Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
2019ರಲ್ಲಿ ಜೀವನದಲ್ಲಿ ಹಲವಾರು ಬದಲಾವಣೆಗಳು ಕಾಣಲಿರುವ 5 ರಾಶಿಚಕ್ರದವರು
2019ರ ಗ್ರಹಗತಿಯ ಪ್ರಕಾರ ವರ್ಷವು ನಿಮ್ಮ ಜೀವನದ ಎಲ್ಲಾ ವಿಭಾಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಲಿದೆ. ರಾಶಿ ಚಕ್ರಕ್ಕೆ ಅನುಗುಣವಾಗಿ ಧನಾತ್ಮಕ ಹಾಗೂ ನಕರಾತ್ಮಕ ಬದಲಾವಣೆ ಕಾಣಬಹುದು.2019ರಲ್ಲಿ ನಿಮ್ಮ ರಾಶಿಚಕ್ರಕ್ಕೆ ಏನಾಗಲಿದೆ ಎಂದು ನಿಮಗೆ ತಿಳಿಯಲು ಇದೆಯಾ? ಈ ಐದು ರಾಶಿಯವರಿಗೆ ಎಲ್ಲಾ ವಿಚಾರಗಳು ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ.

ವೃಷಭ
ನಿಮ್ಮ ಬೇಸರ ಮೂಡಿಸುವ ದಿನಚರಿ ಕೊನೆಗೊಳಿಸುವ ಸಮಯ ಬಂದಿದೆ. ಮುಂದಿನ ಬದಲಾವಣೆಯು 2019ರಲ್ಲಿ ನಿಮ್ಮ ಹೊಸ ಮುಖವನ್ನು ತೋರಿಸಲಿದೆ. ನೀವು ತುಂಬಾ ಆತ್ಮವಿಶ್ವಾಸ ಮತ್ತು ಧೈರ್ಯಶಾಲಿಯಾಗಿ ಇರುವಿರಿ. ಅದರಲ್ಲೂ ಪ್ರೀತಿಯ ವಿಚಾರದಲ್ಲಿ. 2019ರಲ್ಲಿ ನೀವು ಮಾಡುವಂತಹ ಪ್ರತಿಯೊಂದು ಕಠಿಣ ಪರಿಶ್ರಮಕ್ಕೂ ಫಲ ಸಿಗುವುದು. ಮೇಯಿಂದ ಸಪ್ಟೆಂಬರ್ ತನಕ ನಿಮಗೆ ಫಲ ಸಿಗಲು ಎಲ್ಲಾ ಪ್ರಯತ್ನ ಮಾಡುತ್ತಿರಬೇಕು. ನಿಮ್ಮ ಆರ್ಥಿಕ ಸ್ಥಿತಿಯು ಏಪ್ರಿಲ್ ನಿಂದ ಜೂನ್ ನಲ್ಲಿ ಬದಲಾವಣೆ ಕಾಣಬಹುದು. ನಿಮ್ಮ ಸಂಬಂಧವು ತುಂಬಾ ಚೆನ್ನಾಗಿ ಕೆಲಸ ಮಾಡುವುದು. 2019ರಲ್ಲಿ ನೀವು ಜತೆಗಾರಿಕೆ ಮತ್ತು ಜಂಟಿ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವೃಷಭ ರಾಶಿಯವರಿಗೆ ಅವಕಾಶಗಳು: ನೀವು ಒಳ್ಳೆಯ ಬೆಂಬಲದೊಂದಿಗೆ ಕೆಲಸ ಮಾಡುತ್ತಿದ್ದರೆ ಆಗ ನೀವು 2019ರಲ್ಲಿ ಒಳ್ಳೆಯ ಸಂಪಾದನೆ ಮಾಡಲಿದ್ದೀರಿ. ಪೂರ್ವ ತಯಾರಿಯ ಅವಧಿಯು ಜೂನ್ ಮೊದಲು ಬರುವ ಕಾರಣದಿಂದಾಗಿ ಇದಕ್ಕೆ ಮೊದಲೇ ಸರಿಯಾಗಿ ತಯಾರಿಗಳನ್ನು ಮಾಡಿಕೊಳ್ಳಿ.

