For Quick Alerts
ALLOW NOTIFICATIONS  
For Daily Alerts

2019ರಲ್ಲಿ ಬುಧನ ಹಿಮ್ಮುಖ ಚಲನೆ- ಇದರಿಂದ ಆರು ರಾಶಿಚಕ್ರದವರ ಮೇಲೆ ಪ್ರಮುಖ ಬದಲಾವಣೆ ಉಂಟಾಗಲಿದೆ!

|

ಬುಧ ಗ್ರಹವನ್ನು ಅತ್ಯಂತ ಸಣ್ಣ ಗ್ರಹ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಸಮೀಪದಲ್ಲಿ ಇರುವ ಗ್ರಹ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನಿಧಾನ ಗತಿಯ ಚಲನೆಯನ್ನು ಹೊಂದಿರುವ ಈ ಗ್ರಹವು 88 ದಿನಗಳಿಗೊಮ್ಮೆ ಸೂರ್ಯನ ಪ್ರದಕ್ಷಿಣೆ ಹಾಕುವುದು ಎನ್ನಲಾಗುವುದು. ಸೂರ್ಯನ ಸಮೀಪ ಇರುವ ಗ್ರಹವಾಗಿರುವುದರಿಂದ ವಿಜ್ಞಾನಿಗಳಿಗೂ ಇದರ ಸಂಪೂರ್ಣವಾದ ಚಿತ್ರಣ ಅಥವಾ ಸ್ಪಷ್ಟತೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಭೂಮಿಯಿಂದ ದೂರ ಇದ್ದು, ಸೂರ್ಯನಿಗೆ ಸಮೀಪ ಇರುವ ಈ ಗ್ರಹ ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ ಎಂದು ಹೇಳಲಾಗುವುದು.

ವ್ಯಕ್ತಿಯ ಕುಂಡಲಿಗೆ ಅನುಗುಣವಾಗಿ ಹೇಳುವುದಾದರೆ ಪ್ರತಿಯೊಂದು ಗ್ರಹಗಳು ಸಾಕಷ್ಟು ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವವನ್ನು ನೀಡುತ್ತವೆ. ಗ್ರಹಗಳ ಸ್ಥಾನ ಹಾಗೂ ಕುಂಡಲಿಯಲ್ಲಿ ಯಾವ ಮನೆಯ ಪ್ರವೇಶವನ್ನು ಪಡೆಯುತ್ತವೆ ಎನ್ನುವುದರ ಆಧಾರದ ಮೇಲೆಯೇ ಗ್ರಹಗಳ ಪ್ರಭಾವ ಗಣನೆಗೆ ಬರುವುದು. ಬುಧನು ಅತ್ಯಂತ ಪ್ರಭಾವಶಾಲಿ ಗ್ರಹಗಳಲ್ಲಿ ಒಂದು. ಇದರ ದೆಸೆಯ ಅವಧಿ ಹಾಗೂ ಪ್ರಭಾವವು ದೀರ್ಘ ಸಮಯಗಳ ಕಾಲ ಇರುತ್ತದೆ ಎಂದು ಹೇಳಲಾಗುವುದು. ವ್ಯಕ್ತಿಯ ರಾಶಿಗೆ ಹಾಗೂ ಕುಂಡಲಿಗೆ ಅನುಗುಣವಾಗಿ ಋಣಾತ್ಮಕ ಹಾಗೂ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಬುಧನ ಪ್ರಭಾವ ಋಣಾತ್ಮಕವಾಗಿದ್ದರೆ ವ್ಯಕ್ತಿ ಸಾಕಷ್ಟು ಅಸಹನೀಯ ಸ್ಥಿತಿಯನ್ನು ಹೊಂದುತ್ತಾನೆ. ಅದೇ ಧನಾತ್ಮಕ ವಾಗಿದ್ದರೆ ಸಾಕಷ್ಟು ಸಂತೋಷ ಹಾಗೂ ಸುಖಕರ ಅನುಭವವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು.

