For Quick Alerts
ALLOW NOTIFICATIONS  
For Daily Alerts

ಹೌದು ಸ್ವಾಮಿ! ಕಾಂಡೋಮ್‌‌ನಿಂದಲೂ ಸಾಕಷ್ಟು ಉಪಯೋಗಗಳಿವೆಯಂತೆ!

By Hemanth
|

ಕಾಂಡೋಮ್ ಎನ್ನುವ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಬರುವುದು ಗರ್ಭಧಾರಣೆ ತಡೆಗಟ್ಟಲು, ಲೈಂಗಿಕ ರೋಗಗಳು ಬರೆದಂತೆ ಬಳಕೆ ಮಾಡಲಾಗುವುದು ಎಂದು. ಆದರೆ ಕಾಂಡೋಮ್ ನ್ನು ಇತರ ಕೆಲವು ಉಪಯೋಗಕ್ಕೂ ಬಳಸಬಹುದು ಎಂದು ನೀವು ಕೇಳಿದರೆ ಆಗ ಅಚ್ಚರಿಯಾಗಬಹುದು.

ಇದು ಸ್ವಲ್ಪ ಮಟ್ಟಿಗೆ ವಿಚಿತ್ರವೆಂದು ನಿಮಗನಿಸಿದರೂ ಕೂಡ ಕಾಂಡೋಮ್ ನಿಂದ ಆಗುವಂತಹ ಕೆಲವೊಂದು ಉಪಯೋಗಗಳ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಕಾಂಡೋಮ್ ನ್ನು ಕೆಲವರು ಎಷ್ಟು ವಿಚಿತ್ರವಾಗಿ ಉಪಯೋಗಿಸಿಕೊಳ್ಳುವರು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಂಡರೆ ಆಗ ನೀವು ಮೂಗಿನ ಮೇಲೆ ಬೆರಳಿಡುವಿರಿ. ಅಂತಹ ಉಪಯೋಗಗಳು ಯಾವುದು ಎಂದು ತಿಳಿಯಿರಿ...

ಒತ್ತಡ ನಿವಾರಕವಾಗಿ ಬಳಕೆ!

ಒತ್ತಡ ನಿವಾರಕವಾಗಿ ಬಳಕೆ!

ಅಯ್ಯೋ ಕಾಂಡೋಮ್ ನಿಂದ ಒತ್ತಡ ಹೇಗೆ ನಿವಾರಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬರುವುದು ಸಹಜ. ಆದರೆ ಇದು ನಿಜ. ಕಾಂಡೋಮ್ ನೊಳಗೆ ಹಿಟ್ಟು ತುಂಬಿಕೊಂಡು ಇದನ್ನು ಒತ್ತಡ ನಿವಾರಕ ಚೆಂಡಾಗಿ ಪರಿವರ್ತಿಸಬಹುದು. ಸ್ವಲ್ಪ ಪ್ರಮಾಣದಲ್ಲಿ ಕಾಂಡೋಮ್ ನೊಳಗಡೆ ಹಿಟ್ಟು ಹಾಕಿಕೊಳ್ಳಿ ಮತ್ತು ಇದನ್ನು ಹಿಚುಕಿಕೊಳ್ಳುವ ಮೂಲಕ ಒತ್ತಡ ಕಡಿಮೆಯಾಗುವುದು.

ಫೌಂಡೇಶನ್ ಆಗಿ ಬಳಕೆ!

ಫೌಂಡೇಶನ್ ಆಗಿ ಬಳಕೆ!

ನಿಮಗೇನು ತಲೆ ಕೆಟ್ಟಿದೆಯಾ ಎಂದು ಕೇಳಬಹುದು. ಆದರೆ ನೀವು ಮೇಕಪ್ ಮಾಡಿಕೊಳ್ಳುವಾಗ ಕಾಂಡೋಮ್ ನ್ನು ಬಳಸಬಹುದು. ಮೇಕಪ್ ಸ್ಪಾಂಜ್ ಹೆಚ್ಚು ಹೀರಿಕೊಳ್ಳುತ್ತಿದೆ ಎಂದು ನಿಮಗನಿಸಿದರೆ ಆಗ ನೀವು ಇದನ್ನು ಕಾಂಡೋಮ್ ನ ಒಳಗಿಟ್ಟುಕೊಂಡು ಫೌಂಡೇಶನ್ ನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು.

