For Quick Alerts
ALLOW NOTIFICATIONS  
For Daily Alerts

ಮದುವೆ ವಿಳಂಬ ಆಗುತ್ತಿದ್ದರೆ, ಈ ವಾಸ್ತು ಟಿಪ್ಸ್ ಅನುಸರಿಸಿ ಎಲ್ಲವೂ ಸರಿಯಾಗಲಿದೆ

|
ಮದುವೆ ವಿಳಂಬವಾಗ್ತಿದ್ಯಾ? ಈ ಸರಳ ವಾಸ್ತು ಟಿಪ್ಸ್ ತಪ್ಪದೆ ಅನುಸರಿಸಿ | Oneindia Kannada

ವಿವಾಹ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಮಹತ್ತರವಾದ ತಿರುವನ್ನು ನೀಡುತ್ತದೆ. ವಿವಾಹದ ನಂತರ ಜೋಡಿಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕ ವರ್ತನೆಯನ್ನು ತೋರುತ್ತಾ, ಪ್ರೀತಿ ವಾತ್ಸಲ್ಯದಿಂದ ಜೀವನವನ್ನು ನಡೆಸಬೇಕಾಗುವುದು. ಜೊತೆಗ ಒಂದಷ್ಟು ಜವಾಬ್ದಾರಿಗಳ ನಿರ್ವಹಣೆಯನ್ನು ಮಾಡಬೇಕಾಗುವುದು. ಹೊಸತನದ ಅನುಭವದೊಂದಿಗೆ ಹೊಸ ಪರಿಸರ, ಹೊಸ ಮನೆ, ಹೊಸ ಜನರೊಂದಿಗೆ ಒಂದಾಗಿ ಬಾಳುವುದು ಎಂದರೆ ಅಷ್ಟು ಸುಲಭವಲ್ಲ. ಹೊಂದಿಕೊಂಡು ಬಾಳಲು ಸಾಕಷ್ಟು ಸಮಯವು ಬೇಕಾಗುವುದು.

ವಿವಾಹದ ಮುಂಚೆ ಅಂದುಕೊಂಡಂತೆ ವಿವಾಹದ ನಂತರದ ಜೀವನ ಸುಗಮವಾಗಿ ಸಾಗುತ್ತಿಲ್ಲ, ವೈಮನಸ್ಸು, ಗೊಂದಲ, ಒತ್ತಡ, ಬೇಸರಗಳೇ ಹೆಚ್ಚಾಗಿವೆ ಎಂದರೆ ವಾಸ್ತು ದೋಷಗಳಿವೆ ಎನ್ನುವುದನ್ನು ಅರಿಯಬಹುದು. ಅಂತೆಯೇ ಅಪೇಕ್ಷೆಯಂತೆ ವಿವಾಹ ನಡೆಯದೆ ವಿಳಂಬವಾಗುತ್ತಿದ್ದರೆ ವಾಸ್ತು ದೋಷ ಇದೆ ಎಂದು ತಿಳಿಯಬಹುದು. ವಿವಾಹದ ಪೂರ್ವದಲ್ಲಿಯೇ ಕೆಲವು ವಾಸ್ತು ದೋಷ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗಾದರೆ ಆ ವಸ್ತು ಸಲಹೆಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ನೈಋತ್ಯ ಮೂಲೆಯಲ್ಲಿ ತಲೆಯಿಟ್ಟು ಮಲಗಬಾರದು!

ನೈಋತ್ಯ ಮೂಲೆಯಲ್ಲಿ ತಲೆಯಿಟ್ಟು ಮಲಗಬಾರದು!

ಅವಿವಾಹಿತ ಮಹಿಳೆಯು/ಹುಡುಗಿ ಮನೆಯ ನೈಋತ್ಯ ಮೂಲೆಯಲ್ಲಿ ತಲೆಯಿಟ್ಟು ಮಲಗಬಾರದು. ಉತ್ತಮ ವಿವಾಹ ಪ್ರಸ್ತಾಪಗಳನ್ನು ಹೊಂದಬೇಕೆಂದರೆ ನಿಮ್ಮ ಹಾಸಿಗೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಟ್ಟುಕೊಳ್ಳಿ. ಈ ದಿಕ್ಕಿನ ಲಭ್ಯತೆ ಇಲ್ಲವೆಂದಾದರೆ ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ಆರಿಸಿಕೊಳ್ಳಬಹುದು.

