For Quick Alerts
ALLOW NOTIFICATIONS  
For Daily Alerts

ಆಘಾತಕಾರಿಯನ್ನು ಉಂಟುಮಾಡುವಂತಹ ವಿಲಕ್ಷಣ ವ್ಯಸನಗಳು

|

ವ್ಯಸನ ಎನ್ನುವುದು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಬದಲಿಸುವುದು. ಕೆಲವು ವ್ಯಸನಕ್ಕಾಗಿ ವ್ಯಕ್ತಿ ತನ್ನ ವರ್ತನೆಯನ್ನು ಬದಲಿಸುವ ಸಾಧ್ಯತೆಗಳು ಇರುತ್ತವೆ. ವ್ಯಸನವನ್ನು ಮಾನಸಿಕ ಅಸ್ವಸ್ಥತೆಯೆಂದು ವ್ಯಾಖ್ಯಾನಿಸಬಹುದು. ಒಮ್ಮೆ ವ್ಯಸನಕ್ಕೆ ಬಲಿಯಾದ ವ್ಯಕ್ತಿಯು ಅಷ್ಟು ಸುಲಭವಾಗಿ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಚಟ ಅಥವಾ ವ್ಯಸನ ಎನ್ನುವುದು ಮಾನಸಿಕ ಅಸ್ವಸ್ಥತೆ ಎಂದು ಹೇಳಲಾಗುವುದು. ವ್ಯಸನದಲ್ಲೂ ಒಳ್ಳೆಯ ವ್ಯಸನ ಹಾಗೂ ಕೆಟ್ಟ ವ್ಯಸನಗಳು ಇರುತ್ತವೆ. ಉತ್ತಮ ವ್ಯಸನಗಳು ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಅದೇ ವ್ಯಸನವು ಒಂದು ಮಿತಿಯನ್ನು ಮೀರಿದರು ಸಹ ಅದು ಆರೋಗ್ಯದ ಮೇಲೆ ತೊಂದರೆಯನ್ನುಂಟುಮಾಡುವುದು.

ಕೆಟ್ಟ ವ್ಯಸನವು ವ್ಯಕ್ತಿಯು ದಾರಿ ತಪ್ಪುವಂತೆ ಮಾಡುವುದು. ಅಲ್ಲದೆ ಅವುಗಳ ಸೇವನೆಯಿಂದ ಕೆಲವು ರಾಸಾಯನಿಕವು ಬಿಡುಗಡೆಯಾಗುತ್ತವೆ. ಅವು ಮೆದುಳಿಗೆ ಸಂತೋಷವನ್ನು ಉಂಟುಮಾಡುತ್ತವೆ. ಹಾಗಾಗಿ ವ್ಯಕ್ತಿ ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಅಷ್ಟು ಸುಲಭವಾಗಿ ಹೊರ ಬರಲು ಸಾಧ್ಯವಿಲ್ಲ. ಅದಕ್ಕಾಗಿಯೇ ವ್ಯಸನವನ್ನು ಹೊಂದುವ ಮೊದಲು ನಾವು ಕೈಗೊಳ್ಳುವ ವ್ಯಸನ ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿರುತ್ತದೆಯೇ ಎನ್ನುವುದನ್ನು ಮೊದಲು ಮನಗೊಳ್ಳಬೇಕು. ಒಮ್ಮೆ ಅದರ ಜಾಲಕ್ಕೆ ಒಳಗಾದರೆ ಅದರಿಂದ ತಪ್ಪಿಸಿಕೊಳ್ಳಲು ಅಥವಾ ಹೊರ ಬರಲು ಕಷ್ಟವಾಗುವುದು.

ವ್ಯಸನಗಳಲ್ಲೂ ನಾವು ಊಹಿಸಲು ಅಸಾಧ್ಯವಾಗಿರುವಂತಹ ವ್ಯಸನಗಳಿರುತ್ತವೆ. ಅವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಹಾಗೂ ಆಘಾತಕಾರಿಯಾದಂತಹ ವ್ಯಸನಗಳಾಗಿರುತ್ತವೆ. ಕೆಲವು ವ್ಯಕ್ತಿಗಳು ಕೇಳಲು ಆಘಾತವನ್ನುಂಟುಮಾಡುವಂತಹ ವ್ಯಸನಗಳನ್ನು ಹೊಂದಿದ್ದಾರೆ. ನೀವು ಈ ರೀತಿಯ ವ್ಯಸನಿಗಳನ್ನು ನೋಡಿದ್ದೀರಾ? ಅಥವಾ ನಿಮಗೂ ಈ ವ್ಯಸನಗಳಲ್ಲಿ ಯಾವುದಾದರೂ ಒಂದು ವ್ಯಸನ ಇದೆಯೇ? ಆಘಾತಕಾರಿಯಾದಂತಹ ವ್ಯಸನಗಳು ಯಾವವು? ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮಾನವನ ರಕ್ತ ಕುಡಿಯುವುದು