2019ರ ಮಾರ್ಚ್ 5 ರಿಂದ ಮಾರ್ಚ್ 28ರ ವರೆಗೆ ಬುಧನಯ ಹಿಮ್ಮುಖ ಚಲನೆ

2019ರ ಮಾರ್ಚ್ 5 ರಿಂದ ಮಾರ್ಚ್ 28ರ ವರೆಗೆ ಬುಧನಯ ಹಿಮ್ಮುಖ ಚಲನೆ

2019ರಲ್ಲಿ ಸಾಕಷ್ಟು ಗ್ರಹಗಳು ವಿಶೇಷ ಚಲನೆ ಹಾಗೂ ಹಿಮ್ಮುಖ ಚಲನೆಯನ್ನು ಕೈಗೊಳ್ಳುತ್ತವೆ. ಇವುಗಳ ಪ್ರಭಾವವು ಪ್ರತಿಯೊಂದು ರಾಶಿಚಕ್ರದವರ ಮೇಲೆ ಸಾಕಷ್ಟು ಗಂಭಿರ ಪ್ರಭಾವವನ್ನು ಬೀರುತ್ತವೆ ಎಂದು ಹೇಳಲಾಗುವುದು. ಅದೇ ರೀತಿ ಬುಧನು ಸಹ ತನ್ನ ಚಲನೆ ಹಾಗೂ ಹಿಮ್ಮುಖ ಚಲನೆಯ ಮೂಲಕ ವ್ಯಕ್ತಿಯ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದುಕೊಡಲಿದ್ದಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 2019ರ ಮಾರ್ಚ್ 5 ರಿಂದ ಮಾರ್ಚ್ 28ರ ವರೆಗೆ ಬುಧನಯ ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುವನು. ಇದರ ಪ್ರಭಾವ ಪ್ರಮುಖವಾಗಿ ಆರು ರಾಶಿಯವರ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಎನ್ನಲಾಗುವುದು. ಆ ಆರು ರಾಶಿಚಕ್ರದ ಪಟ್ಟಿಯಲ್ಲಿ ನಿಮ್ಮ ಅಥವಾ ನಿಮ್ಮವರ ರಾಶಿಚಕ್ರ ಇದೆಯೇ? ಆ ಆರು ರಾಶಿಚಕ್ರದವರ ಮೇಳೆ ಬುಧನ ಪ್ರಭಾವ ಯಾವ ರೀತಿಯಲ್ಲಿ ಇರುವುದು? ಅದು ವ್ಯಕ್ತಿಯ ಜೀವನಕ್ಕೆ ಅದೃಷ್ಟವನ್ನು ತರುವುದೋ ಅಥವಾ ದುರಾದೃಷ್ಟಕ್ಕೆ ಕಾರಣವಾಗುವುದೇ? ಅಂತಹ ಸಂದರ್ಭದಲ್ಲಿ ಯಾವ ಬಗೆಯ ಮುನ್ನೆಚ್ಚರಿಕೆ ಅಥವಾ ಪರಿಹಾರ ಕ್ರಮ ಕೈಗೊಳ್ಳಬಹುದು? ಎನ್ನುವಂತಹ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದೆ ಎಂದಾದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

Most Read: ಈ 7 ರಾಶಿಚಕ್ರದವರು ಜೀವನದಲ್ಲಿ ಬಹಳ ಬೇಗನೆ ಪ್ರಸಿದ್ಧಿ ಪಡೆಯುತ್ತಾರಂತೆ!

ಮಿಥುನ

ಮಿಥುನ

ಮಿಥುನ ರಾಶಿಯವರನ್ನು ಆಳುವ ಅಥವಾ ಆಡಳಿತಾತ್ಮಕ ಗ್ರವು ಬುಧ ಎನ್ನುವುದನ್ನು ನೆನಪಿಸುವುದು ಉತ್ತಮ ಎಂದು ಹೇಳಬಹುದು. ಬುಧನು 2019ರ ಮಾರ್ಚ್ 5 ರಿಂದ ತೆಗೆದುಕೊಳ್ಳುವ ಹಿಮ್ಮುಖ ಚಲನೆಯ ಪ್ರಭಾವದಿಂದ ಸಂವಹನ ಮಟ್ಟದಲ್ಲಿ ಸಾಕಷ್ಟು ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಇಷ್ಟು ಸಮಯದಲ್ಲಿ ನೀವು ಅತ್ಯುತ್ತಮ ಸಂವಹನಕಾರರು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಸಮಯದಿಂದ ನಿಮ್ಮ ಸಾಮಥ್ರ್ಯದ ಮೇಲೆ ಸ್ವಲ್ಪ ಅಡ್ಡಿ ಉಂಟಾಗಬಹುದು. ನೀವು ಮಾತನಾಡುವ ಅಥವಾ ನಿಮ್ಮ ಮಾತಿಗೆ ಮಾನ್ಯತೆ ಇದೆ ಎನ್ನುವಂತಹ ಸಂದರ್ಭದಲ್ಲಿ ನಿಮಗೆ ಏನು ಮಾತಾಡಲು ತೋಚದೆ ಹೋಗಬಹುದು. ನಾಲಿಗೆ ಕಟ್ಟಿಹಾಕಿದಂತೆ ಆಗಬಹುದು. ಇಲ್ಲವೇ ವಿಷಯ ಏನು ಎನ್ನುವುದು ಮರೆತು ಹೋಗಬಹುದು. ಹಾಗಾಗಿ ಬುಧನ ಹಿಮ್ಮುಖ ಚಲನೆಯನ್ನು ಹೊಂದಿರುವ ಸಮಯದಲ್ಲಿ ನೀವು ನಿಮ್ಮ ಸಂವಹನ ಕ್ರಿಯೆ ಅಥವಾ ಮಾತನ್ನು ಮಿತವಾಗಿಡಲು ಪ್ರಯತ್ನಿಸಿ.

