For Quick Alerts
ALLOW NOTIFICATIONS  
For Daily Alerts

23-5-2019- ಗುರುವಾರದ ದಿನ ಭವಿಷ್ಯ

By ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.
|

ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807...

ಮೇಷ (23 ಮೇ 2019)

ಮೇಷ (23 ಮೇ 2019)

ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವು ವಿಚಾರಗಳಲ್ಲಿ ಮನೆಯ ಸದಸ್ಯರ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು. ಸಮಾಜದಲ್ಲಿ ಸನ್ಮಾನಗಳು ದೊರೆಯುವವು. ಎಲ್ಲದಕ್ಕೂ ಧಾವಂತ ಮಾಡುವುದರಿಂದ ಅಮೂಲ್ಯ ವಿಚಾರಗಳನ್ನು ಕಳೆದುಕೊಳ್ಳುವಿರಿ. ಕೂತು ಮಲಗುವ ವ್ಯವಧಾನ ಇಟ್ಟುಕೊಂಡಲ್ಲಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆತುರದಿಂದ ಕಾರ್ಯ ಹಾನಿ ಆಗುವುದು. ದೃಢ ಮನಸ್ಕರಾದ ನಿಮಗೆ ನಿಮ್ಮದೇ ಆದ ದಾರಿ ಸ್ಪಷ್ಟವಿರುವಾಗ ಮನಸ್ಸಿನ ಹೊಯ್ದಾಟಗಳಿಗೆ ದಾರಿ ಮಾಡಿ ಕೊಡದಿರಿ. ನೀವು ಇಚ್ಛಿಸಿದಂತೆ ಕೆಲಸಗಾರರು ನಿಮಗೆ ಸಹಾಯ ಮಾಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. 9845743807 ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಯಾವುದೋ ಮಾತಿನ ಭರದಲ್ಲಿ ನಿಮ್ಮ ಸ್ನೇಹಿತರಿಗೆ ಆಡಿದ ಮಾತಿನಿಂದ ಆತನು ನಿಮ್ಮಿಂದ ವಿಮುಖನಾಗಿರುವನು. ಈ ಬಗ್ಗೆ ಆತನೊಟ್ಟಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ. ನಿಮ್ಮ ಮೇಲಿನ ತಪ್ಪು ಭಾವನೆಯನ್ನು ಹೋಗಲಾಡಿಸಿಕೊಳ್ಳಿ. ಸತ್ಯವಾದುದು ಯಾವಾಗಲೂ ಕಠೋರವಾಗಿರುತ್ತದೆ. ಅದು ನಿಮ್ಮ ಗೌರವ ಘನತೆಯನ್ನು ಎತ್ತಿಹಿಡಿಯುವುದು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ. ನೀವು ಮಾಡಬೇಕಾಗಿರುವ ಕಾರ್ಯದ ರೂಪರೇಷೆಯನ್ನು ನಿಮ್ಮ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಕಾರ್ಯ ಸುಲಭವಾಗಿ ಆಗುವುದು. ಆತನು ನಿಮಗೆ ಪೂರಕವಾದ ಸಲಹೆ ಸಹಕಾರಗಳನ್ನು ನೀಡುವರು. 9845743807 ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಭಗವಂತನ ಸೃಷ್ಟಿಯಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಭಾವನೆ ತರವಲ್ಲ. ಸಮಯ ಬಂದರೆ ಸಣ್ಣ ಹುಲ್ಲುಕಡ್ಡಿ ಯಿಂದಲೂ ಸಹಾಯ ದೊರೆಯುವುದು. ಹಾಗಾಗಿ ಯಾರನ್ನು ದೂರ ಮಾಡಿಕೊಳ್ಳದಿರಿ.ಎಷ್ಟೇ ತಾಳ್ಮೆಯಿಂದ ಇರಲು ಪ್ರಯತ್ನಿಸಿದರೂ ಈ ದಿನದ ಸನ್ನಿವೇಶ ನಿಮ್ಮನ್ನು ಕೆರಳುವಂತೆ ಮಾಡುವುದು. ವಿನಾಕಾರಣ ಮನೆ ಸದಸ್ಯರ ಮೇಲೆ ಅಸಹನೆ, ಕೋಪ ಕೂಗಾಟಗಳನ್ನು ಮಾಡದಿರಿ. ಕುಲದೇವರನ್ನು ಮನಸಾ ಸ್ಮರಿಸಿ. ಎಲ್ಲಾ ಕಾರ್ಯಗಳು ಸುಗಮವಾಗಿ ಆಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಬಂಧು ಬಾಂಧವರು ಮನೆಗೆ ಬರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡುವುದು. 9845743807 ಅದೃಷ್ಟ ಸಂಖ್ಯೆ:9

