For Quick Alerts
ALLOW NOTIFICATIONS  
For Daily Alerts

ಬುಧ ಗ್ರಹದ ಸ್ಥಾನ ಬದಲಾವಣೆ-ಯಾವ್ಯಾವ ರಾಶಿಗಳ ಮೇಲೆ ಪ್ರಭಾವ ಬೀರಲಿದೆ?

By Divya Pandit
|

ವ್ಯಕ್ತಿಯ ಕುಂಡಲಿಯಲ್ಲಿ ಪ್ರಬಲ ಶಕ್ತಿಯನ್ನು ಹೊಂದಿರುವಂತಹ ಗ್ರಹಗಳಲ್ಲಿ ಬುಧ ಗ್ರಹವು ಒಂದು. ಬುಧ ಗ್ರಹದ ಸ್ಥಾನ ಬದಲಾವಣೆ ಹಾಗೂ ಸಂಚಾರದರಿಂದಾಗಿ ವ್ಯಕ್ತಿಯ ಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತವೆ. ಬುಧನ ಪ್ರಭಾವ ಸಕಾರಾತ್ಮಕ ರೀತಿಯಲ್ಲಿ ಇದ್ದರೆ ಮಾನಸಿಕವಾಗಿ ಉತ್ತಮ ಗುಣವನ್ನು ಹಾಗೂ ನಕಾರಾತ್ಮಕವಾಗಿದ್ದರೆ ಒಂದಿಷ್ಟು ಚಿಂತೆ ಹಾಗೂ ನೋವುಗಳು ಸಂಭವಿಸುವುದು ಎಂದು ಹೇಳಲಾಗುತ್ತದೆ.

Mercury retrograde ending implications on zodiac

ಇದೇ ತಿಂಗಳ ಆಗಸ್ಟ್ 18ರಂದು ಬುಧ ಗ್ರಹವು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುತ್ತಿದೆ. ಇದರ ಈ ಪರಿವರ್ತನೆಯು ಸುಮಾರು ಎರಡು ವಾರಗಳ ತನಕ ಮುಂದುವರಿಯುವುದು ಎಂದು ಹೇಳಲಾಗುವುದು. ಬುಧ ಗ್ರಹದ ಈ ಬದಲಾವಣೆಯು ಪ್ರತಿಯೊಂದು ರಾಶಿಚಕ್ರದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುವುದು. ಹಾಗಾದರೆ ಆ ಪ್ರಭಾವದಿಂದ ವ್ಯಕ್ತಿ ಜೀವನದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಅನುಭವಿಸ ಬೇಕಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಈಗಾಗಲೇ ನೀವು ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಉತ್ತಮ ಹೊಂದಾಣಿಕೆ ಅಥವಾ ಸಮಯವನ್ನು ಹೊಂದಿದ್ದೀರಿ ಎಂದಾದರೆ ನಿಮಗಿದು ಉತ್ತಮ ಸಮಯಾಗುವುದು. ನಿಮ್ಮ ಹದಗೆಟ್ಟ ಸಂಬಂಧವನ್ನು ಸಹ ಸರಿಪಡಿಸಿಕೊಳ್ಳಲು ಅನುಕೂಲಕರವಾದ ಸಮಯವಾಗುವುದು. ನಿಮ್ಮ ಪ್ರಯತ್ನಕ್ಕೆ ತಕ್ಷಣವೇ ಫಲಿತಾಂಶ ದೊರೆಯದಿದ್ದರೂ ಸ್ವಲ್ಪ ಸಮಯದ ಬಳಿಕವಾದರೂ ಉತ್ತಮ ಫಲಿತಾಂಶದೊರೆಯುವುದು. ಸಂಬಂಧದಲ್ಲಿ ಸುಧಾರಣೆ ಹಾಗೂ ಉತ್ತಮ ಫಲಿತಾಂಶ ದೊರೆಯಲು ಸಾಕಷ್ಟು ಸಮಯ ಬೇಕಾಗುವುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ವೃಷಭ

