For Quick Alerts
ALLOW NOTIFICATIONS  
For Daily Alerts

ಕುಂಭ ರಾಶಿಯ ಪುರುಷ ಮತ್ತು ಕುಂಭ ರಾಶಿಯ ಮಹಿಳೆಯ ನಡುವಿನ ಹೊಂದಾಣಿಕೆ ಹೇಗೆ ಇರುವುದು ನೋಡಿ

|

ದಾಂಪತ್ಯ ಅಥವಾ ಸಂಗಾತಿ ಎನ್ನುವ ವಿಷಯವು ವ್ಯಕ್ತಿಯ ಅತ್ಯಂತ ವೈಯಕ್ತಿಕ ಹಾಗೂ ಆತ್ಮೀಯ ಸಂಗತಿಯಾಗಿರುತ್ತವೆ. ಆ ಜೀವನದಲ್ಲಿ ಅತ್ಯಂತ ಪ್ರಮುಖ ಸಂಗತಿ ಎಂದರೆ ವ್ಯಕ್ತಿಯ ಜೀವನ ಹಾಗೂ ಅವನ ಕುಟುಂಬವಾಗಿರುವುದು. ತನ್ನದು ಎಂದು ಕಟ್ಟಿಕೊಂಡ ಒಂದು ಪುಟ್ಟ ಸಂಸಾರ ಅಥವಾ ಕುಟುಂಬದಲ್ಲಿ ಸದಾ ಸಂತೋಷ ಮತ್ತು ನೆಮ್ಮದಿ ಇರಬೇಕು ಎಂದಾದರೆ ಪತಿ-ಪತ್ನಿಗಳ ನಡುವೆ ಉತ್ತಮ ಹೊಂದಾಣಿಕೆ ಇರಬೇಕು. ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವ ಇರಬೇಕು. ಆಗಲೇ ಒಬ್ಬರ ಕಷ್ಟ ಸುಖಗಳಿಗೆ ಇನ್ನೊಬ್ಬರು ಬಾಗಿಯಾಗುತ್ತಾರೆ. ನಮಗಾಗಿ ಇನ್ನೊಂದು ಜೀವ ಇದೆ ಎನ್ನುವ ಭರವಸೆ ಹಾಗೂ ನೆಮ್ಮದಿಯ ಜೀವನ ದೊರೆಯುವುದು.

ಪತಿ ಪತ್ನಿಗಳ ನಡುವೆ ಒಂದೇ ಬಗೆಯ ಹವ್ಯಾಸ ಹಾಗೂ ಸ್ವಭಾವ ಇರುವುದು ಅತಿ ವಿರಳ. ಸಾಮಾನ್ಯವಾಗಿ ವಿರುದ್ಧ ಬಗೆಯ ಸ್ವಭಾವ ಹಾಗೂ ಆಸಕ್ತಿ ಇರುತ್ತವೆ. ಅಂತಹ ಸಂದರ್ಭದಲ್ಲಿ ತನ್ನ ಬಯಕೆಗಳಿಗೆ ಮತ್ತು ಅವಶ್ಯಕತೆಗೆ ಸಂಗಾತಿಯಾದವರು ಬೆಲೆ ನೀಡಬೇಕು. ಅವರೇ ಹೊಂದಿಕೊಂಡು ಸಾಗಲಿ ಎನ್ನುವ ಮನಃಸ್ಥಿತಿಯನ್ನು ತೋರುವರು. ಈ ರೀತಿಯ ಸ್ವಾರ್ಥ ಸ್ವಭಾವ ನಿಧಾನವಾಗಿ ಇಬ್ಬರ ನಡುವೆ ಬೇಸರ ಹಾಗೂ ಜಿಗುಪ್ಸೆಯ ಮನೋಭಾವವನ್ನು ಸೃಷ್ಟಿಸುವುದು. ಹಾಗಾಗಿ ಪುರಾತನ ಕಾಲದಿಂದಲೂ ಹಿರಿಯರು ಕುಂಡಲಿಯ ಹೊಂದಾಣಿಕೆಯನ್ನು ನೋಡಿಕೊಂಡು ವಿವಾಹ ಮಾಡಿಸುತ್ತಿದ್ದರು. ಹುಡುಗ ಹಾಗೂ ಹುಡುಗಿಯ ಕುಂಡಲಿಯಲ್ಲಿ ಹೊಂದಾಣಿಕೆ ಇದೆ ಎಂದಾದರೆ ಅವರು ವಿವಾಹದ ನಂತರ ಎಲ್ಲಾ ಸಂಗತಿಗಳಲ್ಲೂ ಪರಸ್ಪರ ತ್ಯಾಗ ಮತ್ತು ಹೊಂದಾಣಿಕೆಯ ಮೂಲಕ ಜೀವನ ನಡೆಸುವರು ಎನ್ನುವ ನಂಬಿಕೆಯನ್ನು ಹೊಂದಿದ್ದರು.

