Just In
- 8 min ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- 1 hr ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 2 hrs ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 3 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
Don't Miss
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಗುಣ-ನಡತೆ ಹೇಗಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ..
ಪ್ರತಿಯೊಬ್ಬ ವ್ಯಕ್ತಿಯು ತಾನು ಹುಟ್ಟಿದ ಘಳಿಗೆ ಹಾಗೂ ದಿನಕ್ಕೆ ಅನುಗುಣವಾಗಿ ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಕುತೂಹಲ ಹಾಗೂ ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಸಾಮಾನ್ಯವಾಗಿ ಸೂರ್ಯ ಮತ್ತು ಚಂದ್ರರಿಂದ ಆಳಲ್ಪಟ್ಟಿರುತ್ತಾರೆ.
ಹಾಗಾಗಿ ಇವರ ಅನನ್ಯ ಗುಣಲಕ್ಷಣಗಳು ಇತರರಿಗಿಂತ ಕೊಂಚ ಭಿನ್ನವಾಗಿರುತ್ತದೆ. ಆಗಸ್ಟ್ ಅಲ್ಲಿ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಉತ್ಸಾಹ ಪೂರ್ಣ ಶಕ್ತಿಯಿಂದ ಆಕರ್ಷಿಸಲ್ಪಡುತ್ತಾರೆ. ಉತ್ತಮ ಬೌದ್ಧಿಕ ಕಾಂತಿಯನ್ನು ಹೊಂದಿರುತ್ತಾರೆ. ನಿಮಗೆ ಆಗಸ್ಟ್ ಅಲ್ಲಿ ಜನಿಸಿದ ವ್ಯಕ್ತಿಗಳು ಗೊತ್ತಿದ್ದರೆ ಅವರಲ್ಲಿ ಈ ಗುಣಗಳು ಇವೆಯೇ? ಎಂದು ಪರಿಶೀಲಿಸಿ..
ತಮ್ಮದೇ ಆದ ವೈಯಕ್ತಿಕ ಅಂತರವನ್ನು ಬಯಸುತ್ತಾರೆ
ಆಗಸ್ಟ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ತಮ್ಮದೇ ಆದ ವೈಯಕ್ತಿಕ ಅಂತರವನ್ನು ಹೊಂದಲು ಬಯಸುತ್ತಾರೆ. ಇವರು ಅಷ್ಟು ಸುಲಭವಾಗಿ ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ತಮಗೆ ಆತ್ಮೀಯ ಹಾಗೂ ಹತ್ತಿರ ಎಂದು ಅನಿಸಿದ ವ್ಯಕ್ತಿಗಳೊಂದಿಗೆ ಮಾತ್ರ ಮುಕ್ತವಾಗಿ ಇರುತ್ತಾರೆ. ಸಾಕಷ್ಟು ಸಮಯದಲ್ಲಿ ಏಕಾಂಗಿಯಾಗಿರಲು ಬಯಸುತ್ತಾರೆ. ತಮ್ಮಿಂದ ಇತರರಿಗೆ ತೊಂದರೆ ಉಂಟಾಗದಂತೆಯೂ ನೋಡಿಕೊಳ್ಳುತ್ತಾರೆ. ಇವರ ನಿರ್ಧಾರಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿ ತೆಗೆದುಕೊಳ್ಳಲು ಪ್ರೀತಿಸುತ್ತಾರೆ. ತಮ್ಮದೇ ಆದ ನಿರ್ಧಾರದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿಯೇ ಇವರು ಗೌಪ್ಯವಾಗಿರುವುದನ್ನು ತುಂಬಾ ಪ್ರೀತಿಸುವರು. ಸ್ವಲ್ಪ ನಾಚಿಕೆ ಹಾಗೂ ಗೌಪ್ಯವಾದ ಸ್ವಭಾವದವರಾದ ಇವರನ್ನು ನೇರವಾಗಿ ನೋಡಿದರೆ ಬಹಳ ನರಳುತ್ತಾರೆ. ಇವರಿಗೆ ತಮ್ಮದೇ ಆದ ಸಮಯದ ಅಗತ್ಯವಿರುತ್ತದೆ. ಇವರ ಈ ಸ್ವಭಾವವು ವಿವೇಕದಿಂದ ಇರಲು ಪ್ರಚೋದನೆ ನೀಡುತ್ತದೆ. ಎಲ್ಲರೊಂದಿಗೂ ಮಾತನಾಡುವ ಸ್ವಭಾವ ಇವರದ್ದಾಗಿರುವುದು. ಹಾಗೊಮ್ಮೆ ಇವರು ತಪ್ಪು ಮಾಡಿದ್ದರೇ ಬಹುಬೇಗ ಭಯಕ್ಕೆ ಒಳಗಾಗುತ್ತಾರೆ.
