For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರದ ಅನುಸಾರ ಯಾವ ಕೆಲಸವನ್ನು ಮಾಡಬೇಕು? ಯಾವುದನ್ನು ಮಾಡಬಾರದು?

|

ವೃತ್ತಿಯ ಜೀವನಕ್ಕೆ ಕಾಲಿಡುವುದು ಅಥವಾ ನಮ್ಮದೇ ಆದ ಸಂಪಾದನೆಯನ್ನು ಹೊಂದುವುದು ಎಂದರೆ ಅದಷ್ಟು ಸುಲಭದ ಸಂಗತಿಯಲ್ಲ. ನಾವು ವಿದ್ಯಾಭ್ಯಾಸ ಮಾಡಿದ ವಿಷಯದ ಆಧಾರದ ಮೇಲೆಯೇ ಎಲ್ಲರಿಗೂ ಉದ್ಯೋಗ ದೊರೆಯುವುದು ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಜನರು ತಾವು ಓದಿರುವುದು ಒಂದು ಬಗೆಯ ವಿಷಯದ್ದಾಗಿರುತ್ತದೆ. ಅವರು ಮಾಡುವ ವೃತ್ತಿ ಅಥವಾ ಕೆಲಸವೇ ಬೇರೆಯದ್ದಾಗಿರುತ್ತದೆ. ಕೆಲಸಕ್ಕೂ ಪಡೆದ ಶೈಕ್ಷಣಿಕ ತೇರ್ಗಡೆಗೂ ಯಾವುದೇ ಸಂಬಂಧಗಲಿರುವುದಿಲ್ಲ.

ಅರಿವಿಲ್ಲದ ಕೆಲಸವನ್ನು ಮಾಡಲು ಹೋದಾಗ ಅಥವಾ ಯಾವುದೋ ಒಂದು ನಿರ್ದಿಷ್ಟ ಕೆಲಸದಲ್ಲಿಯೇ ತೊಡಗಿಕೊಂಡಾಗ ಅಲ್ಲಿರುವ ಸಹೋದ್ಯೋಗಿಗಳು ಅಥವಾ ಮೇಲಾಧಿಕಾರಿಗಳಿಂದ ಸಾಕಷ್ಟು ಸಲಹೆಗಳು ಬರುತ್ತವೆ. ಬಹುತೇಕ ಸಂದರ್ಭದಲ್ಲಿ ಆ ಸಲಹೆಗಳು ಸಹಾಯ ಮಾಡುವುದಕ್ಕಿಂತ ಗೊಂದಲವನ್ನು ಸೃಷ್ಟಿಸುತ್ತವೆ ಎಂದು ಹೇಳಬಹದು. ಕೆಲವೊಮ್ಮೆ ನಾವು ಮಾಡುತ್ತಿರುವ ಕೆಲಸ ಸರಿಯಾಗಿಯೇ ಸಾಗುತ್ತಿದ್ದರೂ ಅದನ್ನು ಕೆಡಿಸಲು ಅಥವಾ ನಮ್ಮನ್ನು ಮುಂದೆ ಹೋಗಲು ಬಯಸದ ವ್ಯಕ್ತಿಗಳು ಸಾಕಷ್ಟು ಅಡೆತಡೆಯನ್ನುಂಟು ಮಾಡುವರು. ಅಂತಹ ಸಂದರ್ಭಲ್ಲಿ ಮಾನಸಿಕವಾಗಿ ನೋವು ಹಾಗೂ ಬೇಸರ ಕೆಲಸದಲ್ಲಿ ಉತ್ಸಾಹ ಇಲ್ಲದಂತೆ ಮಾಡುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ವಿಶೇಷವಾದ ನಕ್ಷತ್ರ ಪುಂಜ ಹಾಗೂ ರಾಶಿಚಕ್ರವನ್ನು ಹೊಂದಿರುತ್ತಾರೆ. ಆಯಾ ರಾಶಿಚಕ್ರಗಳ ಗ್ರಹಗತಿಗಳಿಗೆ ಅನುಗುಣವಾಗಿ ಉದ್ಯೋಗ ದೊರೆಯುವುದು. ಇಲ್ಲವೇ ನಿರ್ದಿಷ್ಟ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತಂದುಕೊಡುವುದು. ರಾಶಿಚಕ್ರಗಳಿಗೆ ಅನುಚಿತವಾದ

