For Quick Alerts
ALLOW NOTIFICATIONS  
For Daily Alerts

ಕಿಸ್ಸಿಂಗ್ ಮಾಡುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರೆ! ಯಾಕೆ ಗೊತ್ತೇ?

By Deepu
|

ಪ್ರಥಮ ಚುಂಬನದ ಅನುಭವವೇ ಅನನ್ಯ. ಅದನ್ನು ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಜೀವನದಲ್ಲಿ ಇಂತಹ ಅನುಭವ ಆಗಿಯೇ ಇರುತ್ತದೆ. ಆದರೆ ಚುಂಬನದಲ್ಲಿ ಹಲವಾರು ವಿಧಗಳು ಕೂಡ ಇದೆ. ಇಬ್ಬರ ತುಟಿಗಳು ಪರಸ್ಪರ ಬೆಸೆದುಕೊಂಡು ಕಣ್ಣುಗಳು ಮುಚ್ಚಿಕೊಂಡಿದ್ದರೆ ಇದು ಚುಂಬಿಸುವ ಒಳ್ಳೆಯ ವಿಧಾನವೆಂದು ಹೇಳಲಾಗುತ್ತದೆ. ಚುಂಬನ ಎನ್ನುವುದು ಕೇವಲ ನಾಲಗೆ ಮತ್ತು ತುಟಿಗಳ ಸಮ್ಮಿಲನವಲ್ಲ. ಇದೊಂದು ರೋಮಾಂಚನಗೊಳಿಸುವ ಅನುಭವ.

ಒಳ್ಳೆಯ ಚುಂಬನವೆಂದರೆ ಕಣ್ಣು ಮುಚ್ಚಿಕೊಂಡು ನಾಲಗೆಗಳು ಪರಸ್ಪರರ ಬಾಯಿಯಲ್ಲಿ ನೃತ್ಯ ಮಾಡುತ್ತಾ ಇರುವುದು. ಕಣ್ಣು ತೆರೆದುಕೊಂಡು ಚುಂಬಿಸುವುದನ್ನು ನೋಡಿದರೆ ಕೆಲವರಿಗೆ ಆಗಲ್ಲ, ಇದು ಅಸಾಮಾನ್ಯ ನಡವಳಿಕೆ ಎಂದು ಭಾವಿಸಲಾಗುತ್ತದೆ. ಆದರೆ ಚುಂಬಿಸುವಾಗ ಕಣ್ಣುಗಳು ಮುಚ್ಚಿರುವುದು ಯಾಕೆ ಎಂದು ನಿಮಗೆ ತಿಳಿದಿದೆಯಾ? ಕಣ್ಣುಗಳು ಮುಚ್ಚಿಕೊಂಡೇ ಚುಂಬಿಸುವುದು ಯಾಕೆ? ಚುಂಬಿಸಲು ಪರಸ್ಪರ ಹತ್ತಿರ ವಾಗುತ್ತಿರುವಂತೆ ಕಣ್ಣುಗಳು ತನ್ನಿಂದ ತಾನೇ ಮುಚ್ಚಿಕೊಳ್ಳುವುದು. ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣಗಳು ಇದೆಯಾ ಎಂದು ಈ ಲೇಖನದಲ್ಲಿ ತಿಳಿಯುವ....

ತುಟಿಗಳು ಮಾತನಾಡಲಿ

ತುಟಿಗಳು ಮಾತನಾಡಲಿ

ಸಂಗಾತಿಗಳಿಬ್ಬರು ಪರಸ್ಪರ ಮಾತನಾಡಿ, ಪ್ರೀತಿ ಹಂಚಿಕೊಂಡ ಬಳಿಕ ಚುಂಬಿಸುವುದು ಒಂದು ರೀತಿಯಲ್ಲಿ ವಿಶೇಷವಾಗಿ ಪ್ರೀತಿ ವ್ಯಕ್ತಪಡಿಸುವುದು.

ಇದು ಸಂತೋಷದ ಸಂಕೇತ

ಇದು ಸಂತೋಷದ ಸಂಕೇತ

ನಮಗೆ ತುಂಬಾ ಸಂತೋಷದ ಅನುಭವವಾದಾಗ ನಾವು ಕಣ್ಣುಗಳನ್ನು ಮುಚ್ಚುತ್ತೇವೆ. ಸುಂದರ ಹಾಡು, ಪ್ರಾರ್ಥನೆ ಮಾಡುವಾಗ, ನಿದ್ರಿಸುವಾಗ, ಕಾಮೋತ್ತೇಜನ ಗೊಂಡಾಗ ಮತ್ತು ನಮಗೆ ಇಷ್ಟವಾಗಿರುವುದನ್ನು ತಿನ್ನುವಾಗ ಕೂಡ.