ಇವರು ಯಾವಾಗಲೂ ಸರಿ
ಇವರು ಇತರರ ಗುಣಗಳನ್ನು ಹಾಗೂ ಸ್ವಭಾವಗಳನ್ನು ಬಹುಬೇಗ ನಿರ್ಧರಿಸುತ್ತಾರೆ. ಜೊತೆಗೆ ತಾವು ಅಂದುಕೊಂಡಿದ್ದು ಸದಾ ಸರಿಯಾಗಿಯೇ ಇರುತ್ತದೆ ಎಂದು ಭಾವಿಸುತ್ತಾರೆ. ಅರ್ಥಗರ್ಭಿತವಾಗಿ ಓದುವ ಸ್ವಭಾವ ಇರುವ ಇವರು ಬಹಳ ಒಳ್ಳೆಯ ಗುಣದವರು ಹೌದು. ಹತ್ತರಲ್ಲಿ ಒಂಭತ್ತು ಗುಣಗಳು ಒಳ್ಳೆಯದಾಗಿರುತ್ತದೆ. ಹಠಮಾರಿ ಗುಣದವರಾದ ಇವರು ಸುಳ್ಳು ಹೇಳುವುದನ್ನು ಇಷ್ಟಪಡುವುದಿಲ್ಲ. ಜೊತೆಗೆ ಸುಳ್ಳು ಹೇಳುವವರನ್ನು ಸಹ ಸಹಿಸುವುದಿಲ್ಲ. ಇವೊಂದಿಗೆ ಯಾವುದೇ ವಿಷಯದ ಬಗ್ಗೆ ವಾದ ಮಾಡಲು ಪ್ರಯತ್ನಿಸಿದರೆ ಅದರಲ್ಲಿ ಅವರು ಸೋಲುವುದಿಲ್ಲ. ತಾವು ಹೇಳಿದ್ದು ಸರಿ ಎಂದು ವಾದಿಸುತ್ತಾರೆ.
ಬಹುಬೇಗ ಭಾವನೆಯನ್ನು ವ್ಯಕ್ತಪಡಿಸುತ್ತಾರೆ
ಇವರಿಗೆ ತಮ್ಮ ಭಾವನೆಗಳನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಕಷ್ಟವಾಗುವುದು. ಇವರಿಗೆ ಅನಿಸಿದ್ದು ಏನೇ ಆಗಿದ್ದರು ಬಹುಬೇಗ ವ್ಯಕ್ತಪಡಿಸುತ್ತಾರೆ. ಜೊತೆಗೆ ತಮಗೆ ಉಂಟಾದ ಭಾವನೆಗಳನ್ನು ಸಹ ಹತೋಟಿಯಲ್ಲಿ ಇಟ್ಟುಕೊಳ್ಳಲು ಕಷ್ಟಪಡುವರು. ಇದು ಇತರರಿಗೆ ಅಸಭ್ಯ ಎಂದು ಸಹ ಅನಿಸಬಹುದು.
