For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿ ಲೈಂಗಿಕ ಕ್ರಿಯೆ - ನೆನಪಿನಲ್ಲಿಟ್ಟು ಕೊಳ್ಳಬೇಕಾದ ವಿಷಯಗಳು

|

ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೊದಲು ತುಂಬಾ ಕುತೂಹಲವಿರುವುದು. ಆದರೆ ನೀವು ಈ ಲೇಖನ ಓದಿದರೆ ಆಗ ಮೊದಲ ಸಲ ಲೈಂಗಿಕ ಕ್ರಿಯೆ ಬಗ್ಗೆ ಇರುವ ಭೀತಿ ದೂರವಾಗುವುದು. ಓ ಹುಡುಗಿ, ನೀನು ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಆಗ ತುಂಬಾ ಆತಂಕ ಮತ್ತು ಇದೇ ವೇಳೆ ನೀವು ಇದರ ಬಗ್ಗೆ ತುಂಬಾ ಕುತೂಹಲದಿಂದ ಇರಬಹುದು.

ಇದರ ಬಗ್ಗೆ ನೀವು ದೃಢಪಡಿಸಿಕೊಳ್ಳಿ ಮತ್ತು ನೀವು ತಯಾರಾಗಿದ್ದರೆ ಮಾತ್ರ ಅದರಲ್ಲಿ ತೊಡಗಿಕೊಳ್ಳಿ. ನಿಮ್ಮದೇ ಆಗಿರುವ ಸಮಯ ತೆಗೆದುಕೊಳ್ಳಿ ಮತ್ತು ಅದರಲ್ಲಿ ಭಾಗಿಯದ ವೇಳೆ ತುಂಬಾ ಖುಷಿ ಪಡೆಯಿರಿ. ಆರಾಮವಾಗಿರಿ ಮತ್ತು ದೀರ್ಘ ಉಸಿರು ತೆಗೆದುಕೊಂಡು ಎಲ್ಲಾ ರೀತಿಯ ಆತಂಕವನ್ನು ದೂರ ಮಾಡಿದ. ಮೊದಲ ಸಲ ನೀವು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಲಿದ್ದರೆ ಆಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಇದನ್ನು ನೀವು ಪಾಲಿಸಿ....

ಸೆಕ್ಸ್ ನೋವುಂಟು ಮಾಡುವುದಿಲ್ಲ

ಸೆಕ್ಸ್ ನೋವುಂಟು ಮಾಡುವುದಿಲ್ಲ

ಎಲ್ಲರೂ ಹೇಳುವಂತೆ ಮೊದಲ ಸಲದ ಸೆಕ್ಸ್ ನೋವುಂಟು ಮಾಡುವುದಿಲ್ಲ. ತುಂಬಾ ಗೊಂದಲ ಹಾಗೂ ಇದು ಹೊಸತಾಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ಹಿತವಾಗದೆ ಇರಬಹುದು. ಆದರೆ ಇದರಿಂದ ನೋವು ಆಗುವುದಿಲ್ಲ. ನೀವು ಮತ್ತು ನಿಮ್ಮ ಸಂಗಾತಿಯು ಸರಿಯಾಗಿ ಲ್ಯುಬ್ರಿಕೆಂಟ್ ಹಾಕಿಕೊಂಡು ಒಳ ನುಗ್ಗುವಿಕೆಗೆ ಸರಿಯಾಗುವಂತೆ ಮಾಡಬೇಕು. ನಿಮಗೆ ಈಗಲೂ ನೋವಾಗುತ್ತಲಿದ್ದರೆ ಆಗ ನೀವು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಅವರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ ಯೋನಿ ಮಿಸಸ್(ಯೋನಿ ಸಂಕೋಚನ) ಎಂದು ಕರೆಯ ಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಕ್ರಿಯೆ ವೇಳೆ ಯೋನಿಯು ತುಂಬಾ ಬಿಗಿಯಾಗುವುದು. ಬೋಸ್ಟನ್ ನಲ್ಲಿರುವ ಬ್ರಿಗ್ಹ್ಯಾಮ್ ಆ್ಯಂಡ್ ವುಮೆನ್ಸ್ ಹಾಸ್ಪಿಟಲ್ ನಡೆಸಿರುವಂತಹ ಸರ್ವೇ ಪ್ರಕಾರ, 18-64ರ ಹರೆಯದ ಶೇ>16ರಷ್ಟು ಮಹಿಳೆಯರಲ್ಲಿ ಯೋನಿಯ ನೋವು ಎನ್ನುವುದು ಮೂರು ತಿಂಗಳು ಅಥವಾ ಹೆಚ್ಚು ಸಮಯ ಕಂಡುಬರುವುದು.