ರಾಶಿಚಕ್ರಗಳ ಅನುಸಾರ

ರಾಶಿಚಕ್ರಗಳ ಅನುಸಾರ

ರಾಶಿಚಕ್ರಗಳ ಅನುಸಾರ ಪ್ರತಿಯೊಬ್ಬರಲ್ಲೂ ವಿಭಿನ್ನ ಬಗೆಯ ಗುಣಗಳು ಹಾಗೂ ಹವ್ಯಾಸಗಳು ಇರುತ್ತವೆ. ಅವು ಹುಟ್ಟಿನಿಂದಲೇ ಕಗರತವಾಗಿ ಬರುವುದರಿಂದ ಅವುಗಳಲ್ಲಿ ಬದಲಾವಣೆ ಮತ್ತು ತ್ಯಾಗವನ್ನು ಮಾಡುವುದು ಎಂದಾಗ ಮನಸ್ಸಿಗೆ ಸ್ವಲ್ಪ ಕಷ್ಟ ಎನಿಸಬಹುದು. ಅಂತಹ ನೋವು ಉಂಟಾದರೂ ಸರಿ, ತನ್ನ ಸಂಗಾತಿಗಾಗಿ ನಿಲ್ಲಬೇಕು ಎನ್ನುವ ಭಾವನೆಯನ್ನು ಹೊಂದಿದ್ದರೆ ಅಂತಹವರ ಜೀವನ ಮತ್ತು ದಾಂಪತ್ಯದ ಖುಷಿಯು ಸುಂದರವಾಗಿ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರ ಸ್ವಭಾವವು ಇನ್ನೊಂದು ರಾಶಿಚಕ್ರದವರ ಗುಣಕ್ಕೆ ಸಾಕಷ್ಟು ಹೊಂದಾಣಿಕೆ ಆಗುವುದು. ಅಂತಹವರ ನಡುವೆ ಹೊಂದಾಣಿಕೆ ಹಾಗೂ ಪ್ರೀತಿಯು ಹೆಚ್ಚಾಗಿ ಇರುತ್ತವೆ ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯ ಪುರುಷರು ಮತ್ತು ಕುಂಭ ರಾಶಿಯ ಮಹಿಳೆಯರ ನಡುವೆ ಸಾಕಷ್ಟು ಹೊಂದಾಣಿಕೆ ಹಾಗೂ ಪ್ರೀತಿ-ವಿಶ್ವಾಸ ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು. ಆದರೆ ಆರಂಭದಲ್ಲಿ ಒಬ್ಬರನ್ನೊಬ್ಬರು ಅರಿಯುವ ಸಂಗತಿಯಲ್ಲಿ ಹಾಗೂ ಸಂಬಂಧವು ಏಳಿಗೆ ಕಾಣಬೇಕು ಎಂದಾದರೆ ಸಾಕಷ್ಟು ಕಷ್ಟಕರವಾದ ಕೆಲಸವನ್ನು ಮಾಡ ಬೇಕಾಗುವುದು. ಕುಂಭರಾಶಿಯವರ ನಡುವೆ ಪ್ರೀತಿ ಮತ್ತು ಪಾಲುದಾರಿಕೆಯ ಮೇಲೆ ಕೇಂದ್ರೀಕರಿಸಿದಾಗ ಬಂಡಾಯ ರೂಪದ ನಿರ್ಣಯವು ನಿಜವಾದ ರೀತಿಯಲ್ಲಿ ಯಶಸ್ಸನ್ನು ಸಾಧಿಸುವುದು.