ತಮ್ಮ ಭಾವನೆಗಳನ್ನು ಮುಖಾ-ಮುಖಿಯಾಗಿ ಎದುರಿಸಲು ಕಷ್ಟಪಡುವರು
ಇವರು ಮುಖಾ-ಮುಖಿಯಾಗಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅಥವಾ ಇತರರಿಗೆ ಅರ್ಥೈಸಲು ಕಷ್ಟಪಡುವರು. ಇವರು ಅದ್ಭುತ ಬರಹಗಾರರಾಗಿರುತ್ತಾರೆ. ತಮ್ಮ ಭಾವನೆಗಳನ್ನು ಮಾತಿನ ಮೂಲಕ ಹೇಳುವ ಬದಲು ಬರೆಯುವುದರ ಮೂಲಕ ಹೇಳಿಕೊಳ್ಳುತ್ತಾರೆ. ಇವರು ಯಾರನ್ನಾದರೂ ಇಷ್ಟಪಟ್ಟರೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವ ಬದಲು ಕಾಗದದಲ್ಲಿ ಬರೆಯುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಇವರು ತಮ್ಮ ನೋವುಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೆ ಕೂಗಾಡಬಹುದು. ಆದರೆ ಗಂಭೀರ ವಿಚಾರದಿಂದ ಮನ ನೊಂದಿದ್ದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅವರಲ್ಲಿ ಸಹಿಸಿಕೊಳ್ಳುವ ಗಟ್ಟಿ ಗುಣವಿದೆ.
ಇವರು ಅಷ್ಟು ಸುಲಭವಾಗಿ ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಇವರು ಸದಾ ವಿಶೇಷ ಭಾವನೆಗಳನ್ನು ಬಯಸುತ್ತಾರೆ
ಆಗಸ್ಟ್ ಅಲ್ಲಿ ಜನಿಸಿದ ವ್ಯಕ್ತಿಗಳು ಪ್ರೀತಿಯಲ್ಲಿ ಉನ್ನತ ಮಟ್ಟವನ್ನು ಹೊಂದಿರುತ್ತಾರೆ. ಅವರು ಪ್ರೀತಿಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಇವರು ಇತರರಲ್ಲಿ ಕಿರಿಕಿರಿ ಹಾಗೂ ಸ್ವಾರ್ಥಗುಣಗಳಿರುತ್ತವೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ತಮ್ಮ ಸ್ನೇಹಿತರಾಗಬೇಕು ಎಂದು ಅಂದುಕೊಂಡ ಜನರೊಂದಿಗೆ ಮಾತ್ರ ಬಹಳ ಹತ್ತಿರದ ವ್ಯಕ್ತಿಗಳಾಗಿ ಇರುತ್ತಾರೆ. ಪ್ರತಿಯೊಬ್ಬರೂ ಹತ್ತಿರದ ವ್ಯಕ್ತಿಗಳು ಹಾಗೂ ಪ್ರೀತಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಇವರಲ್ಲಿ ಅತಿಯಾದ ಪ್ರಣಯಾತ್ಮಕ ಭಾವನೆ ಇರುವುದಿಲ್ಲ. ಆದರೆ ವಾಸ್ತವವಾಗಿ ಹೇಗಿರಬೇಕೋ ಹಾಗಿರುತ್ತಾರೆ. ಇವರನ್ನು ಸ್ನೇಹಿತರನ್ನಾಗಿ ಪಡೆದುಕೊಳ್ಳಲು ಅದೃಷ್ಟವನ್ನು ಹೊಂದಿರಬೇಕು.