ಕರ್ಕ

ಕರ್ಕ

ಕರ್ಕ ರಾಶಿಯ ವ್ಯಕ್ತಿಗಳು ಅತ್ಯಂತ ಶಾಂತ ಸ್ವಭಾವದವರು. ಇವರನ್ನು ಮೂಕ ಪ್ರೇಕ್ಷಕರು ಎಂದು ಸಹ ಪರಿಗಣಿಸಲಾಗುವುದು. 2019ರ ಮಾರ್ಚ್ 5 ರಿಂದ ಬುಧನ ಹಿಮ್ಮುಖ ಚಲನೆಯ ಪ್ರಭಾವ ಇವರ ಮೇಲೆ ಗಂಭೀರ ಪ್ರಭಾವವನ್ನು ನೀಡುವುದು. ಇದರ ಪರಿಣಾಮವಾಗಿ ಕರ್ಕ ರಾಶಿಯವರು ಇನ್ನಷ್ಟು ಮೂಕ ಸ್ವಭಾವವನ್ನು ಪಡೆದುಕೊಳ್ಳಬಹುದು. ಇತರ ವ್ಯಕ್ತಿಗಳು ಇವರಮೇಲೆ ಕಾರಣವಿಲ್ಲದೆಯೇ ಸಿಟ್ಟಾಗಬಹುದು. ಹಾಗಾಗಿ ಕರ್ಕ ರಾಶಿಯ ವ್ಯಕ್ತಿಗಳು ತಾವು ಮಾತನಾಡುವಾಗ ಸಾಕಷ್ಟು ತಾಳ್ಮೆ ಹಾಗೂ ಕಾಳಜಿಯಿಂದ ಮಾತನಾಡುವುದನ್ನು ಅನುಸರಿಸಿಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುತ್ತದೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಸಾಮಾನ್ಯವಾಗಿ ಎಂತಹ ಸ್ಥಿತಿಯಲ್ಲಿ ಇದ್ದರೂ ಸಂತೋಷ, ಉತ್ಸಾಹ ಹಾಗೂ ಶಕ್ತಿವಂತರಂತೆ ಇರುತ್ತಾರೆ. ಇವರು ಏಕಾಂಗಿಯಾಗಿ ನಾಲ್ಕು ಗೋಡೆಯ ಮಧ್ಯದಲ್ಲಿದ್ದರೂ ಇವರ ಹುಮ್ಮಸ್ಸಿನ ಸ್ವಭಾವವನ್ನು ಗುರುತಿಸಬಹುದು. ಆದರೆ 2019ರ ಮಾರ್ಚ್‍ಲ್ಲಿ ಬುಧನ ಹಿಮ್ಮುಖ ಚಲನೆಯ ಪ್ರಭಾವದಿಂದ ಶಕ್ತಿ ಅಥವಾ ಹುಮ್ಮಸ್ಸಿನ ಮಟ್ಟವು ಕಡಿಮೆಯಾಗಬಹುದು. ಇವರು ಸ್ವಲ್ಪ ಮಸುಕಾದ ಮತ್ತು ಆಸಕ್ತಿ ರಹಿತವಾದ ವ್ಯಕ್ತಿಯಂತೆ ತೋರಬಹುದು.