ಕುಂಭ ರಾಶಿಯ ಪುರುಷ ಮತ್ತು ಮಹಿಳೆ

ಕುಂಭ ರಾಶಿಯ ಪುರುಷ ಮತ್ತು ಮಹಿಳೆ

ಕುಂಭ ರಾಶಿಯ ಪುರುಷ ಮತ್ತು ಮಹಿಳೆಯ ನಡುವೆ ಒಂದೇ ಬಗೆಯ ಸಮಸ್ಯೆಗಾಗಿ ಹೋರಾಟ ನಡೆಯಬಹದು. ತಮ್ಮ ಅಭಿಪ್ರಾಯ ಹಾಗೂ ಆಸೆಗಳೇ ಮೊದಲು ಪೂರೈಸಬೇಕು ಎನ್ನುವ ಭಾವನೆಗಳು ಹೆಚ್ಚಾಗಿ ಇರುತ್ತವೆ. ಇವರಿಬ್ಬರು ತಮ್ಮ ನಂಬಿಕೆಯ ವಿಷಯಕ್ಕಾಗಿ ಸದಾ ಹೋರಾಡುತ್ತಲೇ ಇರುತ್ತಾರೆ. ಇವರು ಒಂದೇ ಚಿಹ್ನೆಯನ್ನು ಹೊಂದಿರುವುದರಿಂದ ಎಲ್ಲಾ ಸಂಗತಿಯಲ್ಲೂ ಒಟ್ಟಿಗೇ ತೃಪ್ತಿ ಪಡುವವರಾಗಿರುತ್ತಾರೆ. ಇವರು ತಮ್ಮ ಭಿನ್ನತೆಗಳಿಂದಾಗಿ ಏಕಾಂಗಿಯಾಗಿ ಇರಲು ಬಯಸುತ್ತಾರೆ. ಅಲ್ಲದೆ ತಮ್ಮನ್ನು ಅರಿತು ಕೊಳ್ಳುವವರು ಬೇರೆಯ ವ್ಯಕ್ತಿಗಳೇ ಇದ್ದಾರೆ ಎಂದು ಭಾವಿಸುವರು.

Most Read:2019 ಚಂದ್ರ ಗ್ರಹಣದ ಪ್ರಭಾವ ರಾಶಿಚಕ್ರದ ಮೇಲೆ ಹೇಗಿರುತ್ತೆ ನೋಡಿ...

ಮೂಲಭೂತ ಹೊಂದಾಣಿಕೆ

ಮೂಲಭೂತ ಹೊಂದಾಣಿಕೆ

ಕುಂಭ ರಾಶಿಯ ಪುರುಷರು ಮತ್ತು ಮಹಿಳೆಯರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳಲು ಸಮರ್ಥರಾಗಿರುತ್ತಾರೆ. ಇವರು ತಮ್ಮ ಹೃದಯ ಏನನ್ನು ಹೇಳುತ್ತದೆಯೋ ಅದನ್ನೇ ಮಾಡಲು ಮುಂದಾಗುತ್ತಾರೆ. ಇವರು ಪರಸ್ಪರ ಯಾವುದೇ ವಿಶೇಷ ಆಸಕ್ತಿಯನ್ನು ಹೊಂದಿರುವುದಿಲ್ಲ. ಇವರ ಸಂಬಂಧವು ಅತಿಯಾದ ಹೊಂದಾಣಿಕೆಯಿಂದ ಕೂಡಿರುವುದಿಲ್ಲ. ತಮ್ಮದೇ ಮಾರ್ಗ ಹಾಗೂ ಆಸಕ್ತಿಗೆ ಅನುಗುಣವಾಗಿ ಇಬ್ಬರು ಸಾಗುವುದರಿಂದ ಅಲ್ಲಿ ಒಬ್ಬರಿಗಾಗಿ ಒಬ್ಬರು ತ್ಯಾಗದ ಗುಣವನ್ನು ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆಯೂ ಆಕರ್ಷಣೆಯ ವಿಷಯವು ಕಡಿಮೆಯಾಗಿರುತ್ತದೆ. ಅಲ್ಲದೆ ಇಬ್ಬರ ನಡುವೆಯೂ ಸಾಕಷ್ಟು ನಿರ್ಲಕ್ಷ್ಯದ ಭಾವನೆ ಅಥವಾ ಧೋರಣೆ ನಡೆಯುವುದು.

