For Quick Alerts
ALLOW NOTIFICATIONS  
For Daily Alerts

ಸಾಲ ತೀರಿಸಿಕೊಳ್ಳಲು ತನ್ನ 29 ಅಂಡಾಣುಗಳನ್ನು ಮಾರಿದ ವಿದ್ಯಾರ್ಥಿನಿ!!

|

ಐಷಾರಾಮಿ ಜೀವನ ನಡೆಸಲು ಇಂದಿನ ಯುವ ಜನತೆಯು ಕಠಿಣ ಪರಿಶ್ರಮ ಪಡುವ ಬದಲು ತುಂಬಾ ಸುಲಭ ದಾರಿ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಯಾಕೆಂದರೆ ಯುವ ಜನರಿಗೆ ಪರಿಶ್ರಮದಿಂದ ಸಿಗುವಂತಹ ಯಶಸ್ಸು ಮತ್ತು ಅಡ್ಡ ದಾರಿಯಿಂದ ಸಿಗುವಂತಹ ಯಶಸ್ಸಿಗೆ ವ್ಯತ್ಯಾಸವೇ ಗೊತ್ತಿಲ್ಲ. ಐ ಫೋನ್ ಖರೀದಿ ಮಾಡಲು ವ್ಯಕ್ತಿಯೊಬ್ಬ ತನ್ನ ಕಿಡ್ನಿ ಮಾರಿರುವ, ಐಫೋನ್ ಆಸೆಯಿಂದಾಗಿ ತನ್ನ ಅಂಡಾಣುಗಳನ್ನು ಮಾರಲು ಹೋಗಿ ಪ್ರಾಣ ಕಳೆದುಕೊಂಡಿರುವ ಯುವತಿ ಬಗ್ಗೆ ನಾವು ಈ ವಿಭಾಗದಲ್ಲಿ ಈಗಾಗಲೇ ಓದಿಕೊಂಡಿದ್ದೇವೆ. ಈಗ ನೀವು ಇಂತಹ ಇನ್ನೊಂದು ಘಟನೆ ಬಗ್ಗೆ ತಿಳಿಯಬೇಕಾಗಿದೆ. ಇಲ್ಲೊಬ್ಬಳು ಯುವತಿಯು ತನ್ನ ಸಾಲ ತೀರಿಸಿಕೊಳ್ಳಲು 29 ಅಂಡಾಣುಗಳನ್ನು ಮಾರಿರುವಳು. ಅನಸ್ತೇಸಿಯಾ ಕೂಡ ನೀಡದೆ ಆಕೆಯ ಅಂಡಾಣುಗಳನ್ನು ತೆಗೆಯಲಾಗಿದೆ. ಈ ಯುವತಿಯ ದುರಂತ ಕಥೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಸಾಲ ಮರುಪಾವತಿ ಮಾಡಲು ಬಯಸಿದ್ದರು

ಸಾಲ ಮರುಪಾವತಿ ಮಾಡಲು ಬಯಸಿದ್ದರು

ಚೀನಾದ ಹುಬೆಯಿ ಪ್ರಾಂತ್ಯದ ವುಹಾನ್ ಎನ್ನುವಲ್ಲಿನ ಹೆಸರು ಹೇಳಲು ಇಚ್ಛಿಸದೆ ಬಯಸದ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಯುವತಿಯೊಬ್ಬಳು ತನ್ನ ಅಂಡಾಣುಗಳನ್ನು ಮಾರಿ, ಅದರಿಂದ ಬರುವ ಹಣದಿಂದ ಸಾಲ ಮರುಪಾವತಿ ಮಾಡಲು ಬಯಸಿದ್ದರು. ಯಾಕೆಂದರೆ ಆಕೆ ಆನ್ ಲೈನ್ ನಲ್ಲಿ ಸಾಲ ಪಡೆದು ಅದರಿಂದ ಕಂಗಾಲು ಆಗಿದ್ದರು.

