For Quick Alerts
ALLOW NOTIFICATIONS  
For Daily Alerts

ಮಂಗಳವಾರ ಹುಟ್ಟಿದವರ ಸ್ವಭಾವ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತೇ?

|

ಮನುಷ್ಯನ ಹುಟ್ಟು ಎಂಬುದು ಅತ್ಯಂತ ರೋಚಕವಾಗಿದ್ದು ಹುಟ್ಟಿನೊಂದಿಗೆ ನಕ್ಷತ್ರ, ಗ್ರಹ ಮತ್ತು ಹುಟ್ಟಿದ ದಿನ, ದಿನಾಂಕ ಹೆಚ್ಚು ಮಹತ್ವಪೂರ್ಣವಾಗಿರುತ್ತದೆ. ನಿಮ್ಮ ಜೀವನದಲ್ಲಿ ಗ್ರಹ ಗತಿಗಳು ಮತ್ತು ನಕ್ಷತ್ರದ ಸ್ಥಾನಗಳು ಹೆಚ್ಚು ಮಹತ್ವದ್ದಾಗಿದ್ದು ನಿಮ್ಮ ಹುಟ್ಟಿದ ದಿನ ಕೂಡ ನಿಮ್ಮ ಸ್ವಭಾವ, ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ತಿಳಿಸುತ್ತದೆ.

ಒಂದೊಂದು ದಿನದಲ್ಲಿ ಹುಟ್ಟಿದವರೂ ಕೂಡ ಒಂದೊಂದು ಗುಣಗಳನ್ನು ಪಡೆದುಕೊಂಡಿದ್ದು ಅವರ ಸ್ವಭಾವ ಈ ದಿನದಲ್ಲಿ ಹುಟ್ಟಿದ ಪ್ರಮುಖ ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಅವರ ಕೋಪ, ದುಡುಕು ಸ್ವಭಾವ, ಸ್ನೇಹಪರತೆ, ಪ್ರೀತಿ, ಸ್ನೇಹ ಮೊದಲಾದ ಗುಣಗಳನ್ನು ನಾವು ಈ ದಿನದಲ್ಲಿ ಹುಟ್ಟಿದ ಅವರ ವಿಶೇಷತೆಗಳನ್ನು ಅರಿತುಕೊಂಡು ತಿಳಿದುಕೊಳ್ಳಬಹುದಾಗಿದೆ.

ಇಂದಿನ ಲೇಖನದಲ್ಲಿ ಮಂಗಳವಾರದಂದು ಹುಟ್ಟಿದವರ ವಿಶೇಷತೆಗಳನ್ನು ಅವರ ವ್ಯಕ್ತಿತ್ವದ ಬಗ್ಗೆ ಮಾಹಿತಿ ತಿಳಿಯೋಣ. ಇವರು ಹೇಗೆ ಇವರ ಸ್ವಭಾವ ಯಾವ ರೀತಿಯದ್ದು ಇವರಲ್ಲಿರುವ ಒಳ್ಳೆಯ ಗುಣ ಮತ್ತು ಕೆಡುಕಗಳೇನು ಎಂಬುದನ್ನು ಅರಿಯೋಣ....

 ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ಮಂಗಳ ಈ ದಿನದ ಅಧಿಪತಿ. ಇದು ಹೋರಾಟುವ ಗುಣವನ್ನು ತಿಳಿಸುತ್ತದೆ. ಎಲ್ಲಾ ಕಷ್ಟಗಳನ್ನು ಸಂಕಷ್ಟಗಳನ್ನು ಹೋರಾಡಿ ಜಯಿಸುವ ಗುಣ ಈ ದಿನ ಹುಟ್ಟಿದವರದ್ದಾಗಿರುತ್ತದೆ.

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ವ್ಯಕ್ತಿಯನ್ನು ಅರಿತುಕೊಳ್ಳುವುದು ಮತ್ತು ಅವರ ನಡವಳಿಕೆಯನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಗ್ರಹಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಅದರ ಪರಿಣಾಮವನ್ನು ಒಬ್ಬರ ಜೀವನದಲ್ಲಿ ತಿಳಿದುಕೊಳ್ಳುವುದನ್ನು ಜ್ಯೋತಿಷ್ಯ ಶಾಸ್ತ್ರ ಈಗ ಸರಳವಾಗಿಸಿದೆ.

ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಹುಟ್ಟಿದ ದಿನ

ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಹುಟ್ಟಿದ ದಿನ

ಮಂಗಳವಾರ ಹುಟ್ಟಿದವರ ವಿಶೇಷ ಗುಣಗಳನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ನೀವು ಮಂಗಳವಾರದಂದು ಹುಟ್ಟಿದವರಾಗಿದ್ದರೆ, ಇದನ್ನು ಓದಿ ಮತ್ತು ಇನ್ನಷ್ಟು ಪರೋಪಕಾರಿಯಾಗಿ ಹೇಗಿರಬಹುದೆಂದು ತಿಳಿದುಕೊಳ್ಳಬಹುದು.

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ

ಈ ದಿನ ಹುಟ್ಟಿದವರು ಶಕ್ತಿಯನ್ನು ಪಡೆದುಕೊಂಡಿರುವವರಾಗಿರುತ್ತಾರೆ ಮತ್ತು ಕೆಂಪು ಗ್ರಹಕ್ಕೆ ಇದರ ಪ್ರಯೋಜನ ಹೋಗಬೇಕು. ಅವರ ದಾರಿಯಲ್ಲಿ ಬರುವ ಯಾವುದೇ ಸಂಕಷ್ಟಗಳು ಅವರನ್ನು ಹಿಮ್ಮೆಟ್ಟಿಸುವುದಿಲ್ಲ ಮತ್ತು ಅವರನ್ನು ಪ್ರೇರೇಪಣೆಗೊಳಿಸುತ್ತದೆ. ಅವರ ಆಲೋಚನೆಗಳನ್ನು ಉದ್ದೀಪನಗೊಳಿಸುವ ಕೆಲಸಗಳನ್ನು ಅವರು ಮಾಡಬೇಕು ಅದರಲ್ಲಿ ಬ್ಯುಸಿಯಾಗಿರುತ್ತಾರೆ.

Most Read:ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು? ಪ್ರಥಮ ಚಿಕಿತ್ಸೆ ಏನು?

ಮಂಗಳವಾರ ಹುಟ್ಟಿದವರ ವಿಶೇಷತೆ

ಮಂಗಳವಾರ ಹುಟ್ಟಿದವರ ವಿಶೇಷತೆ

ಇವರಲ್ಲಿರುವ ಶಕ್ತಿ ಇವರನ್ನು ಅಸಾಮಾನ್ಯರನ್ನಾಗಿಸುತ್ತದೆ. ಅವರ ಸ್ವಭಾವದಲ್ಲಿ ಕೋಪ ಮತ್ತು ಧೈರ್ಯ ಎದ್ದು ಕಾಣುತ್ತದೆ. ಒಮ್ಮೊಮ್ಮೆ ಇದು ಅವರ ವಿಫಲತೆಗೂ ಕಾರಣವಾಗುತ್ತದೆ.

ಮಂಗಳವಾರ ಹುಟ್ಟಿದವರ ವೃತ್ತಿ ಜೀವನ

ಮಂಗಳವಾರ ಹುಟ್ಟಿದವರ ವೃತ್ತಿ ಜೀವನ

ಈ ದಿನ ಹುಟ್ಟಿದವರು ಹೆಚ್ಚು ಧೈರ್ಯವಂತರು ಮತ್ತು ನಿಜವಾದ ಹೋರಾಟಗಾರರು ಆಗಿದ್ದಾರೆ. ಬ್ಯಾಂಕಿಂಗ್ ಮತ್ತು ಆರ್ಥಿಕತೆಯಲ್ಲಿ ಅವರಿಗೆ ಸ್ಥಾನ ದೊರೆಯುತ್ತದೆ ಮತ್ತು ಇಂತಹ ವೃತ್ತಿ ಅವರಿಗೆ ಹೇಳಿಮಾಡಿಸಿದ್ದಾಗಿದೆ.

