For Quick Alerts
ALLOW NOTIFICATIONS  
For Daily Alerts

ಈ ಬಾರಿಯ 2019 ಚಂದ್ರಗ್ರಹಣದಿಂದಾಗಿ ಈ 4 ರಾಶಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಲಿದೆಯಂತೆ

|

ಹೊಸ ವರ್ಷ ಕಳೆದು ಕೆಲವು ದಿನಗಳಲ್ಲೇ ನಾವು ಹುಣ್ಣಿಮೆಯನ್ನು ನೋಡುತ್ತಿದ್ದೇವೆ. ಇನ್ನು ಖಗೋಳದಲ್ಲಿ ಆಗುವಂತಹ ಬದಲಾವಣೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶ. ಇದೇ ಹುಣ್ಣಿಮೆಯ ದಿನದಂದು ಚಂದ್ರಗ್ರಹಣವು ನಡೆಯಲಿದೆ. ಇದರಿಂದಾಗಿ ಸೂಪರ್ ಬ್ಲಡ್ ಮೂನ್(ರಕ್ತ ಚಂದ್ರ) ಅಂದರೆ ಚಂದ್ರನು ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವನು. ಆಕಾಶವು ತಿಳಿಯಾಗಿದ್ದರೆ ಆಗ ಈ ಚಂದ್ರಗ್ರಹಣವು ಉತ್ತರ, ಮಧ್ಯ ಮತ್ತು ದಕ್ಷಿಣ ಗೋಲಾರ್ಧಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಅದ್ಭುತವಾಗಿರುವ ವಿದ್ಯಮಾನವನ್ನು ಯಾರೂ ಕೂಡ ವೀಕ್ಷಣೆ ಮಾಡದೆ ತಪ್ಪಿಸಿಕೊಳ್ಳಬಾರದು. ನಿಮಗೆ ರಕ್ತಚಂದ್ರನು ಕಾಣಿಸಿಕೊಳ್ಳುತ್ತಾನೋ, ಇಲ್ಲವೋ ಎನ್ನುವುದು ಬೇರೆ ವಿಚಾರ. ಆದರೆ ಈ ಚಂದ್ರಗ್ರಹಣದಿಂದಾಗಿ ನಿಮ್ಮ ರಾಶಿಚಕ್ರದ ಮೇಲೆ ಪರಿಣಾಮ ಬೀರುವುದು ಎನ್ನುವುದು ಮಾತ್ರ ಖಚಿತ. ಚಂದ್ರಗ್ರಹಣದಿಂದಾಗಿ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ತಿಳಿದುಕೊಂಡರೆ ಆಗ ಆ ರೀತಿಯಾಗಿ ನೀವು ನಡೆಯಬಹುದು. ಚಂದ್ರಗ್ರಹಣವು ಕೆಲವು ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಮತ್ತು 2019ರ ಚಂದ್ರಗ್ರಹಣವು ಕೆಲವು ರಾಶಿಚಕ್ರಗಳ ಮೇಲೆ ತುಂಬಾ ಕಡಿಮೆ ಪರಿಣಾಮ ಬೀರುವುದು.

ಜನವರಿ ತಿಂಗಳ ಹುಣ್ಣಿಮೆಯ ಚಂದ್ರ

ಜನವರಿ ತಿಂಗಳ ಹುಣ್ಣಿಮೆಯ ಚಂದ್ರ

ಜನವರಿ ತಿಂಗಳ ಹುಣ್ಣಿಮೆಯ ಚಂದ್ರನು ಸಾಮಾನ್ಯಕ್ಕಿಂತ ತುಂಬಾ ದೊಡ್ಡದು ಹಾಗೂ ಪ್ರಕಾಶ ಮಾನವಾಗಿರುವನು. ಚಂದ್ರಗ್ರಹಣದ ವೇಳೆ ಆತ ಕಣ್ಮರೆಯಾಗುವನು. ಆದರೆ ಇದು ಸಾಮಾನ್ಯವಾಗಿ ಇರುವಂತಹ ಹುಣ್ಣಿಮೆಯ ಚಂದ್ರನಿಗಿಂತ ತುಂಬಾ ದೊಡ್ಡದು ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುವುದು. ಚಂದ್ರಗ್ರಹಣವು ನಮ್ಮ ಮೇಲೆ ಪ್ರಬಲವಾಗಿ ಪರಿಣಾಮ ಬೀರಲಿದೆ. ಇದರಿಂದ ನಮ್ಮ ಭಾವನೆ ಹಾಗೂ ಉದ್ದೇಶಗಳ ಮೇಲೆ ಪರಿಣಾಮವಾಗಲಿದೆ. ನೀವು ಹಿಂದಿಗಿಂತಲೂ ಹೆಚ್ಚು ಅರ್ಥಗರ್ಭಿತವಾಗಿರಲಿದ್ದೀರಿ ಮತ್ತು ನಿಮ್ಮ ಬೇಡಿಕೆ ಹಾಗೂ ಆಕಾಂಕ್ಷೆಗಳತ್ತ ತೀವ್ರ ಸೆಳೆತ ಹೊಂದಿರುವಿರಿ. ನಿಮ್ಮ ಮನಸ್ಥಿತಿಯು ಹಿಂದಿಗಿಂತಲೂ ಹೆಚ್ಚಾಗಿ ಬದಲಾವಣೆ ಆಗುವುದು ಕಾಣಲಿದ್ದೀರಿ. ನೀವು ಕೆಲವೊಂದು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಚಂದ್ರಗ್ರಹಣದಿಂದಾಗಿ ಆಗುವಂತಹ ಕೆಲವೊಂದು ಸಾಮಾನ್ಯ ಪರಿಣಾಮಗಳು