ಕಟಕ

ಕಟಕ

ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಹೊಸ ಕೆಲಸದ ಕಾರ್ಯ ಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಅನವಶ್ಯಕವಾಗಿ ಕೆಲವರನ್ನು ಹೆಗಲಿಗೇರಿಸಿಕೊಳ್ಳುವ ಅಚಾತುರ್ಯ ಖಂಡಿತ ಬೇಡ. ಅಪರಿಚಿತರೊಡನೆ ಸಲುಗೆ ಬೇಡ. ಹಣಕಾಸು ಸಕಾಲದಲ್ಲಿ ಬರುವುದರಿಂದ ಒಳಿತಾಗುವುದು. ಅಂತರಂಗ, ಬಹಿರಂಗ ಗಳೆರಡನ್ನೂ ಗ್ರಹಿಸಿ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಇದರಿಂದ ಉತ್ಕರ್ಷಕ್ಕೆ ದಾರಿ ಉಂಟಾಗುವುದು. ಮನೆಯ ಸದಸ್ಯರೊಡನೆ ಸೌಹಾರ್ದತೆಯಿಂದ ಇರುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:9

ಸಿಂಹ

ಸಿಂಹ

ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಒಳಿತು. ಇದರಿಂದ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಎಲ್ಲರನ್ನು ನಂಬಿ ಮೋಸ ಹೋಗದಿರಿ. ಕೆಲವೇ ಕೆಲವು ಆಪ್ತ ಸ್ನೇಹಿತರನ್ನು ಇಟ್ಟುಕೊಳ್ಳಿರಿ. ನಿರಂತರವಾದ ನಿಮ್ಮ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಹರಸುತ್ತಿದ್ದವರ ನೇರ ಭೇಟಿಯಿಂದಾಗಿ ಮನಸ್ಸು ಪ್ರಫುಲ್ಲವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವುದು. ಮಕ್ಕಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಸರು ಮಾಡುವರು. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಕಂಡು ಬರುವುದು. ಉತ್ಸಾಹದ ಭರದಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯನ್ನು ವ ಕ್ತಪಡಿಸುವ ಸಂದರ್ಭದಲ್ಲಿ ಅನ ಮಕ್ಕಳನ್ನು ಅಪಮಾನಗೊಳಿಸದಿರಿ. ಇದರಿಂದ ಉಭಯ ತರರಿಗೂ ಸಂತೋಷ ಉಂಟಾಗುವುದು.9845743807 ಅದೃಷ್ಟ ಸಂಖ್ಯೆ:8

