For Quick Alerts
ALLOW NOTIFICATIONS  
For Daily Alerts

ನಿಮ್ಮ ಶೂ ಸೈಜ್ ಕೂಡ ವ್ಯಕ್ತಿತ್ವದ ಬಗ್ಗೆ ಬಿಚ್ಚಿಡುತ್ತದೆಯಂತೆ!

By Hemanth
|

ನೀವು ಮಾತನಾಡುವ ರೀತಿ, ನಗುವ ಶೈಲಿ, ನೋಟ, ಕೈಬೆರಳುಗಳು, ಅಂಗೈ, ಪಾದ ಹೀಗೆ ಹಲವಾರು ವಿಚಾರಗಳಿಂದ ವ್ಯಕ್ತಿತ್ವವನ್ನು ಹೇಳಬಹುದು. ಕೆಲವೊಂದು ದೈಹಿಕ ಪರೀಕ್ಷೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ತಿಳಿಯಬಹುದು. ಈ ಲೇಖನದಲ್ಲಿ ಶೂ ಗಾತ್ರ(ಸೈಜ್) ನೋಡಿಕೊಂಡು ನಿಮ್ಮ ವ್ಯಕ್ತಿತ್ವ ಹೇಗೆ ಎಂದು ಹೇಳಲಿದ್ದೇವೆ. ಮನಶಾಸ್ತ್ರದ ಪರೀಕ್ಷೆಗಳ ಪ್ರಕಾರ ಕೆಲವೊಂದು ದೈಹಿಕ ಸಂಜ್ಞೆಗಳನ್ನು ನೋಡಿಕೊಂಡು ವ್ಯಕ್ತಿತ್ವ ಅಳೆಯಬಹುದು.

ಶೂ ಸೈಜ್ ನೋಡಿಕೊಂಡು ಇಂದು ನಿಮಗೆ ವ್ಯಕ್ತಿತ್ವ ತಿಳಿಯುವುದು ಹೇಗೆ ಎಂದು ಹೇಳುತ್ತೇವೆ. ಇದು ಸುಮ್ಮನೆ ಹಾಗೆ ಹೇಳಿರುವುದಲ್ಲ, ಹಲವಾರು ಅಧ್ಯಯನಗಳ ನಡೆಸಿದಾಗ ಕಂಡುಕೊಂಡಿರುವ ವಿಚಾರ. ಶೂ ಸೈಜ್ ಒಂದೇ ರೀತಿಯಾಗಿರುವ ವ್ಯಕ್ತಿಗಳ ನಡವಳಿಕೆಗಳು ಸಾಮಾನ್ಯವಾಗಿರುವುದು ಎಂದು ಕಂಡುಕೊಳ್ಳಲಾಗಿದೆ. ಅಮೆರಿಕಾದ ಶೂ ಸೈಜ್ ನಂತೆ ಈ ಊಹೆ ಮಾಡಲಾಗಿದೆ. ನಿಮ್ಮ ಶೂ ಸೈಜ್ ಯಾವುದು ಎಂದು ತಿಳಿಯಿರಿ.

ಶೂ ಸೈಜ್ 6 ಆಗಿದ್ದರೆ

ಶೂ ಸೈಜ್ 6 ಆಗಿದ್ದರೆ

ಶೂ ಸೈಜ್ 6 ಆಗಿರುವ ವ್ಯಕ್ತಿಗಳು ತುಂಬಾ ಸ್ನೇಹಪರ ಹಾಗೂ ಒಲೈಸಿಕೊಳ್ಳುವ ವ್ಯಕ್ತಿತ್ವದವರು. ಇವರು ಹೋದಕಡೆಯಲ್ಲಾ ಸ್ನೇಹಿತರನ್ನು ಸಂಪಾದಿಸುವರು. ಇವರು ಪ್ರತಿಯೊಬ್ಬರ ಹೃದಯದಲ್ಲೂ ತಮ್ಮದೊಂದು ಸ್ಥಾನ ಮಾಡಿಕೊಳ್ಳುವರು. ಇವರು ತುಂಬಾ ದಯಾಮಯಿ ಹಾಗೂ ಪ್ರೀತಿಸುವ ವ್ಯಕ್ತಿ. ಇವರು ಎಲ್ಲರಿಗೂ ಹೊಂದಿಕೊಂಡು ಹೋಗುವವರು.

