For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಯ ವ್ಯಕ್ತಿಗಳು ಇತರರಿಗೆ ಬಹು ಬೇಗ ನೋವನ್ನುಂಟು ಮಾಡುವರು!

By Deepu
|

ಕೆಲವರು ಒಳ್ಳೆಯದನ್ನು ಮಾಡುವುದರ ಬದಲಿಗೆ ಸದಾ ಕೆಟ್ಟದ್ದನ್ನು ಮಾಡಲು ಕಾಯುತ್ತಿರುತ್ತಾರೆ. ಜೊತೆಗೆ ಯಾರಿಗಾದರೂ ಕೆಟ್ಟದ್ದಾಯಿತು ಅಥವಾ ಮನಸ್ಸಿಗೆ ನೋವಾಗಿದೆ ಎಂದಾದರೆ ಅದನ್ನು ನೋಡಿ ಖುಷಿ ಪಡುತ್ತಾರೆ. ಸರಿಯಾಗಿ ಆಗಿದೆ ಎನ್ನುವ ತೃಪ್ತಿಯನ್ನು ಪಡೆಯುತ್ತಾರೆ. ಈ ಬಗೆಯ ಭಾವನೆ ಹಾಗೂ ನಡವಳಿಕೆಯನ್ನು ಬೇರೆಯವರ ಮುಂದೆ ತೋರಿಸಿಕೊಳ್ಳದಿದ್ದರೂ ಆಂತರಿಕವಾಗಿ ಒಂದಿಷ್ಟು ಸಂತೋಷವನ್ನು ಅನುಭವಿಸುತ್ತಾರೆ.

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರಲ್ಲಿ ಈ ರೀತಿಯ ಕೆಟ್ಟ ಗುಣ ಸಾಮಾನ್ಯವಾಗಿ ಇರುತ್ತದೆ. ಅವರು ಹೇಗೆ ಯೋಚಿಸುತ್ತಾರೆ ಅಥವಾ ಹೇಗೆ ಇರಲು ಬಯಸುತ್ತಾರೆ ಎನ್ನುವುದಕ್ಕಿಂತ ಇತರರ ನೋವನ್ನು ಕಂಡು ಸಂತೋಷ ಪಡುತ್ತಾರೆ. ಅಲ್ಲದೆ ಹಿಂದೆ ಮುಂದೆ ಯೋಚಿಸದೆ ಬಹುಬೇಗ ಮನಸ್ಸಿಗೆ ನೋವುಂಟಾಗುವಂತೆ ಮಾಡುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಈ ರಾಶಿಯವರು ಸಾಮಾನ್ಯವಾಗಿ ಭಾವನಾತ್ಮಕವಾಗಿಯೇ ಹಾಸ್ಯ ಗಾರರಾಗಿರುತ್ತಾರೆ. ಇವರಿಗೆ ಯಾರಾದರೂ ಬಹಳ ವಿಶೇಷ ವ್ಯಕ್ತಿಗಳು ಅಥವಾ ಅವರಿಗೆ ಇಷ್ಟವಾದವರು ಎಂದಾಗ ಮಾತ್ರ ಅವರ ಬಗ್ಗೆ ಒಂದಿಷ್ಟು ಒಲವು ಹಾಗೂ ಪ್ರೀತಿಯನ್ನು ತೋರುತ್ತಾರೆ ಎಂದು ಹೇಳಲಾಗುವುದು. ಇವೆಲ್ಲದರ ಹೊರತಾಗಿ ಅವರು ಇತರರ ಬಗ್ಗೆ ಅಸಡ್ಡೆಯನ್ನು ತೋರುವರು. ಹಾಗಾಗಿ ಇತರರಿಗೆ ಬೇಸರವಾಗುವುದು ಎನ್ನುವುದರ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುವುದಿಲ್ಲ. ಇತರರಿಗಿಂತ ತಾವು ಮುಂದಿರಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇತರರ ಭಾವನೆಗಳನ್ನು ಇವರು ಅಷ್ಟಾಗಿ ಗಮನಿಸುವುದಿಲ್ಲ. ಇನ್ನು ಮೇಷ ರಾಶಿಯವರು ಸೂಪರ್ ಪ್ರಾಕ್ಟಿಕಲ್ ಅಂತ ಅನ್ನಿಸದೇ ಇರಬಹುದು. ಆದರೆ ಅವರದ್ದು ಹಲವಾರು ದಾರಿಗಳಿರುತ್ತೆ. ಭದ್ರತೆ ಇರುವ ಕೆಲಸ, ಆರಾಮದಾಯಕವಾಗಿರುವ ಮನೆ, ಬ್ಯಾಂಕಿನಲ್ಲಿ ಸಾಕಷ್ಟು ಹಣವಿರಬೇಕು ಎಂಬ ಆಲೋಚನೆ ಹೊಂದಿರುವ ಇವರದ್ದು ಯಾವಾಗಲೂ ಪ್ರಾಯೋಗಿಕವಾಗಿರುವ ಆಲೋಚನೆ. ಎಲ್ಲಿದ್ದರೆ ಇವೆಲ್ಲ ದಕ್ಕುತ್ತದೆ ಎಂಬ ಆಲೋಚನೆ ಇವರದ್ದು. ತಮ್ಮಿಂದ ಯಾವ ಕೆಲಸ ಆಗುವುದಿಲ್ಲ ಎಂದು ಭಾವಿಸುತ್ತಾರೋ ಅದನ್ನು ಮಾಡಲು ಹೋಗಿ ಹಾಳು ಮಾಡುವ ವ್ಯಕ್ತಿತ್ವ ಇವರದ್ದಲ್ಲ ಬದಲಾಗಿ ಯಾರು ಮಾಡಬಲ್ಲರೋ ಅಂತವರ ಜೊತೆ ಸೇರಿ ಆ ಕೆಲಸವನ್ನು ಪೂರ್ಣಗೊಳಿಸಿ ಲಾಭ ಪಡೆಯುವ ಮನಸ್ಥಿತಿ ಇವರದ್ದು. ಹಾಗಂತ ಇವರು ಸಂಘಟಿತ ಶಕ್ತಿ ಉಳ್ಳವರು ಎಂದು ಭಾವಿಸಬೇಡಿ. ಬದಲಾಗಿ ಇವರದ್ದು ತಮಗೆ ಅಗತ್ಯವಿರುವುದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ಆಲೋಚಿಸುವ ಮನಸ್ಥಿತಿ ಅಷ್ಟೇ..

