For Quick Alerts
ALLOW NOTIFICATIONS  
For Daily Alerts

ಶ್! ಸೆಕ್ಸ್ ಬಗೆಗಿನ ಈ ಗುಟ್ಟಿನ ವಿಷಯಗಳು ನಿಮಗೆ ತಿಳಿದಿರಲಿಕ್ಕೆ ಇಲ್ಲ!

|

ಹೌದು, ಹೀಗೂ ಆಗಬಹುದು, ಸಾಂಗತ್ಯದ ಸಮಯದಲ್ಲಿ ದನಿ ಏರಬಹುದು, ಹೆಚ್ಚೇ ಏರಬಹುದು. ವಾಸ್ತವದಲ್ಲಿ, ಭಾರತದಂತಹ ಸಾಂಪ್ರಾದಾಯಿಕ ದೇಶದಲ್ಲಿ ಸೆಕ್ಸ್ ಅಥವಾ ಲೈಂಗಿಕತೆಯ ಬಗ್ಗೆ ಜನರಿಗೆ ತಿಳಿದಿರುವ ಮಾಹಿತಿ ಕಡಿಮೆ. ಇದೇ ಕಾರಣದಿಂದ ಸಾಂಗತ್ಯದ ವಿಷಯದಲ್ಲಿ ಹೆಚ್ಚಿನವರು ಅತಿ ಮುಜುಗರದ ಅಥವಾ ಸವಾಲಿನ ಸಂದರ್ಭವನ್ನು ಎದುರಿಸುತ್ತಾರೆ. ಲೈಂಗಿಕ ಸಂಪರ್ಕ ಎಲ್ಲರಿಗೂ ಇಷ್ಟವೇ ಆಗಿದ್ದರೂ ಇದೇನೂ ಸಿನಿಮಾಗಳಲ್ಲಿ ಪ್ರಸ್ತುತಪಡಿಸಿದಷ್ಟು ವೈಭಯಯುತ ಅಥವಾ ರೋಚಕವಾಗಿಯೇನೂ ಇರುವುದಿಲ್ಲ. ವಾಸ್ತವವಾಗಿ ಈ ಕ್ರಿಯೆ ಸಾಮಾನ್ಯವಾಗಿ ಗಜಿಬಿಜಿಯಾಗಿರುತ್ತದೆ (ಅಕ್ಷರಶಃವಾಗಿಯೂ, ಸಾಂಕೇತಿಕವಾಗಿಯೂ)

ಕೆನಡಾದಲ್ಲಿರುವ ವಿಡೆನರ್ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ರಾ಼ಶೆಲ್ ಮೌಲ್ದಿಂಗ್ ರವರ ಪ್ರಕಾರ "ಸೆಕ್ ಬಗ್ಗೆ ನಮಗೆ ಚಿಕ್ಕಂದಿರುವಾಗ ತಿಳಿಸಿದ್ದ ಮಾಹಿತಿಗಳೇ ನಿಜವಾಗಿರಬೇಕಾಗಿಲ್ಲ, ನನ್ನ ಸುತ್ತ ಮುತ್ತಲಿರುವ ಮಹಿಳೆಯರಲ್ಲಿ ಹಲವರು ಭಗ್ನಹೃದಯಿಗಳೂ ಲೈಂಗಿಕ ಸುಖವಂಚಿತರೂ ಆಗಿರುವುದು ಕಂಡುಬಂದಿದೆ. ನನ್ನಲ್ಲಿರುವ ಲೈಂಗಿಕ ಶಿಕ್ಷಣ ಮಾಹಿತಿಯಿಂದ ಈ ಮಹಿಳೆಯರಿಗೆ ಬಹಳವೇ ನೆರವಾಗಲಿದೆ" ಈ ವಿಷಯದ ಬಗ್ಗೆ ಆಕೆ ವಿವರಿಸುವ ಲೈಂಗಿಕ ಸಂಪರ್ಕದ ಬಗೆಗಿನ ಕೆಲವು ವಿಷಯಗಳು ನಿಮಗೆ ಇದುವರೆಗೆ ಯಾರೂ ತಿಳಿಸದೇ ಇರುವಂತಹದ್ದಾಗಿದ್ದು ಈ ಬಗ್ಗೆ ಪ್ರತಿ ವಯಸ್ಕರೂ ತಿಳಿದುಕೊಂಡಿರಬೇಕಾಗಿರುವುದು ಅವಶ್ಯವಾಗಿದೆ.