ಸೂಚನೆ: ಹೀಗೆ ಬಳಕೆ ಮಾಡಿಕೊಳ್ಳುವ ಮೊದಲು ಕಾಂಡೊಮ್ ನ ಮೇಲ್ಗಡೆ ಇರುವಂತಹ ಎಣ್ಣೆಯಂಶ ತೊಳೆಯಿರಿ.

ಜನನಾಂಗಕ್ಕೆ ಐಸ್ ಪ್ಯಾಕ್

ಜನನಾಂಗಕ್ಕೆ ಐಸ್ ಪ್ಯಾಕ್

ಇದರ ಬಗ್ಗೆ ಯೋಚಿಸಿರುವವರು ತುಂಬಾ ಕ್ರಿಯಾತ್ಮಕವಾದ ಆಲೋಚನೆಗಳನ್ನು ಹೊಂದಿರುವವರು ಅಥವಾ ಪ್ರಯೋಗಗಳನ್ನು ಮಾಡುತ್ತಲೇ ಇರುವವರು ಆಗಿರಬೇಕು. ನಮಗಿದು ತುಂಬಾ ವಿಚಿತ್ರವೆಂದು ಅನಿಸಿದರೂ ಸಹಿತ ಇಂಟರ್ ನೆಟ್ ನಲ್ಲಿ ಇದು ತುಂಬಾ ಸಮಯದಿಂದ ಹರಿದಾಡುತ್ತಿದೆ. ನಮ್ಮ ಮೇಲೆ ನಂಬಿಕೆ ಇಲ್ಲದೆ ಇದ್ದರೆ ಗೂಗಲ್ ನಲ್ಲಿ ಶೋಧ ಮಾಡಿಕೊಳ್ಳಿ. ಕಾಂಡೋಮ್ ನಲ್ಲಿ ನೀರು ತುಂಬಿಕೊಂಡು ಅದನ್ನು ಐಸ್ ಮಾಡಿಕೊಳ್ಳಿ ಮತ್ತು ಕಿರಿಕಿರಿ ವೇಳೆ ಇದನ್ನು ಬಳಸಿಕೊಳ್ಳಿ. ಯಾಕೆಂದರೆ ಗಾತ್ರವು ಈ ಭಾಗದಲ್ಲಿ ಸರಿಯಾಗಿ ಕುಳಿತುಕೊಳ್ಳುವುದು.

ಮುಚ್ಚಳ ತೆರೆಯಲು!

ಮುಚ್ಚಳ ತೆರೆಯಲು!

ನೀವು ಕಾಂಡೋಮ್ ನ್ನು ತುಂಬಾ ವಿಚಿತ್ರವಾಗಿ ಬಳಕೆ ಮಾಡುವ ವಿಧಾನವಿದು. ಮುಚ್ಚಳ ತೆರೆಯಲು ತುಂಬಾ ಕಷ್ಟವಾಗುವಂತಹ ಡಬ್ಬಕ್ಕೆ ನೀವು ಕಾಂಡೋಮ್ ನ್ನು ಕತ್ತರಿಸಿಕೊಂಡು ಇದರ ಮೇಲ್ಭಾಗವನ್ನು ಬಳಸಿಕೊಂಡರೆ ಮುಚ್ಚಳ ಹೊರಗೆ ಬರುವುದು. ಕಾಂಡೋಮ್ ನಲ್ಲಿ ಎಣ್ಣೆಯಂಶ ಇರಬಾರದೆಂದು ನೀವು ದೃಢಪಡಿಸಿಕೊಳ್ಳಿ. ಕಾಂಡೋಮ್ ನ್ನು ತೊಳೆದುಕೊಂಡ ಬಳಿಕ ನೀವು ಇದರ ಉಪಯೋಗ ಮಾಡಬಹುದು.

ಮೊಬೈಲ್ ಒದ್ದೆಯಾಗದಂತೆ!

ಮೊಬೈಲ್ ಒದ್ದೆಯಾಗದಂತೆ!

ಇದು ಸ್ವಲ್ಪ ವಿಚಿತ್ರ ಅನಿಸಿದರೂ ಮೊಬೈಲ್ ಒದ್ದೆಯಾಗದಂತೆ ಮಾಡಲು ನೀವು ಕಾಂಡೋಮ್ ಬಳಸಿಕೊಳ್ಳಿ. ದುಬಾರಿ ವಾಟರ್ ಪ್ರೂಫ್ ಕವರ್ ಬಳಸುವ ಬದಲು ಇದು ತುಂಬಾ ಅಗ್ಗ ಹಾಗೂ ಇದನ್ನು ಹಾಕಿಕೊಂಡೇ ಮೊಬೈಲ್ ಬಳಸಬಹುದು. ಆದರೆ ಕಾಂಡೋಮ್ ಮೇಲಿನ ಎಣ್ಣೆಯಂಶ ತೆಗೆದು ಬಳಸಿಕೊಳ್ಳಿ.