ಚಂದ್ರಗ್ರಹಣದಿಂದಾಗಿ ಆಗುವಂತಹ ಕೆಲವೊಂದು ಸಾಮಾನ್ಯ ಪರಿಣಾಮಗಳು

ಇದು ಚಂದ್ರಗ್ರಹಣದಿಂದಾಗಿ ಆಗುವಂತಹ ಕೆಲವೊಂದು ಸಾಮಾನ್ಯ ಪರಿಣಾಮಗಳು. ಆದರೆ ಇದು ಪ್ರತಿಯೊಬ್ಬರಿಗೂ ಅವರವರ ರಾಶಿ ಚಕ್ರಕ್ಕೆ ಅನುಗುಣವಾಗಿ ತುಂಬಾ ಭಿನ್ನವಾಗಿ ಇರಲಿದೆ. ಜ್ಯೋತಿಷ್ಯರಾಗಿರುವ ಲಿಸಾ ಸ್ಟಾರ್ ಡಸ್ಟ್ ಅವರು ಹೇಳುವ ಪ್ರಕಾರ ಈ ಚಂದ್ರಗ್ರಹಣವು ನಮ್ಮನ್ನು ತುಂಬಾ ಆಳವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡಲಿದೆ. ನಮ್ಮ ಬುದ್ಧಿಯನ್ನು ತುಂಬಾ ಉನ್ನತ ಶಕ್ತಿಯ ಮಟ್ಟಕ್ಕೆ ಹೆಚ್ಚಿಸಲಿದೆ. ಹುಣ್ಣಿಮೆಯಂದು ಕಾಣಿಸಿಕೊಳ್ಳುವ ಚಂದ್ರಗ್ರಹಣದಿಂದಾಗಿ ಯಾರಿಗೆಲ್ಲಾ ಯಾವ್ಯಾವ ಪರಿಣಾಮಗಳು ಆಗಲಿದೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಮೀನ(ಫೆ.20-ಮಾ.20)

ಮೀನ(ಫೆ.20-ಮಾ.20)

ಸ್ಟಾರ್ ಡಸ್ಟ್ ಹೇಳುವ ಪ್ರಕಾರ ಈ ಚಂದ್ರ ಗ್ರಹಣವು ನಿಮ್ಮ ಹಾದಿಯಲ್ಲಿ ಒಳ್ಳೆಯದಕ್ಕಾಗಿ ಕಡಿಮೆ ಬದಲಾವಣೆ ತರಲಿದೆ. ಇದರರ್ಥ ನೀವು ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದಲ್ಲ. ಆಕೆಯ ಹೇಳುವಂತೆ, ಹೊದ ದಿನಚರಿಯು ನಿಮಗೆ ಒಳ್ಳೆಯದನ್ನು ತರಲಿದೆ. ಇದರರ್ಥ ಏನೆಂದರೆ ನೀವು ಯಾವಾಗಲೂ ಸಾಮಾನ್ಯವಾಗಿ ಹೋಗುವಂತಹ ಹೋಟೆಲ್ ನ ಬದಲಾವಣೆ ಮಾಡುವುದು ಅಥವಾ ಕಚೇರಿಗೆ ಹೋಗುವಂತಹ ದಾರಿಯಲ್ಲಿ ಬದಲಾವಣೆ ಮಾಡುವುದು.

Most Read: 2019 ಚಂದ್ರ ಗ್ರಹಣದ ಪ್ರಭಾವ ರಾಶಿಚಕ್ರದ ಮೇಲೆ ಹೇಗಿರುತ್ತೆ ನೋಡಿ...