ಸಿಂಹ
ಇದು ತುಂಬಾ ಸುಲಭವಾದ ಪ್ರಯಾಣ ಎಂದು ನೀವು ಭಾವಿಸುವುದು ಬೇಡ ಮತ್ತು ಇದನ್ನು ನಿಭಾಯಿಸುವುದು ಕೂಡ ಅಷ್ಟು ಸುಲಭವೇನಲ್ಲ. ಏನೇ ಆದರೂ ಬದಲಾವಣೆಗಳು ತುಂಬಾ ಒಳ್ಳೆಯ ವಿಷಯಕ್ಕೆ ಆಗುವುದು. ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ಹೆಚ್ಚಾಗಿ ಸ್ನೇಹಿತರು, ಸಂಬಂಧ, ಪ್ರೀತಿ ಮತ್ತು ಆರ್ಥಿಕತೆ ಕಡೆ ಹೆಚ್ಚಿನ ಗಮನಹರಿಸಲಿದ್ದೀರಿ. ವರ್ಷದ ಆರಂಭದಲ್ಲಿ ಬೇರೆ ವ್ಯಕ್ತಿಯಿಂದಾಗಿ ನಿಮಗೆ ಕೆಲವೊಂದು ಅಚ್ಚರಿಗಳು ಬರಬಹುದು. ಜೂನ್ ನಿಂದ ಅಕ್ಟೋಬರ್ ತನಕದ ಸಮಯವು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅತೀ ಫಲಪ್ರದಾಯಕ ಸಮಯವಾಗಿದೆ. ಸಿಂಹ ರಾಶಿಯವರಿಗೆ ಅವಕಾಶಗಳು ನಿಮ್ಮ ಫಲಪ್ರದ ಸಮಯವು ಜೂನ್ ಅಂತ್ಯದಲ್ಲಿ ಆರಂಭವಾಗುವುದು ಮತ್ತು ಅಕ್ಟೋಬರ್ ಆರಂಭದವರೆಗೆ ಇರುವುದು. ಸಾಮಾನ್ಯ ಜೀವನದಲ್ಲಿ ನೀವು ತುಂಬಾ ಶಕ್ತಿ ಮತ್ತು ಉತ್ಸಾಹದ ಚಿಲುಮೆಯಾಗಿ ಇರುವಿರಿ. ಈ ವರ್ಷವು ನಿಮಗೆ ದೊಡ್ಡ ಮಟ್ಟದಲ್ಲಿ ಬೆಳವಣಿಗೆಗೆ ಸಹಕಾರಿ ಆಗಲಿದೆ.

ಕನ್ಯಾ
ನೀವು ತುಂಬಾ ನಾಚಿಕೆ ಸ್ವಭಾವದವರು ಆಗಿದ್ದರೆ, ಆಗ 2019ರಲ್ಲಿ ನೀವು ಇದರಿಂದ ಹೊರಗೆ ಬರಲಿದ್ದೀರಿ. ನಿಮ್ಮ ಎಲ್ಲಾ ಭೀತಿ ಹಾಗೂ ಚಿಂತೆಯನ್ನು ಬಿಟ್ಟು ಜೀವನದ ಮೇಲೆ ನೀವು ನಿಯಂತ್ರಣ ಸಾಧಿಸಲಿದ್ದೀರಿ. ಜೀವನ ನೀವು ಹೇಗೆ ಅದನ್ನು ರೂಪಿಸುತ್ತೀರಿ ಎನ್ನುವುದರ ಮೇಲಿದೆ. ನೀವು ದಿಟ್ಟ ಹೆಜ್ಜೆಯನ್ನಿಡಿ, ಇದರಿಂದಾಗಿ ನೀವು ಕನಸುಗಳನ್ನು ಈಡೇರಿಸಬಹುದು. ಈ ವರ್ಷವು ನಿಮ್ಮ ಸಂಬಂಧಗಳಿಗೆ ತುಂಬಾ ವಿಶೇಷ ವರ್ಷವಾಗಿದೆ. ವೈಯಕ್ತಿಕ ಹಾಗೂ ವೃತ್ತಿಪರವಾಗಿ. ಮದುವೆಗೆ ಇದು ಸೂಕ್ತ ವರ್ಷವಾಗಿದೆ. ಈ ರಾಶಿಚಕ್ರದವರು ಪೋಷಕರಾಗುವರು ಅಥವಾ ಹೊಸ ಆಲೋಚನೆ ಗಳಿಗೆ ಜನ್ಮ ನೀಡುವರು ಎಂದು ನಕ್ಷತ್ರಗಳು ಹೇಳುತ್ತವೆ. ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ನಿಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನಹರಿಸಿ. ಕನ್ಯಾ ರಾಶಿಯವರಿಗೆ ಕೆಲವು ಅವಕಾಶಗಳು-ನಿಮ್ಮ ಮೇಲೆ ನಂಬಿಕೆಯನ್ನಿಡಿ ಮತ್ತು ನಿಮ್ಮ ಕನಸುಗಳು ನಿಜ ವಾಗುವುದು. ಸಪ್ಟೆಂಬರ್ 2019ರ ತನಕ ಗುರು ಗ್ರಹವು ನಿಮ್ಮ ರಾಶಿಯಲ್ಲಿ ಇರುವುದು ಮತ್ತು ಇದರಿಂದಾಗಿ ನಿಮಗೆ ಒಳ್ಳೆಯ ಲಾಭವಾಗಲಿದೆ.