ವೈನ್ ತಯಾರಿಸಲು…!?

ವೈನ್ ತಯಾರಿಸಲು…!?

ಏಯ್ ಹೋಗ್ರೀ ಎಂದು ನೀವು ಇದನ್ನು ಅರ್ಧದಲ್ಲೇ ಓದುವುದನ್ನು ನಿಲ್ಲಿಸಿಬಿಡಬೇಡಿ. ಆದರೆ ನಿಜವಾಗಿಯೂ ವೈನ್ ತಯಾರಿಸಲು ಬಳಸಬಹುದು. ಈಸ್ಟೆವೆಜ್ ಎಂಬ ವ್ಯಕ್ತಿಯೊಬ್ಬ ವೈನ್ ತಯಾರಿಕಾ ಘಟಕಗಳಲ್ಲಿ ಕಾಂಡೋಮ್ ಬಳಕೆ ಮಾಡುತ್ತಾನೆ. ಈತ ಮೊದಲು ಗಾಜಿನ ಡಬ್ಬದಲ್ಲಿ ದ್ರಾಕ್ಷಿ, ಶುಂಠಿ ಮತ್ತು ದಾಸವಾಳ ಹಾಕಿಕೊಳ್ಳುತ್ತಾನೆ. ಇದರ ಬಳಿಕ ಡಬ್ಬದ ಮೇಲ್ಭಾಗದಿಂದ ಕೆಳಭಾಗದ ತನಕ ಕಾಂಡೋಮ್ ನ್ನು ಜಾರಿಸಿ ಮುಚ್ಚುತ್ತಾನೆ. ಹುದುಗುವಿಕೆ ನಡೆದಾಗ ಉಂಟಾಗುವ ಗ್ಯಾಸ್ ಕಾಂಡೋಮ್ ನ್ನು ಹಿಗ್ಗಿಸುವುದು. ಇದರಿಂದ ಹುದುಗುವಿಕೆ ನಡೆದಿದೆ ಮತ್ತು ವೈನ್ ತಯಾರಾಗಿದೆ ಎಂದು ತಿಳಿಯಬಹುದು.

ಬೆಂಕಿ ಹಚ್ಚಿಸಲು!!!

ಬೆಂಕಿ ಹಚ್ಚಿಸಲು!!!

ಇದನ್ನು ಕೇಳಿ ನಿಮಗೆ ಆಘಾತವಾದರೂ ಚೇತರಿಸಿಕೊಂಡು ಓದಿ. ಕಾಂಡೋಮ್ ನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಾಗ ಅದನ್ನು ಬೆಂಕಿ ಹಚ್ಚಿಸಲು ಬಳಸಬಹುದು. ನೀವು ಕಾಂಡೋಮ್ ನ್ನು ಹಾಗೆ ಒಣ ಕೊಂಬೆ ಅಥವಾ ಎಲೆಗಳ ಮೇಲೆ ಹೊಡೆದಾಗ ಅದು ತನ್ನಷ್ಟಕ್ಕೆ ಬೆಂಕಿ ಹಚ್ಚಿಕೊಳ್ಳುವುದು. ಯಾಕೆಂದರೆ ಕಾಂಡೋಮ್ ನ್ನು ಉರಿದುಕೊಳ್ಳುವುದು.

ಇಂದು ಕಾಂಡೋಮ್‌ಗಳು ಭಾರೀ ದುಬಾರಿಯಾಗಿವೆ!