ಕುಂಭ

ಕುಂಭ

ಇವರು ಇತರರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ತಮ್ಮದೇ ಆದ ಕೆಲವು ಧೋರಣೆಯನ್ನು ಹೊಂದಿರುವ ಇವರು ಇತರರ ಭಾವನೆಗಳಿಗೆ ಅಷ್ಟಾಗಿ ಬೆಲೆ ಕೊಡುವುದಿಲ್ಲ. ಹಾಗೊಮ್ಮೆ ಯಾರನ್ನಾದರೂ ಇವರು ಒಪ್ಪಿಕೊಂಡಿದ್ದಾರೆ ಎಂದಾದರೂ ಅವರ ನಡತೆಯ ಬಗ್ಗೆ ಹಾಗೂ ವರ್ತನೆಗಳ ಮೇಲೆ ಒಂದು ಕಣ್ಣನ್ನು ಇಟ್ಟಿರುತ್ತಾರೆ. ಒಟ್ಟಿನಲ್ಲಿ ಅವರನ್ನು ಸಂಪೂರ್ಣವಾಗಿ ನಿರೀಕ್ಷಿಸುತ್ತಾರೆ. ಇವರ ಮನಸ್ಸಿಗೆ ಅಥವಾ ಭಾವನೆಗಳಿಗೆ ನೋವನ್ನುಂಟುಮಾಡಿದರೆ ಅಷ್ಟು ಸುಲಭದಲ್ಲಿ ಇವರು ಕ್ಷಮಿಸುವುದಿಲ್ಲ.

