For Quick Alerts
ALLOW NOTIFICATIONS  
For Daily Alerts

ಫೆಬ್ರವರಿ ಹುಣ್ಣಿಮೆಯು ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಉತ್ತಮ ಸ್ವಭಾವವನ್ನು ಪ್ರತಿಬಿಂಬಿಸುವಂತೆ ಮಾಡುವುದು

|

ಹುಣ್ಣಿಮೆ ಎನ್ನುವುದು ಕತ್ತಲಲ್ಲಿ ತಂಪಾದ ತಿಳಿ ಬೆಳಕನ್ನು ನೀಡುವುದು. ಹುಣ್ಣಿಮೆಯ ದಿನ ಸಾಮಾನ್ಯವಾಗಿ ಚಂದ್ರನು ಸಂಪೂರ್ಣವಾಗಿ ಗೋಲಾಕಾರವನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ ಇತರ ದಿನಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಬೆಳಗುವನು. ಹದಿನೈದು ದಿನಗಳ ಕಾಲ ತನ್ನ ಆಕಾರದಲ್ಲಿ ಭಿನ್ನತೆಯನ್ನು ಪಡೆದುಕೊಳ್ಳುವುದರ ಮೂಲಕ ಹುಣ್ಣಿಮೆ ಮತ್ತು ಅಮವಾಸ್ಯೆ ಉಂಟಾಗುವುದು. ಚಂದ್ರನ ಈ ಬದಲಾವಣೆಯು ಪ್ರಕೃತಿಯ ಮೇಲೆ ಹಾಗೂ ಮನುಷ್ಯನ ಜೀವನದ ಮೇಲೂ ಸಾಕಷ್ಟು ಪ್ರಭಾವ ಬೀರುತ್ತವೆ. ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಚಂದ್ರನಿಗೆ ವಿಶೇಷವಾದ ಸ್ಥಾನ-ಮಾನಗಳಿವೆ. ಚಂದ್ರನ ಪ್ರಭಲತೆ ಹಾಗೂ ಸ್ಥಾನ ಮಾನದಿಂದಲೇ ವ್ಯಕ್ತಿಯ ಮಾನಸಿಕ ಸ್ವಭಾವದಲ್ಲಿ ಬದಲಾವಣೆಗಳು ಉಂಟಾಗುವುದು ಎನ್ನುವ ನಂಬಿಕೆಯಿದೆ.

2019ರ ಫೆಬ್ರವರಿ ಹುಣ್ಣಿಮೆಯಂದು ಚಂದ್ರನು ಬಹಳ ಪ್ರಕಾಶಮಾನವಾದ ಹಾಗೂ ಬ್ರಹದಾಕಾರದಿಂದ ಕೂಡಿರುತ್ತಾನೆ ಎಂದು ಹೇಳಲಾಗುವುದು. ಚಂದ್ರನ ಈ ಬದಲಾವಣೆಯು 2019ರ ವರ್ಷದಲ್ಲಿಯೇ ಅತ್ಯಂತ ದೊಡ್ಡ ಹುಣ್ಣಿಮೆ ಎಂದು ಕರೆಯಲಾಗುವುದು. ಕನ್ಯಾರಾಶಿಯ ಮೇಲೆ ಗೋಚರವಾಗುವ ಈ ಹುಣ್ಣಿಮೆಯಂದು ಚಂದ್ರನು ಅತ್ಯಂತ ದೊಡ್ಡ ಗಾತ್ರದಿಂದ ಕೂಡಿರುವಂತೆ ಕಾಣುವನು. ಅಂದರೆ ಚಂದ್ರನು ಭೂಮಿಗೆ ಹೆಚ್ಚು ಸಮೀಪದಲ್ಲಿಬರುವನು ಎಂದು ಹೇಳಲಾಗುವುದು. ಈ ಕಾರಣದಿಂದಲೇ ಚಂದ್ರನ ಬೆಳಕು ಹೆಚ್ಚು ಪ್ರಕಾಶಮಾನ ಹಾಗೂ ದೊಡ್ಡ ಆಕಾರದಲ್ಲಿ ಗೋಚರಿಸುವುದು. ಈ ಬದಲಾವಣೆಯು ಪ್ರತಿಯೊಂದು ರಾಶಿಚಕ್ರದವರ ಮೇಲೂ ಸಾಕಷ್ಟು ಪ್ರಭಾವವನ್ನು ಬೀರುವುದು ಎಂದು ಹೇಳಲಾಗುವುದು.

