For Quick Alerts
ALLOW NOTIFICATIONS  
For Daily Alerts

ನಡೆದಾಡುವ ದೇವರು: ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಬಗ್ಗೆ ತಿಳಿದುಕೊಳ್ಳಬೇಕಾದ 10 ಸಂಗತಿಗಳು

|

ಯಾವ ವ್ಯಕ್ತಿ ಇತರರ ಸಂತೋಷ ಮತ್ತು ದುಃಖಗಳಿಗೆ ಪ್ರತಿಕ್ರಿಯಿಸುತ್ತಾನೆ ಅಂತಹವನು ಉನ್ನತ ಮಟ್ಟದ ಆಧ್ಯಾತ್ಮಿಕ ಒಟ್ಟೂಟವನ್ನು ಪಡೆದುಕೊಂಡಿರುತ್ತಾನೆ ಎಂದು ಭಗವದ್ ಗೀತೆಯಲ್ಲಿ ಹೇಳಲಾಗುವುದು. ಅಂತಹ ಒಂದು ಉತ್ತಮ ಉದಾರಣೆಗೆ ಸಾಕ್ಷಿಯಾಗಿ ನಿಲ್ಲುವ ಗುರುಗಳು ಅಥವಾ ಸ್ವಾಮೀಜಿ ಎಂದರೆ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರು. ಇವರು ತುಂಬು ಕುಟುಂಬದಲ್ಲಿ ಜನಿಸಿ, ಅಪ್ಪ -ಅಮ್ಮನ ಮುದ್ದಿನ ಕಂದನಾಗಿದ್ದರು. ತನ್ನ ಒಡ ಹುಟ್ಟಿದ ಸಹೋದರ ಮತ್ತು ಸಹೋದರಿಯರ ಪ್ರೀತಿಯ ತಮ್ಮನಾಗಿದ್ದರು. ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವರಾಗಿದ್ದವರು ಇವರು. ಆದರೆ ಸಮಾಜದಲ್ಲಿ ಎಲ್ಲರಿಗೂ ಸನ್ನಡತೆಯ ದಾರಿಯನ್ನು ತೋರಿಸಿಕೊಟ್ಟ ಮಹಾನ್ ಯೋಗಿಯಾಗಿದ್ದರು.

ಹುಟ್ಟಿದ್ದು ಒಂದು ಕುಗ್ರಾಮದಲ್ಲಿಯಾದರೂ ಜೀವನದಲ್ಲಿ ಸಾಕಷ್ಟು ಸದ್ವಿಚಾರದೊಂದಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಜೀವನದ ಪ್ರಿತಿಯೊಂದು ಕ್ಷಣ ಹಾಗೂ ಕೆಲಸ ಕಾರ್ಯಗಳೆಲ್ಲವನ್ನೂ ಜನತೆಗಾಗಿ ಮೀಸಲಾಗಿಟ್ಟ ಯೋಗಿವರ್ಯರು. ಸಹಾನುಭೂತಿಯೇ ಎಲ್ಲಾ ಧರ್ಮದ ನಂಬಿಕೆಗೆ ಮೂಲವಯ್ಯ ಎನ್ನುವ ಬಸವಣ್ಣನವರ ಚಿಂತನೆಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಬಂದವರು. ಬಡವರಿಗೆ ಹಾಗೂ ಸಹಾಯ ಹಸ್ತ ಚಾಚಿದವರಿಗೆ ಎಂದಿಗೂ ಇಲ್ಲ ಎನ್ನು ಶಬ್ದವನ್ನು ಹೇಳಿರಲಿಲ್ಲ. ಅವರ ಚಿಂತನೆಗಳನ್ನು ವಿಚಾರಿಸಿ, ಸೂಕ್ತ ಮಾರ್ಗ ಹಾಗೂ ಸಹಾಯವನ್ನು ಮಾಡುತ್ತಿದ್ದ ದೇವರಾಗಿದ್ದರು. ಹಾಗಾಗಿಯೇ ಅವರನ್ನು ಅಂದಿನಿಂದ ಇಂದಿನ ವರೆಗೂ ಹಾಗೂ ಮುಂದೆಯೂ ನಡೆದಾಡುವ ದೇವರು ಎಂದು ಕರೆಯಲಾಗುವುದು.