ಇದು ನಂಬಿಕೆಯ ಸಂಕೇತ

ಇದು ನಂಬಿಕೆಯ ಸಂಕೇತ

ಕಣ್ಣುಗಳನ್ನು ತೆರೆದಿಟ್ಟುಕೊಂಡು ನೀವು ನಂಬಿಕೆ ಮತ್ತು ಭದ್ರತೆಯನ್ನು ನೋಡಲು ಸಾಧ್ಯವಿಲ್ಲ.

ಸಂತೋಷದ ಪರಾಕಾಷ್ಠೆ

ಸಂತೋಷದ ಪರಾಕಾಷ್ಠೆ

ನಿಮ್ಮ ಗ್ರಹಿಸುವ ಐದು ಭಾಗಗಳಲ್ಲಿ ಒಂದು ಸ್ತಬ್ಧಗೊಂಡರೆ ಆಗ ಇನ್ನೊಂದು ಅದರ ಜಾಗದಲ್ಲಿ ಕಾರ್ಯನಿರ್ವಹಿಸುವುದು. ಇದರ ಬಗ್ಗೆ ನೀವು ಅಂಧರು, ಕಿವುಡರು ಅಥವಾ ಬಾಯಿ ಬರದೇ ಇರುವವರಲ್ಲಿ ಕೇಳಬಹುದು. ಚುಂಬನದ ವೇಳೆ ಕಣ್ಣುಗಳನ್ನು ಮುಚ್ಚಿಕೊಂಡಾಗ ತುಟಿಗಳು ಸ್ಪರ್ಶದ ಅಧಿಕ ಸುಖ ಪಡೆಯಲು ಬಯಸುವುದು. ಇದರಿಂದ ನಿಮಗೆ ತುಟಿಯ ಸಿಹಿಯ ಅನುಭವ ಪಡೆಯಲು ಸಾಧ್ಯವಾಗುವುದು.

ಶರಣಾಗತಿ ಸೂಚನೆ

ಶರಣಾಗತಿ ಸೂಚನೆ

ನೀವು ಚುಂಬನಕ್ಕೆ ಹೋರಾಡುತ್ತಿಲ್ಲ, ಮರಳಿ ಚುಂಬನ ನೀಡುತ್ತೀರಿ. ಇದು ಒಂದು ರೀತಿಯ ಶರಣಾಗತಿ.

ವಿಲಕ್ಷಣ ದೃಶ್ಯ ನೋಡದೇ ಇರಲು

ವಿಲಕ್ಷಣ ದೃಶ್ಯ ನೋಡದೇ ಇರಲು

ನಿಮ್ಮ ಕಣ್ಣುಗಳು ತುಂಬಾ ಹತ್ತಿರದಿಂದ ಅಷ್ಟು ನಿಮಿಷಗಳ ಕಾಲ ನೋಡುವುದು ತುಂಬಾ ವಿಲಕ್ಷಣವಾಗಿರುವುದು.

ನೀವು ತೆರೆದುಕೊಳ್ಳುವಿರಿ

ನೀವು ತೆರೆದುಕೊಳ್ಳುವಿರಿ

ದೀರ್ಘ ಚುಂಬನವು ನಿಮ್ಮನ್ನು ಒಳಗಿಂದ ಬಡಿದೆಬ್ಬಿಸುವುದು. ನಿಮ್ಮ ಕಣ್ಣುಗಳನ್ನು ಮುಚ್ಚಿಟ್ಟುಕೊಂಡರೆ ಸುತ್ತಲು ನಡೆಯುವ ಎಲ್ಲವೂ ಕತ್ತಲೆಯಾಗುವುದು. ನಿಮ್ಮೊಳಗಿನ ಉತ್ತೇಜನ ಹಾಗೂ ಕುತೂಹಲದ ಕಡೆ ಗಮನಹರಿಸುವುದು ಮುಖ್ಯವಾಗಿರುವುದು.

ನಾಚಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರಂತೆ!

ನಾಚಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರಂತೆ!

ಯಾವುದೇ ವ್ಯಕ್ತಿ ನಿಮ್ಮ ಹತ್ತಿರಕ್ಕೆ ಬಂದು ಕಿಸ್ ಮಾಡಲು ಆರಂಭಿಸಿದಾಗ ನೀವು ಸ್ವಯಂ ಜಾಗೃತವಾಗಿರುತ್ತೀರಿ ಅಲ್ಲವೇ? ಜಾಗೃತ ಸ್ಥಿತಿ ಮತ್ತು ನಾಚಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೇವೆ ಎಂದು ಕೆಲವರು ಹೇಳುತ್ತಾರೆ. ಅಲ್ಲದೆ ಮುಚ್ಚಿದ ಕಣ್ಣುಗಳು ಆರಾಮವನ್ನು ನೀಡುತ್ತದೆ. ಇದರಿಂದಾಗಿ ಆ ಸವಿಸವಿ ಕ್ಷಣದ ಭಾವನೆಗಳ ಕಡಲಿನಲ್ಲಿ ತೇಳುವಂತೆ ಮಾಡುತ್ತದೆ.

