For Quick Alerts
ALLOW NOTIFICATIONS  
For Daily Alerts

ನಕಲಿ ಉತ್ಪನ್ನ ಬಳಸಿ ಆರೋಗ್ಯ ಕೆಡಿಸಿಕೊಂಡ ಮಹಿಳೆ

|

ಸೌಂದರ್ಯವರ್ಧಿಸಲು ಕೆಲವೊಂದು ಸಲ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಕೆ ಮಾಡುವುದು ಸಹಜ. ಇದು ಶೃಂಗಾರ ಸಾಧನಗಳು ಆಗಿರಬಹುದು ಅಥವಾ ಕಣ್ಣುಗಳಿಗೆ ಹಾಕುವಂತಹ ಲೆನ್ಸ್ ಆಗಿರಬಹುದು. ಹೆಚ್ಚಿನೆಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ನೀವು ತುಂಬಾ ಎಚ್ಚರಿಕೆಯಿಂದ ಬಳಕೆ ಮಾಡದೆ ಇದ್ದರೆ ಆಗ ಅಪಾಯ ಆಹ್ವಾನಿಸಬೇಕಾಗುತ್ತದೆ. ಇದು ನಿಮ್ಮ ದೇಹ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಕೆಲವೊಂದು ಉತ್ಪನ್ನಗಳನ್ನು ಕಂಪೆನಿಗಳು ನಿರ್ಮಾಣ ಮಾಡಿರುತ್ತದೆ. ಇದು ಒಳ್ಳೆಯ ಗುಣಮಟ್ಟ ಹೊಂದಿರುವುದು. ಆದರೆ ಇಂದು ಪ್ರತಿಯೊಂದು ನಕಲಿ ಹಾಗೂ ಅಗ್ಗವಾಗಿ ಸಿಗುವ ಕಾರಣದಿಂದ ಹೆಚ್ಚಿನವರು ಇಂತಹ ಉತ್ಪನ್ನಗಳಿಗೆ ಮೊರೆ ಹೋಗುವರು. ಇದು ವ್ಯತಿರಿಕ್ತ ಪರಿಣಾಮ ಬೀರಬಹುದು.

Fake Braces

ಇಲ್ಲೊಂದು ಇಂತಹ ಘಟನೆಯು ನಡೆದಿದೆ. ಅಜಿಲಾ ಎನ್ನುವ ದಂತವೈದ್ಯರು ತನ್ನ ಫೇಸ್ ಬುಕ್ ನಲ್ಲಿ ಮಲೇಷಿಯಾದ ಮಹಿಳೆಯು ಊದಿಕೊಂಡಿರುವ ತುಟಿಗಳು ಮತ್ತು ಅತಿಯಾದ ಜ್ವರದಿಂದ ಬಳಲುತ್ತಿರುವ ಬಗ್ಗೆ ಬರೆದುಕೊಂಡಿದ್ದರು. ಈ ಮಹಿಳೆಯು ದಂತದ ನಕಲಿ ಬ್ರೇಸ್ ನ್ನು ಹಾಕಿಕೋಂಡ ಒಂದು ವಾರದ ಬಳಿಕ ಹೀಗೆ ಆಗಿದೆ ಎಂದು ದಂತವೈದ್ಯೆಯು ಬರೆದುಕೊಂಡಿದ್ದಾರೆ. ನಕಲಿ ಹಾಗೂ ಅಗ್ಗದ ಉತ್ಪನ್ನಗಳಿಂದ ಆಗುವಂತಹ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ದಂತವೈದ್ಯೆಯು ಇದನ್ನು ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ನೀವು ತಿಳಿಯಿರಿ.

ಆ ಮಹಿಳೆಯು ಇದನ್ನು ಫ್ಯಾಶನ್ ಆಗಿ ಬಳಕೆ ಮಾಡಲು ಬಯಸಿದರು!

ಆ ಮಹಿಳೆಯು ಇದನ್ನು ಫ್ಯಾಶನ್ ಆಗಿ ಬಳಕೆ ಮಾಡಲು ಬಯಸಿದರು!

ಜೊಹೊರ್ ಎಂದು ಕರೆಯಲ್ಪಡುವಂತಹ ಮಹಿಳೆಯು ಹೇಳುವ ಪ್ರಕಾರ, ಆಕೆಯ ಸ್ನೇಹಿತೆಯರು ಹಾಗೂ ಸಹೋದ್ಯೋಗಿಗಳು ಇಂತಹ ಬ್ರೇಸ್ ಧರಿಸುತ್ತಿದ್ದ ಕಾರಣದಿಂದಾಗಿ ಆಕೆ ಕೂಡ ಇದನ್ನು ಧರಿಸಲು ನಿರ್ಧರಿಸಿದ್ದಳು.