ಸುರಕ್ಷತವಾಗಿರಿ

ಸುರಕ್ಷತವಾಗಿರಿ

ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಕಾಂಡೋಮ್ ಬಳಕೆ ಮಾಡುವುದರಿಂದ ಎಚ್ ಐವಿಯಂತಹ ಮಾರಕ ರೋಗಗಳು ಹರಡುವುದು ತಪ್ಪುವುದು. ಕಾಂಡೋಮ್ ಒಂದು ದೈಹಿಕ ತಡೆಯಾಗಿ ಕಾರ್ಯನಿರ್ವಹಣೆ ಮಾಡುವುದು. ಕಾಂಡೋಮ್ ಬಳಕೆ ಮಾಡಿದರೆ ಸಣ್ಣ ಲೈಂಗಿಕ ರೋಗಕಾರಕಗಳು ಕೂಡ ಬರುವುದಿಲ್ಲ. ಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ತುಂಬಾ ಒಳ್ಳೆಯದು. ನೀವು ಗರ್ಭಧಾರಣೆಯ ಚಿಂತೆ ಮಾಡದೆ ಈ ಕ್ರಿಯೆಯನ್ನು ಆನಂದಿಸಬಹುದು. ನೀವು ಯಾವುದೇ ರೀತಿಯ ಗರ್ಭ ನಿರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಲಿದ್ದರೂ ಕಾಂಡೋಮ್ ಬಳಸಿ.

ರಕ್ತಸ್ರಾವವಾಗಬೇಕು ಎಂದೇನಿಲ್ಲ

ರಕ್ತಸ್ರಾವವಾಗಬೇಕು ಎಂದೇನಿಲ್ಲ

ಯೋನಿಯ ಬಾಯಿಯ ಭಾಗದಲ್ಲಿ ತೆಳುವಾದ ಚರ್ಮವೊಂದು ಇರುವುದು. ಇದನ್ನು ಕನ್ಯಾಪೊರೆ ಎಂದು ಕರೆಯುವರು. ಎಲ್ಲರಲ್ಲೂ ಇರುವಂತಹ ಅತೀ ದೊಡ್ಡ ತಪ್ಪು ಅಭಿಪ್ರಾಯ ವೆಂದರೆ, ಹುಡುಗಿಯು ಮೊದಲ ಸಲ ಲೈಂಗಿಕ ಕ್ರಿಯೆ ವೇಳೆ ರಕ್ತಸ್ರಾವವಾದರೆ ಆಗ ಆಕೆಯು ಕನ್ಯೆ ಎಂದು ಅರ್ಥ. ಈ ತಪ್ಪು ಕಲ್ಪನೆಯಿಂದಾಗಿ ಇಂದಿಗೂ ನಮ್ಮ ದೇಶದ ಮಹಿಳೆಯರು ತುಂಬಾ ಭೀತಿ ಪಡುವಂತಾಗಿದೆ. ಇದರಿಂದಾಗಿ ಮದುವೆಗೆ ಮೊದಲು ಹೆಚ್ಚಿನ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ. ತಜ್ಞರ ಪ್ರಕಾರ ಎಲ್ಲಾ ಮಹಿಳೆಯರಿಗೆ ಮೊದಲ ಸಲ ರಕ್ತ ಸ್ರಾವವಾಗುವುದಿಲ್ಲ. ಕೆಲವು ಮಹಿಳೆಯರಲ್ಲಿ ಜಾಗಿಂಗ್, ಓಟ, ಈಜು, ಸೈಕ್ಲಿಂಗ್, ವ್ಯಾಯಾಮದ ವೇಳೆಯಲ್ಲಿ ಈ ತೆಳುವಾದ ಪದರವು ಹರಿದು ಹೋಗಿರುವುದು. ಕೆಲವು ಹುಡುಗಿಯರು ಕನ್ಯಾಪೊರೆ ಇಲ್ಲದೆ ಹುಟ್ಟಿರುವರು. ಕೆಲವು ಹುಡುಗಿಯರು ಹಸ್ತಮೈಥುನ ಮಾಡಿಕೊಳ್ಳುವ ವೇಳೆ ಕನ್ಯಾಪೊರೆ ಹರಿದಿರುವುದು.

