For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಚಕ್ರದವರು ಹಿಂದೆ ಮುಂದೆ ಯೋಚನೆ ಮಾಡದೆ ಮಾತನಾಡುತ್ತಾರೆ!

By Deepu
|

ಯಾವುದೇ ವಿಚಾರ ಆಗಿರಲಿ ಮೊದಲು ನಾವು ಸೂಕ್ತ ಚಿಂತನೆಗಳನ್ನು ನಡೆಸಬೇಕು. ನಂತರ ಅದಕ್ಕೆ ಪ್ರತಿಯಾಗಿ ವರ್ತನೆಯನ್ನು ತೋರಬೇಕು. ಅದು ಚಿಕ್ಕ ವಿಚಾರವಾಗಿರಲಿ ಅಥವಾ ದೊಡ್ಡ ವಿಚಾರವೇ ಆಗಿರಲು. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವರ್ತನೆಯನ್ನು ತೋರಿದರೆ ಅದು ಆಭಾಸವಾಗುತ್ತದೆ. ಕೆಲವವೊಮ್ಮೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಕೆಲವು ಪ್ರಶ್ನೆಗಳನ್ನು ಸಹ ಹುಟ್ಟಿಹಾಕಬಹುದು. ಹಾಗಾಗಿ ಯಾರಾದರೂ ನಮ್ಮ ಮುಂದೆ ವಿಚಾರವನ್ನು ಇಟ್ಟಾಗ ಅಥವಾ ಚರ್ಚಿಸಿದಾಗ ನಾವು ಸರಿಯಾಗಿ ಚಿಂತನೆ ನಡೆಸಬೇಕು. ಬಳಿಕ ಅದಕ್ಕೆ ಅನುಗುಣವಾಗಿ ವರ್ತಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ಮಾತನಾಡುವಾಗ ಅಥವಾ ತಮ್ಮ ವರ್ತನೆಯನ್ನು ತೋರುವಾಗ ಹಿಂದೆ ಮುಂದೆ ಯೋಚಿಸದೆಯೇ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಅದು ಆ ಸಂದರ್ಭಕ್ಕೆ ಅಗತ್ಯವಿದೆಯೇ? ಅದರಿಂದ ಬೇರೆಯವರ ಮನಸ್ಸಿಗೆ ನೋವುಂಟಾಗುವುದೇ? ಎನ್ನುವುದನ್ನು ಕೊಂಚವು ಚಿಂತಿಸುವುದಿಲ್ಲ. ಬಾಯಿಗೆ ಬಂದಿದ್ದು, ಮನಸ್ಸಿಗೆ ತೋಚಿದ್ದನ್ನು ಮಾಡಿ ಮುಗಿಸಿಬಿಡುತ್ತಾರೆ. ಕೆಲವರಲ್ಲಿ ತಮ್ಮ ವರ್ತನೆಯ ಬಗ್ಗೆ ಸೂಕ್ತ ಚಿಂತನೆಗಳಿರುತ್ತವೆ. ಜೊತೆಗೆ ತಮ್ಮ ಮಾತಿನ ಮೇಲೆ ಹಿಡಿತವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಹಿಂದೆ ಮುಂದೆ ಯೋಚನೆ ಮಾಡದೆ ವರ್ತಿಸುವ ರಾಶಿಚಕ್ರದವರು ಯಾರು? ಅವರ ವರ್ತನೆ ಏಕೆ ಹಾಗಿರುತ್ತದೆ ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ವಿವರಣೆಯನ್ನು ನೀಡಿದೆ.

1.ಮೇಷ

1.ಮೇಷ

ಈ ರಾಶಿಯ ವ್ಯಕ್ತಿಗಳು ಬಹು ಬೇಗ ತಮ್ಮ ಮಾತು ಹಾಗೂ ವರ್ತನೆಯನ್ನು ತೋರುತ್ತಾರೆ. ಇದರಿಂದ ಇತರರಿಗೆ ಮನನೋಯುವುದು. ನಂತರ ಆ ವಿಚಾರದ ಕುರಿತು ಸಾಕಷ್ಟು ವಿಷಾದವನ್ನು ವ್ಯಕ್ತಪಡಿಸುವರು. ವಿಷಯಗಳನ್ನು ಎಚ್ಚರಿಕೆಯಿಂದ ಸ್ವೀಕರಿಸುವುದಾಗಲೀ ಅಥವಾ ಅರ್ಥೈಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮನಸ್ಸಿಗೆ ಬಂದಂತೆ ತಕ್ಷಣಕ್ಕೆ ವರ್ತಿಸಿಬಿಡುತ್ತಾರೆ. ಸಾಹಸಮಯವಾದ, ಕೆಚ್ಚೆದೆಯ ಗುಣವನ್ನು ಹೊಂದಿದವರಾಗಿದ್ದು, ಪೂರ್ಣ ಜೀವನವನ್ನು ಅನುಭವಿಸುವರು ಎಂದು ಹೇಳಲಾಗುವುದು. ಇವರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳಿರುವುದಿಲ್ಲ. ಒಮ್ಮೆ ಸಿಟ್ಟು ಅಥವಾ ಉದ್ವೇಗ ಉಂಟಾದರೆ ಅದು ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೆಳಲಾಗುವುದು.ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟರೆ ಪ್ರಶ್ನಾರ್ಥಕವಾದ ವರ್ತನೆ ಅಥವಾ ಚಟುವಟಿಕೆಯಿಂದ ದೂರವಾಗಬಹುದು.

