ಈ ಆರು ರಾಶಿಗಳಲ್ಲಿ ಹುಟ್ಟಿದವರು, ಬಹಳ ಬೇಗನೇ ಶ್ರೀಮಂತರಾಗುತ್ತಾರಂತೆ!!

Posted By: Deepu
Subscribe to Boldsky

ಹಣ, ಕಾರು, ಮನೆ ಶ್ರೀಮಂತಿಕೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶ್ರೀಮಂತಿಕೆಯನ್ನು ಅನುಭವಿಸಲು ಬಯಸುತ್ತಾರೆ. ಆದರೆ ಗ್ರಹಚಾರ ಅಥವಾ ಆನುವಂಶಿಕ ಹಿನ್ನೆಲೆ ಹೀಗೆ ಅನೇಕ ಕಾರಣಗಳಿಂದ ಶ್ರೀಮಂತಿಕೆಯ ಕನಸು ನನಸಾಗದೆಯೇ ಇರಬಹುದು. ಕೆಲವರು ಎಷ್ಟೇ ಬಡತನದಲ್ಲಿದ್ದರೂ ಬಹುಬೇಗ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ.

ಹೌದು, ವ್ಯಕ್ತಿಯ ಶ್ರೀಮಂತಿಕೆ ಹಾಗೂ ಐಷಾರಾಮಿ ಜೀವನವು ಅವರು ಹುಟ್ಟಿದ ಘಳಿಗೆ ಹಾಗೂ ರಾಶಿಚಕ್ರದ ಅನ್ವಯದಿಂದ ಉಂಟಾಗುತ್ತದೆ ಎಂದು ಹೇಳಲಾಗುವುದು. ಅದರಲ್ಲೂ ಕೆಲವು ರಾಶಿಚಕ್ರದವರು ಬಹುಬೇಗ ಶ್ರೀಮಂತಿಕೆಯನ್ನು ಪಡೆಯುತ್ತಾರೆ. ಅಲ್ಪ ಶ್ರಮದಿಂದಲೇ ಅಧಿಕ ಸಂಪಾದನೆ ಮಾಡುತ್ತಾರೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆ ಓದಿ....

ಸಿಂಹ

ಸಿಂಹ

ಈ ವ್ಯಕ್ತಿಗಳಿಗೆ ಕೊಳಕು ಶ್ರೀಮಂತರೆನ್ನಲಾಗುವುದು. ಇವರು ತುಂಬಾ ಕ್ರಿಯಾತ್ಮಕ, ಭಾವೋದ್ರೀಕ್ತ, ದಯಾಮಯ, ಉದಾರ ಹಾಗೂ ಹರ್ಷಚಿತ್ತರಾಗಿರುವರು. ಇದರಿಂದಾಗಿ ಇವರಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಅದರೆ ಇನ್ನೊಂದು ಕಡೆಯಲ್ಲಿ ಇವರು ತುಂಬಾ ಮೊಂಡುತನ, ಉದಾಸೀನ, ಸೊಕ್ಕಿನ ಪ್ರವೃತ್ತಿಯವರಾಗಿರುವ ಕಾರಣ ತಮ್ಮ ಆಸ್ತಿ ಕಳೆದುಕೊಳ್ಳಬಹುದು. ಇನ್ನು ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ

ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ.

ಮೇಷ

ಮೇಷ

ಈ ರಾಶಿಯವರು ಧೈರ್ಯವಂತರು, ಉತ್ತಮ ನಿರ್ಣಯಕಾರರು, ಆತ್ಮವಿಶ್ವಾಸಿಗಳು, ಪ್ರಾಮಾಣಿಕರು ಮತ್ತು ಭಾವೋದ್ರಿಕ್ತರು. ಇವರ ಉತ್ತಮ ಗುಣಗಳಿಂದ ಬಹು ಬೇಗ ಉನ್ನತ ಸ್ಥಾನವನ್ನು ಪಡೆದುಕೊಳ್ಳುವರು. ಆದರೆ ಆಕ್ರಮಣಕಾರಿ ಮತ್ತು ಹಠಾತ್ ಗುಣಗಳಿಂದ ಕೆಲವೊಮ್ಮೆ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ.

ವೃಷಭ

ವೃಷಭ

ಇವರು ಅತ್ಯುತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಪ್ರಾಯೋಗಿಕವಾಗಿ ಚಿಂತನೆ ನಡೆಸುವ ಇವರು ಸ್ಥಿರವಾದ ಗುಣವನ್ನು ಹೊಂದಿದವರು. ಮೊಂಡುತನದವರಾದ ಇವರು ಅಷ್ಟು ಸುಲಭವಾಗಿ ರಾಜಿಯಾಗದ ಸ್ವಭಾವದವರು. ಇವರು ಸಕಾರಾತ್ಮಕ ಗುಣಗಳಿಂದ ಹಣ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಹಾಗೆಯೇ ನಕಾರಾತ್ಮಕ ಗುಣಗಳಿಂದ ತಮ್ಮ ಅದೃಷ್ಟವನ್ನು ಕಳೆದುಕೊಳ್ಳುವರು. ಆದರೆ ಈ ರಾಶಿಯವರು ಜೀವನದಲ್ಲಿ ವೃಷಭ ರಾಶಿಯವರು ಅನೇಕ