ಹಣವನ್ನು ವ್ಯರ್ಥಮಾಡಲು ಬಯಸುವುದಿಲ್ಲ
ಇವರು ಹಣವನ್ನು ಖರ್ಚುಮಾಡುವುದು ಅಥವಾ ಅದರ ಉಳಿತಾಯದ ವಿಚಾರದಲ್ಲಿ ಅತ್ಯುತ್ತಮವಾದ ನಿಯಮವನ್ನು ಅನುಸರಿಸುತ್ತಾರೆ. ಅನವಶ್ಯಕ ಖರ್ಚುಗಳಿಗೆ ಮುಂದಾಗುವುದಿಲ್ಲ. ಅಗತ್ಯ ಹಾಗೂ ಅನಿವಾರ್ಯವಾದ ಸಂಗತಿಗಳಿಗೆ ಬೇಕಾದ ಹಾಗೆ ಹಣವನ್ನು ವ್ಯಯಿಸುವರು. ಇವರು ತಮ್ಮ ಉಳಿತಾಯ ಹಾಗೂ ಖರ್ಚಿನ ಮೇಲೆ ಒಂದು ಮಿತಿಯನ್ನು ಹೊಂದಿರುತ್ತಾರೆ. ಇದು ಅವರ ಎಲ್ಲಾ ಬಗೆಯ ಖರೀದಿಯ ಮೇಲೆ ಪ್ರಭಾವವನ್ನು ಬೀರುತ್ತದೆ. ಅಗತ್ಯ ಎಂದಾದಾಗ ಎಷ್ಟೇ ಹಣವ್ಯಯಿಸಿ ಆದರೂ ಖರ್ಚುಮಾಡುತ್ತಾರೆ.
ಗುರಿ ಸಾಧನೆಗೆ ಹೋರಾಟ ಮಾಡುತ್ತಾರೆ
ಇವರು ಬೇಕಾದದ್ದನ್ನು ಪಡೆಯಲು ಹಾಗೂ ತಮ್ಮ ಗುರಿಯನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ಮಾಡುತ್ತಾರೆ. ಇವರು ತಮಗೆ ಅಗತ್ಯವಿಲ್ಲ ಎಂದುಕೊಂಡ ವಿಚಾರಗಳಿಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ಇತರರಿಗೆ ಅನುಕೂಲ ಆಗುವಂತೆಯೇ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡು ಹೊಂದಾಣಿಕೆಯ ಜೀವನ ನಡೆಸುತ್ತಾರೆ. ಮುಕ್ತ ಮನೋಭಾವ ಹಾಗೂ ಪ್ರೀತಿಯಿಂದ ಜೀವನವನ್ನು ನಿರ್ವಹಿಸುತ್ತಾರೆ. ಇತರರನ್ನು ಹಾಗೂ ಅವರ ಜೀವನದ ಬಗ್ಗೆ ಮಾತನಾಡಿಕೊಳ್ಳುವುದಿಲ್ಲ. ತಮ್ಮ ಜೀವನ ಹಾಗೂ ನಡವಳಿಕೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಜೊತೆಗೆ ತಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. ಪರಸ್ಪರ ಸಂಬಂಧವನ್ನು ಇಟ್ಟುಕೊಳ್ಳುವುದರ ಬಗ್ಗೆ ಹೆಚ್ಚು ಗಮನ ನೀಡುವರು.
ಮೊಂಡುತನದ ಸ್ವಾಭದವರು
ಆಗಸ್ಟ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಸಮಯ, ಗೌಪ್ಯತೆ ಮತ್ತು ಭಾವನೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ವ್ಯಕ್ತಪಡಿಸುವುದಿಲ್ಲ. ಮನಸ್ಸಿಗೆ ನೋವು ಹಾಗೂ ಹೃದಯ ಮುರಿತದಿಂದ ಯಾವುದೇ ವಿಷಯವನ್ನು ವ್ಯಕ್ತಪಡಿಸುವುದಿಲ್ಲ. ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಜನರು ಇವರನ್ನು ಅಹಂಕಾರಿಗಳು, ಸೊಕ್ಕಿನ ವ್ಯಕ್ತಿಗಳು ಎಂದು ಸಹ ಭಾವಿಸುವರು. ಕೆಲವೊಂದು ವಿಷಯದಲ್ಲಿ ತಾವು ಹೇಳಿದಂತೆಯೇ ನಡೆಯಬೇಕು ಎನ್ನುವ ಹಠವನ್ನು ತೋರುವುದರಿಂದ ಮೊಂಡುತನವು ಪ್ರದರ್ಶನಗೊಳ್ಳುವುದು.