ಮಕರ
ಇದು ನಿಮಗೆ ಒಳ್ಳೆಯ ವರ್ಷ. ನಿಮ್ಮನ್ನು ಯಾವುದು ಕೂಡ ಭಯಭೀತಗೊಳಿಸದು ಮತ್ತು ನೀವು ಅಜೇಯರಾಗಿರುವಿರಿ. ಪ್ರೀತಿ ಮತ್ತು ವೃತ್ತಿಯಲ್ಲಿ ನೀವು ಉನ್ನತ ಮಟ್ಟದ ಯಶಸ್ಸು ಪಡೆಯಲಿದ್ದೀರಿ. ನೀವು ಒಂಟಿಯಾಗಿದ್ದರೆ ಆಗ ನಿಮಗೆ ಸಂಗಾತಿಯು ಸಿಗುವರು. ಯಾಕೆಂದರೆ ನಿಮಗೆ ಈಗ ಹೃದಯ ಬಿಚ್ಚಿ ಮಾತನಾಡಲು ಯಾವುದೇ ಭೀತಿಯಿಲ್ಲ. 2018ರಲ್ಲಿ ಕೆಲವೊಂದು ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳದೆ ಇರುವ ಕಾರಣ ದಿಂದಾಗಿ ವರ್ಷದ ಆರಂಭದಲ್ಲಿ ಕೆಲವೊಂದು ಅಸ್ಪಷ್ಟತೆ ಇರಬಹುದು. ವರ್ಷದ ಮೊದಲು ಕೆಲವು ತಿಂಗಳಲ್ಲಿ ನೀವು ಖಂಡಿತವಾಗಿಯೂ ಕೆಲವೊಂದು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಮೇಯಿಂದ ಆಗಸ್ಟ್ ತಿಂಗಳ ತನಕ ನೀವು ಕೆಲವೊಂದು ಮಹತ್ವದ ಪಾಠಗಳನ್ನು ಕಲಿಯಲಿದ್ದೀರಿ. ಮಕರ ರಾಶಿಯವರಿಗೆ ಕೆಲವು ಅವಕಾಶಗಳು- ಸಂವಹನದ ವಿಚಾರದಲ್ಲಿ ನೀವು ತುಂಬಾ ಮುಕ್ತವಾಗಿ ಮಾತನಾಡಲಿದ್ದೀರಿ. ಇದರಿಂದಾಗಿ ನಿಮಗೆ ಮತ್ತಷ್ಟು ಅವಕಾಶಗಳು ಒದಗಿ ಬರಲಿದೆ. ನೀವು ಹೆಚ್ಚು ಪ್ರಯಾಣ ಮಾಡಬೇಕು. ಇದರಿಂದಾಗಿ ನೀವು ಒಳ್ಳೆಯ ಜನರ ಸಂಪರ್ಕ ಸಾಧಿಸಲಿದ್ದೀರಿ. ನೀವು ವರ್ಷದ ಆರಂಭದಲ್ಲಿ ಒಂದು ಗುರಿ ಪಡೆಯಲಿದ್ದೀರಿ ಮತ್ತು ಇದನ್ನು ಮುಂದಿನ ತಿಂಗಳಲ್ಲಿ ಪೂರ್ತಿ ಮಾಡುವಿರಿ. ಜುಲೈನಿಂದ ಸಪ್ಟೆಂಬರ್ ತನಕ ಅವಧಿಯು ನಿಮಗೆ ಅತ್ಯುತ್ತಮವಾಗಿ ಇರುವುದು.