ಕನ್ಯಾ

ಕನ್ಯಾ

2019ರ ಮಾರ್ಚ್ ತಿಂಗಳಲ್ಲಿ ನಡೆಯುವ ಬುಧನ ಹಿಮ್ಮುಖ ಚಲನೆಯ ಪ್ರಭಾವವು ಕನ್ಯಾ ರಾಶಿಯವರ ಮೇಲೂ ಸಾಕಷ್ಟು ಪ್ರಭಾವ ಬೀರುವುದು. ಇವರಿಗೆ ಬುಧನ ಪ್ರಭಾವದಿಂದ ಜೀವನದಲ್ಲಿ ಬಹುತೇಕ ಸಂಗತಿಗಳ ಬಗ್ಗೆ ಗೊಂದಲ ಉಂಟಾಗಬಹುದು. ಈ ಕುರಿತು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಗೊಂದಲವನ್ನು ನಿರ್ಲಕ್ಷಿಸಿ ಮತ್ತು ನೀವು ಸ್ವಲ್ಪ ಪ್ರಮುಖ ಸಂಗತಿಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಹಾಗೆಯೇ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಸಾಕಷ್ಟು ತಾಳ್ಮೆಯಿಂದ ಇರಿ.

Most Read: ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!

ತುಲಾ

ತುಲಾ

ಬುಧನ ಹಿಮ್ಮುಖ ಚಲನೆಯ ಪ್ರಭಾವದಿಂದ ಸಾಕಷ್ಟು ಪ್ರಭಾವವನ್ನು ಅನುಭವಿಸುವಿರಿ. ಇದರಿಂದಾಗಿ ಸಾಕಷ್ಟು ವಿಷಯಗಳಲ್ಲಿ ಮರೆಮಾಚುವ ಪ್ರವೃತ್ತಿಯನ್ನು ತೋರುವರು. ನಿಮ್ಮ ಪ್ರತಿಭೆಯ ವಿಷಯದಲ್ಲಿ ಸಾಕಷ್ಟು ಸುಳ್ಳು ವದಂತಿಗಳು ಹರಡಬಹುದು. ನೀವು ಅಬುಭವಿಸುವ ಸಂಗತಿಗಳ ವಿಷಯದಲ್ಲಿ ಸಾಕಷ್ಟು ಹಿನ್ನೆಡೆಯನ್ನು ಅನುಭವಿಸುವಿರಿ. ನೀವು ಜನರೊಂದಿಗೆ ಅಥವಾ ನಿಮ್ಮ ಸುತ್ತಲಿನ ವ್ಯಕ್ತಿಗಳೊಂದಿಗೆ ಸಮಾಧಾನದಿಂದ ಹಾಗೂ ತಾಳ್ಮೆಯಿಂದ ಇರಲು ಪ್ರಯತ್ನಿಸಿ. ನೀವು ಮಾತನಾಡುವಾಗ ಬಳಸುವ ಪದಗಳ ಮೇಲೆ ಸಾಕಷ್ಟು ಎಚ್ಚರಿಕೆ ಹಾಗೂ ನಿಯಂತ್ರಣ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

ಕುಂಭ

ಕುಂಭ

2019ರ ಮಾರ್ಚ್ ತಿಂಗಳಲ್ಲಿ ನಡೆಯುವ ಬುಧನ ಹಿಮ್ಮುಖ ಚಲನೆಯ ಪ್ರಭಾವವು ಕುಂಭ ರಾಶಿಯವರ ಮೇಲೂ ಸಾಕಷ್ಟು ಪ್ರಭಾವ ಬೀರುವುದು. ಅನಗತ್ಯ ವಿಷಯಗಳ ಕುರಿತು ಹತಾಶೆಗೆ ಒಳಗಾಗಬಹುದು. ಬೇರೆ ದೃಷ್ಟಿಕೋನವನ್ನು ಹೊಂದಲು ಪ್ರಯತ್ನಿಸಿ. ಬೇರೆ ಗ್ರಹಿಕೆಗಳಿಂದ ವಿಷಯವನ್ನು ಪರಿಶೀಲಿಸಿ. ಧನಾತ್ಮಕ ಚಿಂತನೆಯಿಂದ ಸಮಸ್ಯೆಯನ್ನು ನಿಭಾಯಿಸಿ. ಪ್ರತಿಯೊಂದು ಸಂಗತಿಯಲ್ಲೂ ಧನಾತ್ಮಕ ರೀತಿಯಲ್ಲಿ ಚಿಂತಿಸಿ. ಆಗ ಮಾನಸಿಕವಾಗಿ ನಿರಾಳತೆ ದೊರೆಯುವುದು.

English summary

Mercury Retrograde Effects On Zodiacs

Mercury will be retrograde from March 5 to April 28. How is it going to affect you? Well, astrology is always there to help us out and answer all the questions. This retrograde happening for one month seems to create some chaos, positive effects for some and negative for others.Mercury Retrograde Effects On Zodiacs
X
Desktop Bottom Promotion