 ಮಹಿಳೆಯರೂ ಸ್ಖಲಿಸುತ್ತಾರೆ!

ಮಹಿಳೆಯರೂ ಸ್ಖಲಿಸುತ್ತಾರೆ!

ಲೈಂಗಿಕ ಸಂಪರ್ಕದ ಅವಧಿ ಮುಗಿದ ಬಳಿಕ ನೀವು ಹಾಗೂ ನಿಮ್ಮ ಸಂಗಾತಿ ತೃಪ್ತಿಯಿಂದ ಪವಡಿಸಿರುವ ಸಮಯದಲ್ಲಿಯೇ.... ಅರೆರೆ ಇದೇನಾಗುತ್ತಿದೆ? ನಿಮಗೆ ಅನಿಯಂತ್ರಿತವಾಗಿ ಮೂತ್ರ ವಿಸರ್ಜಿಸುತ್ತಿರುವ ಅನುಭವವಾಗುತ್ತಿದೆಯೇ? ಇದು ಏನಾಗುತ್ತಿದೆ? ಬೆಚ್ಚಗಿನ ಹಾಗೂ ತೇವವಾದ ಅನುಭವ ಅಲ್ಲೇಕೆ ಆಗುತ್ತಿದೆ?

 ಮಹಿಳೆಯರೂ ಸ್ಖಲಿಸುತ್ತಾರೆ!

ಮಹಿಳೆಯರೂ ಸ್ಖಲಿಸುತ್ತಾರೆ!

"ಹೆಚ್ಚಿನ ಮಹಿಳೆಯರು ಈ ಅನುಭವ ಪ್ರಥಮವಾಗಿದ್ದರೆ ಈ ಬಗ್ಗೆ ಭಾರೀ ಆಘಾತವನ್ನು ಎದುರಿಸುತ್ತಾರೆ ಹಾಗೂ ತನ್ನಿಂದೇನೋ ತಪ್ಪಾಗಿದೆ ಎಂಬ ಭಾವನೆ ಮತ್ತು ಮುಜುಗರವನ್ನು ಅನುಭವಿಸುತ್ತಾರೆ. ತಮ್ಮ ಸಂಗಾತಿಯ ಮೇಲೆ ತಮ್ಮ ಮೂತ್ರ ಚೆಲ್ಲಿ ಗಲೀಜಾದ ಬಗ್ಗೆ ತಪ್ಪಿತಸ್ಥ ಭಾವನೆ ಎದುರಿಸುತ್ತಾರೆ. ಈ ಮಾಹಿತಿಯನ್ನು ಅರಿಯದ ಅವರ ಸಂಗಾತಿಯರೂ ಮಹಿಳೆಯರೇ ಬೇಕಾಗಿ ಮೂತ್ರ ವಿಸರ್ಜಿಸಿದರೆಂಬ ಭಾವನೆ ಮೂಡಿಸಿಕೊಳ್ಳುತ್ತಾರೆ. ಆದರೆ ಮೌಲ್ಡಿಂಗ್ ರವರ ಪ್ರಕಾರ "ಇದು ಮೂತ್ರವಿಸರ್ಜನೆಯಲ್ಲ, ಬದಲಿಗೆ ಇದಕ್ಕೆ ಸಂಪೂರ್ಣವಾಗಿ ವಿರುದ್ದವಾದ ಪ್ರತಿಕ್ರಿಯೆಯಾಗಿದೆ. ಇದು ಮಹಿಳಾ ಸ್ಖಲನವಾಗಿದ್ದು ಇದು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಹಾಗೂ ಈ ಸ್ಥಿತಿ ಎಲ್ಲ ಮಹಿಳೆಯರಲ್ಲಿ ಕಾಣಲಾಗದು, ಆದರೆ ಕೆಲವು ಮಹಿಳೆಯರಲ್ಲಿ ಹೆಚ್ಚೇ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಈ ಸ್ಖಲನದ ಪ್ರಮಾಣ ಎರಡು ದೊಡ್ಡ ಚಮಚದಿಂದ ಎರಡು ಕಪ್ ನಷ್ಟಿದ್ದು ಇದು ನೀರಿನಂತೆ ತೆಳುವಾಗಿದ್ದು ನೀರಿನಂತೆಯೇ ಬಣ್ಣರಹಿತವಾಗಿರುತ್ತದೆ ಹಾಗೂ ಕೊಂಚ ಲಿಂಬೆಯ ಹುಳಿಮಿಶ್ರಿತ ವಾಸನೆ ಹೊಂದಿರುತ್ತದೆ ಹಾಗೂ ಎರಡು ಬೆರಳುಗಳ ನಡುವೆ ಉಜ್ಜಿಕೊಂಡಾಗ ಕೊಂಚ ಸೋಪಿನಂತೆ ಅಂಟುಅಂಟಾಗಿರುತ್ತದೆ. ಈ ಸ್ಖಲನದ ಬಗ್ಗೆ ಸರ್ವಥಾ ತಪ್ಪಿತಸ್ಥ ಭಾವನೆ ಹೊಂದಬೇಕಾಗಿಲ್ಲ, ವಾಸ್ತವವಾಗಿ ಈ ಬಗ್ಗೆ ಸಂತೋಷ ಪಡಬೇಕು. ಈ ಸ್ಖಲನ ಕಾಮತೃಪ್ತಿಯ ಸಂಕೇತವಾಗಿದ್ದು ಇದನ್ನು ಪಡೆದ ಬಗ್ಗೆ ಹೆಮ್ಮೆ ಪಡಬೇಕು"

