳೆ ಮನೆಯಲ್ಲಿ ಇಂತಹ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಆ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಾದರೆ ಅದ್ಯಾವ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು ಎಂದು ತಿಳಿಯಲು ಮುಂದೆ ಓದಿ.

ಮನೆಯನ್ನು ಸ್ವಚ್ಛಗೊಳಿಸುವುದು

ಮನೆಯನ್ನು ಸ್ವಚ್ಛಗೊಳಿಸುವುದು

ಒಂದು ವೇಳೆ, ಮಹಿಳೆ ಮನೆಯನ್ನು ಸ್ವಚ್ಛಗೊಳಿಸುವುದಿದ್ದರೆ ಅದು ಸುರ್ಯೋದಯಕ್ಕಿಂತ ಮೊದಲೇ ಮಾಡಬೇಕು. ಸೂರ್ಯೋದಯದ ನಂತರ ಸ್ವಚ್ಛಗೊಳಿಸಲು ಆರಂಭಿಸಿದರೆ ಇದು ಮನೆಯ ಬಡತನಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.

ಸ್ನಾನ

ಸ್ನಾನ

ಸುರ್ಯೋದಯಕ್ಕಿಂತಲೂ ಮೊದಲು ಮನೆ ಸ್ವಚ್ಛಗೊಳಿಸಬೇಕು ಮತ್ತು ಸ್ವಚ್ಛಗೊಳಿಸಿದ ಕೂಡಲೇ ಮಹಿಳೆ ಸ್ನಾನ ಮಾಡಬೇಕು. ಅಪರಾಹ್ನದ ಕಾಲದಲ್ಲಿ ಅಂದರೆ ತಡವಾಗಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ ಮತ್ತು ಸಂಕಟ ಉಂಟಾಗುತ್ತದೆ.

ಅಡುಗೆ

ಅಡುಗೆ

ಕುಟುಂಬದ ಸದಸ್ಯರಿಗಾಗಿ ಅಡುಗೆ ಮಾಡುವುದು ಎಂದರೆ ದೇವರಿಗೆ ಅಡುಗೆ ಮಾಡಿದಂತೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮಹಿಳೆಯರು ಸ್ನಾನ ಮಾಡಿದ ನಂತರವಷ್ಟೇ ಅಡುಗೆ ಮನೆಯನ್ನು ಪ್ರವೇಶಿಸಬೇಕೆ ಹೊರತು ಸ್ನಾನಕ್ಕಿಂತ ಮೊದಲಲ್ಲ.

ಆಹಾರವನ್ನು ಸೇವಿಸುವುದು

ಆಹಾರವನ್ನು ಸೇವಿಸುವುದು

ಮಹಿಳೆ ದೇವರಿಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸಿ, ನೈವೇದ್ಯವನ್ನು ಅರ್ಪಿಸಬೇಕು, ನಂತರ ಆಹಾರವನ್ನು ಸೇವಿಸಬೇಕು. ಲಕ್ಷ್ಮೀದೇವಿಗೆ ನೈವೇದ್ಯವನ್ನು ಅರ್ಪಿಸುವ ಮೊದಲು ಆಹಾರವನ್ನು ಸೇವಿಸುವುದು ಮನೆಗೆ ಶ್ರೇಯಸ್ಸಲ್ಲ ಎಂದು ಹೇಳಲಾಗುತ್ತದೆ.

