For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಚಕ್ರದ ಜೋಡಿಗಳ ದಾಂಪತ್ಯ ಜೀವನ ಸಂತೋಷವಾಗಿರುತ್ತದೆಯಂತೆ

|

ಸುಂದರ ದಾಂಪತ್ಯ ಜೀವನ ವ್ಯಕ್ತಿಗೆ ಜೀವನದ ಪರಿಪೂರ್ಣತೆಯ ಅನುಭವ ನೀಡುವುದು. ಪರಸ್ಪರ ಅರಿತು ಬೆರೆತು ಜೀವನದ ಪ್ರತಿಯೊಂದು ಹಂತದಲ್ಲೂ ಸಹಕಾರ ನೀಡುತ್ತಾ ಬರುವ ಸಂಗಾತಿ ಸಿಗುವುದು ಒಂದು ಅದೃಷ್ಟ ಎಂದೇ ಹೇಳಬಹುದು. ದಾಂಪತ್ಯದ ಆರಂಭದಲ್ಲಿ ಹೊಂದಾಣಿಕೆಯ ಸಮಸ್ಯೆ ಉಂಟಾಗುವುದು ಸಹಜ. ಅಂತಹ ಸಂಗತಿಗಳನ್ನು ನಿರ್ವಹಿಸುತ್ತಾ, ಜೀವನದ ಕೊನೆಯ ಹಂತದ ವರೆಗೂ ಆಸರೆಯಾಗಿ ನಿಲ್ಲುವವರು ಆದರ್ಶ ದಂಪತಿಗಳು ಎನಿಸಿಕೊಳ್ಳುತ್ತಾರೆ. ಜೊತೆಗೆ ಜೀವನದ ಎಲ್ಲಾ ಹಂತದಲ್ಲೂ ಮಧುರ ಕ್ಷಣಗಳನ್ನು ಅನುಭವಿಸುತ್ತಾರೆ ಎನ್ನಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಹೊಂದಾಣಿಕೆಯ ವ್ಯಕ್ತಿಗಳು/ದಂಪತಿಗಳು ಸುಂದರ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ. ಅಲ್ಲದೆ ಪರಸ್ಪರ ಸಹಕಾರ, ತ್ಯಾಗ ಹಾಗೂ ಪ್ರೀತಿಯನ್ನು ಹಂಚಿಕೊಳ್ಳುವುದರ ಮೂಲಕ ಜೀವನವನ್ನು ಕಳೆಯುವರು. ನಿಮಗೆ ನಿಮ್ಮ ರಾಶಿಚಕ್ರಕ್ಕೆ ಯಾವ ರಾಶಿಚಕ್ರದವರು ಹೊಂದುತ್ತಾರೆ? ಅವರೊಂದಿಗೆ ಜೀವನ ಹೇಗಿರುವುದು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಸಿಂಹ ಮತ್ತು ತುಲಾ

ಸಿಂಹ ಮತ್ತು ತುಲಾ

ಈ ಎರಡು ರಾಶಿಯವರು ಪರಸ್ಪರ ಆಕರ್ಷಣೆಗೆ ಒಳಗಾಗುತ್ತಾರೆ. ಸಿಂಹ ರಾಶಿಯವರು ಹುಟ್ಟು ನಾಯಕತ್ವ ಗುಣವನ್ನು ಹೊಂದಿರುವುದರಿಂದ ವಿಶ್ವಾಸ ಮತ್ತು ಮೇಲುಗೈ ಸಾಧಿಸುತ್ತಾರೆ. ತುಲಾ ರಾಶಿಯವರು ಶಾಂತ ಸ್ವಭಾವ ಹಾಗೂ ಸಹಕಾರದ ಗುಣಗಳ ಮೂಲಕ ಪ್ರೀತಿಯನ್ನು ನೀಡುವರು. ಸಿಂಹ ರಾಶಿಯವರು ರಕ್ಷಣಾತ್ಮಕ ಭಾವನೆಯನ್ನು ನೀಡುವುದರ ಮೂಲಕ ಶಾಂತವಾಗಿರುತ್ತಾರೆ. ಹಾಗಾಗಿ ಈ ಎರಡು ಚಿಹ್ನೆಯ ವ್ಯಕ್ತಿಗಳು ಉತ್ತಮ ದಾಂಪತ್ಯ ಜೀವನವನ್ನು ನಡೆಸುವರು.