ಸವಾಲುಗಳನ್ನು ಎದುರಿಸ ಬೇಕಾಗುವುದು. ನೀವು ನಿರೀಕ್ಷಿಸಿದ ಮಟ್ಟದಲ್ಲಿ ನಿಮ್ಮ ವ್ಯಾಪಾರ ವಹಿವಾಟುಗಳು ನಡೆಯಲಾರವು. ಹಾಗಾಗಿ ನೀವು ಉನ್ನತ ಮಟ್ಟ ಏರಲು ಹಾಗೂ ನಿಮ್ಮ ಗುರಿಯನ್ನು ತಲುಪಲು ಅಧಿಕ ಶ್ರಮವನ್ನು ವಹಿಸಬೇಕು ಎಂದು ಹೇಳಲಾಗುತ್ತದೆ. ಕೆಲಸದ ಆರಂಭದಲ್ಲಿ ತಂದೆ ಅಥವಾ ಮನೆಯ ಹಿರಿಯ ಜನರಿಂದ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ.

ಕರ್ಕ

ಕರ್ಕ

ಈ ರಾಶಿಯಲ್ಲಿ ಹುಟ್ಟಿದವರಿಗೆ ತಮ್ಮ ಜೀವನ ಸಾಗಿಸಲು ಬೇಕಾದಷ್ಟು ಹಣವಿರುವುದು. ಇಷ್ಟು ಮಾತ್ರವಲ್ಲದೆ, ಇವರು ಪ್ರತಿಯೊಂದರಲ್ಲೂ ತುಂಬಾ ಸೂಕ್ಷ್ಮತೆ ಹೊಂದಿರುವ ಕಾರಣ ಸುತ್ತಲಿನವರು ಯಾರೂ ಇವರನ್ನು ದ್ವೇಷಿಸಲ್ಲ. ಇವರು ತಾವು ಕೆಲಸ ಮಾಡುವಂತಹ ಕಂಪನಿ ಪರವಾಗಿ ತುಂಬಾ ಕಠಿಣ ಶ್ರಮ ವಹಿಸುವ ಕಾರಣದಿಂದಾಗಿ ಬೇಗನೆ ಶ್ರೀಮಂತ ಹಾಗೂ ಜನಪ್ರಿಯರಾಗುವರು.

ತುಲಾ

ತುಲಾ

ತುಲಾ ರಾಶಿಯಲ್ಲಿ ಜನಿಸಿದವರು ರಾಜತಾಂತ್ರಿಕ, ಗೌರವಯುತ, ನ್ಯಾಯಯುತ, ಸಾಮಾಜಿಕ ಮತ್ತು ಸಹಕಾರಿಯಾಗಿರುವರು. ಯಶಸ್ಸು ಪಡೆಯಲು ಇವರಿಗೆ ಹೆಚ್ಚು ಸಮಯ ಬೇಕಿಲ್ಲ. ಇವರು ದ್ವೇಷ ಕಟ್ಟಿಕೊಳ್ಳುವರು. ಆದರೆ ಯಾವುದೇ ಜಗಳದಲ್ಲಿ ತೊಡಗಲ್ಲ. ಇದರಿಂದ ಅವರು ತಾವು ಯೋಚಿಸದೆ ಇರುವ ವಿಚಾರದಲ್ಲಿ ಸಂಕಷ್ಟದಲ್ಲಿ ಸಿಲುಕುವರು.

ವೃಶ್ಚಿಕ

ವೃಶ್ಚಿಕ

ಇವರು ತುಂಬಾ ಧೈರ್ಯಶಾಲಿ, ಸಂಪನ್ಮೂಲ ವ್ಯಕ್ತಿ ಹಾಗೂ ಹಠಮಾರಿಯಾಗಿರುವರು. ಇದು ವೃಶ್ಚಿಕ ರಾಶಿಯವರ ಒಂದು ಬಗೆ. ಇನ್ನೊಂದು ಮುಖವೆಂದರೆ ಬೇಗನೆ ಅಸೂಯೆ ಪಡುವರು, ಯಾರನ್ನೂ ನಂಬಲ್ಲ ಮತ್ತು ತುಂಬಾ ರಹಸ್ಯ ಕಾಪಾಡುವ ಕಾರಣ ಇವರ ಸಂಪತ್ತು ಹೊರಜಗತ್ತಿಗೆ ತಿಳಿಯಲ್ಲ.

For Quick Alerts
ALLOW NOTIFICATIONS
For Daily Alerts

    English summary

    This is the Zodiac Sign Most Billionaires!

    Who does not wish to be rich? We all dream of becoming rich and these zodiac signs are said to get richer sooner when compared to other zodiac signs! Here is the list of zodiac signs that are said to get lucky with wealth and people born under these zodiac signs are considered to be really blessed! So, check out if you are in the list of the lucky zodiac signs that are considered to be rich by default!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more