ಕನ್ಯಾ

ಕನ್ಯಾ

ಪ್ರಮುಖ ವಿಚಾರದಲ್ಲಿ ನೀವೋಬ್ಬರೇ ನಿರ್ಧಾರ ತಳೆಯುವ ಬದಲು ಹಿರಿಯರ ಅಥವಾ ಸಂಸ್ಥೆಯ ಇತರೇ ಸದಸ ರ ಅಭಿಪ್ರಾಯವನ್ನು ತಿಳಿದು ಕಾರ್ಯ ಪ್ರವೃತ್ತರಾಗಿರಿ. ಇದರಿಂದ ಕಾರ್ಯ ಸಾಧುವಾಗುವುದು ಮತ್ತು ನಿಮ್ಮ ಗೌರವ ಹೆಚ್ಚಾಗುವುದು. ಧಾರ್ಮಿಕ ಕಾರ್ಯಕರ್ತರಿಗೆ ಹೆಚ್ಚಿನ ಅನುಕೂಲ ವಾಗುವುದು. ನಿಮ್ಮ ಬೆಂಬಲಿಗರು ನಿಮ್ಮನ್ನು ಕೊಂಡಾಡುವರು. ಒಂದು ಅಪೂರ್ವವಾದ ಕಾರ್ಯ ಒಂದಕ್ಕೆ ಇಂದು ಮಹತ್ತರ ಪತ್ರಕ್ಕೆ ಸಹಿ ಹಾಕುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮ ವಾಗಿರುವುದು. ಕೌಟುಂಬಿಕ ಭಿನ್ನಾಭಿಪ್ರಾಯಗಳು ಅಂತ ಕಾಣುವವು. ಹೊಸದೇ ಆದ ಕಾರ್ಯಕ್ಕೆ ಚಾಲನೆ ಸಿಗುವುದು. ಆಸ್ತಿಗೆ ಸಂಬಂಧಪಟ್ಟಂತೆ ಒಂದು ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಇದರಿಂದ ಬಹುತೇಕ ಸಾಲಬಾಧೆ ತೀರುವುದು. 9845743807 ಅದೃಷ್ಟ ಸಂಖ್ಯೆ:7

ತುಲಾ

ತುಲಾ

ಅನೇಕ ಉಪಯುಕ್ತ ಯೋಜನೆಗಳೊಡನೆ ಮೇಲಾಧಿಕಾರಿಗಳನ್ನು ಪ್ರಸನ್ನಗೊಳಿಸುವಿರಿ. ಪದೋನ್ನತೆಗೆ ದಾರಿ ಇದೆ. ಹಾಗಂತ ಹಳೆಯ ತಪ್ಪುಗಳನ್ನು ಪುನಃ ಪುನಃ ಮಾಡುವುದು ಸರಿಯಲ್ಲ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದಿರಿ. ಮನೆಯಿಂದ ಹೊರಗಡೆ ಹೊರಡುವಾಗ ಮಾತಾ ದುರ್ಗಾದೇವಿಯನ್ನು ಸ್ಮರಿಸಿಕೊಳ್ಳಿರಿ. ವಾಹನ ಚಲಾಯಿಸುವಾಗ ಬಹು ಎಚ್ಚರಿಕೆ ಅಗತ . ಪ್ರಯಾಣದ ಸಮಯದಲ್ಲಿ ಸ್ವಲ್ಪ ಉದ್ದಿನಕಾಳನ್ನು ಇಟ್ಟುಕೊಳ್ಳಿರಿ. ಇದರಿಂದ ಮೇಜರ್‌ ಅಪಘಾತದಿಂದ ರಕ್ಷ ಣೆ ದೊರೆಯುವುದು. ಮನಸ್ಸಿನ ದುಗುಡವನ್ನು ದೂರ ಮಾಡಿಕೊಳ್ಳಿರಿ. ಹೊಸದೇ ಆದ ಯೋಜನೆಗಳಿಗೆ ಆರ್ಥಿಕ ನೆರವು ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಹಳೆಯ ಸ್ನೇಹಿತರು ಇಂದು ನಿಮ್ಮನ್ನು ಭೇಟಿ ಮಾಡುವರು. 9845743807 ಅದೃಷ್ಟ ಸಂಖ್ಯೆ:6