ಮಿಥುನ ಮತ್ತು ತುಲಾ

ಮಿಥುನ ಮತ್ತು ತುಲಾ

ಮಿಥುನ ರಾಶಿಯವರು ಸದಾ ಮುಂದಾಲೋಚನೆಯನ್ನು ನಡೆಸುತ್ತಿರುತ್ತಾರೆ. ಕೆಲವೊಂದು ವಿಷಯಗಳ ಬಗ್ಗೆ ಬೇರೆಯವರು ಹೇಳಿದ ನಂತರ ಚಿಂತನೆ ನಡೆಸುತ್ತಾರೆ. ತುಲಾ ರಾಶಿಯವರು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಕೆಲವೊಮ್ಮೆ ಮಿಥುನ ರಾಶಿಯವರು ಹಾಸ್ಯ ಮಾಡುವುದರ ಮೂಲಕ ಬಹುತೇಕ ಸಂದರ್ಭದಲ್ಲಿ ಸಂತೋಷದ ಕ್ಷಣಗಳನ್ನು ಸೃಷ್ಟಿಸುವರು. ಈ ರಾಶಿಗಳ ನಡುವೆ ಹೊಂದಾಣಿಕೆ ಮತ್ತು ಪ್ರೀತಿ ವಿಶ್ವಾಸ ಹೆಚ್ಚಾಗಿರುತ್ತದೆ.

Most Read:ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!

 ಮೇಷ ಮತ್ತು ಕುಂಭ

ಮೇಷ ಮತ್ತು ಕುಂಭ

ಈ ಎರಡು ರಾಶಿಚಕ್ರದವರು ಭಾವನಾತ್ಮಕ ಜೀವಿಗಳು. ಇವರು ಪ್ರತಿಯೊಂದು ಕೆಲಸವನ್ನು ಪರಸ್ಪರ ಸಹಕಾರ ನೀಡುವುದರ ಮೂಲಕ ನಿರ್ವಹಿಸುವರು. ಇವರಿಗೆ ಭಾವನೆಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ತಿಳಿದಿದೆ. ಮೇಷರಾಶಿಯವರು ಸೃಜನಾತ್ಮಕ ಆಲೋಚನೆಗಳಿಂದ ಅದ್ಭುತ ಅನುಭವವನ್ನು ನೀಡುವರು. ಕುಂಭ ರಾಶಿಯವರು ವಿಷಯಗಳನ್ನು ಸುಂದರವಾಗಿ ನಿರ್ವಹಿಸುವರು. ಕುಂಭರಾಶಿಯವರು ಮೇಷರಾಶಿಯವರ ಭುಜದ ಮೇಲೆ ಒರಗಿ ಭಾವನೆಗಳನ್ನು ಹೇಳಿಕೊಳ್ಳಲು ಅಥವಾ ಅಳಲನ್ನು ತೋಡಿಕೊಳ್ಳುವ ಮನಸ್ಸು ಮಾಡಿದರೆ ಮೇಷರಾಶಿಯವರು ಅದಕ್ಕೆ ಭಾವನಾತ್ಮಕ ಸ್ಥೈರ್ಯ ನೀಡುವುದರ ಮೂಲಕ ಪ್ರೀತಿಯನ್ನು ತೋರುವರು.