ಮಿಥುನ

ಮಿಥುನ

ಈ ರಾಶಿಚಕ್ರದವರು ಸಂವಹನದಲ್ಲಿ ಅತ್ಯಂತ ಶ್ರೇಷ್ಠರು ಎಂದು ಹೇಳಲಾಗುವುದು. ಇವರು ಅನೇಕ ವಿಚಾರದಲ್ಲಿ ಮಿಶ್ರ ಸಂಕೇತವನ್ನು ಹೊಂದಿರುತ್ತಾರೆ. ಇವರು ಭಾವನಾತ್ಮಕವಾಗಿ ಇತರರೊಂದಿಗೆ ಆಟವಾಡುವ ಸಾಧ್ಯತೆಗಳಿವೆ. ಇವರು ಕೆಲವೊಮ್ಮೆ ಬಹಳ ಖುಷಿಯಲ್ಲಿ ಇದ್ದರೆ, ಇನ್ನೂ ಕೆಲವೊಮ್ಮೆ ಒಂಟಿತನವನ್ನು ಅನುಭವಿಸಲು ಇಷ್ಟಪಡುತ್ತಾರೆ. ಇವರು ಸತತವಾಗಿ ತಮ್ಮನ್ನು ಪ್ರೀತಿಸುವವರ ಬಯಸುತ್ತಾರೆ. ಇನ್ನು ಈ ರಾಶಿಯವರು ಕೆಲವು ವಿಚಾರಗಳನ್ನು ಬಹಳ ಸರಳವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿಯೊಂದನ್ನೂ ಪ್ರಾಯೋಗಿಕವಾಗಿ ಆಲೋಚಿಸುತ್ತಾರೆ. ಭವಿಷ್ಯದ ಆಲೋಚನೆ ಇವರಲ್ಲಿ ಬಹಳಷ್ಟಿರುತ್ತೆ. ಹಾಗಾಗಿ ಮುಂದಿನ ದಿನಗಳಿಗಾಗಿ ದೊಡ್ಡದೊಡ್ಡ

ಕಲ್ಪನೆಗಳನ್ನು ಮಾಡುತ್ತಾರೆ. ಮಕ್ಕಳ ವಿಚಾರದಲ್ಲಂತೂ ಇವರು ಬಹಳ ಪ್ರಾಯೋಗಿಕವಾಗಿ ಆಲೋಚನೆ ಮಾಡುತ್ತಾರೆ. ಅನಗತ್ಯವಾಗಿ ಯಾವಾಗಲೂ ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸುವುದಿಲ್ಲ. ತಮ್ಮ ಮಕ್ಕಳಿಗೆ ಯಾವುದೋ ವಿಚಾರದ ಬಗ್ಗೆ ತಿಳಿಸಿ ಹೇಳಬೇಕು ಎಂದರೆ ಇವರು ಅನಿಯಂತ್ರಿತವಾಗಿ ಹೇಳುವುದಿಲ್ಲ ಬದಲಾಗಿ ಪ್ರಾಯೋಗಿಕವಾಗಿಯೇ ತಿಳಿಸಿಕೊಡುತ್ತಾರೆ.

ಧನು

ಧನು

ಈ ರಾಶಿಚಕ್ರದ ವ್ಯಕ್ತಿಗಳು ಹಗುರ ಮತ್ತು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಒಮ್ಮೆ ಮನಸ್ಸು ನೋಯಿಸಿದ್ದರೆ ಅಥವಾ ಅವರಿಗೆ ಅಷ್ಟಾಗಿ ಬೆಲೆ ಕೊಡುತ್ತಿಲ್ಲ ಎಂದು ಅಂದುಕೊಂಡರೆ ಅವರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಜೊತೆಗೆ ತಾವು ಏನನ್ನು ಮಾತನಾಡುತ್ತಿದ್ದೇವೆ ಎನ್ನುವುದನ್ನು ಅರಿಯದೆಯೇ ಮಾತನಾಡುತ್ತಾರೆ. ಅದು ಇತರರಿಗೆ ನೋವುಂಟಾಗುವ ಸಾಧ್ಯತೆಗಳು ಇರುತ್ತವೆ.