ಕಿರಿಕಿರಿಗೊಳ್ಳುವುದು / ಅಸಮಾಧಾನದಿಂದಿರುವುದು

ಕಿರಿಕಿರಿಗೊಳ್ಳುವುದು / ಅಸಮಾಧಾನದಿಂದಿರುವುದು

ಮಹಿಳೆ ಯಾವಾಗಲೂ ಕೋಪ ಮಾಡಿಕೊಂಡು ಅಥವಾ ಕಿರಿಕಿರಿಯುಂಟು ಮಾಡುತ್ತಿದ್ದರೆ ಆ ಮನೆ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಆದ್ದರಿಂದ, ಯಾವುದೇ ಕಾರಣವಿಲ್ಲದೆ ಮಹಿಳೆ ಕೋಪಗೊಳ್ಳುವುದನ್ನು ಅಥವಾ ಅಸಮಾಧಾನಗೊಳ್ಳುವುದನ್ನು ನಿಲ್ಲಿಸಬೇಕು. ಇದರಿಂದ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸುವುದು. ಮನೆಯಲ್ಲಿ ಸಂಪತ್ತನ್ನು ತರುವ ಇತರ ಕೆಲವು ವಾಸ್ತು ಸಲಹೆಗಳ ಬಗ್ಗೆ ಈಗ ಇನ್ನಷ್ಟು ತಿಳಿದುಕೊಳ್ಳೋಣ.

ಕೂದಲು ಬಾಚುವುದು

ಕೂದಲು ಬಾಚುವುದು

ಸೂರ್ಯಾಸ್ತದ ನಂತರ ಬರುವುದು ಕೆಟ್ಟ ವಾಸ್ತು ಎಂದು ಹೇಳಲಾಗುತ್ತದೆ. ಸಂಜೆ ಹೊತ್ತಿನಲ್ಲಿ ನಿಮ್ಮ ಕೂದಲನ್ನು ಬಾಚಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾದೀತು!

ನೀರಿನ ಮೂಲ

ನೀರಿನ ಮೂಲ

ಮನೆಯ ನೈಋತ್ಯ ದಿಕ್ಕಿನಲ್ಲಿ ಈಜುಕೊಳ ಅಥವಾ ಕೊಳದಂತಹ ಯಾವುದೇ ಜಲಮೂಲವನ್ನು ನಿರ್ಮಿಸಬೇಡಿ. ಇದು ಮನೆಯಲ್ಲಿ ಬಡತನ ಮತ್ತು ಸಂಕಟವನ್ನು ಉಂಟುಮಾಡುತ್ತದೆ.

ನಗದು ಪೆಟ್ಟಿಗೆ (ಲಾಕರ್)

ನಗದು ಪೆಟ್ಟಿಗೆ (ಲಾಕರ್)

ನಿಮ್ಮ ನಗದು ಪೆಟ್ಟಿಗೆ (ಲಾಕರ್) ಯನ್ನು ಮನೆಯ ಉತ್ತರ ದಿಕ್ಕಿಗೆ ತೆರೆದುಕೊಳ್ಳುವ ರೀತಿಯಲ್ಲಿ ಇರಿಸಿ. ಜೊತೆಗೆ ಕುಬೇರನ ಚಿತ್ರವನ್ನು ನಗದು ಪೆಟ್ಟಿಗೆಯಲ್ಲಿ ಇಡುವುದು ಮನೆಯಲ್ಲಿ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಬೆಳಕಿನ ಕಿರಣಗಳು/ ಮಂದ ಬೆಳಕು

ಬೆಳಕಿನ ಕಿರಣಗಳು/ ಮಂದ ಬೆಳಕು

ನಿಮ್ಮ ನಗದು ಪೆಟ್ಟಿಗೆಯನ್ನು ಪ್ರಕಾಶಮಾನವಾದ ಬೆಳಕು ಅಥವಾ ಮಂದ ಬೆಳಕಿನಲ್ಲಿ ಇರಿಸದಿರಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಸಂಪತ್ತನ್ನೂ ಕಳೆದುಕೊಳ್ಳುವ ಆಪತ್ತು ಎದುರಾಗಬಹುದು.