Most Read:ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಕರ್ಕ ಮತ್ತು ಮೇಷ

ಕರ್ಕ ಮತ್ತು ಮೇಷ

ಪರಸ್ಪರ ಆಕರ್ಷಿಸುವ ರಾಶಿಚಕ್ರಗಳಲ್ಲಿ ಕರ್ಕ ಮತ್ತು ಮೇಷ ರಾಶಿಯವರು ಸಹ ಒಂದು ಉತ್ತಮ ಉದಾಹರಣೆ. ಮೇಷರಾಶಿಯವರು ಧೈರ್ಯಶಾಲಿಗಳು, ಆತ್ಮವಿಶ್ವಾಸದ ವ್ಯಕ್ತಿಗಳು ಹಾಗೂ ಬೆಂಕಿಯಂತಹ ಉತ್ಸಾಹವನ್ನು ಹೊಂದಿರುವವರಾಗಿದ್ದಾರೆ. ಕರ್ಕ ರಾಶಿಯವರು ನೀರಿನಂತಹ ಸ್ವಭಾವದವರು. ಉತ್ತಮ ಹೊಂದಾಣಿಕೆ ಹಾಗೂ ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಪರಸ್ಪರ ಸಹಕಾರ ಮತ್ತು ಪ್ರೀತಿಯಿಂದ ದಾಂಪತ್ಯ ಜೀವನ ನಡೆಸುವರು.

ಮೀನ ಮತ್ತು ಕರ್ಕ

ಮೀನ ಮತ್ತು ಕರ್ಕ

ಈ ಎರಡು ರಾಶಿಚಕ್ರದವರು ಅತ್ಯುತ್ತಮ ಸಹಕಾರ ಹಾಗೂ ಹಂಚಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಇವರಿಬ್ಬರಲ್ಲೂ ಹೊಂದಾಣಿಕೆ, ಸೂಕ್ಷ್ಮ ಸ್ವಭಾವ ಹಾಗೂ ಸಹಕಾರದ ಗುಣಗಳು ಒಂದೇ ರೀತಿಯಲ್ಲಿರುತ್ತದೆ. ಹಾಗಾಗಿ ಇವರಿಬ್ಬರ ದಾಂಪತ್ಯದ ಜೀವನದಲ್ಲಿ ಉತ್ತಮ ಪ್ರಣಯ, ಅಕ್ಕರೆ, ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರುವರು.

 ವೃಷಭ ಮತ್ತು ಮಕರ

ವೃಷಭ ಮತ್ತು ಮಕರ

ಈ ಎರಡು ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿದವರಾಗಿರುತ್ತಾರೆ. ಪ್ರಾಯೋಗಿಕ ಚಿಂತನೆ ನಡೆಸುವ ಈ ವ್ಯಕ್ತಿಗಳು ಪ್ರದರ್ಶನದ ಗುಣ ಅಥವಾ ವರ್ತನೆಯನ್ನು ಇಷ್ಟಪಡರು. ಇವರ ಜೀವನದಲ್ಲಿ ಯೋಚನೆಗಳು ಹಾಗೂ ಆದ್ಯತೆಗಳು ಸ್ಪಷ್ಟವಾಗಿರುತ್ತವೆ. ಇವರ ನಡುವೆ ರಚನಾತ್ಮಕ ಮತ್ತು ಯೋಜಿತ ಆಲೋಚನೆಗಳು ಇರುವುದರಿಂದ ಜೀವನವನ್ನು ಸರಾಗವಾಗಿ ನಡೆಸುವರು. ಎರಡು ಚಿಹ್ನೆಗಳ ನಡುವೆ ಮಹತ್ವಕಾಂಕ್ಷೆ ಮತ್ತು ಅದನ್ನು ಪೂರೈಸುವ ಕನಸುಗಳನ್ನು ಹೊಂದಿರುವುದರಿಂದ ಪರಸ್ಪರ ಬೆಂಬಲವನ್ನು ಪಡೆದುಕೊಳ್ಳುವರು.

English summary

Zodiac Couples Who Will Be The Most Stable And Happy

Love may happen at first sight or after knowing each other for years. While falling in love is easy, maintaining the same love forever might become difficult. Some couples have a wonderful beginning but meet with a sad end. Well, what matters ten years down the line in a love story is the overall compatibility and understanding. But how can one know it beforehand and save oneself from love failures, is the big question.
X
Desktop Bottom Promotion