ಚಂದ್ರನನ್ನು ವೀಕ್ಷಿಸಲು ಬಯಸುವವರು

ಚಂದ್ರನನ್ನು ವೀಕ್ಷಿಸಲು ಬಯಸುವವರು

ವೈಜ್ಞಾನಿಕವಾಗಿ ಸೂಕ್ಷ್ಮ ದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಲು ಬಯಸುವವರು ಫೆಬ್ರವರಿ 19ರ ಚಂದ್ರನನ್ನು ನೋಡಿದರೆ ಬಹಳ ಸುಲಭವಾಗಿ ಚಂದ್ರನ ಮೇಲ್ಮೈ ಲಕ್ಷಣವನ್ನು ತಿಳಿಯಬಹುದು ಎಂದು ಹೇಳಲಾಗುವುದು. ಚಂದ್ರನ ಮೇಲೆ ಗೋಚರಿಸುವ ವಾತಾವರಣಗಳು ಹಾಗೂ ಸಂಗತಿಗಳು ಸಹ ಕಾಣುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನ ಈ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ವ್ಯಕ್ತಿಯ ಮಾನಸಿಕ ನ್ಯೂನತೆ ಹಾಗೂ ಉತ್ತಮ ಗುಣಗಳ ಬಗ್ಗೆ ವಿವರಿಸುವುದು ಎಂದು ಹೇಳಲಾಗುವುದು.

ಅಮವಾಸ್ಯೆಯ ಸಮಯ ಎದುರಾದಾಗ

ಅಮವಾಸ್ಯೆಯ ಸಮಯ ಎದುರಾದಾಗ

ಚಂದ್ರನು ವ್ಯಕ್ತಿಯ ಮಾನಸಿಕ ಚಿಂತನೆ ಹಾಗೂ ವರ್ತನೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುವನು. ಈ ನಿಟ್ಟಿನಲ್ಲಿಯೇ ಕೆಲವರು ಅಮವಾಸ್ಯೆಯ ಸಮಯ ಎದುರಾದಾಗ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ಮತ್ತು ಹುಣ್ಣಿಮೆಯ ಸಮಯ ಎದುರಾದಾಗ ಮಾನಸಿಕವಾಗಿ ಸಂತೋಷ ಹಾಗೂ ಉತ್ಸಾಹದ ಸ್ಥಿತಿಯನ್ನು ಪಡೆದುಕೊಳ್ಳುವರು ಎಂದು ಸಹ ಹೇಳಲಾಗುವುದು. ಈ ಬಾರಿಯ ಹುಣ್ಣಿಮೆಯ ಪ್ರಭಾವವು ರಾಶಿಚಕ್ರಗಳಿಗೆ ಅನುಗುಣವಾಗಿ ಮಾನಸಿಕ ಚಿಂತನೆ ಹಾಗೂ ಸ್ವಭಾವದ ಮೇಲೆ ಸಾಕಷ್ಟು ಪ್ರಭಾವ ಬೀರುವುದು ಎಂದು ಹೇಳಲಾಗುವುದು. ನಿಮಗೂ ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬಗೆಯ ಮಾನಸಿಕ ಬದಲಾವಣೆ ಉಂಟಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ವಿಷಯಗಳನ್ನು ದ್ವಂಸ ಮಾಡುವ ಮುನ್ನ ನೀವೇ ಒಂದಿಷ್ಟು ಚಿಂತನೆ ಹಾಗೂ ಪರಿಶೀಲನೆಯನ್ನು ಕೈಗೊಳ್ಳುವುದು ಉತ್ತಮ. ನೀವು ಕೆಲವು ವಿಷಯದಲ್ಲಿ ಅತ್ಯಂತ ದೂರದಲ್ಲಿ ಇದ್ದೀರಿ ಎಂದು ಭಾವಿಸಬಹುದು. ಆದರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿರುತ್ತದೆ. ಹುಣ್ಣಿಮೆಯ ಪ್ರಭಾವದಿಂದ ನೀವು ಹೊಂದಾಣಿಕೆಯ ಸ್ವಭಾವವನ್ನು ಪಡೆದುಕೊಳ್ಳುವಿರಿ. ನೀವು ಎಲ್ಲಾ ಸಂಗತಿಯಲ್ಲೂ ಸಹಕಾರ ಹಾಗೂ ಹೊಂದಾಣಿಕೆಯನ್ನು ತೋರಿದರೆ ಅದು ನಿಮಗೆ ಉತ್ತಮ ಪ್ರತಿಫಲವನ್ನು ನೀಡುವುದು. ನೀವೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಹೃತ್ಪೂರ್ವಕವಾಗಿ ಅತ್ಯುತ್ತಮ ಉದ್ದೇಶಗಳನ್ನು ಹೊಂದಿದ್ದೀರಿ ಎನ್ನುವುದನ್ನು ಖಚಿತ ಪಡಿಸಿ ಕೊಳ್ಳುವುದು ಉತ್ತಮ.