ವೃಷಭ

ಬುಧನ ಹಿಮ್ಮುಖ ಪರಿವರ್ತನೆಯು ಪ್ರಯಾಣವನ್ನು ಸೂಚಿಸುತ್ತದೆ. ಪ್ರಯಾಣದ ಖುಷಿಯಲ್ಲಿರುವಾಗ ನೀವು ನಿಮ್ಮ ದೀರ್ಘಾವಧಿಯ ಹಾಗೂ ಅಲ್ಪಾವಧಿಯ ಯೋಜನೆಯನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಗುರಿಯನ್ನು ಸಾಧಿಸಲು ಕೆಲವು ಗೊಂದಲವನ್ನು ಹೊಂದಬಹುದು. ಅದು ನಿಮಗೆ ಇತರರಲ್ಲಿ ಸಲಹೆ ಪಡೆಯಲು ಪ್ರೇರಣೆ ನೀಡುವುದು. ದೀರ್ಘ ಕಾಲದಿಂದ ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನಿಕಟ ಸಂಬಂಧಿಗಳೊಂದಿಗೆ ಉತ್ತಮ ಪ್ರಕ್ರಿಯೆಯನ್ನು ನೀವು ನಿರೀಕ್ಷಿಸಬಹುದು.

ಮಿಥುನ

ಮಿಥುನ

ಕಳೆದ ಎರಡು ವಾರಗಳಿಂದ ಪ್ರಯಾಣ ಮತ್ತು ಪ್ರವಾಸಗಳಲ್ಲಿ ನೀವು ವಿಳಂಬವನ್ನು ಎದುರಿಸುತ್ತಿರುವಿರಿ. ಬುಧನ ಹಿಮ್ಮುಖ ಚಲನೆಯ ಪ್ರಭಾವದಿಂದ ವಿಳಂಬಿತ ಯೋಜನೆಗಳನ್ನು ಸಾಧಿಸಲು ಅನುಕೂಲವನ್ನು ಕಲ್ಪಿಸಿಕೊಡುವುದು. ಕೆಲವು ನಿರ್ಲಕ್ಷಿತ ಸಮಸ್ಯೆಗಳು ಉದ್ಭವಿಸಬಹುದು. ಆದ್ದರಿಂದ ನೀವು ಯಾವುದೇ ಕೆಲಸವನ್ನು ನಿಗದಿತ ಸಮಯದಲ್ಲಿ ನೆರವೇರಿಸುವುದನ್ನು ತಪ್ಪಿಸಿಕೊಳ್ಳದಿರಿ.

ಕರ್ಕ

ಕರ್ಕ

ನೀವು ನಿಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಬಯಸುತ್ತಿದ್ದರೆ ಅದು ನೆರವೇರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುವುದು. ಆಗಸ್ಟ್ 18ರಿಂದ ಬುಧ ಗ್ರಹದ ಹಿಮ್ಮುಖ ಚಲನೆಯು ಅನಾನುಕೂಲವನ್ನು ಸೃಷ್ಟಿಸುವುದು. ಮುಂಬರುವ ದಿನಗಳಲ್ಲಿ ವಿಷಯಗಳು ಕ್ರಮೇಣ ಉತ್ತಮಗೊಳ್ಳುತ್ತ ಬರುತ್ತವೆ. ಉತ್ತಮ ಫಲಿತಾಂಶವು ಸಪ್ಟೆಂಬರ್ ತಿಂಗಳ ಆರಂಭದಿಂದ ದೊರೆಯುವುದು. ನಿರ್ಧಾರವನ್ನು ಕೈಗೊಳ್ಳುವಾಗ ಅಂತಃಪ್ರಜ್ಞೆಯನ್ನು ಅನುಸರಿಸಬೇಕು.