2.ಮಿಥುನ

2.ಮಿಥುನ

ಎರಡು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ ಇವರನ್ನು. ಬಹುತೇಕ ಸಂದರ್ಭದಲ್ಲಿ ಇವರು ಹೆಚ್ಚು ಜಾಗರೂಕರಾಗಿಯೇ ಇರುತ್ತಾರೆ. ಅಲ್ಲದೆ ಕೆಲವು ವಿಷಯಗಳಿಗೆ ಹೆಚ್ಚು ನಿರ್ಬಂಧಿತರಾಗಿರುತ್ತಾರೆ. ಕೆಲವು ಸಮಯದಲ್ಲಿ ಮೂರ್ಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪರಿಸ್ಥಿತಿಯ ಬಾಧಕಗಳನ್ನು ಪರಿಗಣಿಸದೆ ಏನೂ ಆಗದವರಂತೆ ಇರುತ್ತಾರೆ.ಇವರು ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ. ಒಂದೇ ವಿಚಾರದ ಬಗ್ಗೆ ಕೇಂದ್ರೀಕರಿಸಲು ಕಷ್ಟವಾಗುವುದು. ಆದ್ದರಿಂದ ಪ್ರಚೋದಕವಾಗಿ ಕಾರ್ಯನಿರ್ವಹಿಸಲು ಒಲವು ತೋರುತ್ತಾರೆ. ಇವರು ಮಾಡುವ ಸಣ್ಣ-ಪುಟ್ಟ ತಪ್ಪುಗಳು ದೊಡ್ಡ ಪರಿಣಾಮವಾಗಿ ಹೊರಹೊಮ್ಮುವ ಸಾಧ್ಯತೆಗಳಿರುತ್ತವೆ.

3.ಧನು

3.ಧನು

ಇವರು ತಮ್ಮ ಸುತ್ತಲೂ ಒಂದು ಬಗೆಯ ಗೋಡೆ ಮುಚ್ಚಿಕೊಂಡಿದೆ ಎನ್ನುವ ರೀತಿಯಲ್ಲಿ ಭಾವಿಸುತ್ತಾರೆ. ಇವರು ಅವಸರದಲ್ಲಿ ಕೆಟ್ಟ ಸಲಹೆ ನೀಡುತ್ತಾರೆ. ಇವರು ಇತರರಿಂದ ನಿರ್ಬಂಧ ಹೊಂದಲು ಬಯಸುವುದಿಲ್ಲ. ತಮ್ಮ ಪ್ರಚೋದನೆಯನ್ನು ಅನುಸರಿಸುತ್ತಾ ಹೊಸ ಸ್ಥಾನಕ್ಕೆ ಹೋಗುತ್ತಾರೆ. ಧನು ರಾಶಿಯ ವ್ಯಕ್ತಿಗಳು ಮೇಲ್ನೋಟಕ್ಕೆ ಗಡಿಬಿಡಿಯ ವ್ಯಕ್ತಿಗಳಾಗಿದ್ದರೂ ತಾಳ್ಮೆಯನ್ನು ಹೊಂದಿರುತ್ತಾರೆ. ತಮ್ಮ ತಿಳಿವಳಿಕೆ ಇಲ್ಲದ ಕೆಲಸವನ್ನು ಮಾಡುವುದರ ಮೂಲಕ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಅನೇಕ ಸಂದರ್ಭದಲ್ಲಿ ಯಾವುದೇ ಕಾಳಜಿ ಇಲ್ಲದವರಂತೆ ವರ್ತಿಸುತ್ತಾರೆ. ಇವರು ನಿಸ್ವಾರ್ಥದವರು ಹಾಗೂ ಚಿಂತನಾಶೀಲರು ಎಂದು ಹೇಳಲಾಗುವುದು.