ಅಂಡಾಣು ಉತ್ಪತ್ತಿ ಮಾಡಲು ಆಕೆಗ ಇಂಜೆಕ್ಷನ್ ನೀಡಲಾಯಿತು

ಅಂಡಾಣು ಉತ್ಪತ್ತಿ ಮಾಡಲು ಆಕೆಗ ಇಂಜೆಕ್ಷನ್ ನೀಡಲಾಯಿತು

ಶಸ್ತ್ರಚಿಕಿತ್ಸೆ ಮೊದಲು ಅಂಡೋತ್ಪತ್ತಿಯು ಹೆಚ್ಚಾಗುವಂತೆ ಮಾಡಲು ಆಕೆಗೆ ಸುಮಾರು 22 ದಿನಗಳ ಕಾಲ ಇಂಜೆಕ್ಷನ್ ನೀಡಲಾಯಿತು ಎಂದು ಯುವತಿಯು ಬಹಿರಂಗಪಡಿಸಿರುವಳು. 29 ಅಂಡಾಣುವನ್ನು ತೆಗೆಯಲು ಆಕೆ ಎರಡು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದರ ಬಳಿಕ ಆಕೆ ಕಾನೂನು ಬಾಹಿರ ಫಲವತ್ತತೆ ಕ್ಲಿನಿಕ್ ನಡೆಸುವವರಿಗೆ ಇದನ್ನು ಮಾರಿದಳು.

Most Read: ಟಾಯ್ಲೆಟ್ ಸೀಟ್ ನೆಕ್ಕಿದ ಮನೆಕೆಲಸದ ಯುವತಿಯ ವಿಡಿಯೋ ವೈರಲ್!

ಆಕೆಗೆ ಅನಸ್ತೇಸಿಯಾ ಕೂಡ ನೀಡಲಿಲ್ಲ

ಆಕೆಗೆ ಅನಸ್ತೇಸಿಯಾ ಕೂಡ ನೀಡಲಿಲ್ಲ

ಆಸ್ಪತ್ರೆಯಲ್ಲಿ ಯುವತಿಗೆಯ ದೈಹಿಕ ಪರೀಕ್ಷೆಗಳನ್ನು ಮಾಡಲಾಯಿತು. ಆದರೆ ಕಾನೂನು ಬಾಹಿರವಾಗಿರುವಂತಹ ಕ್ಲಿನಿಕ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಾನೂನು ಬಾಹಿರ ಕ್ಲಿನಿಕ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದ ಕಾರಣದಿಂದಾಗಿ ಯುವತಿಗೆ ಪ್ರಜ್ಞೆ ತಪ್ಪುವಂತಹ ಔಷಧಿ ಕೂಡ ನೀಡಲಾಗಿಲ್ಲ ಎಂದು ಆಕೆ ಹೇಳಿಕೊಂಡಿರುವಳು.

Most Read: ಜೇನುತುಪ್ಪದೊಂದಿಗೆ ಕಣಜದ ಕೀಟ ಮಾರುತ್ತಿರುವ ಜಪಾನ್‌ನ ಕಂಪೆನಿ!

ಅಂಡಾಣು ಮಾರುವಂತೆ ಪ್ರೋತ್ಸಾಹಿಸಲಾಗುತ್ತಿದೆ!

ಅಂಡಾಣು ಮಾರುವಂತೆ ಪ್ರೋತ್ಸಾಹಿಸಲಾಗುತ್ತಿದೆ!

ಮಹಿಳೆಯರು ತಮ್ಮ ಅಂಡಾಣುಗಳನ್ನು ದಾನ ಮಾಡಿ ಎಂದು ಹೇಳುವಂತಹ ಹಲವಾರು ಜಾಹೀರಾತುಗಳು ಮತ್ತು ಹೋರ್ಡಿಂಗ್ ಗಳು ಸುತ್ತಲೂ ಇದೆ. ಹಣದ ಕೊರತೆ ಇರುವಂತಹ ಮಹಿಳೆಯರು ಇಲ್ಲೊಮ್ಮೆ ನೋಡಿ. ಇಲ್ಲಿ ನಿಮಗೆ ಹಣವನ್ನು ನಗದು ರೂಪದಲ್ಲಿ ಗಳಿಸುವಂತಹ ಅವಕಾಶವು ಇರುವುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

Student Sells 29 Of Her Eggs To Repay Her Loan

A woman in China had apparently sold her eggs to illegal fertility agencies after two surgeries. The woman claimed that she was not given anaesthesia during the illegal operations. She was apparently given injections over 22 days to stimulate her ovaries before the surgery.She Sold Her Eggs To Repay Her Loan
Story first published: Tuesday, March 26, 2019, 17:30 [IST]
X
Desktop Bottom Promotion