ಕನ್ನಡಿ ಇರಿಸಿ

ಕನ್ನಡಿ ಇರಿಸಿ

ಮನೆಯಲ್ಲಿ ಹೆಚ್ಚಿನ ಸಂಪತ್ತನ್ನು ಆಕರ್ಷಿಸುವ ಮತ್ತೊಂದು ವಾಸ್ತು ಮಾಹಿತಿಯೆಂದರೆ, ನಿಮ್ಮ ನಗದು ಪೆಟ್ಟಿಗೆಯ ಮುಂದೆ ಕನ್ನಡಿಯೊಂದನ್ನು, ನಗದು ಪೆಟ್ಟಿಗೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇಡುವುದು. ಹಾಗೆ ಮಾಡುವುದರಿಂದ ನಿಮ್ಮ ಸಂಪತ್ತು ದ್ವಿಗುಣವಾಗುವುದು.

ಅಸ್ತವ್ಯಸ್ತಗೊಳಿಸದಿರುವುದು

ಅಸ್ತವ್ಯಸ್ತಗೊಳಿಸದಿರುವುದು

ನಿಮ್ಮ ಇಡೀ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇಡಬೇಕು. ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗಿರದಂತೆ ನೋಡಿಕೊಳ್ಳಬೇಕು. ಈ ಸ್ಥಳದಲ್ಲಿ ಮೆಟ್ಟಿಲುಗಳನ್ನೂ ಕೂಡ ನಿರ್ಮಾಣ ಮಾಡಬಾರದು.

ಮನಿ ಪ್ಲಾಂಟ್ (ಸಸ್ಯಗಳು)

ಮನಿ ಪ್ಲಾಂಟ್ (ಸಸ್ಯಗಳು)

ಕೆಲವು ಒಳಾಂಗಣ ಸಸ್ಯಗಳು ಮತ್ತು ಮನಿ ಪ್ಲಾಂಟ್ ಗಳನ್ನು ಮನೆಯ ನೈಋತ್ಯ ಭಾಗದಲ್ಲಿ ಇರಿಸಿ. ಇದು ಮನೆಯಲ್ಲಿ ಸಂಪತ್ತಿನ ಒಳಹರಿವನ್ನು ಸ್ಥಿರಗೊಳಿಸುತ್ತದೆ ಮತ್ತು ಬಡತನವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮನೆಯ ಕೇಂದ್ರ

ಮನೆಯ ಕೇಂದ್ರ

ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಮನೆಯ ಮಧ್ಯದಲ್ಲಿ ಏನನ್ನೂ ನಿರ್ಮಿಸಬೇಡಿ. ಆದಾಗ್ಯೂ, ನೀವು ಇಲ್ಲಿ ದೇವಾಲಯವನ್ನು ನಿರ್ಮಿಸಬಹುದು.

ಅಲಂಕಾರಕಗಳು

ಅಲಂಕಾರಕಗಳು

ಮನೆಯ ಪ್ರವೇಶದ್ವಾರದ ಬಗ್ಗೆ ಬಂದಾಗ, ಅದನ್ನು ನಿಮಗೆ ಸಾಧ್ಯವಾದಷ್ಟು ಸುಂದರವಾಗಿ ಮತ್ತು ಒಪ್ಪಟವಾಗಿರಿಸಿ. ಹೆಚ್ಚು ಸಮೃದ್ಧಿಯನ್ನು ಆಕರ್ಷಿಸಲು ಸ್ವಸ್ತಿಕದಂತಹ ಕೆಲವು ಶುಭ ಚಿಹ್ನೆಗಳನ್ನು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ.

ಒಟ್ಟಿನಲ್ಲಿ ಮನೆಯ ಶ್ರೇಯಸ್ಸು, ಉದ್ಧಾರಕ್ಕೆ ಮಹಿಳೆಯರು ತಮ್ಮ ಪರಿಶ್ರಮದೊಂದಿಗೆ ದೈನಂದಿನ ಜೀವನದಲ್ಲಿ ವಾಸ್ತುವನ್ನು ಅನುಸರಿಸುವುದು ಕೂಡ ಅತ್ಯಂತ ಮುಖ್ಯ.

Read more about: ಮನೆ ವಾಸ್ತು home
English summary

According To Vaastu Woman Should Not Do These Things

Here we are discussing about according to Vaastu if a woman does these things it will lead to poverty in the house. Read more.
X
Desktop Bottom Promotion