ನೀವು ಕನ್ಯೆಯಾಗಿದ್ದರೆ ಒಳ್ಳೆಯದು

ನೀವು ಕನ್ಯೆಯಾಗಿದ್ದರೆ ಒಳ್ಳೆಯದು

ನೀವು ಮತ್ತು ಸಂಗಾತಿಯು ಕನ್ಯತ್ವ ಉಳಿಸಿಕೊಂಡಿದ್ದರೆ ಆಗ ಮೊದಲ ಸಲದ ಲೈಂಗಿಕ ಕ್ರಿಯೆಯು ನೀವು ಸಿನಿಮಾದಲ್ಲಿ ನೋಡಿರುವಂತಹ ಅಷ್ಟು ಸರಳವಾಗಿ ಇರುವುದಿಲ್ಲ. ಆದರೆ ಇದರರ್ಥ ನೀವು ಆನಂದಿಸುವುದಿಲ್ಲ ಎಂದಲ್ಲ. ಅನುಭವವಿದ್ದರೆ ಆಗ ನಿಮಗೆ ದೇಹದ ಬಗ್ಗೆ ಸರಿಯಾಗಿ ತಿಳಿದಿರುವುದು ಮತ್ತು ಲೈಂಗಿಕ ಆಟಕ್ಕೆ ನೀವು ಸರಿಯಾಗಿ ತಯಾರಾಗಬಹುದು. ನೀವು ಆರಾಮವಾಗಿರಿ, ಇದಕ್ಕೆ ಮನಸ್ಸು ಮಾಡಿ, ನೇರವಾಗಿ ನೀವು ನುಗ್ಗುವಿಕೆಗೆ ಸಾಗಬೇಡಿ. ಇದು ನೈಸರ್ಗಿಕವಾಗಿ ಆಗಲಿ. ನಿಮಗೆ ಭೀತಿ ಉಂಟಾಗಿದ್ದರೆ ಆಗ ಇದನ್ನು ಹೇಳಿಬಿಡಿ. ಇದರಿಂದ ಪಾರದರ್ಶಕತೆ ಬರುವುದು. ನೀವಿಬ್ಬರು ಸರಿಯಾಗಿ ಸಂವಹನ ನಡೆಸಿದರೆ ಆಗ ಅನುಭವ ತುಂಬಾ ಸ್ಮರಣೀಯವಾಗಿರುವುದು.

ಲೈಂಗಿಕ ಕ್ರಿಯೆಗೆ ಮೊದಲು ಆಟವಾಡಿ

ಲೈಂಗಿಕ ಕ್ರಿಯೆಗೆ ಮೊದಲು ಆಟವಾಡಿ

ನೀವು ಲೈಂಗಿಕ ಕ್ರಿಯೆಗೆ ಮೊದಲು ಸಂಗಾತಿ ಜತೆಗೆ ಆಟವಾಡಿ. ತುಂಬಾ ಹಳೆಯದಾಗಿರುವಂತಹ ಚುಂಬನ, ಸರಿಯಾದ ಅಂಗಗಳನ್ನು ಮುಟ್ಟುವುದು, ಬಾಯಿಯ ಸೆಕ್ಸ್ ಇತ್ಯಾದಿಗಳು. ಇದನ್ನು ನೀವು ಮನಸ್ಸುಪೂರ್ತಿಯಾಗಿ ಮಾಡಿ. ಚಂದ್ರನಾಡಿ ಯಿಂದಾಗಿ ನಿಮಗೆ ತುಂಬಾ ಉತ್ತೇಜನವಾಗುತ್ತಲಿದ್ದರೆ ಆಗ ನೀವು ಇದರ ಬಗ್ಗೆ ಸಂಗಾತಿಗೆ ಹೇಳಲು ಮರೆಯಬೇಡಿ.

ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳಬೇಡಿ

ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳಬೇಡಿ

ಲೈಂಗಿಕ ಕ್ರಿಯೆ ವೇಳೆ ನರಳಾಟ ಮತ್ತು ಸ್ಪರ್ಶವು ನಡೆಯುವುದು ಎನ್ನುವುದು ಒಂದು ಸಾಮಾನ್ಯ ಚಿತ್ರಣವಾಗಿದೆ. ಆದರೆ ನೀವು ಇದನ್ನು ಅನುಕರಣೆ ಮಾಡಲು ಹೋಗಬೇಡಿ. ಮೊದಲ ಸಲ ಸೆಕ್ಸ್ ನ್ನು ಊಹಿಸಿರುವುದು ನಿಮ್ಮ ಅನುಭವವನ್ನು ನುಚ್ಚುನೂರು ಮಾಡಬಹುದು. ಅದು ಹೇಗಿದೆಯೋ ಹಾಗೆ ನೀವು ಅದರೊಂದಿಗೆ ಸಾಗಿ. ನೀವು ಪರಾಕಾಷ್ಠೆ ಬಗ್ಗೆ ಸುಳ್ಳೂ ಹೇಳಿದರೆ ಆಗ ನಿಮಗೆ ಭವಿಷ್ಯದಲ್ಲಿ ತುಂಬಾ ಕಷ್ಟವಾಗಬಹುದು ಮತ್ತು ಸಂಗಾತಿಯ ಭಾವನೆಗಳಿಗೆ ಇದರಿಂದ ಧಕ್ಕೆಯಾಗಬಹುದು. ನೀವು ನೇರವಾಗಿ ಮತ್ತು ಸ್ಪಷ್ಟವಾಗಿ ಯಾವುದರಿಂದ ನಿಮಗೆ ಸಂತೃಪ್ತಿ ಸಿಗುವುದು ಎಂದು ಹೇಳಿಬಿಡಿ.

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಹೌದು! ಇದು ತುಂಬಾ ಅಗತ್ಯವಾಗಿದೆ. ಈ ಮೂಲಕ ಅನಗತ್ಯ ಹಾಗೂ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಮಹಿಳೆಯ ಗರ್ಭಕೋಶದತ್ತ ತೆರಳದಂತೆ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜಿಸುವುದು ಅನಿವಾರ್ಯ. ವಿಶೇಷವಾಗಿ ಪ್ರತಿ ಮಹಿಳೆಯೂ ಲೈಂಗಿಕ ಕ್ರಿಯೆಯ ಬಳಿಕ ಕಡ್ಡಾಯವಾಗಿ ಮೂತ್ರ ವಿಸರ್ಜಿಸಲೇಬೇಕು. ಸಾಮಾನ್ಯ ವಾಗಿಮಿಲನದ ಸಮಯದಲ್ಲಿ ಎಷ್ಟು ಬೇಡವೆಂದರೂ, ಯಾವುದೇ ಕ್ರಮ ಕೈಗೊಂಡರೂ ಕೆಲವಾರು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿಯೇ ಇರುತ್ತವೆ. ಈ ಭಾಗ ತೇವಭರಿತ ವಾಗಿರುವ ಕಾರಣ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಮನೆ ದೊರತಂಗಾಗುತ್ತದೆ ಹಾಗೂ ಇವು ಶೀಘ್ರವಾಗಿ ಅಭಿವೃದ್ದಿಗೊಂಡು ಜನನಾಂಗದ ಮೂಲಕ ದೇಹದ ಇನ್ನಷ್ಟು ಒಳಭಾಗವನ್ನು ಪ್ರವೇಶಿಸಿ ಭಾರೀ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಬಾಗಿಲ ಹೊಸ್ತಿಲಿನಿಂದಲೇ ಒದ್ದು ಓಡಿಸಲು ಸುಲಭವಾದ ಮಾರ್ಗವೆಂದರೆ ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸುವುದು. ಈ ಕೆಲಸ ಇನ್ನಷ್ಟು ಸುಲಭವಾಗಿಸಲು ಮಿಲನಕ್ಕೂ ಅರ್ಥ ಅಥವಾ ಒಂದು ಘಂಟೆ ಮುನ್ನ ಚೆನ್ನಾಗಿ ನೀರು ಕುಡಿಯಬೇಕು.

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!