ಆಗ್ನೇಯ ದಿಕ್ಕಿನ ಕಡೆ ತಲೆಯಿಟ್ಟು ಮಲಗಬಾರದು

ಆಗ್ನೇಯ ದಿಕ್ಕಿನ ಕಡೆ ತಲೆಯಿಟ್ಟು ಮಲಗಬಾರದು

ಅವಿವಾಹಿತ ಪುರುಷ/ಹುಡುಗ ಆಗ್ನೇಯ ದಿಕ್ಕಿನಲ್ಲಿ ಮಲಗಬಾರದು. ಇವರು ಈಶಾನ್ಯ ದಿಕ್ಕಿನಲ್ಲಿ ಮಲಗಬೇಕು. ಈ ದಿಕ್ಕು ಲಭ್ಯವಿಲ್ಲವಾದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕನ್ನು ಆರಿಸಿಕೊಳ್ಳಬಹುದು.

ನಿದ್ರಿಸುವ ಕೋಣೆ ಹೀಗಿರಲಿ

ನಿದ್ರಿಸುವ ಕೋಣೆ ಹೀಗಿರಲಿ

ಇಷ್ಟವಾಗುವಂತಹ ವ್ಯಕ್ತಿಗಳು ಸಿಗದಿದ್ದರೆ ವ್ಯಕ್ತಿಯು ತಿಳಿ ಬಣ್ಣದ ಚಾದರಗಳನ್ನು ಹೊದೆಯಲು ಬಳಸುತ್ತಾರೆ. ನಿದ್ರಿಸುವ ಕೋಣೆಯು ನೇರಳೆ, ಗುಲಾಬಿ, ಹಳದಿ ಅಥವಾ ಬಿಳಿ ಛಾಯೆಯನ್ನು ಹೊಂದಿದ್ದರೆ ಉತ್ತಮ ಶಕ್ತಿ ಹಾಗೂ ಧನಾತ್ಮಕ ಪ್ರಭೆಯು ಕೋಣೆಯೊಳಗಿರುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್

ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್

ನೀವು ಮನೆಯಲ್ಲಿ ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್ ಹೊಂದಿದ್ದರೆ ಅದು ನೈಋತ್ಯ ದಿಕ್ಕಿನಲ್ಲಿ ಇರಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆ ದಿಕ್ಕಿನಲ್ಲಿ ಇಲ್ಲದೆ ಬೇರೆಡೆಗೆ ಹೊಂದಿದ್ದರೆ ಅದನ್ನು ತೆಗೆದುಹಾಕಿ. ವಿವಾಹ ವಿಳಂಬವಾಗಲು ಪ್ರಮುಖ ವಾಸ್ತು ದೋಷಗಳಲ್ಲಿ ಇದೂ ಒಂದು.

ಹಾಸಿಗೆ ಅಡಿಯಲ್ಲಿ ಯಾವುದೇ ಕಬ್ಬಿಣದ ವಸ್ತು ಇರಬಾರದು!

ಹಾಸಿಗೆ ಅಡಿಯಲ್ಲಿ ಯಾವುದೇ ಕಬ್ಬಿಣದ ವಸ್ತು ಇರಬಾರದು!

ಶೀಘ್ರದಲ್ಲಿ ವಿವಾಹವಾಗಲು ಬಯಸುವ ವ್ಯಕ್ತಿಯು ತನ್ನ ಹಾಸಿಗೆ ಅಡಿಯಲ್ಲಿ ಯಾವುದೇ ಕಬ್ಬಿಣದ ವಸ್ತು ಇರದಂತೆ ನೋಡಿಕೊಳ್ಳಬೇಕು. ಹಾಸಿಗೆ ಅಡಿಯಲ್ಲಿ ಮತ್ತು ಕೊಠಡಿಯಲ್ಲಿ ಯಾವುದೇ ಬಗೆಯ ಕಬ್ಬಿಣ ವಸ್ತು ಇರಿಸಿಕೊಳ್ಳದಿರಿ. ಸ್ವಚ್ಛ ಮತ್ತು ಗಲಿಬಿಲಿ ಮುಕ್ತ ಕೊಠಡಿಯಲ್ಲಿ ಧನಾತ್ಮಕ ಕಂಪನಗಳು ಇರುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಹುಡುಗನ ಕೋಣೆಯ ಬಣ್ಣ

ಹುಡುಗನ ಕೋಣೆಯ ಬಣ್ಣ

ವಿವಾಹ ವಿಳಂಬವಾಗುತ್ತಿರುವ ಹುಡುಗನ ಕೋಣೆಯ ಬಣ್ಣವು ಹಳದಿ, ತಿಳಿ ಗುಲಾಬಿ ಅಥವಾ ಸಂಪೂರ್ಣ ಬಿಳಿ ಬಣ್ಣದ್ದಾಗಿರಬೇಕು. ತಿಳಿಯಾದ ಬಣ್ಣಗಳು ಉತ್ತಮ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ ಸಕಾರಾತ್ಮಕ ಶಕ್ತಿಕೋಣೆಯಲ್ಲಿ ಇರುವಂತೆ ನೋಡಿಕೊಳ್ಳುವುದು.