ವೃಷಭ

ವೃಷಭ

ವೃಷಭ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸರಳವಾದ ಚಿಂತನೆಯಿಂದಲೇ ಎಲ್ಲವನ್ನು ಆನಂದಿಸುತ್ತಾರೆ. ಸಾಮಾಜಿಕ ಮಾಧ್ಯಮದಿಂದ ನೋಡಿದರೆ ನೀವು ಅತ್ಯುತ್ತಮ ಜೀವನವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ತಿಳಿದುಕೊಳ್ಳುತ್ತಾರೆ. ಕೆಲವೊಮ್ಮೆ ನಿಮ್ಮ ಚಿಂತನೆಗಳು ನಿಮಗೆ ಬೇಸರವನ್ನು ತರಬಹುದು. ಆದರೆ ಅದರ ಕುರಿತು ಅತಿಯಾದ ಚಿಂತನೆ ನಡೆಸುವ ಅಗತ್ಯವಿಲ್ಲ. ಹುಣ್ಣಿಮೆಯ ಪ್ರಭಾವದಿಂದ ಕೆಲವು ಪಾಠವನ್ನು ಕಲಿಯುವಿರಿ. ಇತರರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ನೀವು ಏನನ್ನು ಇಷ್ಟ ಪಡುವಿರಿ ಅದನ್ನು ಹೆಚ್ಚು ಆನಂದಿಸಿ.

ಮಿಥುನ

ಮಿಥುನ

ನಕಲಿ ವಿಷಯ ಹಾಗೂ ವಸ್ತುಗಳ ಮೇಲೆ ನೀವು ಹೆಚ್ಚಿನ ಗಮನವನ್ನು ನೀಡಬೇಕಾಗುವುದು. ಮಿಥುನ ರಾಶಿಯವರಿಗೆ ಇದು ಅತ್ಯುತ್ತಮ ಸಲಹೆ ಎನಿಸಿಕೊಳ್ಳುವುದು. ಹುಣ್ಣಿಮೆಯ ಪ್ರಭಾವ ದಿಂದ ನೀವು ಕೆಲವು ಜೀವನದ ಸಂಗತಿಯನ್ನು ತಿಳಿದುಕೊಳ್ಳುವಿರಿ. ನಿಮ್ಮ ಹಾಗೂ ಸಂಗಾತಿಯ ನಡುವೆ ಇರುವ ಅಂತರದ ನೋವು ಏನು ಎನ್ನುವುದು ತಿಳಿದುಕೊಳ್ಳುತ್ತೀರಿ. ಅದರ ಬಗ್ಗೆ ಪರಿಹಾರ ಕಂಡುಕೊಳ್ಳಲು ಅನನ್ಯವಾದ ಪ್ರಯತ್ನವನ್ನು ಕೈಗೊಳ್ಳುವಿರಿ. ನಿಮ್ಮ ಉತ್ತಮ ಪ್ರಯತ್ನಕ್ಕೆ ಉತ್ತಪ ಫಲಿತಾಂಶ ಪಡೆದುಕೊಳ್ಳುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.

