Just In
- 16 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ರಾಶಿಯವರನ್ನು ವಿವಾಹವಾದರೆ ಉತ್ತಮ ಜೋಡಿಯಾಗುವರು!
ವಿವಾಹ ಎನ್ನುವುದು ಪ್ರತಿಯೊಬ್ಬರಿಗೂ ವಿಶೇಷವಾದ ಸಂಗತಿಯಾಗಿರುತ್ತದೆ. ಜೀವನ ಪ್ರಾರಂಭವಾಗುವುದೇ ವಿವಾಹ ಎನ್ನುವ ಬಾಂಧವ್ಯ ಬೆಸೆದಾಗ. ಅಲ್ಲಿಯವರೆಗೂ ವ್ಯಕ್ತಿ ಯಾವುದೇ ಜವಾಬ್ದಾರಿ ಇಲ್ಲದೆ ಇರುತ್ತಾನೆ. ಹಾಗಾಗಿ ವಿವಾಹದ ವಿಚಾರ ಬಂದಾಗ ಅಥವಾ ವಿವಾಹ ಆಗುವ ಮೊದಲು ಸಂಗಾತಿಯ ಹುಡುಕಾಟ ಹಾಗೂ ಅವರ ಜಾತಕಗಳ ಹೊಂದಾಣಿಕೆಯು ಬಹುಮುಖ್ಯವಾಗಿರುತ್ತದೆ. ವಿವಾಹವಾಗುವ ವಧು-ವರನ ಜಾತಕದ ಹೊಂದಾಣಿಕೆ ಉತ್ತಮವಾಗಿದ್ದರೆ ಅವರ ದಾಂಪತ್ಯ ಜೀವನವು ಬಹಳ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.
ಜಾತಕದ ಹೊಂದಾಣಿಕೆ ಇಲ್ಲ ಅಥವಾ ಕಡಿಮೆ ಹೊಂದಾಣಿಕೆ ಇದೆ ಎಂದಾಗಲೂ ಸಹ ದಾಂಪತ್ಯ ಜೀವನದಲ್ಲಿ ಬಿರುಕು, ಕಿರಿಕಿರಿ, ಒತ್ತಡ ಅಥವಾ ಅಸಮಧಾನ ಎನ್ನುವುದು ಕಾಡುತ್ತಲೇ ಇರುತ್ತದೆ. ಜೊತೆಗೆ ಜೀವನ ಸಾಕು ಎನ್ನುವ ಬೇಸರ ಭಾವನೆಯೂ ಉಂಟಾಗುವ ಸಾಧ್ಯತೆಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅದೇ ರಾಶಿಚಕ್ರದವರನ್ನು ವಿವಾಹವಾದರೆ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುವುದು. ಆದರೆ ಒಂದೇ ನಕ್ಷತ್ರ ಆಗಿರ ಬಾರದು ಎಂದು ಸಹ ಹೇಳಲಾಗುತ್ತದೆ.
ಒಂದೇ ರಾಶಿಯ ವ್ಯಕ್ತಿಗಳು ವಿವಾಹವಾಗುವುದರಿಂದ ಭಾವನೆಗಳು, ಬಯಕೆಗಳು, ಹವ್ಯಾಸಗಳಲ್ಲಿ ಸಾಮ್ಯತೆಯನ್ನು ಕಾಣಬಹುದು. ಇವು ಉತ್ತಮ ಜೀವನಕ್ಕೆ ಸಹಕಾರ ನೀಡುತ್ತವೆ. ಅಲ್ಲದೆ ಅತ್ಯುತ್ತಮ ಜೋಡಿಗಳಾಗಿ ಮಿಂಚುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಸಾಮ್ಯತೆ ಹೇಗಿರುತ್ತದೆ ಎನ್ನುವುದನ್ನು ಈ ಮುಂದೆ ವಿವರಿಸಲಾಗಿದೆ...
1.ಸಿಂಹ
ಸಿಂಹ ರಾಶಿಯವರು ಸಿಂಹ ರಾಶಿಯವರನ್ನೇ ವಿವಾಹವಾದರೆ ಪರಿಪೂರ್ಣವಾದ ಜೋಡಿಗಳಲ್ಲಿ ಒಬ್ಬರಾಗುವರು ಎಂದು ಹೇಳಲಾಗುತ್ತದೆ. ಇವರಲ್ಲಿ ಸ್ವಲ್ಪ ವಿಭಿನ್ನವಾದ ಆದ್ಯತೆಗಳಿರುತ್ತವೆ. ಆದರೂ ಕೆಲವು ಹೊಂದಾಣಿಕೆಯ ಸ್ವಭಾವ ಉತ್ತಮವಾಗಿರುತ್ತದೆಯಾದ್ದರಿಂದ ಯಾವುದೇ ಕಲಹ ಉದ್ಭವಿಸದು. ಪರಸ್ಪರ ಒಬ್ಬರಿಗೊಬ್ಬರು ಸಮತೋಲನವನ್ನು ಹಂಚಿಕೊಳ್ಳುವರು. ಇವರು ಬಲವಾದ ಇಚ್ಛಾಶಕ್ತಿಯನ್ನು ಹೊಂದಿದವರಾಗಿರುವುದರಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ನಂಬಲಾಗಿದೆ.