ಕೆಲವೊಮ್ಮೆ ಜಾರುಕದ ಅವಶ್ಯಕತೆಯೂ ಇರುತ್ತದೆ

ಕೆಲವೊಮ್ಮೆ ಜಾರುಕದ ಅವಶ್ಯಕತೆಯೂ ಇರುತ್ತದೆ

ಕೆಲವೊಮ್ಮೆ, ಏಕೋ ಸರಿಯಾಗಿಲ್ಲ ಎಂದೆನಿಸುತ್ತದೆ. ಮೊದಲು ಯಾವುದೇ ತೊಂದರೆ ಇಲ್ಲದಿದ್ದು ಈಗ ಏಕೋ ಕೊಂಚ ಘರ್ಷಣೆಯ ಅನುಭವವಾಗುತ್ತಿದೆಯಲ್ಲಾ? ವಾಸ್ತವವಾಗಿ ಮಿಲನದ ಸಮಯದಲ್ಲಿ ಪ್ರತಿ ಚಲನೆಯೂ ಅಕ್ಷರಶಃ ಮತ್ತು ಸಾಂಕೇತಿಕವಾಗಿ ಅತಿ ಸೌಮ್ಯ ಹಾಗೂ ನುಣುಪಾಗಿರಬೇಕೆಂದು ನಾವು ಅಂದುಕೊಳ್ಳುತ್ತೇವೆ. ಹಾಗಾಗಿ ಒಂದು ವೇಳೆ ನೈಸರ್ಗಿಕವಾಗಿ ಇದು ಲಭಿಸದಿದ್ದರೆ ಇದು ವಯೋಸಹಜವಾಗಿ ದೇಹದಲ್ಲಿ ಕೊರತೆಯಾಗಿದ್ದು ಇದನ್ನು ಸರಿದೂಗಿಸಲು ಜಾರುಕದ್ರವವನ್ನು ಬಳಸಬೇಕಾಗುತ್ತದೆ ಎಂದು ಮೌಲ್ದಿಂಗ್ ರವರು ವಿವರಿಸುತ್ತಾರೆ. ಪ್ರತಿ ಮಹಿಳೆಯ ಮಾಸಿಕ ದಿನಗಳ ನಡುವಣ ಅವಧಿಯಲ್ಲಿ ಎರಡು ದಿನಗಳ ಸಮಯದಲ್ಲಿ ಜಾರುಕ ದ್ರವ ಉತ್ಪತ್ತಿಯಾಗುವುದೇ ಇಲ್ಲ ಅಥವಾ ಅತಿ ಕಡಿಮೆ ಉತ್ಪತ್ತಿಯಾಗುತ್ತದೆ. ಈ ದಿನಗಳಲ್ಲಿ ನಡೆಸುವ ಮಿಲನಕ್ರಿಯೆ ಒಣದಾಗಿರುವಂತೆ ಅನ್ನಿಸುತ್ತದೆ. ಒಂದು ವೇಳೆ ಇದರ ಬಗ್ಗೆ ಅರಿವಿಲ್ಲದೇ ಹೆಚ್ಚಿನ ಒತ್ತಡ ಮತ್ತು ಘರ್ಷಣೆ ಒದಗಿಸಿದರೆ ಇದು ಜನನಾಂಗದ ಒಳಪದರಗಳನ್ನು ಹರಿಯಬಹುದು! ಹೀಗಾದರೆ ಆ ಸಮಯದಲ್ಲಿ ನೋವು ಕಾಣಿಸಿಕೊಳ್ಳದೇ ಇದ್ದರೂ ಮರುದಿನ ಮಹಿಳೆ ಮೂತ್ರ ವಿಸರ್ಜಿಸುವಾಗ ಅಪಾರ ನೋವು ಅನುಭವಿಸುತ್ತಾಳೆ. ಹಾಗಾಗಿ ಕೊಂಚವೂ ನುಣುಪುತನ ಕಡಿಮೆ ಎಂದೆನಿಸಿದರೂ ಜಾರುಕದ್ರವವಿಲ್ಲದೇ ಮುಂದುವರೆಯಬಾರದು.