ವೃಶ್ಚಿಕ

ವೃಶ್ಚಿಕ

ಆಕಸ್ಮಿಕವಾದ ಧನಲಾಭ ಉಂಟಾಗುವುದು. ವೃತ್ತಿಯಲ್ಲಿ ಹಲ-ಕೆಲವು ಮಾರ್ಪಾಟುಗಳು ಉಂಟಾಗುವುದು. ಇದರಿಂದ ನಿಮಗೆ ವೃತ್ತಿಯಲ್ಲಿ ಹೆಚ್ಚಿನ ವಿಶ್ವಾಸ ಮೂಡುವುದು. ಸಂಬಂಧಗಳು ಉತ್ತಮಗೊಳ್ಳುವುದು. ಬೇರೆ ಮೂಡಿನಲ್ಲಿರುವ ಮೇಲಾಧಿಕಾರಿಗಳ ಸಂಗಡ ಮಾತನಾಡುವಾಗ ಹುಷಾರಾಗಿರಿ. ಈದಿನ ಸಾಧ ವಾದರೆ ಮೇಲಾಧಿಕಾರಿಗಳ ಭೇಟಿಯನ್ನೆ ಮಾಡದಿರಿ. ಅವರು ಶಾಂತಮನಸ್ಕರಾಗಿದ್ದಾಗ ಅವರೇ ನಿಮ್ಮನ್ನು ಕರೆದು ಮಾತನಾಡಿಸುವರು. ವಿವಾದಾತ್ಮ ಸಮಸೆ ಗಳು ಸದ ಎದುರಾಗಲಿವೆ. ಆಂಜನೇಯ ಸ್ತೋತ್ರ ಪಠಿಸಿರಿ. ಮನೆಯ ಸದಸ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಹಣಕಾಸಿನ ಪರಿಸ್ಥಿತಿ ಈದಿನ ಅಷ್ಟೇನೂ ಉತ್ತಮವಾಗಿರುವುದಿಲ್ಲ. ತಾಳ್ಮೆಯಿಂದ ಇರಿ.9845743807 ಅದೃಷ್ಟ ಸಂಖ್ಯೆ:7

ಧನುಸ್ಸು

ಧನುಸ್ಸು

ಅಮೂಲ್ಯವಾದ ವಸ್ತುಗಳನ್ನು ಸಂರಕ್ಷಿಸಿಕೊಳ್ಳಿ. ಕೆಲವು ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇದೆ. ಅಂಥ ವಸ್ತುಗಳನ್ನು ಜಾಗ್ರತೆಯಾಗಿ ಎತ್ತಿಡಿ. ತಾಯಿಯ ಆರೋಗ್ಯದ ಸಲುವಾಗಿ ಖರ್ಚು ಮಾಡ ಬೇಕಾಗುವುದು. ಹಿಂದೆ ಇದ್ದ ವೈಭವವನ್ನು ನೆನೆದು ಹಿತ್ತಲಲ್ಲಿ ಅತ್ತರು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ದೇಹದಲ್ಲಿ ಕಸುವಿದ್ದಾಗ ಮಾಡಿದ ಕೆಲಸಗಳು ನೆನಪಾಗುವುದು. ಇಂದಿನ ಪರಿಸ್ಥಿತಿಗೂ ಅಂದಿನ ಸ್ಥಿತಿಗೂ ಹೋಲಿಸಿ ನೋಡುವುದು ತರವಲ್ಲ.ಹಣಕಾಸಿನ ವಿಷಯದಲ್ಲಿ ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೊಡ್ಡ ಪ್ರಮಾಣದ ಉಳಿತಾಯ ಯೋಜನೆ ಇದ್ದಲ್ಲಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಿ.9845743807 ಅದೃಷ್ಟ ಸಂಖ್ಯೆ:8

ಮಕರ

ಮಕರ

ಹೊರಗಿನ ವ್ಯವಹಾರದಲ್ಲಿ ಬರಿ ಮೋಸ ಕಪಟಗಳು ತಾಂಡವಾಡುತ್ತಿವೆ. ಹಾಗಾಗಿ ಅಂತರಂಗದ ನುಡಿಗಳನ್ನು ಆಲಿಸಿ ಕಾರ್ಯ ಪ್ರವೃತ್ತರಾಗಿ. ಪರಿಚಯವಿಲ್ಲದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸದಿರುವುದು ಒಳ್ಳೆಯದು. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರ ಮೇಲೂ ಅನುಮಾನ ತಾಳುವುದು ಸರಿಯಲ್ಲ. ಅನ್ಯರ ನಾಡಿ ಮಿಡಿತವನ್ನು ಅರಿತ ನಿಮಗೆ ಯಾರ ಜತೆ ಹೇಗೆ ವರ್ತಿಸ ಬೇಕೆಂಬುದು ತಿಳಿದೇ ಇದೆ. ಅದರಂತೆ ನಡೆಯುವುದು ಒಳ್ಳೆಯದು. ಅನೇಕ ದಿನಗಳ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ತರ ತಿರುವು ಕಂಡುಬರುವುದು. ಮುಂದಿನ ದಿನಗಳಲ್ಲಿ ಬೃಹತ್‌ ಪ್ರಮಾಣದ ಕಾರ್ಯ ಯೋಜನೆಗೆ ಚಾಲನೆ ಸಿಗುವುದು ಮತ್ತು ಗೌರವ ಸ್ಥಾನ ಹೊಂದುವಿರಿ. 9845743807 ಅದೃಷ್ಟ ಸಂಖ್ಯೆ:4