ಮನೆಯ ಬಣ್ಣ ತಿಳಿ ಬಣ್ಣದಿಂದ ಕೂಡಿರಬೇಕು

ಮನೆಯ ಬಣ್ಣ ತಿಳಿ ಬಣ್ಣದಿಂದ ಕೂಡಿರಬೇಕು

ಸಂಪೂರ್ಣವಾಗಿ ಮನೆಯ ಬಣ್ಣ ತಿಳಿ ಬಣ್ಣದಿಂದ ಕೂಡಿರಬೇಕು. ನೀಲಿ ಬಣ್ಣದ ಮನೆಗಳು ಧನಾತ್ಮಕ ಶಕ್ತಿಯನ್ನು ತರುತ್ತವೆ. ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶ ನೀಡುವುದು. ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಬಣ್ಣಗಳಿಂದ ಮಾಡಿರುವ ವರ್ಣ ಚಿತ್ರಗಳನ್ನು ಹಾಕಬಾರದು.

ಮನೆಯನ್ನು ಮಧ್ಯ ಭಾಗದಲ್ಲಿ ಭಾರಿ ಮೆಟ್ಟಿಲಿಡುವುದನ್ನು ತಪ್ಪಿಸಿ

ಮನೆಯನ್ನು ಮಧ್ಯ ಭಾಗದಲ್ಲಿ ಭಾರಿ ಮೆಟ್ಟಿಲಿಡುವುದನ್ನು ತಪ್ಪಿಸಿ

ಮನೆಯ ಮಧ್ಯ ಭಾಗದಲ್ಲಿ ಮೆಟ್ಟಿಲು ಅಥವಾ ಭಾರಿ ವಸ್ತು ಇಡುವುದನ್ನು ತಪ್ಪಿಸಬೇಕು. ಮನೆಯ ಕೇಂದ್ರದಲ್ಲಿ ಮೆಟ್ಟಿಲು ಅಥವಾ ಮೆಟ್ಟಿಲುಗಳ ಸಾಲು ಇದ್ದರೆ ಅದು ಮದುವೆಯ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಎಂದು ವಾಸ್ತು ಶಾಸ್ತ್ರ ವಿವರಿಸುತ್ತದೆ. ಮನೆಯನ್ನು ಮಧ್ಯ ಭಾಗದಲ್ಲಿ ಭಾರಿ ಮೆಟ್ಟಿಲಿಡುವುದನ್ನು ತಪ್ಪಿಸಿ.

ಮಂಗಳ ದೋಷ ಇರುವವರಿಗೆ

ಮಂಗಳ ದೋಷ ಇರುವವರಿಗೆ

ಮಂಗಳ ದೋಷ ಇರುವವರಿಗೆ ವಿವಾಹಕ್ಕೆ ಹುಡುಕುವುದು ಕಷ್ಟ. ಹಾಗಾಗಿ ಅವರ ಕೋಣೆಯ ಬಾಗಿಲು ಪ್ರಕಾಶಮಾನವಾದ ಕೆಂಪು ಮತ್ತು ಗುಲಾಬಿ ಬಣ್ಣದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಇದು ಮಂಗಳ ದೋಷ ಇರುವವರಿಗೆ ಅತ್ಯುತ್ತಮ ಸಲಹೆಯಾಗುವುದು. ಬಾಗಿಲುಗಳ ಬಣ್ಣ ಬದಲಾಯಿಸುವುದರಿಂದ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಲಾಗುವುದು.

ವಿವಾಹದ ಹುಡುಕಾಟದಲ್ಲಿ ಇರುವಾಗ ಈ ಸಂಗತಿ ನೆನಪಿರಲಿ

ವಿವಾಹದ ಹುಡುಕಾಟದಲ್ಲಿ ಇರುವಾಗ ಈ ಸಂಗತಿ ನೆನಪಿರಲಿ

ವಿವಾಹದ ಹುಡುಕಾಟದಲ್ಲಿ ಇರುವಾಗ ಈಶಾನ್ಯದಿಂದ ದಕ್ಷಿಣ ದಿಕ್ಕಿಗೆ ಇಳಿಮುಖವಾಗಿ ಇರುವ ಭೂಮಿಯನ್ನು ಖರೀದಿಸುವುದನ್ನು ತಪ್ಪಿಸಿ. ಆಗ ವಿವಾಹ ವಿಳಂಬವಾಗುವುದನ್ನು ತಡೆಯಬಹುದು.

English summary

Vastu Tips To Get Married: Follow these tips to get married soon

One of the biggest worries of a parent is to get their child married at the right age and to the right person. Especially after they reach a marriageable age, any delays can cause them worry and concern. So, for such parents who are worried about delay in their son/ daughter's marriage and are unable to find a solution, these vastu tips will come as a relief. Follow these simple vastu tips for getting married soon and find the right match for your child quickly.
X
Desktop Bottom Promotion