ಕೆಲವೊಮ್ಮೆ ಜನನಾಂಗಗಳು ಹೊಂದಿಕೆಯಾಗುವುದಿಲ್ಲ!

ಕೆಲವೊಮ್ಮೆ ಜನನಾಂಗಗಳು ಹೊಂದಿಕೆಯಾಗುವುದಿಲ್ಲ!

ಕೆಲವು ಸಂದರ್ಭಗಳಲ್ಲಿ ಇಬ್ಬರೂ ಪರಸ್ಪರ ಹತ್ತಿರಾಗಿದ್ದು, ಪುರುಷ ಕಾಂಡೋಂ ಧರಿಸಿ ಸಜ್ಜಾಗಿದ್ದರೂ, ಏಕೋ ಏನೋ, ಸರಿಯಾಗಿ ಕೆಲಸ ಆಗುವುದೇ ಇಲ್ಲ. ನೀವು ಮತ್ತೊಮ್ಮೆ ಪ್ರಯತ್ನಿಸುತ್ತೀರಾದರೂ ಈಗಲೂ ಫಲಿತಾಂಶವಿಲ್ಲ. ಹಲವು ಪ್ರಯತ್ನಗಳೂ ಹೀಗೇ ಅಯಶಸ್ವಿಯಾಗಿದ್ದರೆ ಇದಕ್ಕೆ ನೀವು ಯೋಚಿಸಿರದ ಕೆಲವು ಸಂಗತಿಗಳು ಕಾರಣವಾಗಿರಬಹುದು! ಹೆಚ್ಚಾಗಿ ಈ ಕಾರಣಗಳು ಮಾನಸಿಕವೇ ಆಗಿರುತ್ತವೆ. ಮೊದಲಾಗಿ ಇಬ್ಬರೂ ಪರಸ್ಪರರಲ್ಲಿ ಒಂದಾಗಲು ಮಾನಸಿಕರಾಗಿ ಸಿದ್ದರಿದ್ದೀರೇ ಎಂಬುದನ್ನು ಕಂಡುಕೊಳ್ಳಬೇಕು. ಇಬ್ಬರಲ್ಲೊಬ್ಬರ ಮನದಲ್ಲಿ ಮೂರನೆಯ ವ್ಯಕ್ತಿ ಇದ್ದರೆ, ಇದು ಮಾನಸಿಕವಾಗಿ ಆ ವ್ಯಕ್ತಿಯನ್ನು ಮಿಲನಕ್ರಿಯೆ ನಡೆಸದಂತೆ ತಡೆಯುತ್ತದೆ. ಹಾಗಾಗಿ ದಂಪತಿಗಳ ನಡುವೆ ಪರಸ್ಪರ ಬದ್ದತೆ, ವಿಶ್ವಾಸ ಅತಿ ಮುಖ್ಯವಾಗಿದೆ. ಈ ಕಾರಣಗಳಿಲ್ಲದೇ ಇದ್ದರೂ ಪ್ರವೇಶ ಸುಲಭಸಾಧ್ಯವಾಗದೇ ಹೋದರೆ ಜಾರುಕದ್ರವವನ್ನು ಧಾರಾಳವಾಗಿ ಬಳಸಿಕೊಳ್ಳಬೇಕು.