ಕೆಲಸವಾಗಿದ್ದರೆ ಅದರಲ್ಲಿ ನಾವು ಎಷ್ಟೇ ಶ್ರಮ ಅಥವಾ ಶ್ರದ್ಧೆಯನ್ನು ತೋರಿದರೂ ಆ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ರಾಶಿಚಕ್ರಗಳು ಹಾಗೂ ಗ್ರಹಗತಿಗಳ ಪ್ರಭಾವ ಉತ್ತಮವಾಗಿದೆ ಅಥವಾ ಅವುಗಳಿಗೆ ಅನುಗುಣ ವಾಗಿಯೇ ನಮ್ಮ ಕೆಲಸದ ಆಯ್ಕೆ ಇದೆ ಎಂದಾಗ ಬಹುಬೇಗ ಯಶಸ್ಸು

ಹಾಗೂ ಕೆಲಸದಲ್ಲಿ ನೆಮ್ಮದಿ ದೊರೆಯುವುದು. ಹನ್ನೆರಡು ರಾಶಿಚಕ್ರವೂ ವಿಭಿನ್ನ ಚಿಹ್ನೆಯನ್ನು ಒಳಗೊಂಡಿವೆ. ಆ ಚಿನ್ನೆಗಳಿಗೆ ಹಾಗೂ ರಾಶಿಗಳಿಗೆ ಅನುಗುಣವಾಗಿ ವ್ಯಕ್ತಿ ಯಾವ ಸಂದರ್ಭದಲ್ಲಿ ಯಾವ ರೀತಿಯ ವರ್ತನೆಯನ್ನು ಹಾಗೂ ಭಾವನೆಯನ್ನು ಹೊಂದಬೇಕು? ನಿಮ್ಮ ಕೆಲಸ ಯಾವ ರೀತಿಯಲ್ಲಿ ಇರಬೇಕು ಎನ್ನುವಂತಹ ಸಂಗತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಏರಿಕೆಯ ಕ್ರಮವನ್ನು ಅನುಸರಿಸಿ

ಏರಿಕೆಯ ಕ್ರಮವನ್ನು ಅನುಸರಿಸಿ

ಸೂರ್ಯನ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರದವರು ಸಾಮಾನ್ಯವಾಗಿ ಎಲ್ಲಾ ವಿಷಯದಲ್ಲೂ ಬಹುಬೇಗ ಏಳಿಗೆಯನ್ನು ಬಯಸುತ್ತಾರೆ. ಇವರ ಸುತ್ತಲಿನ ವ್ಯಕ್ತಿಗಳು ಸಹ ಇವರ ಯೋಚನೆ ಹಾಗೂ ಕೆಲಸಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸುವರು. ಸುತ್ತಲಿನ ವ್ಯಕ್ತಿಗಳು ನಿಮಗಿಂತ ಹೆಚ್ಚು ಭಿನ್ನವಾಗಿದ್ದಾರೆ ಎಂದು ನೀವು ಭಾವಿಸಬಹುದು. ಅದು ನಿಮಗೆ ಸಂಪೂರ್ಣವಾಗಿ ವಿಭಿನ್ನ ಅನುಭವವನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳು ನಿಮ್ಮನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಪರಿಗಣಿಸಿ. ಅಸಮಧಾನ ಹಾಗೂ ತಪ್ಪು ಗ್ರಹಿಕೆಯನ್ನು ಹೊಂದಿದ್ದರೆ ಅದನ್ನು ತಗ್ಗಿಸಲು ಸಾಕಷ್ಟು ದೀರ್ಘ ಸಮಯ ಬೇಕಾಗುವುದು.