ಬಹುಬೇಗ ಕಿರಿಕಿರಿ ಹಾಗೂ ಕೋಪಗೊಳ್ಳುವರು
ಆಗಸ್ಟ್ ಅಲ್ಲಿ ಜನಿಸಿದ ಜನರು ತುಂಬಾ ಸ್ಮಾರ್ಟ್ ಜನರಾಗಿರುತ್ತಾರೆ. ಮೂರ್ಖ ಪ್ರಶ್ನೆಗಳನ್ನು ಕೇಳುವ ಜನರನ್ನು ಇವರು ಇಷ್ಟಪಡರು. ಸಣ್ಣ ಸಣ್ಣ ವಿಚಾರಗಳಿಗೆ ಬಹುಬೇಗ ಸಿಟ್ಟುಮಾಡುವರು. ಅದನ್ನು ಯಾವುದೇ ಹಿಂಜರಿಕೆ ಇಲ್ಲದೆ ವ್ಯಕ್ತಪಡಿಸುವರು. ಹಾಗಾಗಿ ಆಗಸ್ಟ್ ತಿಂಗಳಲ್ಲಿ ಜನಿಸಿದ ನಿಮ್ಮ ಸ್ನೇಹಿತರ ಬಳಿ ಯಾವುದೇ ಸಮಸ್ಯೆ ಕೇಳುವ ಮೊದಲು ಯೋಚಿಸಿ ಹೋಗಿ. ವಿಷಯದ ಬಗ್ಗೆ ದೃಢತೆ ಇದ್ದರೆ ಮಾತ್ರ ಪ್ರಶ್ನೆಗಳನ್ನು ಕೇಳಿ ಎಂದು ಹೇಳುವರು.
ಇವರು ಪ್ರೇರೇಪಿತ ವ್ಯಕ್ತಿಗಳಾಗಿರುತ್ತಾರೆ
ಇವರು ಬಹಳ ಸ್ವಯಂ ಪ್ರೇರಿತ ವ್ಯಕ್ತಿಗಳಾಗಿರುತ್ತಾರೆ. ಅತ್ಯಂತ ಶಕ್ತಿಯುತವಾದ ಮತ್ತು ಯಾವುದೇ ಕಷ್ಟವನ್ನು ಜಯಿಸಬಲ್ಲ ವ್ಯಕ್ತಿಗಳಾಗಿರುತ್ತಾರೆ. ಜೀವನವು ಸಂಪೂರ್ಣವಾಗಿ ಆಶ್ಚರ್ಯಕರವಾಗಿರುತ್ತದೆ. ಜೊತೆಗೆ ಜೀವನದಲ್ಲಿ ವೈಫಲ್ಯವೂ ಸಾಮಾನ್ಯವಾಗಿರುತ್ತದೆ ಎನ್ನುವುದನ್ನು ಅವರು ತಿಳಿದಿರುತ್ತಾರೆ. ವೈಫಲ್ಯವನ್ನು ಹೊಂದಲು ಇವರು ಬಿಡುವುದಿಲ್ಲ. ಬದಲಿಗೆ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಜೀವನದಲ್ಲಿ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಲು ಅವರ ಸ್ವಯಂ ಪ್ರೇರಿತ ವರ್ತನೆಯೇ ಅವರಿಗೆ ಸಹಾಯ ಮಾಡುತ್ತದೆ.