ಕರ್ಕ

ಕರ್ಕ

ಈ ರಾಶಿಯವರು ಸಾಮಾನ್ಯವಾಗಿ ಶ್ರಮ ಜೀವಿಗಳು ಎಂದು ಪರಿಗಣಿಸಲಾಗುವುದು. ಯಾರೋ ಮೂರನೇ ವ್ಯಕ್ತಿಗಾದರೂ ಸಾಕಷ್ಟು ಶ್ರಮ ಹಾಗೂ ಶ್ರದ್ಧೆ ವಹಿಸಿ ಕೆಲಸ ಮಾಡುತ್ತಾರೆ. ಭಾವನಾತ್ಮಕ ಹಾಗೂ ಪರೋಪಕಾರದ ಗುಣವುಳ್ಳ ನೀವು ಯಾವುದೇ ಕೆಲಸ ನಿರ್ವಹಿಸುವಾಗ ಪ್ರಾಯೋಗಿಕ ಚಿಂತನೆ ಹಾಗೂ ಮುಂದಾಲೋಚನೆಯನ್ನು ನಡೆಸಬೇಕು. ಆಗಲೇ ಎಲ್ಲಾ ವಿಷಯದಲ್ಲೂ ನಿಮಗೆ ಸಂಪೂರ್ಣವಾದ ಮಾಹಿತಿ ಹಾಗೂ ಅರ್ಥ ದೊರೆಯುವುದು. ನೀವು ನಿಮ್ಮದೇ ಆದ ರೀತಿಯಲ್ಲಿ ಜೀವನ ನಿರ್ವಹಿಸಲು ಬಯಸುವಿರಿ. ಈ ಹುಣ್ಣಿಮೆಯ ಪ್ರಭಾವವು ನಿಮ್ಮ ಆಶಯಕ್ಕೆ ಅನುಗುಣವಾಗಿಯೇ ಸಣ್ಣ ಪುಟ್ಟ ಸಂಗತಿಗಳಿಗೂ ಹೆಚ್ಚಿನ ಯಶಸ್ಸು ಹಾಗೂ ಸಂತೋಷವನ್ನು ತಂದುಕೊಡುವುದು.