Most Read: ನೋಡಿ, ಇದೇ ಕಾರಣಕ್ಕೆ ನೀವು ಪ್ರೇರಣೆ ಕಳೆದುಕೊಳ್ಳುತ್ತಿರುವುದು

ವೈದ್ಯರು ಈ ಬಗ್ಗೆ ಮಾಹಿತಿ ಹಂಚಿಕೊಂಡರು

ವೈದ್ಯರು ಈ ಬಗ್ಗೆ ಮಾಹಿತಿ ಹಂಚಿಕೊಂಡರು

ಹೆಚ್ಚಿನ ಮಹಿಳೆಯರು ಫ್ಯಾಶನ್ ಟ್ರೆಂಡ್ ಆಗಿ ಬ್ರೇಸ್ ನ್ನು ಧರಿಸಲು ನಿರ್ಧರಿಸಿರುವರು ಎಂದು ವೈದ್ಯರಾಗಿರುವ ಅಜಿಲ್ ಅವರು ಬಹಿರಂಗಪಡಿಸಿದ್ದಾರೆ. ಕೆಲವರಿಗೆ ಮಾತ್ರ ತಮ್ಮ ಹಲ್ಲುಗಳನ್ನು ಸರಿಪಡಿಸಲು ಈ ಬ್ರೇಸ್ ನ ಅಗತ್ಯವಿದೆ. ಆದರೆ ಹೆಚ್ಚಿನ ಮಹಿಳೆಯರು ಇದನ್ನು ಫ್ಯಾಶನ್ ಆಗಿ ಬಳಕೆ ಮಾಡುತ್ತಿದ್ದಾರೆ.

ಅಗ್ಗದ ದಂತವೈದ್ಯರನ್ನು ಭೇಟಿಯಾಗಿದ್ದರು

ಅಗ್ಗದ ದಂತವೈದ್ಯರನ್ನು ಭೇಟಿಯಾಗಿದ್ದರು

ಆ ಮಹಿಳೆಯು ಈ ಬಗ್ಗೆ ಸ್ವಲ್ಪ ಮಾಹಿತಿ ಸಂಗ್ರಹ ಮಾಡಿದ ಬಳಿಕ ಆಕೆಗೆ ತುಂಬಾ ಕಡಿಮೆ ದರದಲ್ಲಿ ದಂತವೈದ್ಯರೊಬ್ಬರು ಸಿಕ್ಕಿದರು. ಈ ದಂತವೈದ್ಯರು ಆಕೆಗೆ ಬ್ರೇಸ್ ಹಾಕಿಕೊಟ್ಟರು. ಇದರ ಒಂದು ವಾರದಲ್ಲೇ ಆಕೆಗೆ ಆರೋಗ್ಯ ಸಮಸ್ಯೆಯು ಕಾಡಲು ಆರಂಭವಾಯಿತು.

ವಾರದಲ್ಲೇ ಆಕೆಯ ತುಟಿಗಳು ಊದಿಕೊಂಡವು ಮತ್ತು ಜ್ವರ ಕಾಡಿತು!

ವಾರದಲ್ಲೇ ಆಕೆಯ ತುಟಿಗಳು ಊದಿಕೊಂಡವು ಮತ್ತು ಜ್ವರ ಕಾಡಿತು!

ಆಕೆಗೆ ತೀವ್ರ ಜ್ವರ ಕಾಡಿತು ಮತ್ತು ತುಟಿಗಳು ಊದಿಕೊಂಡವು. ಆಕೆಯ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ತುಟಿಗಳಲ್ಲಿ ಕೀವು ಕೂಡ ತುಂಬಿಕೊಂಡಿತ್ತು. ಇದರಿಂದಾಗಿ ಮೂರು ದಿನಗಳ ಕಾಲ ಆಕೆ ಹಾಸಿಗೆ ಹಿಡಿಯುವಂತಾಯಿತು. ಇದರ ಬಳಿಕ ದಂತವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು ಮತ್ತು ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಅಗ್ಗದ ಚಿಕಿತ್ಸೆಯನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ನಮಗೆ ಖಂಡಿತವಾಗಿಯೂ ತಿಳಿಸಿ.ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.

English summary

She Bought Fake Braces And Then This Happened!

A dentist by the name of Azila shared a post on her Facebook page about a Malaysian woman who had recently suffered from swollen lips and high fever. The patient had apparently suffered from this condition within just a week of her wearing fake braces. The doctor shared the post to make people aware of the consequences of using fake and cheap stuff.
Story first published: Wednesday, March 20, 2019, 12:29 [IST]
X
Desktop Bottom Promotion