ಸಿಂಹ

ಸಿಂಹ

ಹಿಂದಿನ ದಿನಗಳಲ್ಲಿ ನೀವು ನಿಮ್ಮ ಸಂಬಂಧದಲ್ಲಿ ಉತ್ತಮ ಸ್ಥಿತಿಯನ್ನು ಕಂಡಿರಲಿಲ್ಲ. ಬುಧನ ಹಿಮ್ಮುಖ ಚಲನೆಯಿಂದಾಗಿ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಒಂದೇ ಸಮನೆ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗದಿರಿ. ಹಂತಹಂತವಾದ ಪ್ರಯತ್ನಗಳನ್ನು ಮಾಡಿ. ನೀವು ತಾಳ್ಮೆಯ ಅಭ್ಯಾಸ ಮಾಡಿಕೊಳ್ಳಬೇಕಿದೆ.

ಕನ್ಯಾ

ಕನ್ಯಾ

ಮುಂಬರುವ ದಿನಗಳಲ್ಲಿ ಎರಡು ಪ್ರಮುಖ ವಿಚಾರದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಈ ವರೆಗೆ ಪರಿಹಾರ ಆಗದ ವಿಚಾರಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿ. ಕಲ್ಪನೆಯ ನೋಟವನ್ನು ಪಡೆದುಕೊಂಡು ಇನ್ನೊಂದು ಕೆಲಸವನ್ನು ಪ್ರಾರಂಭಿಸಬೇಕಾಗುವುದು. ಅಂತಃಪ್ರಜ್ಞೆಯನ್ನು ಬಳಸಿ ಈ ಹಿಂದೆ ಹಿಡಿದಿಟ್ಟ ಕೆಲಸವನ್ನು ಪೂರ್ಣಗೊಳಿಸಿ.

ತುಲಾ

ತುಲಾ

ಯಾವ ವಿಚಾರವನ್ನು ನೀವು ನಿರ್ವಹಿಸಲು ಕಷ್ಟವಾಗುವುದೋ ಅಂತಹ ಕೆಲಸವನ್ನು ಮೊದಲು ಮಾಡಿ ಮುಗಿಸಿ ಎಂದು ಸೂಚಿಸಲಾಗುವುದು. ತಿಂಗಳ ಕೊನೆಯ ಹಂತದಲ್ಲಿ ಒಂದಿಷ್ಟು ತೊಂದರೆಗಳು ಎದುರಾಗಬಹುದು. ಪೂರ್ಣಗೊಳ್ಳದ ಕೆಲಸದ ಪರಿಣಾಮವಾಗಿ ಒಮದಿಷ್ಟು ಸಮಸ್ಯೆ ಉಂಟಾಗುವುದು ಎನ್ನಲಾಗುತ್ತದೆ.

ವೃಶ್ಚಿಕ

ವೃಶ್ಚಿಕ

ಮುಂಬರುವ ಎರಡು ವಾರಗಳಲ್ಲಿ ವಿಭಿನ್ನವಾಗಿರುವ ಭಾವನೆಯನ್ನು ಪಡೆದುಕೊಳ್ಳುವಿರಿ. ಅದು ದೈವಿಕ ಭಾವನೆ ಹಾಗೂ ಪ್ರೀತಿಯ ವಿಚಾರವಾಗಿರಬಹುದು. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ವಿಚಾರಗಳು ಉತ್ತಮವಾಗಿರದೆ ಇರಬಹುದು. ನಿಮ್ಮ ಕೆಲಸದ ಹಿಂದೆ ದೈವಿಕ ಶಕ್ತಿ ಇರುವುದರಿಂದ ಆದಷ್ಟು ತಾಳ್ಮೆಯಿಂದ ಕೆಲಸ ನಿರ್ವಹಣೆ ಮಾಡುವುದನ್ನು ಅಭ್ಯಾಸಮಾಡಿಕೊಳ್ಳಬೇಕು.