ಮಿಥುನ(ಮೇ21-ಜೂನ್20)

ಮಿಥುನ(ಮೇ21-ಜೂನ್20)

ಇನ್ನೊಬ್ಬರು ಜ್ಯೋತಿಷೆಯಾಗಿರುವಂತಹ ರೆನಿ ವ್ಯಾಟ್ ಅವರು ಹೇಳುವ ಪ್ರಕಾರ, ಮಿಥುನ ರಾಶಿಯವರು ಸಾಮಾನ್ಯವಾಗಿ ತುಂಬಾ ಸಾಮಾಜಿಕ ಮಾಧ್ಯಮ ಯಂತ್ರವಾಗಿರುವ ಕಾರಣದಿಂದಾಗಿ ಸಿಂಹ ರಾಶಿಯಲ್ಲಿ ಸಂಭವಿಸುವಂತಹ ಈ ಚಂದ್ರ ಗ್ರಹಣವು ಕೇಂದ್ರ ಸ್ಥಾನವನ್ನು ಪಡೆಯಲು ನಿಮ್ಮ ಬಹುಮನಸ್ಥಿತಿಯು ಹೋರಾಡಲಿದೆ. ಈ ಆಂತರಿಕ ಹೋರಾಟದಿಂದ ಒದ್ದಾಡುವ ಬದಲು ಅಥವಾ ನಿಮ್ಮೊಳಗೆ ಆತಂಕ ಸೃಷ್ಟಿಸಿ ಕೊಳ್ಳುವ ಬದಲಿಗೆ ಫೋನ್ ನಿಂದ ನಿಮ್ಮ ಸಮಯವನ್ನು ಸ್ವಲ್ಪ ಬೇರೆ ಕಡೆ ಕೊಡಿ ಮತ್ತು ನಿಮ್ಮ ಮೆದುಳು ಕೇಂದ್ರಸ್ಥಾವನ್ನು ಪಡೆಯಲು ಬಿಡಿ.

ಕನ್ಯಾ(ಆ.23-ಸೆ23)

ಕನ್ಯಾ(ಆ.23-ಸೆ23)

ಸ್ಟಾರ್ ಡಸ್ಟ್ ಹೇಳುವ ಪ್ರಕಾರ, ಕನ್ಯಾ ರಾಶಿಯವರು ಒಂದು ದಿನ ವಿಶ್ರಾಂತಿ ಪಡೆಯಬೇಕು. ಚಂದ್ರಗ್ರಹಣದಂದು ಈ ರಾಶಿಯವರು ನಿದ್ರೆ ಹಾಗೂ ಆರಾಮ ಮಾಡುವಂತಹ ಸಮಯವಾಗಿರುವುದು. ನಿಮ್ಮ ಶಕ್ತಿಯನ್ನು ಮತ್ತೆ ರಿಚಾರ್ಜ್ ಮಾಡುವುದು ಮತ್ತು ಚಂದ್ರಗ್ರಹಣದ ವೇಳೆ ನೀವು ತುಂಬಾ ಉನ್ನತ ಮತ್ತು ನೈಜವಾಗಿರುವ ಕಾರಣದಿಂದಾಗಿ ನಿಮಗೋಸ್ಕರ ಈ ಸಮಯವನ್ನು ಆನಂದಿಸಿ.

Most Read: ಕುಂಭ ರಾಶಿಯ ಪುರುಷ ಮತ್ತು ಕುಂಭ ರಾಶಿಯ ಮಹಿಳೆಯ ನಡುವಿನ ಹೊಂದಾಣಿಕೆ ಹೇಗೆ ಇರುವುದು ನೋಡಿ

ಧನು(ನ.22-ಡಿ.21)

ಧನು(ನ.22-ಡಿ.21)

ವ್ಯಾಟ್ ಹೇಳುವಂತೆ, ಧನು ರಾಶಿಯವರು ಯಾವಾಗಲೂ ಕುತೂಹಲಿಗರು ಮತ್ತು ಸಾಹಸ ಪ್ರವೃತ್ತಿ ಹೊಂದಿರುವವರು. ಆದರೆ ಈ ಚಂದ್ರಗ್ರಹಣವು ನಮಗೆ ತುಂಬಾ ತಾತ್ವಿಕ ಸ್ಥಾನ ನೀಡಲಿದೆ. ಸ್ನೇಹಿತರು ಹಾಗೂ ನೀವು ಪ್ರೇರಣೆ ಪಡೆದಿರುವಂತಹ ಜನರೊಂದಿಗೆ ಮಾನಸಿಕ ಉತ್ತೇಜನ ಪಡೆಯುವಂತಹ ಮಾತುಕತೆಯಲ್ಲಿ ತೊಡಗಿಕೊಳ್ಳಲಿರುವಿರಿ. ನೀವು ಒಂದು ಮೌನ ಸಂಜೆಯನ್ನು ಎದುರು ನೋಡುತ್ತಲಿದ್ದರೆ ಆಗ ನೀವು ಒಂದು ಪುಸ್ತಕ ತೆಗೆದುಕೊಂಡು ನಿಮ್ಮ ಕುತೂಹಲ ತಣಿಸಿಕೊಳ್ಳುವ ಪ್ರಯತ್ನವನ್ನು ಮಾಡಿ.

English summary

January 2019 Zodiac Signs Super Blood Moon Will Affect The Least

The night of Jan. 21 is a big one for anyone who's interested in the cycles of the moon. On that night, we'll get a glimpse of the first full moon of the year, and it's going to be a special one: it's also a total lunar eclipse, making it a Super Blood Moon (meaning, the moon will appear to have a red tint due to the shadowing caused by the lunar eclipse).
X
Desktop Bottom Promotion