ಇಂದು ಕಾಂಡೋಮ್‌ಗಳು ಭಾರೀ ದುಬಾರಿಯಾಗಿವೆ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣದ ಮೂಲಕ ಕೆಲವು ಸ್ಪರ್ಧೆಗಳು ನಡೆಯುವ ಬಗ್ಗೆ ತಿಳಿಯುತ್ತಿದೆ ಹಾಗೂ ಇವುಗಳಲ್ಲಿ ಹೆಚ್ಚಿನವು ವಿಚಿತ್ರವಾಗಿಯೂ ಅಪಾಯಕಾರಿಯಾಗಿಯೂ ಇರುತ್ತದೆ. ಬ್ಲೂ ವೆಲ್ ಗೇಮ್, ಐಸ್ ಬಕೆಟ್ ಚಾಲೆಂಜ್ ಮೊದಲಾದವು ಜಗತ್ತಿನ ಪಾಲಕರ ನಿದ್ದೆಗೆಡಿಸಿದರೆ ಇಂತಹದ್ದೇ ಇನ್ನೊಂದು ವ್ಯಸನಕಾರಿ ಆಟವೊಂದು ಬಂದಿದೆ. ಅದೇ ಸ್ನಾರ್ಟಿಂಗ್ ಕಾಂಡೋಮ್ ಚಾಲೆಂಜ್ ಅಥವಾ ಕಾಂಡೋಂ ಅನ್ನು ಮೂಗಿನಲ್ಲಿ ತೂರಿಸಿ ಗುಟುರು ಹಾಕುವುದು! ನಂಬಲರ್ಹ ಮೂಲಗಳ ಪ್ರಕಾರ ಈ ಆಟವನ್ನು 1993ರ ಅಕ್ಟೋಬರ್ ನಂದು ಪ್ರಥಮವಾಗಿ ಆಡಲಾಯಿತು. ಅಂದು ಕೆಂಟ್ ವಿಶ್ವವಿದ್ಯಾಲಯದ ಆಂತರಿಕ ವೃತ್ತಪತ್ರಿಕೆಯಲ್ಲಿ "ಜಿಂ ರೋಸ್ ಸರ್ಕಸ್ ಸೈಡ್ ಶೋ" ಎಂಬ ಕಾರ್ಯಕ್ರಮದ ಬಗ್ಗೆ ಪ್ರಕಟವಾಗಿತ್ತು. ಈ ಪ್ರದರ್ಶನದಲ್ಲಿ ಜಿಂ ಎಂಬುವನ್ನು ಕಾಂಡೋಂ ಒಂದನ್ನು ಮೂಗಿನಿಂದ ಒಳಗೆಳೆದುಕೊಂಡು ಬಾಯಿಯಿಂದ ಹೊರಬಿಡುತ್ತಾರೆ ಎಂದು ಪ್ರಕಟಿಸಲಾಗಿತ್ತು.

ಕೆಲವೊಮ್ಮೆ ಕಾಂಡೋಮ್ ಕೂಡ ಸೇಫ್ ಅಲ್ಲ!

ಕೆಲವೊಮ್ಮೆ ಕಾಂಡೋಮ್ ಕೂಡ ಸೇಫ್ ಅಲ್ಲ!

ಕಾಂಡೋಮ್‌ನ ಪ್ಯಾಕೇಟ್ ಅನ್ನು ತುಂಬಾ ಬಲ ಪ್ರಯೋಗ ಮಾಡಿ ತೆಗೆಯಲು ಪ್ರಯತ್ನಿಸಬಾರದು. ಅದರಲ್ಲೂ ಬಾಯಿಯಲ್ಲಿ ಕಚ್ಚಿ ಕಾಂಡೋಮ್ ಪ್ಯಾಕೇಟ್ ಹೊಡೆದರೆ ಆಗ ಕಾಂಡೋಮ್ ನಲ್ಲಿ ತೂತು ಬೀಳುವ ಸಾಧ್ಯತೆಗಳು ಇವೆ. ಇದರಿಂದ ಅನಿರೀಕ್ಷಿತವಾಗಿ ಗರ್ಭಧಾರಣೆ ಸಂಭವವಿದೆ.

ಕಾಂಡೋಮ್ ಸ್ಪರ್ಧೆ!

ಕಾಂಡೋಮ್ ಸ್ಪರ್ಧೆ!