ದಯಾಳು ಸ್ವಭಾವ ಇಲ್ಲದಿದ್ದರೂ ಸರಿ ನಾಗರೀಕರಂತೆ ವರ್ತಿಸಿ

ದಯಾಳು ಸ್ವಭಾವ ಇಲ್ಲದಿದ್ದರೂ ಸರಿ ನಾಗರೀಕರಂತೆ ವರ್ತಿಸಿ

ಧನು, ಮೇಷ, ವೃಶ್ಚಿಕ ರಾಶಿಯವರು ಅಸಮಧಾನಗೊಂಡಾಗ ಅಥವಾ ದುಃಖದಲ್ಲಿ ಇರುವಾಗ ಅವರ ಮಾತುಗಳು ಬಹಳ ಇರಿತವನ್ನು ಕೊಡುವುದು. ಅತೃಪ್ತಿ ಹಾಗೂ ಕೋಪ ಇರುವಾಗ ಅದನ್ನು ವ್ಯಕ್ತಪಡಿಸಲು ಸೂಕ್ತ ಸಮಯ ಇರುತ್ತದೆ ಎನ್ನುವುದನ್ನು ಅರಿಯಬೇಕು. ನೀವು ಅಂತಹ ಸಂದರ್ಭದಲ್ಲಿ ನಾಗರೀಕತೆಯಿಂದ ವರ್ತಿಸಬೇಕು. ಜೊತೆಗೆ ನಿಮ್ಮ ಭಾವನೆ ಹಾಗೂ ಪದಗಳ ಮೇಲೆ ನಿಯಂತ್ರಣವನ್ನು ಹೊಂದಿರಬೇಕು.

ಗಾಸಿಪ್ ಹರಡುವುದರಲ್ಲಿ ಕೊಂಚ ಎಚ್ಚರಿಕೆಯನ್ನು ವಹಿಸಿ

ಗಾಸಿಪ್ ಹರಡುವುದರಲ್ಲಿ ಕೊಂಚ ಎಚ್ಚರಿಕೆಯನ್ನು ವಹಿಸಿ

ಗಾಸಿಪ್ ಎನ್ನುವುದು ಎಲ್ಲರಿಗೂ ಅಪಾಯಕಾರಿಯಾದ ಸಂಗತಿ. ಅದು ಪ್ರತಿಯೊಬ್ಬ್ರ ವರ್ತನೆ ಹಾಗೂ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುವುದು. ವಿಶೇಷವಾಗಿ ಮಿಥುನ ಮತ್ತು ಕರ್ಕ ರಾಶಿಯವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಮಿಥುನ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಗಾಸಿಪ್ ಹರಡುವ ಅಪಾಯವನ್ನು ಹೊಂದಿರುತ್ತಾರೆ. ಅವರು ಈ ವಿಚಾರವಾಗಿ ಸಾಕಷ್ಟು ಎಚ್ಚರಿಕೆ ಹಾಗೂ ಹಿಡಿತವನ್ನು ಹೊಂದಿರಬೇಕು. ಕರ್ಕ ರಾಶಿಯವರು ಕಚೇರಿಯಲ್ಲಿ ನಡೆಯುವ ರಾಜಕೀಯದಿಂದ ಆದಷ್ಟು ದೂರ ಇರಲು ಪ್ರಯತ್ನಿಸಿ. ಜೊತೆಗೆ ಸಕಾರಾತ್ಮಕ ವಿಷಯಗಳಿಗೆ ಕಿವಿಯನ್ನು ತೆರೆದಿಡಿ. ಆಗ ನೀವು ನಿಮ್ಮ ಸ್ಥಿತಿ ಹಾಗೂ ಕೆಲಸವನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳುವಿರಿ.