ಮೂಲಭೂತ ಹೊಂದಾಣಿಕೆ

ಮೂಲಭೂತ ಹೊಂದಾಣಿಕೆ

ಕುಂಭ ರಾಶಿಯವರು ಸಾಮಾನ್ಯವಾಗಿ ಸಹಾನುಭೂತಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ಅಂತಹ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ಹೆಚ್ಚು ಸಮಯಗಳ ಕಾಲ ಇಬ್ಬರೂ ತೊಡಗಿಸಿಕೊಳ್ಳುವರು. ಆಗ ತಮ್ಮ ವೈಯಕ್ತಿಕ ವಿಷಯಗಳಿಗೆ ಅಥವಾ ಸಂಗಾತಿಗಾಗಿ ಸಮಯ ನೀಡಲು ಕಷ್ಟವಾಗುವುದು. ಆಗ ತಮ್ಮನ್ನು ಯಾರು ಹೆಚ್ಚು ಸಂತೋಷದಿಂದ ಇರಿಸುವರು ಎನ್ನುವುದರ ಬಗ್ಗೆ ಚಿಂತನೆ ಹಾಗೂ ಆಸಕ್ತಿಯನ್ನು ತೋರುವರು. ಕೆಲವು ಪ್ರಾಥಮಿಕ ಹೊಂದಾಣಿಕೆಯಲ್ಲಿ ಒಂದೇ ಬಗೆಯ ವರ್ತನೆ ಇರುತ್ತದೆ ಆದರೂ ಭಾವನಾತ್ಮಕವಾಗಿ ದೂರ ನಿಲ್ಲುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಪ್ರೀತಿ ಮತ್ತು ಸಂಬಂಧ

ಪ್ರೀತಿ ಮತ್ತು ಸಂಬಂಧ

ಕುಂಭ ರಾಶಿಯವರು ಸಾಮಾನ್ಯವಾಗಿ ಅತಿಯಾದ ನಾಚಿಕೆ ಸ್ವಭಾವದವರಾಗಿರುತ್ತಾರೆ. ಅಂತರ್ಮುಖಿ ಸ್ವಭಾವ ಇವರದ್ದು. ಇವರು ತಮ್ಮ ಆಂತರಿಕ ಬಯಕೆ ಹಾಗೂ ಮನಸ್ಸಿನ ಮಾತುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಅದನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಕಷ್ಟಪಡುವರು. ಅವರೇ ತಮ್ಮ ಮನಸ್ಸಿನ ಬಯಕೆಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸುವರು. ಸಂಗಾತಿಗಿಂತ ಸಹವರ್ತಿಗಳೇ ತಮ್ಮನ್ನು ಉತ್ತಮವಾಗಿ ಅರ್ಥೈಸಿ ಕೊಂಡಿದ್ದಾರೆ ಎಂದು ನಂಬುತ್ತಾರೆ. ಈ ರಾಶಿಯ ಪುರುಷ ಮತ್ತು ಮಹಿಳೆ ಪರಸ್ಪರ ನಿಕಟ ಸ್ನೇಹಿತರಾಗಿರಲು ಸಾಕಷ್ಟು ಕಷ್ಟ ಪಡುವರು. ಇವರು ಪರಸ್ಪರ ಉತ್ತಮ ಸ್ನೇಹಿತರಾಗಿ ಇರಬಲ್ಲರು.