ಶೂ ಸೈಜ್ 7 ಆಗಿದ್ದರೆ

ಶೂ ಸೈಜ್ 7 ಆಗಿದ್ದರೆ

ವ್ಯಕ್ತಿಯ ಶೂ ಸೈಜ್ 7 ಆಗಿದ್ದರೆ ಆತ ತುಂಬಾ ಅತ್ಯುತ್ಸಾಹಿಯಾಗಿರುವ ಮತ್ತು ತಾನು ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಆಸಕ್ತಿ ಹಾಗೂ ಶ್ರಮ ವಹಿಸುವನು. ಇವರು ತುಂಬಾ ಸ್ವತಂತ್ರವಾಗಿದ್ದು, ತಮ್ಮ ಮೌಲ್ಯ ತಿಳಿದಿರುವ ವ್ಯಕ್ತಿಗಳು. ಇವರು ತಮಗೆ ಇಷ್ಟವಾಗದೆ ಇರುವ ಕೆಲಸಗಳನ್ನು ಮಾಡಲು ಯಾವತ್ತೂ ಇಲ್ಲವೆಂದು ಹೇಳಲು ಹಿಂಜರಿಯಲ್ಲ.

ನಿಮ್ಮ ಶೂ ಸೈಜ್ 8 ಆಗಿದ್ದರೆ

ನಿಮ್ಮ ಶೂ ಸೈಜ್ 8 ಆಗಿದ್ದರೆ

ಇವರು ಜೀವನವು ಸ್ವಲ್ಪ ಅಗಾಧವಾಗಿದೆಯೆಂದು ಭಾವಿಸುವರು. ಆದರೆ ಇದೇ ವೇಳೆ ಇವರಿಗೆ ಇದನ್ನು ನಿಭಾಯಿಸುವುದು ಹೇಗೆ ಎಂದು ತಿಳಿದಿದೆ. ಇವರು ಸವಾಲುಗಳನ್ನು ಸ್ವೀಕರಿಸುವರು ಮತ್ತು ಅಡ್ಡಿಆತಂಕಗಳು ಇವರಿಗೆ ಭೀತಿ ಉಂಟು ಮಾಡದು. ಇದನ್ನು ಹೊರತುಪಡಿಸಿ, ಇವರು ಸವಾಲಿನಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುವರು. ಆದರೆ ಇವರಿಗೆ ಸವಾಲುಗಳು ಇಲ್ಲದೇ ಇದ್ದರೆ ಬೇಸರವಾಗುವುದು.

ನಿಮ್ಮ ಶೂ ಸೈಜ್ 9 ಆಗಿದ್ದರೆ

ನಿಮ್ಮ ಶೂ ಸೈಜ್ 9 ಆಗಿದ್ದರೆ

ಇವರು ತುಂಬಾ ಆತ್ಮವಿಶ್ವಾಸಿಗಳು ಹಾಗೂ ಇವರಿಗೆ ಏನು ಬೇಡ ಎನ್ನುವುದು ಸರಿಯಾಗಿ ತಿಳಿದಿರುವುದು. ಇವರು ಟೀಕೆಯನ್ನು ಸಾಮಾನ್ಯವಾಗಿ ಪರಿಗಣಿಸುವರು ಮತ್ತು ಜನರು ಏನು ಹೇಳುತ್ತಾರೆ ಎನ್ನುವ ಬಗ್ಗೆ ಹೆಚ್ಚು ಗಮನಹರಿಸಲು ಹೋಗಲ್ಲ. ಇದೆಲ್ಲವನ್ನು ಹೊರತುಪಡಿಸಿದರೆ ಇವರು ಬೇರೆಯವರ ಜೀವನದಲ್ಲಿ ಮಧ್ಯಪ್ರವೇಶಿಸಲ್ಲ.