ಸಿಂಹ

ಸಿಂಹ

ಈ ರಾಶಿಯವರು ತಾವು ಶ್ರೇಷ್ಠರು ಎನ್ನುವುದನ್ನು ತಮಗೆ ತಾವೇ ಅಂದುಕೊಂಡಿರುತ್ತಾರೆ. ಇವರನ್ನು ಯಾರಾದರೂ ಅಷ್ಟು ಶ್ರೇಷ್ಠರಲ್ಲ ಅಥವಾ ಉತ್ತಮ ಗುಣಮಟ್ಟದವರಲ್ಲ ಎಂದು ಪರಿಗಣಿಸಿದರೆ ಅದನ್ನು ಸಹಿಸುವುದಿಲ್ಲ. ಸದಾ ಮೇಲ್ಮಟ್ಟದಲ್ಲಿ ಇರಲು ಬಯಸುವ ಇವರು ಇತರರ ಭಾವನೆಗಳನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಇವರ ನೇರ ಮಾತುಗಳು ಮತ್ತು ಮುಂದಾಲೋಚನೆ ಇಲ್ಲದ ಮಾತುಗಳಿಂದ ಬಹುಬೇಗ ಮನಸ್ಸಿಗೆ ನೋವನ್ನುಂಟುಮಾಡುವುದು. ಇನ್ನು ಈ ರಾಶಿಯವರು ಕಾಡಿನ ರಾಜ ಸಿಂಹದಂತೆ ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುವರು. ಅವರು ಯಾರು ಹೇಳದೇ ಮತ್ತು ಯಾರಿಗೂ ಕೇಳದೆ ನಾಯಕತ್ವ ವಹಿಸಿಕೊಳ್ಳುವರು. ಯಾವುದೂ ಸರಿಯಾಗಿಲ್ಲ ಮತ್ತು ಎಲ್ಲವೂ ಹಳಿ ತಪ್ಪುತ್ತಿದೆ ಎನ್ನುವಾಗ ಸಿಂಹ ರಾಶಿಯವರ ನೆರವು ಬೇಕು. ಅವರು ಎಲ್ಲವನ್ನು ಮತ್ತೆ ಹಳಿಗೆ ತರುವರು. ಸಿಂಹ ರಾಶಿಯವರು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಬಲ್ಲರು. ಅವರು ಯಾವಾಗಲೂ ರಕ್ಷಣಾತ್ಮಕವಾಗಿರುವುದು ಒಂದು ಹಿನ್ನಡೆ..

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದವರನ್ನು ಭಾವನಾತ್ಮಕವಾಗಿ ದುಃಖವನ್ನು ಹೊಂದಿರುವ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು. ಇತರರು ಹೇಗೆ ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣವಾದ ತಿಳಿವಳಿಕೆಯನ್ನು ಇವರು ಹೊಂದಿರುತ್ತಾರೆ. ಕ್ರೋಧಗಳು ಉಂಟಾದಾಗ ಅಥವಾ ಅವರ ಮನಸ್ಸಿಗೆ ನೋವನ್ನು ಉಂಟುಮಾಡಿದಾಗ ಇವರು ಬಹಳ ಕ್ರೂರ ವರ್ತನೆಯನ್ನು ತೋರಬಲ್ಲರು. ಅದು ಅವರ ಅಜಾಗರೂಕತೆಯನ್ನು ತೋರುತ್ತದೆ. ಇವರಿಗೆ ಇಷ್ಟವಿಲ್ಲ ಎಂದಾದರೆ ಉದ್ದೇಶ ಪೂರ್ವಕವಾಗಿಯೇ ಮನಸ್ಸನ್ನು ನೋಯಿಸಬಲ್ಲರು. ಇನ್ನು ಈ ರಾಶಿಯ ಜನರು ಹುಟ್ಟು ನಾಯಕರಾಗಿರುವರು. ಆದರೆ ಅತೀ ಅಗತ್ಯದ ಸಂದರ್ಭದಲ್ಲಿ ಮಾತ್ರ ನಾಯಕತ್ವವನ್ನು ಸ್ವೀಕರಿಸುವರು. ಇವರು ತುಂಬಾ ಶ್ರಮಶೀಲ ಸ್ವಭಾವದವರು ಮತ್ತು ಕಡಿಮೆ ನಿರ್ವಹಣೆಯವರು. ಇವರಲ್ಲಿ ಇರುವಂತಹ ಬಲವಾದ ಸಮಚಿತ್ತ ಭಾವವು ಯಾವುದೇ ಕೆಲಸವನ್ನು ಪೂರ್ಣಗೊಳಿಸುವರು. ಇವರು ಮಾತಿಗಿಂತಹ ಹೆಚ್ಚು ಕೃತಿಯಲ್ಲಿ ತೋರಿಸಲು ಬಯಸುವರು. ಮನೆ ಹಾಗೂ ಕೆಲಸದ ಕಡೆ ಕೂಡ ಮೌನವಾಗಿರುವರು.

English summary

zodiacs-who-can-be-the-worst-trouble-makers

While these individuals can be manipulative and controlling, an emotional sadist is known to continually hurt someone just to see them suffer. According to astrology, there are zodiac signs which are known to be worst trouble-makers. Here, in this article, we've revealed about the zodiac signs that are known to cause pain and this is something that they love doing. Check it out...
X
Desktop Bottom Promotion