ಮಾನವನ ರಕ್ತ ಕುಡಿಯುವುದು

ಪೆನ್ಸಿಲ್ವೇನಿಯಾ ಮೂಲದ ಮಹಿಳೆ ಜೂಲಿಯಾ ಕಳೆದ 30 ವರ್ಷಗಳಿಂದ ಪ್ರತಿದಿನ ಮನುಷ್ಯರ ರಕ್ತವನ್ನು ಕುಡಿಯುವ ಹವ್ಯಾಸವನ್ನು ಹೊಂದಿದ್ದಾಳೆ. ಅವಳು ಈ ಹವ್ಯಾಸವನ್ನು ಇಂದಿಗೂ ರೂಢಿಯಲ್ಲಿ ಇರಿಸಿಕೊಂಡಿದ್ದಾಳೆ. ಮನುಷ್ಯನ ರಕ್ತ ಕುಡಿಯುವುದರಿಂದ ಅತ್ಯಂತ ಸುಂದರವಾಗಿ ಇರುತ್ತಾರೆ ಎನ್ನುವುದನ್ನು ನಂಬಿದ್ದಾಳೆ. ಹಾಗಾಗಿಯೇ ಅವಳ ಈ ಆಘಾತಕಾರಿ ಹವ್ಯಾಸದ ಒಳಗೆ ಮುಳುಗಿದ್ದಾಳೆ.

ಬಿಸಿಲಲ್ಲಿ ದೇಹ ಒಣಗಿಸುವುದು

ಬಿಸಿಲಲ್ಲಿ ದೇಹ ಒಣಗಿಸುವುದು

ಕೆಲವು ಆರೋಗ್ಯಕರ ಸಂಗತಿಗಳ ಕಾರಣಕ್ಕೆ ಇಂದು ಅನೇಕ ಜನರು ಬಿಸಿಲಲ್ಲಿ ದೇಹವನ್ನು ಒಣಗಿಸುತ್ತಾರೆ. ತಿಂಗಳಿಗೆ 8 ರಿಂದ 10 ಬಾರಿ ಟ್ಯಾನಿಂಗ್ ಸಲೋನ್‍ಗಳಿಗೆ ಭೇಟಿ ನೀಡುವವರಿದ್ದಾರೆ. ಸೂರ್ಯನ ಕಿರಣವು ದೇಹಕ್ಕೆ ಅಗತ್ಯವಾದ ವಿಟಮಿನ್ ಅನ್ನು ನೀಡುತ್ತದೆ. ಅದೇ ಅತಿಯಾಗಿ ಬಿಸಿಲಲ್ಲಿ ದೇಹವನ್ನು ಒಣಗಿಸಿದರೆ ಅಥವಾ ಟ್ಯಾನಿಂಗ್ ಸಲೋನ್‍ಗಳಿಗೆ ಹೋಗುವುದು ಅತ್ಯಂತ ಆಘಾತಕಾರಿ ಹವ್ಯಾಸ.

Most Read: ಆಶ್ಚರ್ಯ ಹಾಗೂ ಅದ್ಭುತವನ್ನು ನೀಡುವ ಸೇತುವೆ ಚೀನಾದ ಗ್ಲಾಸಿನ ಸೇತುವೆ

ಮೂತ್ರ ಸೇವನೆ

ಮೂತ್ರ ಸೇವನೆ

ಜನರು ಹೊಂದಿರುವ ಅತ್ಯಂತ ಆಘಾತಕಾರಿ ಹವ್ಯಾಸಗಳಲ್ಲಿ ಮೂತ್ರ ಸೇವನೆಯೂ ಒಂದು. 50 ವರ್ಷದ ಮಹಿಳೆಯೊಬ್ಬಳು ತನ್ನ ಮೂತ್ರವನ್ನು ತಾನೇ ಸೇವಿಸುವುದಕ್ಕೆ ಹೆಚ್ಚು ಸಂತೋಷವನ್ನು ಅನುಭವಿಸುತ್ತಾಳೆ. ತಾನು ಹೊಂದಿರುವ ಈ ಹವ್ಯಾಸದಿಂದಲೇ ತನ್ನ ಕಣ್ಣು, ಚರ್ಮ ಹಾಗೂ ದೈಹಿಕ ಆರೋಗ್ಯವು ಅತ್ಯುತ್ತಮವಾಗಿರುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.

ಕೇಶವನ್ನು ಎಳೆದುಕೊಳ್ಳುವುದು

ಕೇಶವನ್ನು ಎಳೆದುಕೊಳ್ಳುವುದು

ಕೂದಲು ಎಳೆಯುವಿಕೆಯು ಉದ್ವೇಗ ನಿಯಂತ್ರಣ ಅಸ್ವಸ್ಥತೆ ಎಂದು ಕಂಡುಬರುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಜನರು ಯಾವುದೇ ದೇಹ ಭಾಗಗಳಿಂದ ತಮ್ಮ ಕೂದಲನ್ನು ಹಿಂತೆಗೆದುಕೊಳ್ಳುವ ಅಗಾಧ ಪ್ರಚೋದನೆಯನ್ನು ಹೊಂದಿರುತ್ತಾರೆ. ಕೆಲವು ಕೂದಲನ್ನು ಹಿಂತೆಗೆದುಕೊಳ್ಳುವವರೆಗೂ ಅವರು ಹೆಚ್ಚಿನ ಮಟ್ಟದ ಆತಂಕವನ್ನು ಅನುಭವಿಸುತ್ತಾರೆ.