ಕಿಸ್ಸಿಂಗ್ ಉದ್ರೇಕಿಸುವಂತಹ ಕ್ರಿಯೆ!

ಕಿಸ್ಸಿಂಗ್ ಉದ್ರೇಕಿಸುವಂತಹ ಕ್ರಿಯೆ!

ಚುಂಬನವೆನ್ನುವುದು ಉದ್ರೇಕಿಸುವಂತಹ ಕ್ರಿಯೆಯಾಗಿದೆ. ಕೋಮಲ, ಶೃಂಗಾರ ಮತ್ತು ಭಾವನಾತ್ಮಕವಾಗಿರುವುದೇ ಚುಂಬನ. ಇದನ್ನು ಸಂಪೂರ್ಣವಾಗಿ ಅನುಭವಿಸುವ ಸಲುವಾಗಿ ಕಣ್ಣುಗಳನ್ನು ಮುಚ್ಚಬೇಕಾಗುತ್ತದೆ.

ಇದೆಲ್ಲಾ ಮೆದುಳಿನ ಕಾರ್ಯ ಚಕ್ಯತೆಯೇ?

ಇದೆಲ್ಲಾ ಮೆದುಳಿನ ಕಾರ್ಯ ಚಕ್ಯತೆಯೇ?

ನಮ್ಮ ಮೆದುಳು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಲು ಅಸಮರ್ಥವಾಗಿದೆ. ಸಾಮಾನ್ಯವಾಗಿ ಒಂದೇ ಹೊತ್ತಿನಲ್ಲಿ ನಾವು ಎರಡಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತೇವಾದರೂ ಇವುಗಳಲ್ಲಿ ಅರ್ಧದಷ್ಟನ್ನು ಮೆದುಳುಬಳ್ಳಿ ನಡೆಸುತ್ತದೆ. ಉದಾಹರಣೆಗೆ ನಡೆಯುತ್ತಾ ಸಂಗೀತ ಆಲಿಸುವುದು. ಇಲ್ಲಿ ನಡೆಯುವ ಕೆಲಸದ ಎಲ್ಲಾ ಸೂಚನೆಗಳನ್ನು ಮೆದುಳುಬಳ್ಳಿ ನಿರ್ವಹಿಸಿದರೆ ಕೇಳುವ ಕೆಲಸವನ್ನು ಮೆದುಳು ನಿರ್ವಹಿಸುತ್ತದೆ. ಇದೇ ಪರಿಯಲ್ಲಿ ಚುಂಬನದ ಅವಧಿಯಲ್ಲಿ ನೋಡುವ ಮತ್ತು ತುಟಿಗಳ ಸಂವೇದನೆಯನ್ನು ಅನುಭವಿಸುವ ಎರಡೂ ಕೆಲಸಗಳನ್ನು ಮೆದುಳು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗದ ಕಾರಣ ಈ ಸಮಯದಲ್ಲಿ ಕಣ್ಣನ್ನು ತನ್ನಿಂತಾನೇ ಮುಚ್ಚುವಂತೆ ಮಾಡುತ್ತದೆ. ತನ್ಮೂಲಕ ತುಟಿಗಳ ಸಂವೇದನೆ ಹಾಗೂ ಸುರಕ್ಷತೆ ಮತ್ತು ಭರವಸೆಯ ಭಾವನೆಯನ್ನು ಪಡೆದಂತಾಗುತ್ತದೆ.

ಮನಃಶಾಸ್ತ್ರಜ್ಞ ಏನು ಹೇಳುತ್ತಾರೆ?

ಮನಃಶಾಸ್ತ್ರಜ್ಞ ಏನು ಹೇಳುತ್ತಾರೆ?

