Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
2019ರ ಗಣರಾಜ್ಯೋತ್ಸ: ಭಾರತದ 70ನೇ ಗಣರಾಜ್ಯೋತ್ಸವದ ಬಗ್ಗೆ ತಿಳಿಯಬೇಕಾದ ಸಂಗತಿಗಳು
2019ರ ಜನವರಿ 26 (ಗಣರಾಜ್ಯೋತ್ಸವ) ಶನಿ ವಾರದಂದು ದೇಶದಾದ್ಯಂತ ಆಚರಿಸಲಾಗುವುದು. ಪ್ರತಿ ವರ್ಷವೂ ಗಣರಾಜ್ಯೋತ್ಸವದಂದು ವಿಶೇಷವಾದ ಮೆರವಣಿಗೆ ಹಾಗೂ ಪಥಸಂಚಲನಗಳನ್ನು ನಡೆಸಲಾಗುವುದು. ಸಾಂಪ್ರದಾಯಿಕ ಪದ್ಧತಿಯ ಅನುಸಾರ ದೆಹಲಿಯ ಕೆಂಪು ಕೋಟೆಯಲ್ಲಿ ನೆರವೇರುವುದು. 200 ಅಶ್ವದಳದೊಂದಿಗೆ ಅಂಗರಕ್ಷಕರು ಮೆರವಣಿಗೆಯಲ್ಲಿ ಬಂದು, ಗಣರಾಜ್ಯೋತ್ಸವದ ಆಚರಣೆಗೆ ರಾಷ್ಟ್ರಪತಿಯ ಆದೇಶ ಪಡೆಯುವರು. ನಂತರ ರಾಷ್ಟ್ರ ಗೀತೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
1.25 ಬಿಲಿಯನ್ ರಾಷ್ಟ್ರಗಳ ವಿಶ್ವ ನಾಯಕರು ಆಗಮಿಸುವರು. ಗಣರಾಜ್ಯೋತ್ಸವದ ಮೆರವಣಿಗೆಯು ಭಾರತದ ಸೈನ್ಯ ಶಕ್ತಿಯನ್ನು ತೋರಿಸುತ್ತದೆ. ಭಾರತದ ಎಲ್ಲಾ ರಾಜ್ಯಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಮೆರವಣಿಗೆಯನ್ನು ತೋರುವರು. 70ನೇ ವರ್ಷದ ಈ ಗಣರಾಜ್ಯೋತ್ಸವವು ವಿವಿಧ ಸಂಗತಿಗಳಿಂದ ಕೂಡಿರುವುದು ವಿಶೇಷ. ಭಾರತದ 70ನೇ ಗಣರಾಜ್ಯೋತ್ಸವದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ
* ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೊಸ 70ನೇ ವರ್ಷದ ಗಣರಾಜ್ಯೋತ್ಸವದ ಪರೇಡ್ ಮೆರವಣಿಗೆಗೆ ಮುಖ್ಯ ಅತಿಥಿಯಾಗಲಿದ್ದಾರೆ.
* ತಮಿಳುನಾಡು, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರದತದ ವಿವಿಧೆಡೆಯ ಬಹುಮುಖ ಜನಾಂಗೀಯ ನೃತ್ಯಗಳು ದೆಹಲಿಯಲ್ಲಿ ಶನಿವಾರ ನಡೆಯಲಿರುವ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿ ಪ್ರೇಕ್ಷಕರನ್ನು ರಂಜಿಸಲಿವೆ.
* ಜಯಾಲಿಯನ್ವಾಲಾ ಬಾಗ್ ಹತ್ಯಾಕಾಂಡವು 1919ರಲ್ಲಿ ಬೈಸಾಖಿ ದಿನದಂದು ನಡೆಯಿತು. ಗಣರಾಜ್ಯೋತ್ಸವದ ದಿನ ಪಂಜಾಬ್‍ನ ಟೇಬಲ್ಯೂ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಇದು ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಲಿರುವುದು ಸತತ ಮೂರನೇ ಬಾರಿಯಾಗಿರುವುದು ವಿಶೇಷ.
* 70ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಅಸ್ಸಾಮ್‍ನ ರೈಫಲ್ಸ್ ನೇತೃತ್ವದಲ್ಲಿ "ನಾರಿ ಶಕ್ತಿ"ಯ ಅದ್ಭುತ ಪ್ರದರ್ಶನ ನೆರವೇರಲಿದೆ. ಏಕೈಕ ಮಹಿಳಾ ಅಧಿಕಾರಿಯು ಡೇರ್‍ಡೇವಿಲ್ ತಂಡದಿಂದ ರಾಜ್‍ಪಥದಲ್ಲಿ ಬೈಕ್ ಸಾಹಸವನ್ನು ಪ್ರದರ್ಶಿಸಲಿದ್ದಾರೆ. ನೌಕಾಪಡೆ, ಆರ್ಮಿ ಸರ್ವೀಸಸ್ ಕಾಪ್ರ್ಸ್ ಮತ್ತು ಕಾಪ್ರ್ಸ್ ಆಫ್ ಸಿಗ್ನಲ್ ಘಟಕಗಳು ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿವೆ.
* 90 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ನಾಲ್ಕು ಭಾರತೀಯ ರಾಷ್ಟ್ರೀಯ ಸೇನಾಪಡೆ (ಐಎನ್‍ಎ) ಪರಿಣಿತರು ರಿಪಬ್ಲಿಕ್ ಡೇ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ. "ಈ ಯೋಧರು 90-100 ವರ್ಷಗಳ ನಡುವಿನ ವಯಸ್ಸಿನವರಾಗಿದ್ದಾರೆ. ಐಎನ್‍ಎ ಸೈನಿಕರು ಬ್ರಿಟಿಷ್ ಇಂಡಿಯನ್ ಸೈನ್ಯದೊಂದಿಗೆ ಸಂಪರ್ಕ ಹೊಂದಿದ್ದಾರೆ. ಹಾಗಾಗಿಯೇ ಅವರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮೇಜರ್ ಜನರಲ್ ರಾಜ್ಪಾಲ್ ಪುನಿಯಾ ಹೇಳಿದ್ದಾರೆ.
* 70 ನೇ ಗಣರಾಜ್ಯೋತ್ಸವ ಆಚರಿಸಲು ಮೆರವಣಿಗೆಯಲ್ಲಿ, ಫಿರಂಗಿ ಗನ್ ವ್ಯವಸ್ಥೆ M777 ಅಮೆರಿಕನ್ ಅಲ್ಟ್ರಾ ಲೈಟ್ ಹೊವಿಟ್ಜರ್ಗಳನ್ನು ಪ್ರದರ್ಶಿಸಲಾಗುತ್ತದೆ. ಮೇನ್ ಬ್ಯಾಟಲ್ ಟ್ಯಾಂಕ್ (ಎಮ್ಬಿಟಿ) ಟಿ -90 ಪ್ರದರ್ಶನವೂ ಸಹ ಇರುತ್ತದೆ. ಭಾರತದಲ್ಲಿ ತಯಾರಿಸಿದ ಆಕಾಶ್ ವೆಪನ್ ಸಿಸ್ಟಮ್ ಸಹ ಪ್ರದರ್ಶನಗೊಳ್ಳಲಿದೆ.