ಸಿಂಹ

ಸಿಂಹ

ಈ ಹುಣ್ಣಿಮೆಯು ಸಿಂಹ ರಾಶಿಯವರಿಗೆ ಅತ್ಯುತ್ತಮ ಪ್ರಭಾವ ನೀಡುವುದು. ಹುಣ್ಣಿಮೆಯ ಪ್ರಾಭವದಿಂದ ನೀವು ನಿಮ್ಮ ಸ್ವಂತ ಮೌಲ್ಯಮಾಪನವನ್ನು ಮಾಡುವಿರಿ. ನೀವು ಹಣ, ಆಸ್ತಿ ಅಥವಾ ಇತರ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸಿದರೆ ಅದು ನಿಮ್ಮ ತಪ್ಪು ಮಾರ್ಗ ಎನಿಸಿಕೊಳ್ಳುವುದು. ನೀವು ನಿಮ್ಮ ಹೃದಯದ ಪರಿಶುದ್ಧತೆ ಹಾಗೂ ನಂಬಿಕೆಗೆ ಅನುಗುಣವಾದ ವರ್ತನೆಯನ್ನು ತೋರಿ. ಅದು ನಿಮಗೆ ಹೆಚ್ಚಿನ ಸಂತೋಷ ಹಾಗೂ ನೆಮ್ಮದಿಯನ್ನು ತಂದುಕೊಡುವುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಸಾಮಾನ್ಯವಾಗಿ ವಿಶ್ಲೇಷಣಾ ಸ್ವಭಾವವನ್ನು ಪಡೆದುಕೊಂಡಿರುತ್ತಾರೆ. ಎಲ್ಲಾ ಸಂಗತಿಯಲ್ಲೂ ಹೆಚ್ಚು ಪರಿಶೀಲನೆ ಹಾಗೂ ವಿಶ್ಲೇಷಣೆಯನ್ನು ಕೈಗೊಳ್ಳುವರು. ಕನ್ಯಾ ರಾಶಿಯವರು ಈ ಬಾರಿಯ ಹುಣ್ಣಿಮೆಯ ಪ್ರಭಾವದಿಂದ ಸಾಕಷ್ಟು ಬದಲಾವಣೆಯನ್ನು ಕಂಡುಕೊಳ್ಳುವರು. ಮುಖ್ಯವಾಗಿ ನೀವು ಸಾಕಷ್ಟು ಕಾಳಜಿಯಿಂದ ಇರಬೇಕು ಎಂದು ಸೂಚಿಸಲಾಗಿದೆ. ಕೇವಲ ನಾಲ್ಕು ಗೋಡೆಯ ಕೋಣೆಯಿಂದಲೇ ಎಲ್ಲಾ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ ಎನ್ನುವುದನ್ನು ನೀವು ಅರಿಯಬೇಕಿದೆ. ನಿಮ್ಮ ಸ್ವಯಂ ಕಾಳಜಿ ಎಂದರೆ ಉತ್ತಮವಾದ ಊಟದ ಹವ್ಯಾಸ, ವ್ಯಾಯಾಮ, ಧ್ಯಾನ, ಸ್ಪಾಗಳಲ್ಲಿ ಸೂಕ್ತ ಆರೈಕೆಗೆ ಸೀಮಿತವಾಗಿರುವುದಿಲ್ಲ. ಅದು ನಿಮ್ಮ ಮಾನಸಿಕ ಚಿಂತನೆ ಹಾಗೂ ಸ್ಥಿತಿಯ ಬಗ್ಗೆಯೂ ಆಗಿರುತ್ತದೆ. ಈ ಹುಣ್ಣಿಮೆಯಿಂದ ನೀವು ಅತ್ಯಂತ ಸುಂದರ ಹಾಗೂ ಬುದ್ಧಿವಂತ ವ್ಯಕ್ತಿ ಎನ್ನುವುದನ್ನು ನೆನಪಿಸಿಕೊಳ್ಳಿ. ಜೊತೆಗೆ ನೀವು ನಿಮ್ಮದೇ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿ ಎಂದು ಹೇಳಲಾಗುವುದು.

ತುಲಾ

ತುಲಾ

ಸಾಮಾನ್ಯವಾಗಿ ಸೂಕ್ತ ಮಾರ್ಗ ಹಾಗೂ ಸಮತೋಲನದ ಜೀವನ ನಡೆಸುವವರು ತುಲಾ ರಾಶಿಯವರು. ಇವರು ತಮ್ಮದೇ ಆದ ಸತ್ಯ ಮಾರ್ಗದಲ್ಲಿ ನಡೆಯಲು ಬಯಸುವರು. ಇವರು ಜನರ ಮಾನದಂಡಗಳಿಗೆ ಅನುಗುಣವಾಗಿ ಜೀವಿಸಲು ಇಷ್ಟಪಡುವರು. ಅತ್ಯುತ್ತಮವಾದ ಕೆಲಸ ನಿರ್ವಹಣೆಯನ್ನು ಮಾಡುವ ಸಾಮಥ್ರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಈ ಹುಣ್ಣಿಮೆಯ ಉತ್ತಮ ಪ್ರಭಾವ ನಿಮ್ಮ ಮೇಲೆ ಬೀಳುವುದು. ನೀವು ಎಷ್ಟು ಸುಂದರವಾಗಿ ಸಮತೋಲನ ಹಾಗೂ ನಿರ್ಣಯವನ್ನು ಕೈಗೊಳ್ಳುವಿರೋ ಹಾಗೆಯೇ ಇರಿ. ಸತ್ಯ ಮಾರ್ಗದಲ್ಲಿ ಪರಿಪೂರ್ಣರಾಗುವುದರ ಮೂಲಕ ಇತರರಿಗೂ ಉತ್ತಮ ಸೇವೆ ಹಾಗೂ ಕಾಳಜಿಯನ್ನು ನೀಡುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ

ವೃಶ್ಚಿಕ

ನೀವು ಕೆಲವೊಂದು ಅವಕಾಶಗಳನ್ನು ಬಿಟ್ಟುಬಿಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಹಾಗೆ ಮಾಡಬಾರದು. ಎಲ್ಲಾ ಸಂಗತಿಯನ್ನು ಎದುರಿಸಲು ತಯಾರಾಗಿರಬೇಕು ಎಂದು ಸಲಹೆ ನೀಡಲಾಗುವುದು. ಕೆಲವೊಮ್ಮೆ ನೀವು ಅಂದುಕೊಂಡಂತೆ ವಿಷಯವು ಸಾಗದೆ ಇರಬಹುದು. ಆದರೆ ಅಂತಿಮ ಹಂತದಲ್ಲಿ ನಿಮ್ಮ ಆಲೋಚನೆಯಂತೆಯೇ ನೆರವೇರುವುದು. ಈ ಹುಣ್ಣಿಮೆಯ ಪ್ರಭಾವದಿಂದ ನೀವು ಸಾಕಷ್ಟು ವಿನೋದಗಳನ್ನುಅನುಭವಿಸುವಿರಿ. ನಿಮ್ಮ ಆಸಕ್ತಿಗೆ ಅನುಗುಣವಾದ ಅವಕಾಶಗಳು ನಿಮ್ಮ ಪರವಾಗಿ ಬರಬಹುದು ಎಂದು ಹೇಳಲಾಗುವುದು.

ಧನು

ಧನು

ನೀವು ಮನೆಯಲ್ಲಿಯೇ ಇರುವ ವ್ಯಕ್ತಿತ್ವದವರಲ್ಲ. ಆದರೆ ಈಗ ನಿಮ್ಮ ಗ್ರಹಗಳು ಹಾಗೂ ನಕ್ಷತ್ರಗಳ ಪ್ರಭಾವದಿಂದ ಇತರರಿಗೆ ಬೇಕಾದ ರೀತಿಯಲ್ಲಿಯೇ ವರ್ತನೆ ಹಾಗೂ ಸಹಕಾರವನ್ನು ನೀಡುವಿರಿ. ಇದು ಹೆಚ್ಚಿನ ಸಂತೋಷವನ್ನು ನಿಮಗೆ ನೀಡುವುದು. ಈ ಹುಣ್ಣಿಮೆಯ ಪ್ರಭಾವದಿಂದ ನೀವು ವೃತ್ತಿ ಜೀವನದಲ್ಲಿ ಒತ್ತಡದ ಮಟ್ಟ ಕಡಿಮೆಯಾಗುವುದು. ವಿದೇಶ ಪ್ರವಾಸ ಅಥವಾ ಜೀವನವು ನಿಮಗೆ ಅನುಕೂಲಕರ ಬದಲಾವಣೆಯನ್ನು ತಂದುಕೊಡುವುದು. ನೀವು ನಿಮ್ಮ ವೃತ್ತಿಯಲ್ಲಿ ಬದಲಾವಣೆ ಬಯಸುತ್ತಿದ್ದೀರಿ ಎಂದಾದರೆ ಮೊದಲು ನೀವು ನಿಮ್ಮ ಜೀವನಕ್ಕೆ ಅಗತ್ಯವಾದ ಯೋಜನೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಲಾಗುವುದು.