ಮೀನ
2019ರ ವರ್ಷವು ನಿಮಗೆ ಬದಲಾವಣೆಯ ವರ್ಷವಾಗಿ ಇರಲಿದೆ. ನಿಮ್ಮ ಗೊಂದಲ ಮತ್ತು ಭೀತಿಯನ್ನು ಬದಿಗಿಡಿ ಮತ್ತು ಕನಸುಗಳನ್ನು ನನಸು ಮಾಡಲು ಮುಂದಡಿ ಇಡಿ. ಮೀನ ರಾಶಿಯಲ್ಲಿ ಜನಿಸಿರುವ ಕಾರಣದಿಂದಾಗಿ 2019ರಲ್ಲಿ ನಿಮಗೆ ಕೆಲವು ಹೊಸ ಹಾಗೂ ಅಸಾಮಾನ್ಯ ಘಟನೆಗಳನ್ನು ಎದುರಿಸಬೇಕಾಗಿ ಬರಬಹುದು. ದೀರ್ಘಕಾಲದಿಂದ ಮುಸುಕಿನ ಒಳಗಡೆ ಇರುವಂತಹ ಹೊಸ ವಿಚಾರಗಳನ್ನು ಅನುಭವಿಸಲು ನೀವು ದೈನಂದಿನ ಜೀವನವನ್ನು ಬಿಟ್ಟು ಹೊರಬರಬೇಕು. ಬೇರೆ ಜನರು ನಿಮ್ಮ ಮೇಲೆ ಯಾವುದೇ ತಡೆ ಹೇರಲು ಪ್ರಯತ್ನಿಸುವ ವೇಳೆ ನೀವು ಬಂಡಾಯಗಾರನಾಗಬಹುದು. ನೀವು ಹೊಂದಿರುವಂತಹ ಎಲ್ಲಾ ಸಂಬಂಧಗಳಿಂದ ನೀವು ಆನಂದ ಪಡೆಯುವಿರಿ. ಮೀನ ರಾಶಿಯವರಿಗೆ ಅವಕಾಶಗಳು- ಈ ವರ್ಷ ನಿಮಗೋಸ್ಕರ ನೀವು ಸತ್ಯವಂತರಾಗಿರಬೇಕು ಮತ್ತು ನಿಮ್ಮಲ್ಲಿ ಇರುವಂತಹ ಕೆಲವೊಂದು ವಿಭಿನ್ನ ಆಲೋಚನೆಗಳನ್ನು ಪಾಲಿಸಿಕೊಂಡು ಹೋಗಿ. ಒಂದೇ ರೀತಿಯ ಜೀವನದಿಂದಾಗಿ ವರ್ಷದ ಮಧ್ಯಭಾಗದಲ್ಲಿ ನೀವು ಸ್ವಲ್ಪ ಬಂಡಾಯಗಾರರಾಗುತ್ತೀರಿ. ಜನವರಿ ಮಧ್ಯಭಾಗದಿಂಧ ಮಾರ್ಚ್ ಮಧ್ಯಭಾಗದ ತನಕ ಹಲವಾರು ಗ್ರಹಗತಿಗಳು ಜೀವನದ ಹಲವು ವಿಭಾಗದಲ್ಲಿ ನಿಮಗೆ ನೆರವಾಗಲಿದೆ. ನಿಮಗೆ ಬೆಂಬಲ ಸಿಗುವುದು ಮತ್ತು ನಿಮ್ಮ ಆಲೋಚನೆಗಳನ್ನು ವಿಸ್ತರಿಸಲು ಇದು ಸರಿಯಾದ ಸಮಯ. ಅದರಲ್ಲೂ ಫೆಬ್ರವರಿ 19-27ರ ತನಕ ಹುಟ್ಟಿರುವಂತಹ ಜನರಿಗೆ ಈ ವರ್ಷದಲ್ಲಿ ಆಗುವ ಬದಲಾವಣೆಗಳು ಹೆಚ್ಚು ಪರಿಣಾಮ ಬೀರಲಿದೆ.