ಸಿಂಹ
ಆರ್ಥಿಕ ವಿಚಾರದಲ್ಲಿ ಹಾಗೂ ಸಂಬಂಧಗಳಲ್ಲಿ ಸಹಕಾರ ನೀಡುವುದರ ಮೂಲಕ ಜೀವನವನ್ನು ಆನಂದಿಸುವರು. ಇವರ ಪವ್ರವೃತ್ತಿಗಳು ಇತರರಿಗೆ ಮೆಚ್ಚುಗೆಯನ್ನು ತಂದುಕೊಡುವುದು. ಜೊತೆಗೆ ಪ್ರೀತಿ ಗೌರವಕ್ಕೆ ಪಾತ್ರರಾಗುವರು. ಹಾಗಾಗಿ ಈ ರಾಶಿಚಕ್ರವರು ಇದೇ ರಾಶಿಯವರನ್ನು ವಿವಾಹವಾದರೆ ಅತ್ಯುತ್ತಮ ಜೀವನ ನಡೆಸುವರು ಎಂದು ಹೇಳಲಾಗುವುದು.
2.ತುಲಾ
ಇದೇ ರಾಶಿಯವರನ್ನು ಇವರು ವಿವಾಹವಾದರೆ ನ್ಯಾಯಯುತವಾದ ಮತ್ತು ಪರಸ್ಪರ ಸಮತೋಲನ ನಡೆಸುವ ಆಸೆಯನ್ನು ಹೊಂದುವರು. ಇವರ ಹೊಂದಾಣಿಕೆ ಹಾಗೂ ಪರಸ್ಪರ ಸಹಕಾರದಿಂದ ಶ್ರೇಷ್ಠವಾದ ಜೋಡಿಗಳು ಎನಿಸಿಕೊಳ್ಳುತ್ತವೆ. ಇವರು ಸಂಬಂಧದಲ್ಲಿ ಚೆನ್ನಾಗಿಯೇ ಇರುತ್ತಾರೆ.
ತುಲಾ
ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಹಾಗೂ ಸಮಯವನ್ನು ನೀಡುವುದರಿಂದ ಭಿನ್ನಾಭಿಪ್ರಾಯಗಳು ತಲೆದೂರದು. ಭಾವನೆಗಳು ಹಾಗೂ ವರ್ತನೆಗಳು ಪರಸ್ಪರ ಸುಲಭವಾಗಿ ಅರ್ಥೈಸಿಕೊಳ್ಳುವುದರಿಂದ ಸಮಸ್ಯೆ ಉಂಟಾಗದು. ಜೊತೆಗೆ ಆದರ್ಶ ದಂಪತಿಗಳಾಗಿ ಬಿಂಬಿಸುವರು.
3.ವೃಷಭ
ಇವರು ಸಂಬಂಧಗಳಲ್ಲಿ ಭದ್ರತೆಯನ್ನು ಸ್ಥಾಪಿಸಲು ಇಷ್ಟಪಡುವರು. ಹಾಗಾಗಿ ಒಂದೇ ರಾಶಿಯವರನ್ನು ಇವರು ವಿವಾಹವಾದರೆ ಹೆಚ್ಚು ಸಂತೋಷದಿಂದ ಇರುತ್ತಾರೆ ಎಂದು ಹೇಳಲಾಗುವುದು. ಇವರು ಸರಳ ಮೌಲ್ಯಗಳು ಹಾಗೂ ಚಿಂತನೆಗಳನ್ನು ನಡೆಸುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಇವರ ಬೇಕು ಬೇಡಗಳು ಪರಸ್ಪರ ಸಮತೋಲನದಲ್ಲಿ ಇರುತ್ತವೆ.
ವೃಷಭ
ಮಾಡುವ ಕೆಲಸದಲ್ಲಿ ಪರಸ್ಪರ ತುಲನಾತ್ಮಕ ಲೆಕ್ಕಚಾರಗಳನ್ನು ನಡೆಸುತ್ತಾರೆ. ಜೊತೆಗೆ ಪರಸ್ಪರ ಒಬ್ಬರಿಗೊಬ್ಬರು ಅನುಕೂಲವಾಗುವಂತೆ ತರ್ವನೆ ಹಾಗೂ ಭಾವನೆಗಳನ್ನು ತಳೆಯುತ್ತಾರೆ. ಇದು ಅವರ ಜೀವನವನ್ನು ಇನ್ನಷ್ಟು ಸಂತೋಷದಿಂದ ಇರುವಂತೆ ಮಾಡುವುದು.