ಪ್ರಶ್ನೆ ಕೇಳುವುದರಲ್ಲಿ ಸ್ವಲ್ಪ ಹೆದರಿಕೆ ಅಥವಾ ಭಯ ಇರಲಿ

ಪ್ರಶ್ನೆ ಕೇಳುವುದರಲ್ಲಿ ಸ್ವಲ್ಪ ಹೆದರಿಕೆ ಅಥವಾ ಭಯ ಇರಲಿ

ಮೀನ ರಾಶಿಯವರು ನೀರಿನ ಹರಿವಿನ ಜೊತೆ ಸಾಗುವಂತೆ ಸನ್ನಿವೇಶಗಳು ಹೇಗೆ ಬರುತ್ತವೆಯೋ ಹಾಗೆ ಸಾಗಬೇಕು. ತುಲಾ ರಾಶಿಯವರು ಸಾಮಾನ್ಯವಾಗಿ ತಮ್ಮ ಮಾತನ್ನು ಕೇಳಬೇಕು ಎಂದು ಬಯಸುತ್ತಾರೆ. ಈ ಎರಡು ರಾಶಿಯವರು ಪ್ರಶ್ನೆ ಮಾಡುವುದು ವಿರುದ್ಧವಾಗಿ ನಡೆಯುವ ವರ್ತನೆಯನ್ನು ತೋರಬಾರದು. ಆಗ ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಹಾಗೂ ಸುತ್ತಲಿನ ಜನರೊಂದಿಗೆ ಉತ್ತಮ ಸಂಬಂಧವನ್ನು ಪಡೆದುಕೊಳ್ಳುವಿರಿ.

ದಪ್ಪ ಚರ್ಮದವರಂತೆ ವರ್ತಿಸಿ

ದಪ್ಪ ಚರ್ಮದವರಂತೆ ವರ್ತಿಸಿ

ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳು ಎಂದು ಪರಿಗಣಿಸ ಲಾಗುವುದು. ವೃತ್ತಿ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲವು ಒರಟಾದ ಮಾತುಗಳು, ನಿಮ್ಮ ಕೆಲಸದಲ್ಲಿ ನ್ಯೂನತೆಗಳನ್ನು ಅಥವಾ ಪದೇ ಪದೇ ಯಾವುದೋ ಸಂಗತಿಗಳಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡಬಹುದು. ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ. ಅವುಗಳನ್ನು ಅಲ್ಲಿಯೇ ಬಿಟ್ಟು ನಿಮ್ಮ ಕೆಲಸ ಹಾಗೂ ದಾರಿಯಲ್ಲಿ ನಡೆಯುವುದರ ಕಡೆಗೆ ಹೆಚ್ಚಿನ ಗಮನ ನೀಡಿ. ಅನಗತ್ಯ ವಿಷಯಗಳಿಗೆ ನೀವು ದಪ್ಪ ಚರ್ಮ ದವರಂತೆ ವರ್ತಿಸಬೇಕು.

ಬದಲಾವಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಿ

ಬದಲಾವಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಿ

ಕನ್ಯಾ ಮತ್ತು ಮಕರ ರಾಶಿಯವರು ಹಠಾತ್ ಬದಲಾವಣೆಯನ್ನು ಬಯಸುವುದಿಲ್ಲ. ಆದರೆ ಬದಲಾವಣೆ ಎನ್ನುವುದು ಜೀವನದ ಒಂದು ಭಾಗ ಎನ್ನುವುದನ್ನು ಅರಿಯಬೇಕು. ನಿಮ್ಮ ಸಂಸ್ಥೆ ಅಥವಾ ಕಚೇರಿಯಲ್ಲಿ ಕೆಲವು ಸಂಗತಿಗಳು ಏರಿಳಿತವನ್ನು ಅನುಭವಿಸುತ್ತಿದ್ದರೆ ಅದನ್ನು ನೀವು ಸ್ವೀಕರಿಸಲುಸಿದ್ಧ ರಾಗಿರಬೇಕು. ಕೆಟ್ಟ ಬದಲಾವಣೆಯನ್ನು ಹಿಮ್ಮೆಟ್ಟಿ, ಒಳ್ಳೆಯದರ ಬಗ್ಗೆ ಚಿಂತನೆ ಹಾಗೂ ಸಿದ್ಧತೆಯನ್ನು ನಡೆಸಬೇಕು. ಅದನ್ನು ಸೂಕ್ಷ್ಮವಾಗಿ ನಿರ್ವಹಿಸುವುದರ ಮೂಲಕ ಯಶಸ್ಸನ್ನು ಪಡೆಯಬೇಕು.