ಕಾಂಡೋಮ್ ಬಳಸಿ ಗುಟುರು ಹಾಕುವ ಸ್ಪರ್ಧೆ ಈಗ ಹಲವರ ಗಮನ ಸೆಳೆದಿದ್ದು ಚಿಕ್ಕ ಮಕ್ಕಳೂ ಈ ಕ್ರಿಯೆಯನ್ನು ನಡೆಸಿ ತಮ್ಮ ವಿಡಿಯೋಗಳನ್ನು ಪ್ರಕಟಿಸುತ್ತಿದ್ದಾರೆ. ಮೂಗಿನ ಒಂದು ಹೊಳ್ಳೆಯಿಂದ ತೆರೆದ ಕಾಂಡೋ ಒಂದನ್ನು ಒಳಗೆಳೆದುಕೊಳ್ಳುತ್ತಾರೆ ಹಾಗೂ ಬಳಿಕ ಗಂಟಲಿನಲ್ಲಿ ಬೆರಳು ಹಾಕಿ ಒಳಗಿನಿಂದ ಎಳೆದು ಬಾಯಿಯ ಮೂಲಕ ಹೊರಗೆಳೆದುಕೊಳ್ಳಲಾಗುತ್ತದೆ.ಈ ಸ್ಪರ್ಧೆಯನ್ನು ಗಮನಿಸಿದ ವಿಶ್ವದ ಹಲವು ಆರೋಗ್ಯ ತಜ್ಞರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಜನತೆಯನ್ನು ಈ ಆಟದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಈ ಪರಿಯಾಗಿ ರಬ್ಬರ್ ಒಳಗೆಳೆದುಕೊಂಡರೆ ಇದು ಆ ವ್ಯಕ್ತಿಯ ಮೂಗಿನ ವಾಯುಮಾರ್ಗದಲ್ಲಿ ತಡೆಯುಂಟುಮಾಡಬಹುದು ಹಾಗೂ ಉಸಿರಾಟವನ್ನು ಸ್ಥಗಿತಗೊಳಿಸಬಹುದು.

ಕಾಂಡೋಮ್ ಸ್ಪರ್ಧೆ!

ಕಾಂಡೋಮ್ ಸ್ಪರ್ಧೆ!

ಸ್ವಾಭಾವಿಕವಾಗಿ ಉತ್ತಮ ಗುಣಮಟ್ಟ ಪಡೆಯಲು ಉತೃಷ್ಟ ಕಚ್ಚಾವಸ್ತುಗಳು ಹಾಗೂ ಆಧುನಿಕ ತಂತ್ರಜ್ಞಾನ, ದುಬಾರಿ ಯಂತ್ರಗಳ ಬಳಕೆಯಾಗುವುದರಿಂದ ಕೊಂಚ ಬೆಲೆ ದುಬಾರಿಯಾಗಿರುವುದು ಸಹಜ. ಆದರೆ ಈ ಬೆಲೆ ಅನೈಚ್ಛಿಕವಾಗಿ ಗರ್ಭಧಾರಣೆಯಿಂದ ಎದುರಾಗುವ ಖರ್ಚುಗಳನ್ನು ಪರಿಗಣಿಸಿದರೆ ಈ ಬೆಲೆ ತೃಣಮಾತ್ರ. ಹಲವು ಧರ್ಮಗಳಲ್ಲಿ ಗರ್ಭಾಪಾತಕ್ಕೆ ಅನುಮತಿಯಿಲ್ಲದ ಕಾರಣ ಶಿಶುವಿನ ಲಾಲನೆ ಪಾಲನೆ, ಶೈಕ್ಷಣಿಕ ಖರ್ಚುಗಳು ದಂಪತಿಯರ ಗಳಿಕೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಕಾಂಡೋಮ್ ಕೊಳ್ಳಲು ಹಣ ಉಳಿಸುವ ಉಸಾಬರಿ ಬೇಡ. ಕಾಂಡೋಮ್ ನ್ನು ಇನ್ನು ಯಾವ ರೀತಿಯಿಂದ ಬಳಸಬಹುದು ಎಂದು ನಿಮಗೆ ತಿಳಿದಿದ್ದರೆ ಆಗ ನಮಗೆ ಕೂಡ ತಿಳಿಯಲು ಅವಕಾಶ ಮಾಡಿಕೊಡಿ. ನಿಮ್ಮ ಬಳಕೆ ಬಗ್ಗೆ ಕಮೆಂಟ್ ಬಾಕ್ಸ್ ಗೆ ಹಾಕಿ.

English summary

Uses Of Condoms That None Of Us Have Thought Of

The very first thought that you would get when you hear the word condom is love-making. But have you ever thought that these rubber rings can be used for other purposes as well? Sounds weird, right? But we bring to you the list of different bizarre uses that people have used condoms for, apart from using it for sex. These bizarre uses of condoms in the most weirdest ways will leave you stunned, as these ideas are something that a common man would not think of!
X
Desktop Bottom Promotion