ಕಠಿಣ ಕಾರ್ಯಕರ್ತರು ಹಾಗೂ ಮಹಾನ್ ನಾಯಕರು
ಏನೇ ಆಗಿರಲಿ ಇವರು ಅರ್ಹವಾದ ವಿಷಯಗಳನ್ನು ಪಡೆದುಕೊಳ್ಳಲು ಹೆಚು ಶ್ರಮಿಸುತ್ತಾರೆ. ಜೊತೆಗೆ ಜೀವನದಲ್ಲಿ ಬಯಸುವ ವಿಷಯಗಳಿಗೆ ಹೆಚ್ಚು ಸಮರ್ಪಿತರಾಗಿರುತ್ತಾರೆ. ಕೆಲಸ ಯಾವುದಾದರೂ ಚಿಂತಿಸುವುದಿಲ್ಲ. ಅವನ್ನು ನಿರ್ವಹಿಸುವಾಗ ಸಮರ್ಪಕ ರೀತಿಯಲ್ಲಿ ಮಾಡಿ ಮುಗಿಸುತ್ತಾರೆ. ಎಂತಹ ಪರಿಸ್ಥಿತಿ ಎದುರಾದರೂ ನಾಯಕತ್ವ ಗುಣಗಳ ಮೂಲಕ ನಿರ್ವಹಿಸುವರು. ಪ್ರಚಾರಗಳನ್ನು ಬಯಸುವ ಇವರು ಜನರ ಮೆಚ್ಚುಗೆಯನ್ನು ಆನಂದಿಸುವರು. ವಿನಾಶಕಾರಿ ಭಾವನಾತ್ಮಕ ಪ್ರಕೋಪಗಳಿಗೆ ಒಳಗಾಗದಂತೆಯೇ ಎಚ್ಚರ ವಹಿಸಿ, ತಮ್ಮ ಹೆಮ್ಮೆಯ ಪ್ರಗತಿಯ ರೂಪದಲ್ಲಿ ಬರಬಹುದು.
ಅದೃಷ್ಟ ಶಾಲಿಗಳು
ಆಗಸ್ಟ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಅದೃಷ್ಟವಂತರು. ಆಗಾಗ ವಿಶೇಷ ಅದೃಷ್ಟಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಎಲ್ಲಿಗೆ ಹೋದರು ಅಲ್ಲಿ ಜಯ ಹಾಗೂ ಅದೃಷ್ಟವನ್ನು ಪಡೆದುಕೊಂಡೇ ಬರುವರು. ಹಾಗಾಗಿ ಆಗಸ್ಟ್ ಅಲ್ಲಿ ಜನಿಸಿದವರು ಹೆಚ್ಚು ಶಕ್ತಿವಂತರು ಹಾಗೂ ಪ್ರಖ್ಯಾತ ವ್ಯಕ್ತಿಗಳಾಗುತ್ತಾರೆ ಎಂದು ಹೇಳಲಾಗುವುದು. ಜೀವನದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿಗಳು ಹಾಗೂ ಅದೃಷ್ಟವನ್ನು ಹೊಂದಿದವರಾಗಿರುತ್ತಾರೆ. ಪ್ರಭಾವಶಾಲಿ ವ್ಯಕ್ತಿಗಳಾಗುವುದರ ಮೂಲಕ ಜೀವನದಲ್ಲಿ ಸ್ಫೂರ್ತಿದಾಯಕ ವ್ಯಕ್ತಿಗಳಾಗಿರುತ್ತಾರೆ.
ಉತ್ತಮ ಸಹನ ಶೀಲರು
ಆಗಸ್ಟ್ ಅಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ಸಹನೆಯ ಗುಣವನ್ನು ಹೊಂದಿರುತ್ತಾರೆ. ಇವರ ಸಹನಾ ಶಕ್ತಿಯು ಸಂಬಂಧಗಳ ವಿಚಾರದಲ್ಲಿ ಅತ್ಯುತ್ತಮವಾದ ಪಾತ್ರ ನಿರ್ವಹಿಸುತ್ತದೆ. ಕೆಲವು ವಿಚಾರದಲ್ಲಿ ಕೋಪ ಮತ್ತು ಉದ್ವೇಗ ಉಂಟಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಸಹನೆಯಿಂದ ಅದನ್ನು ಸುಲಭವಾಗಿ ನಿರ್ವಹಿಸುವರು. ಇವರ ನಡವಳಿಕೆಯು ಆಕ್ರಮಣಕಾರಿ ರೀತಿಯಲ್ಲಿ ತೋರುವುದು. ಆದರೆ ಉತ್ತಮ ಭಾವನೆಗಳು ಅದರಲ್ಲಿ ಅಡಗಿರುತ್ತವೆ.