ಲೈಂಗಿಕ ಕ್ರಿಯೆಯಲ್ಲಿ ದೇಹದಿಂದ ಸ್ರವಿಸುವ ಕೆಲವಾರು ಸ್ರಾವಗಳು ತಮ್ಮದೇ ಆದ ಕಮಟು ವಾಸನೆಯನ್ನು ಹೊಂದಿರುತ್ತವೆ ಹಾಗೂ ಇವು ಗಾಳಿಯಲ್ಲಿ ಪಸರಿಸುತ್ತವೆ. ಇದು ಕೆಟ್ಟ ವಾಸನೆಯೇನೂ ಅಲ್ಲದಿದ್ದರೂ ಈ ವಾಸನೆಯನ್ನು ಗ್ರಹಿಸಿದವರು ಕೊಂಚ ಹೊತ್ತಿನ ಹಿಂದೆ ಈ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಲೈಂಗಿಕ ಕ್ರಿಯೆಯ ಬಳಿಕ ನಿಮ್ಮ ಮನೆಗೆ ಅತಿಥಿಗಳು ಅಥವಾ ಕೋಣೆಯನ್ನು ಹಂಚಿಕೊಳ್ಳುವ ಸಹವರ್ತಿಗಳು ಆಗಮಿಸುವವರಿದ್ದರೆ ಈ ಬಗ್ಗೆ ಎಚ್ಚರವಿರಲಿ.

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ದಂಪತಿಗಳ ನಡುವೆ ಅನ್ಯೋನ್ಯತೆಗೆ ಲೈಂಗಿಕ ಸಂಪರ್ಕವೇ ಎಲ್ಲವೂ ಅಲ್ಲ! ಅಲ್ಲದೇ ದೈಹಿಕ ಸಂಪರ್ಕದಲ್ಲಿ ಪರಸ್ಪರ ಅಪ್ಪುಗೆ, ತೀಡನೆ ಹಾಗೂ ದೇಹದ ಇತರ ಭಾಗಗಳ ಮರ್ದನ ಹಾಗೂ ಚಂದ್ರನಾಡಿ ತೀಡನೆಯಿಂದಲೂ ಲೈಂಗಿಕ ಪರಾಕಾಷ್ಠೆಯನ್ನು ಪಡೆಯಬಹುದು. ಹೆಚ್ಚು ನೀರು ಕುಡಿದರೆ ಪರಾಕಾಷ್ಠೆ ಜಾಸ್ತಿ ಹೆಚ್ಚು ನೀರು ಸೇವನೆ ಆರೋಗ್ಯಕ್ಕೆ ಹಿತಕಾರಿ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಆದರೆ ಸೆಕ್ಸ್ ವಿಷಯದಲ್ಲಿಯೂ ನೀರು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗೊತ್ತಿರಲಿ. ಆಗಾಗ ನೀರು ಕುಡಿಯುವುದರಿಂದ ಸೆಕ್ಸ್ ಸಂದರ್ಭದಲ್ಲಿ ಪರಾಕಾಷ್ಠೆಯ ಸುಖ ಪಡೆಯಬಹುದು ಎಂದು ಹೇಳಲಾಗಿದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿದ್ದಷ್ಟೂ ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ.

ಸೆಕ್ಸ್‌ನಿಂದ 1ಲಕ್ಷ ಡಾಲರ್ ಗಳಿಸಿದಷ್ಟು ಸುಖ!

ಸೆಕ್ಸ್‌ನಿಂದ 1ಲಕ್ಷ ಡಾಲರ್ ಗಳಿಸಿದಷ್ಟು ಸುಖ!

ನಿಯಮಿತ ಹಾಗೂ ಕ್ರಿಯಾಶೀಲವಾದ ಸೆಕ್ಸ್ ಮಾಡುವುದರಿಂದ ವರ್ಷಕ್ಕೆ 1 ಲಕ್ಷ ಡಾಲರ್ ಹಣ ಗಳಿಸಿದಷ್ಟು ಸುಖ, ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಹಾಗೆಯೇ ನಿರಾಸಕ್ತಿಯ ಸೆಕ್ಸ್ ಜೀವನದಿಂದ ವರ್ಷಕ್ಕೆ 22ಸಾವಿರ ಡಾಲರ್ ಹಣ ಕಳೆದುಕೊಳ್ಳುವಷ್ಟು ಸುಖ ಕಡಿಮೆಯಾಗುತ್ತದೆಯಂತೆ.

English summary

Things to keep in mind before your first love making

As exciting as you may be, deep down you find yourself scared when you think of having sex for the first time. Girl, if you are ready to take the plunge for the first time, you need to understand it’s okay to feel nervous, awkward, and excited all at the same time. Just be sure of it and go for it only when you are ready. Take your sweet time for you would want to enjoy and have fun while doing it. So, relax and a take deep breath for a little nervousness never killed anybody.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more