Shri Siddaganga Swamiji

ಮನುಕುಲದ ಅಭಿವೃದ್ಧಿ ಹಾಗೂ ಸಹಾಯಕ್ಕಾಗಿ ದೇವರು ವಿವಿಧ ರೂಪದಲ್ಲಿ ಭೂಲೋಕಕ್ಕೆ ಬರುತ್ತಾನೆ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ. ಅಂತಹ ಮಾತಿಗೆ ಒಂದು ಜೀವಂತ ಸಾಕ್ಷಿಯಾಗಿ ನಿಂತಿದ್ದವರು ಎಂದರೆ ಸಿದ್ಧಗಂಗಾ ಸ್ವಾಮೀಜಿಯವರಾಗಿದ್ದರು. ನಿತ್ಯವೂ ಸಾವಿರಾರು ಭಕ್ತರ ನೋವನ್ನು ಆಲಿಸಿ, ಅವರಿಗೊಂದಿಷ್ಟು ಸಾಂತ್ವನವನ್ನು ನೀಡಿ ಜೀವನದಲ್ಲಿ ಭರವಸೆ ಹಾಗೂ ಸಮಾಧಾನವನ್ನು ನೀಡುತ್ತಿದ್ದವರಾಗಿದ್ದರು. ಸದಾ ಇತರರಿಗಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟ ಸ್ವಾಮೀಜಿಯವರು ಇಂದು ಶಿವಸಾಯುಜ್ಯವನ್ನು ಹೊಂದಿದ್ದಾರೆ. ಮಹಾನ್ ಯೋಗಿಗಳಾದ ಇವರ ಬಗ್ಗೆ ನಾವು ಎಂದಿಗೂ ಮನದಲ್ಲಿಟ್ಟುಕೊಳ್ಳಬೇಕಾದ ಹತ್ತು ವಿಷಯಗಳನ್ನು ಈ ಸಂದರ್ಭದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ...

ಸಿದ್ಧಗಂಗಾ ಸ್ವಾಮೀಜಿಯವರ ಬಗ್ಗೆ

ಸಿದ್ಧಗಂಗಾ ಸ್ವಾಮೀಜಿಯವರ ಬಗ್ಗೆ

* ಏಪ್ರಿಲ್ 1, 1907 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಒಂದು ಸರಳ ರೈತ ಕುಟುಂಬದಲ್ಲಿ ಜನಿಸಿದ್ದರು. 1941ರಲ್ಲಿ ಸಿದ್ಧಗಂಗಾ ಮಠದ ಮುಖ್ಯಸ್ಥರಾಗಿ ನೇಮಕಗೊಂಡರು.

120ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ

120ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ

ಇವರು 120ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಸಂಸ್ಕೃತ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತು ಸಾಂಪ್ರದಾಯಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿಯೇ ಇಂದು ಎಲ್ಲಾ ಸಮುದಾಯದ ಜನರು ಇವರನ್ನು ಗೌರವಿಸುತ್ತಾರೆ.

ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದರು

ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದರು

ಅನ್ನದಾನಮ್ ಎನ್ನುವ ಹೆಸರಿನಲ್ಲಿ ಆಹಾರ ದಾಸೋಹನ, ವಿದ್ಯಾ ದಾನಮ್ ಹೆಸರಿನಲ್ಲಿ ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದರು. ಇದು ಅವರ ಪ್ರತಿಜ್ಞಾ ಕೆಲಸದಂತೆ ನಡೆಯುತ್ತಿತ್ತು.

ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು

ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು

ಸಿದ್ಧಗಂಗಾ ಸ್ವಾಮೀಜಿಯವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು.

 ಡಾಕ್ಟರ್ ಆಫ್ ಲಿಟರೇಚರ್ ಗೌರವ

ಡಾಕ್ಟರ್ ಆಫ್ ಲಿಟರೇಚರ್ ಗೌರವ

ಇವರ ಮಾನವೀಯತೆಯ ಕೆಲಸದಿಂದಾಗಿ 1965ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವಾರ್ಥ ಪದವಿ ಪಡೆದರು. 11 ವರ್ಷಗಳ ಹಿಂದ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿತು.