ದೊಡ್ಡ ಸಂಗತಿಯನ್ನು ಮರೆಯದಿರಿ

ದೊಡ್ಡ ಸಂಗತಿಯನ್ನು ಮರೆಯದಿರಿ

ಕನ್ಯಾ ಮತ್ತು ವೃಷಭ ರಾಶಿಯವರು ಬಹುತೇಕ ಸಂದರ್ಭದಲ್ಲಿ ಕೆಲವು ಸಂಗತಿಗಳನ್ನು ಮರೆತು ಬಿಡುತ್ತಾರೆ. ನೀವು ಕೈಗೊಂಡ ದೊಡ್ಡ ಸಂಗತಿಗಳು ಮತ್ತು ಯೋಜನೆಗಳ ಬಗ್ಗೆ ಮರೆಯದಿರಿ. ಹಾಗೆಯೇ ಈ ಹಿಂದೆ ನೀವು ಪಡೆದ ದೊಡ್ಡ ಬದಲಾವಣೆ ಹಾಗೂ ಅನುಭವಗಳನ್ನು ಮರೆಯದೆ ಮುಂದಿನ ಕೆಲಸದಲ್ಲಿ ಎಚ್ಚರಿಕೆಯನ್ನು ವಹಿಸಿ.

ನಿಮ್ಮ ಅಹಂಕಾರವನ್ನು ಅವಲೋಕಿಸಿ

ನಿಮ್ಮ ಅಹಂಕಾರವನ್ನು ಅವಲೋಕಿಸಿ

ಮೇಷ ಮತ್ತು ಸಿಂಹ ರಾಶಿಯ ವ್ಯಕ್ತಿಗಳು ನಾಯಕತ್ವದ ಕೌಶಲ್ಯವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ನಿಮ್ಮ ವರ್ತನೆಗಳು ಹಾಗೂ ಭಾವನೆಗಳು ಯಾವಾಗಲು ಸರಿಯಾಗಿ ಇರುತ್ತದೆ ಎಂದು ಪರಿಗಣಿಸುವಿರಿ. ಕೆಲವೊಮ್ಮೆ ನಿಮ್ಮ ಅಹಂಕಾರದಿಂದ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಪರಿವರ್ತನೆ ಉಂಟಾಗುವುದು. ಕೆಲವೊಮ್ಮೆ ಋಣಾತ್ಮಕ ಬದಲಾವಣೆಯನ್ನು ಉಂಟುಮಾಡಬಹುದು. ಹಾಗಾಗಿ ನೀವು ನಿಮ್ಮ ಅಹಂಕಾರದಿಂದ ಉಂಟಾದ ಹಾಗೂ ಮುಂದೆ ಸಂಭವಿಸಬಹುದಾದ ಸಂಗತಿಯನ್ನು ಅವಲೋಕಿಸುವುದರ ಮೂಲಕ ಬದಲಾವಣೆಯನ್ನು ಕಂಡುಕೊಳ್ಳಬಹುದು.

ಆದಷ್ಟು ಸಮಾಧಾನಕರವಾಗಿ ಇರಿ

ಆದಷ್ಟು ಸಮಾಧಾನಕರವಾಗಿ ಇರಿ

ತುಲಾ, ವೃಷಭ ಮತ್ತು ಮಕರ ರಾಶಿಯ ವ್ಯಕ್ತಿಗಳು ಅತ್ಯಂತ ಸ್ಥಿರ ಹಾಗೂ ಶಾಂತ ಸ್ವಭಾವದವರಾಗಿರುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ಅಥವಾ ನಿಮ್ಮ ಕೈಕೆಳಗೆ ಕೆಲಸ ಮಾಡುವ ವ್ಯಕ್ತಿಗಳು ತಪ್ಪು ಮಾಡಬಹುದು. ಇಲ್ಲವೇ ತಪ್ಪು ಯೋಜನೆಯನ್ನು ಕೈಗೊಳ್ಳಬಹುದು. ಅಂತಹ ಸಮಯದಲ್ಲಿ ಸಾಕಷ್ಟು ತಾಳ್ಮೆ ಹಾಗೂ ತಣ್ಣನೆಯ ಮನಸ್ಸಿನಿಂದ ಅವರನ್ನು ತಿದ್ದಲು ಪ್ರಯತ್ನಿಸಿ. ಆಗ ನಿಮ್ಮ ಮೌಲ್ಯವು ಇನ್ನಷ್ಟು ಹೆಚ್ಚುವುದು.