ಶೂ ಸೈಜ್ 10 ಆಗಿದ್ದರೆ

ಶೂ ಸೈಜ್ 10 ಆಗಿದ್ದರೆ

ಅಮೆರಿಕಾದ ಈ ಶೈ ಸೈಜ್ ಸರಾಸರಿ ಪುರುಷರ ಶೂ ಸೈಜ್ ಆಗಿದೆ. ಇವರು ಬೇರೆಯವರ ನಿಯಂತ್ರಣದಲ್ಲಿರಲು ದ್ವೇಷಿಸುವರು. ಇವರಿಗೆ ಆಜ್ಞೆ ಪಾಲಿಸುವುದು ಇಷ್ಟವಿಲ್ಲ ಮತ್ತು ಸ್ವತಂತ್ರರಾಗಿರಲು ಬಯಸುವರು. ಇನ್ನೊಂದು ಬದಿಯಲ್ಲಿ ಇವರು ಬೇರೆಯವರ ಅಭಿಪ್ರಾಯ ಕೇಳುವರು ಮತ್ತು ಯಾವುದು ಒಳ್ಳೆಯದು ಎನ್ನುವುದರ ಮೇಲೆ ನಿರ್ಧಾರ ಮಾಡುವರು.

ಶೂ ಸೈಜ್ 11 ಆಗಿದ್ದರೆ

ಶೂ ಸೈಜ್ 11 ಆಗಿದ್ದರೆ

11 ಶೂ ಸೈಜ್ ಹೊಂದಿರುವ ಪುರುಷರು ಸವಾಲುಗಳನ್ನು ಇಷ್ಟಪಡುವರು. ಇವರು ಏನೇ ಮಾಡಿದರೂ ಅದಕ್ಕಾಗಿ ತುಂಬಾ ಕಠಿಣ ಪರಿಶ್ರಮ ವಹಿಸುವಂತಹ ವ್ಯಕ್ತಿಗಳು. ಪಾರ್ಟಿಗಳು, ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸುವುದು ಇವರನ್ನು ಹೀಗೆ ವಿವರಿಸಬಹುದು.

ಶೂ ಸೈಜ್ 12 ಆಗಿದ್ದರೆ

ಶೂ ಸೈಜ್ 12 ಆಗಿದ್ದರೆ

12 ಸೈಜ್ ನ ಶೂ ಧರಿಸುವ ವ್ಯಕ್ತಿಗಳು ಶಾಂತಿ ಬಯಸುವರು. ಇವರು ಯಾವುದೇ ರೀತಿಯ ಅಹಿತರ ಸನ್ನಿವೇಶವನ್ನು ಕಡೆಗಣಿಸುವರು. ಇವರು ಸ್ನೇಹಿತರನ್ನು ಮಾಡಿಕೊಳ್ಳಲ್ಲ. ಸ್ನೇಹ ಬೆಳೆಸಿದರೆ ಅದು ಜೀವನಪೂರ್ತಿ ಇರುವುದು. ಪ್ರಕೃತಿ ಎಂದರೆ ಇವರಿಗೆ ತುಂಬಾ ಇಷ್ಟ. ಇವರು ಪ್ರತಿಯೊಂದು ಪರಿಸ್ಥಿತಿಯಲ್ಲೂ ಪ್ರಕೃತಿಯನ್ನು ಪರಿಶೋಧಿಸಲು ಬಯಸುವರು.

ಶೂ ಸೈಜ್ 13 ಆಗಿದ್ದರೆ...

ಶೂ ಸೈಜ್ 13 ಆಗಿದ್ದರೆ...

ಈ ಸೈಜ್ ನ ಶೂ ಧರಿಸುವ ವ್ಯಕ್ತಿಗಳು ಅತ್ಯಾಧುನಿಕವಾಗಿರುವರು. ಇವರು ಪ್ರತಿಯೊಂದನ್ನು ತುಂಬಾ ವ್ಯವಸ್ಥಿತವಾಗಿಡಲು ಬಯಸುವರು. ಆಲೋಚನೆಗಳಲ್ಲಿ ಗೊಂದಲವಿದ್ದರೆ ಹಾಗೂ ಸಲಹೆಗಳು ಬೇಕಿದ್ದರೆ ಇಂತಹ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ಇವರು ತುಂಬಾ ವಿಶ್ವಾಸಾರ್ಹ ವ್ಯಕ್ತಿಗಳು ಮತ್ತು ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸ್ಥಿರವಾಗಿರುವರು.

English summary

What Your Shoe Size Reveals About Your Personality?

Predictions are made based on your toe finger size to the way you sit. Many psychological tests reveal about the personality of a person. Here, in this article, we reveal to you one of the necessary tests of judging a person by just looking at their foot size!
Story first published: Wednesday, July 18, 2018, 16:19 [IST]
X
Desktop Bottom Promotion