"ಈ ಅವಧಿಯಲ್ಲಿ ಕಣ್ಣುಗಳನ್ನು ಮುಚ್ಚಿಕೊಳ್ಳುವ ಮೂಲಕ ಕಣ್ಣುಗಳ ಮೂಲಕ ಲಭ್ಯವಾಗದ ಮಾಹಿತಿಯನ್ನು ವಿಶ್ಲೇಷಿಸಲು ಮೆದುಳಿಗೆ ಅಗತ್ಯವಿಲ್ಲದೇ ತನ್ನ ಪೂರ್ಣಪ್ರಮಾಣದ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ" ಎಂದು ಮನಃ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಮನಃಶಾಸ್ತ್ರಜ್ಞ ಪ್ರಕಾರ ಕಣ್ಣು ಮುಚ್ಚಿ ಚುಂಬನದ ಆಹ್ಲಾದತೆಯನ್ನು ಅನುಭವಿಸುವಾಗ ತನ್ನ ಪ್ರೇಮಿಯ ಗಮನವನ್ನು ಬೇರೆಡೆಗೆ ಹರಿಯುವುದರಿಂದಲೂ ತಡೆದಂತಾಗುತ್ತದೆ. ಅಲ್ಲದೇ ದಂಪತಿಗಳ ನಡುವಣ ಮಿಲನದ ಪೂರ್ವಹಂತದ ಕ್ರಿಯೆಯಾಗಿರುವ ಚುಂಬನ ಈ ಪಥವನ್ನು ಸರಿಯಾದ ದಾರಿಯತ್ತ ಸಾಗಿಸಲು ನೆರವಾಗುತ್ತದೆ.

ಸಂತೋಷಕರ ದಾಂಪತ್ಯಕ್ಕೆ ನಾಂದಿ!

ಸಂತೋಷಕರ ದಾಂಪತ್ಯಕ್ಕೆ ನಾಂದಿ!

ಅಂದರೆ ಈ ಹೊತ್ತಿನಲ್ಲಿ ಮೆದುಳು ಬೇರೆ ಆಕರ್ಷಣೆಗಳತ್ತ ವಾಲದೇ ಕೇವಲ ಸಂಗಾತಿಯ ಆಪ್ತತೆ, ನಿಕಟತೆಯನ್ನು ಬಯಸಲು, ಈ ಮೂಲಕ ಆತ್ಮೀಯತೆಯ ಬೆಸುಗೆ ಸಾಧಿಸಲು ಸಾಧ್ಯವಾಗುತ್ತದೆ. ಈ ಬೆಸುಗೆ ಶಾಶ್ವತ, ಸುಂದರ, ಸಂತೋಷಕರ ದಾಂಪತ್ಯಕ್ಕೆ ನಾಂದಿಯಾಗಿದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಚುಂಬಿಸುವಾಗ ಬೇರೇನನ್ನೂ ಯೋಚಿಸದೇ ಕಣ್ಣುಗಳನ್ನು ಮುಚ್ಚಿಕೊಂಡು ಶೇಕಡಾ ನೂರರಷ್ಟು ಅನುಭವಿಸಿ, ಸುಖಿಗಳಾಗಿರಿ.

ಇದೊಂದು ಮಾಯ ಜಾದೂ!

ಇದೊಂದು ಮಾಯ ಜಾದೂ!

ಚುಂಬನವೇ ಹಾಗೆ, ಅದೊಂದು ರೀತಿಯ ವಿಶೇಷ ಸಂತೋಷವನ್ನು ಉಂಟು ಮಾಡುತ್ತದೆ. ಕೆಲವರಿಗೆ ಲೈಂಗಿಕ ಕ್ರಿಯೆಗಿಂತ ಹೆಚ್ಚು ಚುಂಬನ ಸಂತೋಷವನ್ನು ನೀಡುವುದು. ಗೊಂದಲಗಳಿಂದ ಕೂಡಿರುವ ಮನಸ್ಸು ಕೂಡ ಚುಂಬನದ ವೇಳೆ ತಟಸ್ಥವಾಗುತ್ತದೆ. ಅಲ್ಲದೆ ಕಣ್ಣುಗಳನ್ನು ಮುಚ್ಚಿದ್ದರೆ ಚುಂಬನವನ್ನು ಆನಂದಿಸಬಹುದು. ಅದೇ ಕಣ್ಣುಗಳು ತೆರೆದೇ ಇದ್ದರೆ ಆಗ ಅಡ್ಡಿಯಾಗಬಹುದು. ಇದಕ್ಕಾಗಿ ಕಣ್ಣುಗಳು ಮುಚ್ಚಿರುತ್ತದೆ.

English summary

Why do people sometimes close their eyes when they kiss?

The best kiss is getting your tongue dancing and snuggling into each other's mouth with closed eyes. Many people find it creepy when they find their partner kissing with open eyes, which is also termed to be an unusual behaviour. But, have you ever wondered why we close our eyes while kissing? Why does every kiss take place with closed eyes? Just when we lean to kiss each other, our eyes get closed within a few seconds. Do you know the scientific reason behind this?
Story first published: Monday, July 16, 2018, 15:15 [IST]
X
Desktop Bottom Promotion