ವೀಡಿಯೋ ಗೇಮ್ ಹವ್ಯಾಸ

ವೀಡಿಯೋ ಗೇಮ್ ಹವ್ಯಾಸ

ವೀಡಿಯೋ ಗೇಮ್ ಹವ್ಯಾಸವು ಒಂದು ಆಘಾತಕಾರಿ ಹವ್ಯಾಸ. ಈ ಹವ್ಯಾಸ ಅಥವಾ ಚಟಕ್ಕೆ ಒಳಗಾದವರು ಹೊರ ಬರಲು ಸಾಧ್ಯವಿಲ್ಲ. ಈ ಚಟ ಇರುವ ಜನರು ವಾಸ್ತವಿಕತೆ ಹಾಗೂ ನೈಜ ಸಂಬಂಧಗಳಿಗೆ ಬೆಲೆಕೊಡುವುದನ್ನು ಮರೆಯುತ್ತಾರೆ. ಸದಾ ಕಾಲ ಆಟದ ಲೋಕದಲ್ಲಿಯೇ ಮುಳುಗಿರುತ್ತಾರೆ.

ಗ್ಲಾಸ್ ತಿನ್ನುವುದು

ಗ್ಲಾಸ್ ತಿನ್ನುವುದು

ಹೈಲೋಪೋಜಿಯ ಎನ್ನುವುದು ಗಾಜನ್ನು ತಿನ್ನುವ ಹವ್ಯಾಸಕ್ಕೆ ಕರೆಯಲಾಗುವ ಹೆಸರು. ಗ್ಲಾಸ್ ತಿನ್ನುವ ವ್ಯಕ್ತಿಗಳು ಸದಾ ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಗಮನ ನೀಡುವುದಕ್ಕೆ ಮೀಸಲಾಗಿರುತ್ತಾರೆ. ಅವರಿಗೆ ವ್ಯಸನವನ್ನು ಬಿಡಲು ಸಾಕಷ್ಟು ಕಷ್ಟಪಡುವರು.

ಮಣ್ಣು ಅಥವಾ ಧೂಳನ್ನು ತಿನ್ನುವುದು

ಮಣ್ಣು ಅಥವಾ ಧೂಳನ್ನು ತಿನ್ನುವುದು

ಮಣ್ಣು ಅಥವಾ ಧೂಳನ್ನು ತಿನ್ನುವುದು ಗಂಭೀರವಾದ ವ್ಯಸನಗಳಲ್ಲಿ ಒಂದಾಗಿದೆ. ಇದನ್ನು ಪಿಕಾ ಡಿಸಾರ್ಡ್‍ರ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ವ್ಯಸನವು ಚಿಕ್ಕ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುವುದು. ಅವರಿಗೆ ಮಣ್ಣು ಅತ್ಯಂತ ರುಚಿಕರ ತಿನಿಸಾಗಿರುತ್ತದೆ.

Most Read: ದಟ್ಟ ಮಂಜಿನಲ್ಲಿ ಆರು ಕಿ.ಮೀ. ನಡೆದು ಮದುವೆ ಮಂಟಪ ತಲುಪಿದ ವರ!!

ಸೀಮೆ ಸುಣ್ಣ/ಚಾಕ್ ತಿನ್ನುವುದು:

ಸೀಮೆ ಸುಣ್ಣ/ಚಾಕ್ ತಿನ್ನುವುದು:

ಚಾಕ್ ತಿನ್ನುವುದು ಮಕ್ಕಳು ಮತ್ತು ವಯಸ್ಕರ ನಡುವೆ ಇರುವ ವ್ಯಸನಗಳಲ್ಲಿ ಒಂದು. ಈ ವ್ಯಸನವು ವಿಷಕಾರಿಯಾಗಿಲ್ಲದೆ ಇದ್ದರೂ, ಅದು ಅಪಾಯಕಾರಿ. ಸೀಮೆ ಸುಣ್ಣದ ಮಿಶ್ರಣದಲ್ಲಿ ಮತ್ತು ಚಾಕ್ ತಯಾರಿಸುವ ಸಮಯದಲ್ಲಿ ಕೆಲವು ರಾಸಾಯನಿಕ ಪದಾರ್ಥಗಳನ್ನು ಬೆರೆಸಲಾಗುವುದು. ಅವು ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಉಂಟುಮಾಡುವುದು.

English summary

Weird Addictions That Are Real

Addiction is said to be a mental illness. While you may think that people are just doing it for the sake of attention, there are those who are actually addicted to things that you can ever imagine of. Some weird addictions include drinking human blood, drinking pee, eating chalk, eating glass, eating mud or dirt etc.
X
Desktop Bottom Promotion