ಕುಂಭ

ಕುಂಭ

ಅತ್ಯಂತ ನಂಬಿಕಸ್ಥ ಬಂಧುಗಳು ಇಲ್ಲವೆ ಸ್ನೇಹಿತರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದೇವರು ಒಳಿತನ್ನು ಮಾಡುವನು. ನಿಮ್ಮಲ್ಲಿ ಅತ್ಯುತ್ಸಾಹ ತುಂಬಿ ತುಳುಕುತ್ತಿದ್ದರೂ ಕ್ರಿಯಾಶೀಲತೆಗೆ ಬೇಕಾದ ತುಡಿತ ನಿಮ್ಮಲ್ಲಿಲ್ಲ. ಅಲ್ಲದೆ ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಸ್ನೇಹಿತರು, ಬಂಧುಗಳೇ ಅಡ್ಡ ಹಾಕುವುದ ರಿಂದ ತೊಂದರೆ ಎದುರಿಸಬೇಕಾಗುವುದು. ಯಾವುದೇ ಚಿಕ್ಕ ಕಾರ್ಯ ಮಾಡುವುದಾದರು ಸಹ ಅದಕ್ಕೆ ಪೂರ್ವಭಾವಿಯಾಗಿ ಅದರ ಸಾಧಕ ಬಾಧಕಗಳನ್ನುತಿಳಿದು ಮುಂದುವರಿಯುವುದು ಒಳ್ಳೆಯದು. ಉತ್ತಮ ಸಮಯವನ್ನು ಕಳೆಯುವಿರಿ. 9845743807 ಅದೃಷ್ಟ ಸಂಖ್ಯೆ:2

ಮೀನ

ಮೀನ

ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಖಂಡಿತ. ಆದರೆ ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ. ಇದರಿಂದ ಸರಳವಾಗಿ ಆಗುತ್ತಿದ್ದ ಕೆಲಸಕ್ಕೂ ಬಹಳ ದಿನ ಕಾಯುವಂತಹ ಪರಿಸ್ಥಿತಿ ಬರುವುದು. ಆಂಜನೇಯ ಸ್ತೋತ್ರ ಪಠಿಸಿ. ವಿದ್ಯೆಯ ಸಂಪತ್ತನ್ನು ಹೊಂದಿರುವ ನಿಮ್ಮನ್ನು ಕಂಡರೆ ಕೆಲವರಿಗೆ ಗೌರವ, ಕೆಲವರಿಗೆ ಅಸೂಯೆ. ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಭಗವಂತ ನಿಮ್ಮ ಸಹಾಯಕ್ಕೆ ಬಂದು ನಿಲ್ಲುವನು. ನೀವು ನಡೆಯುವ ದಾರಿ ಉತ್ತಮವಾಗಿರುವುದು. ಅನವಶ್ಯಕವಾಗಿ ಗೊಂದಲಕ್ಕೆ ಬಿದ್ದು ನಡೆಯುವ ದಾರಿಯನ್ನು ಬದಲಾಯಿಸದಿರಿ. ಆತ್ಮೀಯ ಗೆಳೆಯರ ಭೇಟಿಯು ನಿಮಗೆ ಆನಂದವನ್ನುಂಟು ಮಾಡುತ್ತದೆ.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

English summary

your daily horoscope 23 May 2019

Know what astrology and the planets have in store for you today. Choose your zodiac sign and read the details..
Story first published: Thursday, May 23, 2019, 4:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more