ವಿಶ್ವದಾದ್ಯಂತ ಶಾಂತಿಯ ಸಂದೇಶ

ವಿಶ್ವದಾದ್ಯಂತ ಶಾಂತಿಯ ಸಂದೇಶ

ವಿಶ್ವದಾದ್ಯಂತ ಅಶಾಂತಿ ಇದ್ದಾಗ, "ವಿಶ್ವದ ಜಾಗತಿಕ ಶಾಂತಿಯನ್ನು ಸಾಧಿಸುವ ಸಾಮರ್ಥ್ಯ ಭಾರತ ದೇಶ ಹೊಂದಿದೆ" ಎನ್ನುವ ತಮ್ಮ ಸಂದೇಶವನ್ನು ತಿಳಿಸಿದ್ದರು.

8000ಕ್ಕೂ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸ

8000ಕ್ಕೂ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸ

ಸ್ವಾಮೀಜಿಯವರ ಕುರುಕುಲದಲ್ಲಿ 8000ಕ್ಕೂ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಜಾತಿ ಮತಗಳ ತಡೆಗೋಡೆಗಳಿಲ್ಲ. 5 ರಿಂದ 16 ವರ್ಷ ವಯಸ್ಸಿನ ಮಕ್ಕಳಿದ್ದಾರೆ. ಜೀವನದ ಆರಂಭಿಕ ಹಂತದಲ್ಲಿ ಮನುಷ್ಯನಿಗೆ ಆಹಾರ, ಶಿಕ್ಷಣ ಮತ್ತು ಆಶ್ರಯದ ಅಗತ್ಯವಿರುತ್ತದೆ. ಅದನ್ನು ಮಠವು ಉಚಿತವಾಗಿ ಕಲ್ಪಿಸಿಕೊಡುತ್ತದೆ.

ರಾಜಕೀಯದಿಂದ ದೂರವೇ ಉಳಿದಿದ್ದರು

ರಾಜಕೀಯದಿಂದ ದೂರವೇ ಉಳಿದಿದ್ದರು

ಯಾವುದೇ ಚುನಾವಣೆಗೆ ಮುಂಚೆ ಕರ್ನಾಟಕದ ಪ್ರತಿಯೊಂದು ರಾಜಕೀಯ ಪಕ್ಷದವರು ಸಿದ್ಧಗಂಗಾ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಹೊಂದಿದೆ. ಜ್ಯಾತ್ಯಾತೀತತೆಯ ಬೆಂಬಲಿಗರಾದ ಇವರು ರಾಜಕೀಯದಿಂದ ದೂರವೇ ಉಳಿದಿದ್ದರು.

ಬಾಬರಿ ಮಸೀದಿಯ ಸಂದರ್ಭದಲ್ಲಿ

ಬಾಬರಿ ಮಸೀದಿಯ ಸಂದರ್ಭದಲ್ಲಿ

ಬಾಬರಿ ಮಸೀದಿಯನ್ನು ಧ್ವಂಸಮಾಡಿರುವ ಸಮಯದಲ್ಲಿ ಇಡೀ ದೇಶದಲ್ಲಿ ಸೇಡಿನ ಬೆಂಕಿ ಹೊತ್ತಿಕೊಂಡಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯವರು ಧ್ವಂಸ ಮಾಡಿರುವುದನ್ನು ಖಂಡಿಸಿದ್ದರು.

 ಏಪ್ರಿಲ್ 8, 2006ರಂದು

ಏಪ್ರಿಲ್ 8, 2006ರಂದು

ಏಪ್ರಿಲ್ 8, 2006ರಂದು ಆಗಿನ ರಾಷ್ಟ್ರಪತಿಗಳಾದ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಸ್ವಾಮೀಜಿಯವರ ಕೆಲಸಕ್ಕೆ "76 ವರ್ಷಗಳ ತಪಸ್ಸ"ನ್ನು ಮಾಡಿದ್ದಾರೆ ಎಂದು ಹೇಳಿದ್ದರು.

English summary

10 Things You Should Know about Shri Siddaganga Swamiji

Swamiji Born on April 1, 1907, to a simple farmer family in Magadi Taluk, Ramanagara District, he got initiated into the fold in 1930. It was in 1941, that he was appointed the present Head of Siddaganga Mutt, by Shri Uddana Swamiji. He has established more than 120 educational institutions. They offer courses in traditional languages such as Sanskrit as well on modern science and technology. He is respected by persons of all communities.
X
Desktop Bottom Promotion