ಧನು

ಧನು

ವಾರಾಂತ್ಯದ ವೇಳೆ ನೀವು ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಯಸುವರು. ಚಿಕ್ಕ ಸಮಸ್ಯೆಗಳನ್ನು ತಮ್ಮದೇ ಆದ ರೀತಿಯಲ್ಲಿ ಬಗೆಹರಿಸಿಕೊಳ್ಳುವರು. ತಮ್ಮಂತೆ ಬೇರೆಯಾರು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ನಿಲುವನ್ನು ತಳೆಯುವರು. ನಿಮ್ಮ ಪ್ರವೃತ್ತಿಯು ಉತ್ತಮವಾಗಿದೆ ಎನ್ನುವುದನ್ನು ಅನುಸರಿಸಿ. ಕೆಲವೊಂದು ಕೆಲಸಗಳನ್ನು ಸೂಕ್ತ ರೀತಿಯ ತನಿಕೆ ಹಾಗೂ ಪರೀಕ್ಷೆಯನ್ನು ಕೈಗೊಂಡ ಬಳಿಕ ನಿರ್ವಹಿಸಲು ಮುಂದಾಗಿ. ನಂತರ ಕೆಲಸವನ್ನು ಆದಷ್ಟು ಬೇಗ ನಿರ್ವಹಿಸಬೇಕು.

ಮಕರ

ಮಕರ

ದೀರ್ಘ ಸಮಯದಿಂದ ಕೈಬಿಟ್ಟ ಕೆಲಸ ಹಾಗೂ ಕೈಬಿಟ್ಟ ವಿಚಾರಗಳನ್ನು ಪುನಃ ಕೈಗೆತ್ತಿಕೊಳ್ಳಲು ಬಯಸುವಿರಿ. ಕೆಲವು ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ ನಿಮ್ಮ ಕೆಲಸವು ನೆರವೇರುವುದು. ನಿರಂತರವಾದ ಪ್ರಯಾಣ ಹಾಗೂ ವಿಷಯಗಳ ಮೇಲೆ ಕೈಗೊಳ್ಳುವ ಸಂವಹನವು ಕೆಲಸಗಳನ್ನು ಬಹುಬೇಗ ನೆರವೇರಿಸಲು ತಡೆಯನ್ನುಂಟುಮಾಡುವುದು.

ಕುಂಭ

ಕುಂಭ

ಎಲ್ಲಾ ಕೆಲಸವನ್ನು ಯೋಜನೆಯ ಮೂಲಕ ನಿರ್ವಹಿಸಲು ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುವಿರಿ. ಈಗಾಗಲೇ ಸಂಪರ್ಕವನ್ನು ಕಳೆದುಕೊಂಡ ಜನರೊಂದಿಗೆ ಸಂಪರ್ಕವನ್ನು ಪರು ಸ್ಥಾಪಿಸಲು ನೀವು ಪ್ರಯತ್ನಿಸಬಹುದು.

ಮೀನ

ಮೀನ

ನೀವು ನಿಮ್ಮ ಜೀವನದಲ್ಲಿ ಉತ್ತಮವಾದ ವಿಷಯಗಳನ್ನು ಪಡೆದುಕೊಳ್ಳಲು ನೀವು ಬಯಸುತ್ತೀರಿ ಎನ್ನುವುದಾದರೆ ಮೊದಲು ಒಂದಿಷ್ಟು ತಾಳ್ಮೆಯನ್ನು ಹೊಂದುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಮುಂಬರುವ ದಿನದಲ್ಲಿ ಕೆಲಸ ಅಥವಾ ಸಂಬಂಧಗಳು ಯಾವುದೇ ವಿಷಯವಾಗಿದ್ದರೂ ಅದನ್ನು ಬಹಳ ತಾಳ್ಮೆಯಿಂದ ನಿರ್ವಹಿಸಬೇಕಾಗುವುದು. ನಿಮ್ಮ ಕನಸು ಹಾಗೂ ಕೆಲಸವನ್ನು ನಿರ್ವಹಿಸಲು ನೀವು ಸಾಕಷ್ಟು ಶ್ರಮ ಹಾಗೂ ತಾಳ್ಮೆಯನ್ನು ವಹಿಸಬೇಕಾಗುವುದು.

English summary

What Mercury Retrograde Ending Implies?

One thing so sure about the retrogrades is that we never know how hard they might make the situations for us. The worst of the mood swings, the numerous problems at work and the low level of energy are the markers of retrograde. And a Mercury retrograde is even more confusing as under its effects, the mind becomes cluttered up, energy levels might be the lowest and unintended arguments come up.
Story first published: Saturday, August 18, 2018, 15:04 [IST]
X
Desktop Bottom Promotion