4.ಕುಂಭ

4.ಕುಂಭ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸ್ವತಂತ್ರ ಪ್ರಿಯರು. ಇವರು ಬೇರೆಯವರ ಹಾದಿಯಲ್ಲಿ ಹೋಗಲು ಇಷ್ಟಪಡುವುದಿಲ್ಲ. ಇವರು ಬಹುಬೇಗದ ವರ್ತನೆ ಹಾಗೂ ಕಠಿಣವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವರು. ಇವರು ವಿಚಾರಗಳನ್ನು ಮಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಅಂತೆಯೇ ವರ್ತನೆಯೂ ಅಷ್ಟೇ ವೇಗದಲ್ಲಿ ನೀಡುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ತ್ವರಿತವಾದ ಒಲವನ್ನು ತೋರುತ್ತಾರೆ. ಸಂಭಾವ್ಯ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸದೆಯೇ ಯೋಜನೆಯನ್ನು ಕೈಗೊಳ್ಳುತ್ತಾರೆ. ಇದರಿಂದಾಗಿ ಒತ್ತಡಕ್ಕೆ ಒಳಗಾದಾಗ ತಲೆಬಿಸಿಮಾಡಿಕೊಳ್ಳುತ್ತಾರೆ. ಜೊತೆಗೆ ತಮ್ಮ ದುರ್ಬಲ ಸ್ಥಿತಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಮನಸ್ಸಿಗೆ ಬಂದಂತೆ ವರ್ತಿಸುವ ಸಾಧ್ಯತೆಗಳು ಇರುತ್ತವೆ.

5.ಮೀನ

5.ಮೀನ

ಇವರು ವಿಷಯವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವುದಿಲ್ಲ. ಅರ್ಥವಿಲ್ಲದ ರೀತಿಯಲ್ಲಿ ಅಥವಾ ತಮಾಷೆಯ ರೂಪದಲ್ಲಿ ನಿರ್ಣಯವನ್ನು ಕೈಗೊಳ್ಳುವರು. ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ದ್ವೇಷವನ್ನು ವ್ಯಕ್ತಪಡಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಹಾಗೂ ಚಿಂತನೆಗಳನ್ನು ಹೊಂದಿರಬಾರದು ಎಂದು ಇವರು ಭಾವಿಸುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ಮೂರ್ಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇವರು ನಿರಾಶೆ ಹೊಂದುವುದನ್ನು ಇಷ್ಟಪಡುವುದಿಲ್ಲ. ಮೀನವು ಯಾರನ್ನಾದರು ನಿರಾಶೆಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಅವರು ಕೈಗೊಳ್ಳುವ ತೀರ್ಮಾನ ಹಾಗೂ ವರ್ತನೆ ಇತರರಿಗೆ ನೋವುಂಟುಮಾಡುವುದು.

6.ತುಲಾ

6.ತುಲಾ

ಇವರು ಬಹಳಷ್ಟು ಉದ್ವೇಗದ ಕೆಲಸವನ್ನು ಮಾಡುತ್ತಾರೆ. ಇವರು ಯಾವುದಾದರೂ ಒಂದು ವಿಚಾರಕ್ಕೆ ಅಂಗಡಿಗೆ ಹೋದರೂ ಬರುವಾಗ ಹಲವಾರು ವಸ್ತುಗಳನ್ನು ಕೊಂಡು ತರಬೇಕು ಎಂದು ಬಯಸುತ್ತಾರೆ. ಇವರು ಯಾವುದೇ ವಿಚಾರದಲ್ಲೂ ತಕ್ಷಣದ ತೃಪ್ತಿಯನ್ನು ಇಷ್ಟಪಡುತ್ತಾರೆ. ಕಟ್ಟು ನಿಟ್ಟಿನ ನಿರ್ಣಯ ತೆಗೆದುಕೊಳ್ಳುವ ಇವರು. ಚಿಂತನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳದೆ ನಿರ್ಧಾರ ವ್ಯಕ್ತ ಪಡಿಸುತ್ತಾರೆ. ಇದು ಕೆಲವರಿಗೆ ನೋವುಂಟಾಗುವ ಸಾಧ್ಯತೆಗಳಿವೆ.ಇವರು ಜನರಿಗೆ ಉಡುಗೊರೆ ಹಾಗೂ ಸಂತೋಷ ನೀಡಲು ಇಷ್ಟಪಡುತ್ತಾರೆ ಈ ನಿಟ್ಟಿನಲ್ಲಿ ತಮ್ಮ ಸಾಮಥ್ರ್ಯವನ್ನು ಪರಿಗಣಿಸದೆಯೇ ಅತಿರೇಕಕ್ಕೆ ಹೋಗುವರು. ಇದರಿಂದಲೂ ಎದುರಿಗಿರುವ ವ್ಯಕ್ತಿಗೆ ಇವರ ಬಗ್ಗೆ ಗೊಂದಲ ಉಂಟಾಗಬಹುದು.

English summary

Zodiac Signs Who Never Think Before They Act

Are you impulsive? Do you act before you consider all the consequences of your actions or do you speak without thinking first?There are some advantages and disadvantages to being impulsive and it can affect the way you act. Impulsive people do everything from buying things they can’t afford to drinking too much. However, impulsive people are great at taking advantage of unexpected opportunities and are excellent at thinking on their feet.
X
Desktop Bottom Promotion