ಮಕರ

ಮಕರ

ನೀವು ತೋರುವ ಅನುಮಾನದ ಪ್ರವೃತ್ತಿಯೇ ನಿಮಗೆ ಉತ್ತಮ ಲಾಭವನ್ನು ತಂದುಕೊಡುವುದು. ಎಲ್ಲಾ ಸಮಯದಲ್ಲೂ ನೀವು ಕೂಗೊಳ್ಳುವ ಕೆಲಸ-ಕಾರ್ಯಗಳಲ್ಲಿ ಎರಡು ಬಗೆಯ ನೋಟ ಅಥವಾ ಅನುಕೂಲ ಸ್ಥಿತಿಯನ್ನು ಎದುರು ನೋಡಬೇಡಿ. ಈ ಹುಣ್ಣಿಮೆಯ ಪ್ರಭಾವದಿಂದ ನೀವು ನಿಮ್ಮ ಸ್ವಯಂ ಚಿಂತನೆ ಗಳನ್ನು ಬಹಿರಂಗಪಡಿಸಿಕೊಳ್ಳುವಿರಿ. ನಿಮ್ಮ ಅದೃಷ್ಟದ ಸಂಗತಿಯಿಂದಾಗಿ ನೀವು ಉನ್ನತ ಸ್ಥಾನವನ್ನು ಅಥವಾ ಉನ್ನತ ಮಟ್ಟವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ.

ಕುಂಭ

ಕುಂಭ

ನೀವು ನೀಡಿರುವ ಪ್ರತಿಜ್ಞೆಯನ್ನು ಎಂದು ಮರೆಯದಿರಿ. ಈ ರಾಶಿಯ ವ್ಯಕ್ತಿಗಳು ಸಮಗ್ರತೆಯಲ್ಲಿ ಬಹಳ ಪ್ರಭಾವ ಶಾಲಿಯಾಗಿರುತ್ತಾರೆ. ನೀವು ನಿಮ್ಮ ನಿತ್ಯದ ಜೀವನದಲ್ಲಿ ನೈಜ ಸಂಗತಿಗಳಿಗೆ ಅಥವಾ ಮೌಲ್ಯಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುವಿರಿ ಎನ್ನುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬಾರಿಯ ಹುಣ್ಣಿಮೆಯ ಪ್ರಭಾವದಿಂದ ನೈಜ ಜಗತ್ತಿನಲ್ಲಿ ಹಣ ಕಾಸಿನ ಮಹತ್ವ ಹಾಗೂ ಮೌಲ್ಯವನ್ನು ಅರಿಯುವಿರಿ. ಜೊತೆಗೆ ಇತರರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಉತ್ತಮ ಪರಿಕಲ್ಪನೆಯನ್ನು ಪಡೆದು ಕೊಳ್ಳುವಿರಿ.

ಮೀನ

ಮೀನ

ಸಾಮಾನ್ಯವಾಗಿ ಎಲ್ಲರೂ ಕುರುಡು ನಂಬಿಕೆಯಿಂದಲೇ ಮುಂದೆ ಸಾಗುತ್ತಾರೆ. ಅಂತೆಯೇ ಮೀನ ರಾಶಿಯವರು ಇದ್ದಾರೆ. ಆದರೆ ಅದೃಷ್ಟ ಎನ್ನುವಂತೆ ಈ ಬಾರಿ ನೀವು ನಿಮ್ಮ ಹತ್ತಿರದ ವ್ಯಕ್ತಿಗಳ ಬಗ್ಗೆ ಹಾಗೂ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವಿರಿ. ಇದರಿಂದ ನಿಮಗೆ ಸಾಕಷ್ಟು ಸತ್ಯ ಅಥವಾ ನೈಜತೆಯ ಸಂಗತಿಗಳು ತಿಳಿಯುತ್ತವೆ. ನಿಮ್ಮ ಪ್ರೀತಿ ಪಾತ್ರರು ನಿಮ್ಮ ಸೌಂದರ್ಯವನ್ನು ಮೆಚ್ಚಿಕೊಳ್ಳುವರು. ಹುಣ್ಣಿಮೆಯ ಪ್ರಭಾವದಿಂದ ಅನೇಕ ಸಂಗತಿಗಳು ನಿಮ್ಮ ಪರವಾಗಿ ನಿಲ್ಲುತ್ತವೆ ಎಂದು ಹೇಳಲಾಗುವುದು.

English summary

February supermoon pushes your to be yourself best

Full moons often help us to see the big picture. But under the light of the Virgo supermoon—which occurs when the orb is at its closest point to Earth, the urge to gaze is slated to be even stronger—we may have trouble seeing the forest for the trees.
X
Desktop Bottom Promotion