ಪ್ರೀತಿ ಮತ್ತು ಸಂಬಂಧ

ಪ್ರೀತಿ ಮತ್ತು ಸಂಬಂಧ

ಕುಂಭ ರಾಶಿಯ ಪುರುಷ ಮತ್ತು ಮಹಿಳೆ ಪರಸ್ಪರ ಪ್ರೀತಿ-ವಿಶ್ವಾಸದಲ್ಲಿ ಬೀಳುತ್ತಾರೆ ಆದರೂ ಅದನ್ನು ದೀರ್ಘ ಕಾಲದವರೆಗೆ ನಿಭಾಯಿಸಿಕೊಂಡು ಹೋಗಲು ಸಾಕಷ್ಟು ಕಷ್ಟಪಡಬೇಕಾಗುವುದು. ಹಾಗಾಗಿಯೇ ಜ್ಯೋತಿಷ್ಯ ಶಾಸ್ತ್ರವು ಒಂದೇ ನಕ್ಷತ್ರ ಹಾಗೂ ಒಂದೇ ರಾಶಿಯವರ ವಿವಾಹ ದೀರ್ಘ ಕಾಲ ಮುಂದುವರಿಯುವುದಿಲ್ಲ ಹಾಗೊಮ್ಮೆ ಮುಂದುವರಿದರೂ ಅವರಲ್ಲಿ ಸಾಕಷ್ಟು ಬೇಸರ ಹಾಗೂ ಭಿನ್ನಾಭಿಪ್ರಾಯಗಳು ಮುಂದುವರಿದಿರುತ್ತವೆ ಎಂದು ಹೇಳಲಾಗುವುದು.

Most Read:2019ರ ವರ್ಷದಲ್ಲಿ ರಾಶಿ ಚಕ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿದೆ ನೋಡಿ...

ಜೊತೆಯಲ್ಲಿ ನಿರ್ವಹಿಸುವ ಕೆಲಸ

ಜೊತೆಯಲ್ಲಿ ನಿರ್ವಹಿಸುವ ಕೆಲಸ

ಒಂದೇ ಬಗೆಯ ತೀವ್ರತೆ ಹಾಗೂ ಮಹತ್ವಾಕಾಂಕ್ಷೆಗಳ ಮನಃಸ್ಥಿತಿಯನ್ನು ಹೊಂದಿರುವ ಇವರು ಒಟ್ಟಿಗೆ ಕೆಲಸದಲ್ಲಿ ತೊಡಗಿರಲು ಯಾವುದೇ ಸಮಸ್ಯೆಗಳು ಇರುವುದಿಲ್ಲ. ಕೆಲಸ ಮಾಡುವಾಗ ಇವರ ವ್ಯಕ್ತಿತ್ವ ಅಥವಾ ನಿಲುವಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಘರ್ಷಣೆ ಉಂಟಾಗದು. ಸೃಜನಶೀಲ ರೂಪದಲ್ಲಿ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸುವರು. ಯಾವುದೇ ಬಗೆಯ ಹಸ್ತಕ್ಷೇಪ ಮಾಡದೆ ಶ್ರಮದಾಯಕವಾಗಿ ಕೆಲಸವನ್ನು ನಿರ್ವಹಿಸುತ್ತಾರೆ. ಇಬ್ಬರಲ್ಲೂ ಒಂದೇ ಬಗೆಯ ಆದರ್ಶ ಇರುವುದರಿಂದ ಅದು ಬೇರೆ ಬೇರೆ ಮಾರ್ಗದಲ್ಲಿ ಹೋಗುವಾಗ ಕೆಲವೊಮ್ಮೆ ಘರ್ಷಣೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ.

English summary

Aquarius Man And Aquarius Woman Compatibility

Aquarius men and women are already known for having a rough time finding a lover who can handle their truly unique needs and expectations, so how do they fare in a mirror match? In addition to how well the loving bond is fostered and maintained, the water-bearers will need to put a lot of hard work into making this relationship flourish. Aquarius is independence personified, and its members will never accept the limitation of being told that something is impossible or out of reach for them
Story first published: Saturday, January 19, 2019, 17:12 [IST]
X
Desktop Bottom Promotion