ಈ ದಿನ ಹುಟ್ಟಿದವರ ವೃತ್ತಿ ಜೀವನ

ಈ ದಿನ ಹುಟ್ಟಿದವರ ವೃತ್ತಿ ಜೀವನ

ಚಾಲೆಂಜಿಂಗ್ ಆಗಿರುವ ಕಾರ್ಯಗಳನ್ನು ಮಾಡುವಲ್ಲಿ ಇವರು ನಿಪುಣರಾಗಿದ್ದಾರೆ. ಇವರು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಪರಿಶೀಲಿಸದೇ ಒಪ್ಪಿಕೊಳ್ಳುವುದಿಲ್ಲ. ಅವರ ಜೀವನದಲ್ಲಿ ಕುಹಕವಾಡುವುದು ಒಂದು ಭಾಗವಾಗಿರುತ್ತದೆ ಅದರಲ್ಲೂ ಕೆಲಸದ ಸಮಯದಲ್ಲಿ ವ್ಯಂಗ್ಯೋಕ್ತಿಗಳನ್ನು ಅವರು ಆಲಿಸಬಹುದು. ಆದರೆ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಕು.

ಪ್ರೀತಿ ಮತ್ತು ವೈವಾಹಿಕ ಜೀವನ

ಪ್ರೀತಿ ಮತ್ತು ವೈವಾಹಿಕ ಜೀವನ

ಮಂಗಳನ ಪ್ರಭಾವದಿಂದ ತಮ್ಮನ್ನು ಇತರರಿಗೆ ತೆರೆದಿಟ್ಟುಕೊಳ್ಳುವುದುನ್ನು ಅವರು ಕಷ್ಟವಾಗಿಸುತ್ತಾರೆ. ಮಾತನಾಡುವುದಕ್ಕಿಂತ ಮುಂಚೆ ಅವರು ಯೋಚಿಸುವುದಿಲ್ಲ ಏಕೆಂದರೆ ಮಂಗಳ ಸಾಮರ್ಥ್ಯ ಅವರ ಮೇಲಿರುತ್ತದೆ. ತಮ್ಮ ಪದಗಳಿಂದ ಸಂಗಾತಿಗೆ ಅವರು ನೋವನ್ನುಂಟು ಮಾಡುತ್ತಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಏರು ಪೇರುಗಳು ಉಂಟಾಗುತ್ತಿರುತ್ತವೆ.

ವೈವಾಹಿಕ ಜೀವನ ಮತ್ತು ಪ್ರೀತಿ

ವೈವಾಹಿಕ ಜೀವನ ಮತ್ತು ಪ್ರೀತಿ

ಸಂಗಾತಿಯಾಗಿ ಅವರು ತಮ್ಮ ಬಾಳ ಸಂಗಾತಿಯನ್ನು ಸಂರಕ್ಷಿಸುತ್ತಾರೆ ಮತ್ತು ಜೀವನದ ಕಷ್ಟದ ಸಂದರ್ಭದಲ್ಲಿ ಕೈಬಿಡುವುದಿಲ್ಲ. ಅವರ ಸ್ವಭಾವ ಅವರನ್ನು ಸದೃಢರನ್ನಾಗಿಸುತ್ತದೆ ಮತ್ತು ತಮ್ಮ ಸಂಗಾತಿಗೆ ಅವರು ಬೆಂಗಾವಲಾಗಿ ಇರುತ್ತಾರೆ.

MostRead:ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ವೈವಾಹಿಕ ಜೀವನ

ವೈವಾಹಿಕ ಜೀವನ

ನಿಮ್ಮ ಕಟು ಮಾತು ಮತ್ತು ಮುಖಕ್ಕೆ ಹೊಡೆದಂತಿರುವ ಮಾತಿನಿಂದ ಸಂಬಂಧದ ಶಾಂತಿ ಸಮಾಧಾನ ಹಾಳಾಗುತ

English summary

What do your stars say if you are born on Tuesday?

Tuesday, the third day of the week, is ruled by a warrior planet, Mars. The planet truly symbolizes the fighting spirit. The planet fills the life with enthusiasms of leading the way and conquers against all odds. Understanding a person’s personality and way of conduct is never an easy task. But astrology made this happen with a thorough study of planets and its effect on one’s personality and life.
X
Desktop Bottom Promotion