ಯಶಸ್ಸಿನ ಕಡೆಗೆ ನಿಮ್ಮ ಗಮನ ಇರಲಿ

ಯಶಸ್ಸಿನ ಕಡೆಗೆ ನಿಮ್ಮ ಗಮನ ಇರಲಿ

ಕುಂಭ ಮತ್ತು ಸಿಂಹ ರಾಶಿಯವರು ಸಾಮಾನ್ಯವಾಗಿ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಹಾಗೂ ಗುರಿಯನ್ನು ಸಾಧಿಸಬೇಕು ಎನ್ನುವ ಮನಸ್ಸುನ್ನು ಹೊಂದಿರುತ್ತಾರೆ. ಇವರಿಗೆ ಕೆಲವೊಮ್ಮೆ ಕೆಲಸದ ಕ್ಷೇತ್ರದಲ್ಲಿ ನಡೆಯುವ ಅಡೆತಡೆಗಳು ನಿಮ್ಮ ಗಮನವನ್ನು ಇತರ ಕಡೆಗೆ ತಿರುಗುವಂತೆ ಮಾಡಬಹುದು. ಆದರೆ ನೀವು ಅದೆಲ್ಲವನ್ನೂ ಬದಿಗೊತ್ತಿ ನಿಮ್ಮ ಗಮನ ಹಾಗೂ ಕೆಲಸದ ಮಾರ್ಗ ಹೇಗಿರಬೇಕು ಎನ್ನುವುದನ್ನು ಅರಿತು ಆ ಮಾರ್ಗವಾಗಿ ಗಮನ ಇರಿಸುವುದನ್ನು ಕಲಿಯಬೇಕು. ಆಗ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನು ಹಾಗೂ ಗೌರವ ದೊರೆಯುವುದು.

ತೀರ್ಮಾನ

ತೀರ್ಮಾನ

ನಿಮ್ಮ ರಾಶಿಚಕ್ರದ ಚಿಹ್ನೆ ಯಾವುದೇ ಆಗಿರಲಿ, ಕೆಲಸದ ಕ್ಷೇತ್ರದಲ್ಲಿ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವಂತಹ ಅನೇಕ ಕೆಲಸಗಳು ನಡೆಯುತ್ತವೆ. ಅನೇಕ ಬಗೆಯ ಜನರು ಒಂದೆಡೆಯಲ್ಲಿಯೇ ಕೆಲಸ ಮಾಡುವುದ ರಿಂದ ಭಿನ್ನ ಬಗೆಯ ತೀರ್ಮಾನ ಹಾಗೂ ಸಂಗತಿಗಳು ಸಂಭವಿಸುತ್ತವೆ. ಅಂತಹ ಸಂದರ್ಭದಲ್ಲಿ ನಮ್ಮ ಗುರಿಯೇನು? ನಾವು ಹೇಗಿರಬೇಕು? ಯಾವ ಸಂಗತಿಯ ಬಗ್ಗೆ ಹೆಚ್ಚಿನ ಗಮನ

ನೀಡಬೇಕು ಎನ್ನುವುದನ್ನು ಅರಿತುಕೊಂಡರೆ ಕೆಲಸದ ಕ್ಷೇತ್ರದಲ್ಲೂ ನೀವು ಸುಲಭವಾಗಿ ಯಶಸ್ಸನ್ನು ಪಡೆದುಕೊಳ್ಳುವಿರಿ.

English summary

Dos and Dont to get you ahead at work, based on your zodiac sign

There are some ultimate truths and best practices in any workplace - and following them is a surefire way to make progress in your career. What you really need to find is a way to advance that works with how you approach your job, and your zodiac sign holds the key! Take a look at these dos and don’ts for getting ahead at work.
Story first published: Friday, February 15, 2019, 17:56 [IST]
X
Desktop Bottom Promotion