ಮಿಲನಕ್ರಿಯೆಯ ಬಳಿಕ ನಿದ್ದೆಗೆ ಜಾರುವುವು ಇಬ್ಬರಿಗೂ ಸಾಮಾನ್ಯ

ಮಿಲನಕ್ರಿಯೆಯ ಬಳಿಕ ನಿದ್ದೆಗೆ ಜಾರುವುವು ಇಬ್ಬರಿಗೂ ಸಾಮಾನ್ಯ

ಸಾಮಾನ್ಯವಾಗಿ ಮಿಲನಕ್ರಿಯೆ ಮುಗಿದಾಕ್ಷಣ ಪುರುಷರು ನಿದ್ದೆಗೆ ಜಾರಿಬಿಡುತ್ತಾರೆ. ಮಹಿಳೆಯರೂ ಅಷ್ಟೇ! ಇದಕ್ಕೆ ಚಿಂತೆಗೇನೂ ಕಾರಣವಿಲ್ಲ. ಇದು ನೈಸರ್ಗಿಕವಾಗಿದ್ದು ಲೈಂಗಿಕ ಚಟುವಟಿಕೆಯ ಮೂಲಕ ಪಡೆದ ಕಾಮಪರಾಕಾಷ್ಠೆಯ ಪರಿಣಾಮವಾಗಿದೆ. ಮೌಲ್ಡಿಂಗ್ ರವರ ಪ್ರಕಾರ 'ಒಂದು ವೇಳಿ ನಿಮಗೆ ಚಂದ್ರನಾಡಿಯ ತೀಡುವಿಕೆಯಿಂದ ಕಾಮಪರಾಕಾಷ್ಠೆ ಲಭಿಸಿದ್ದರೆ ಬಳಿಕ ಸುಮಾರು ಅರ್ಧ ಘಂಟೆಯಾದರೂ ನೀವು ಹೆಚ್ಚು ಮಾತನಾಡಬಯಸುತ್ತೀರಿ ಹಾಗೂ ಒಂದು ವೇಳೆ ಜಿ-ಸ್ಪಾಟ್ ಅಥವಾ ಚಂದ್ರನಾಡಿಗಿಂತಲೂ ಹಿಂದೆ, ಯೋನಿಯ ಒಳಭಾಗದ ಮೇಲ್ಭಾಗದಲ್ಲಿರುವ ನೆರಿಗೆ ನೆರಿಗೆಯಾದ ಭಾಗದ ತೀಡುವಿಕೆಯಿಂದ ಕಾಮಪರಾಕಾಷ್ಠೆ ಲಭಿಸಿದ್ದರೆ ನೀವು ತಕ್ಷಣವೇ ಮಲಗಿಬಿಡುತ್ತೀರಿ. ಸಾಮಾನ್ಯವಾಗಿ ಪುರುಷರು ಸ್ಖಲನಗೊಂಡ ಮರುನಿಮಿಷದಲ್ಲಿಯೇ ನಿದ್ದೆಗೆ ಜಾರಿಬಿಡುತ್ತಾರೆ. ಹಾಗಾಗಿ ಈ ಹೊತ್ತಿನಲ್ಲಿ ನೀವು ಎಚ್ಚರಾಗಿದ್ದು ಇನ್ನೂ ಬೇಕೆನಿಸುತ್ತಿದ್ದು ನಿಮ್ಮ ಸಂಗಾತಿ ಮಲಗಿದ್ದರೆ ಸರ್ವಥಾ ಚಿಂತಿಸದಿರಿ. ಇದು ಪುರುಷ-ಮಹಿಳೆಯರ ನಡುವಣ ವ್ಯತ್ಯಾಸದಲ್ಲಿ ಪ್ರಮುಖವಾಗಿದ್ದು ನೈಸರ್ಗಿಕವಾಗಿದೆ. ನೆನಪಿರಲಿ, ಪುರುಷರ ಮೆದುಳು ಸ್ಖಲನದ ಬಳಿಕ ನಾರ್ಕೋಲೆಪ್ಸಿ ಅಥವಾ ಹಗಲುನಿದ್ದೆಯ ಸ್ಥಿತಿಯನ್ನು ತಕ್ಷಣ ತಲುಪುತ್ತದೆ. ಹಾಗಾಗಿ ಇವರು ನಿಮ್ಮನ್ನು ನಿರ್ಲಕ್ಷಿಸುತ್ತಿಲ್ಲ ಹಾಗೂ ನಿದ್ದೆಗೆ ಜಾರುವುದು ಅವರಿಗೆ ಸ್ವಾಭಾವಿಕವಾಗಿ ಆಗುತ್ತದೆ. ಆತ ನಿದ್ದೆಗೆ ಜಾರಿದನೆಂದರೆ ಆತನಿಗೂ ಕಾಮಪರಾಕಾಷ್ಠೆಯ ಅನುಭವವಾಗಿದೆ ಹಾಗೂ ನಿಮ್ಮಿಂದಲೇ ಲಭಿಸಿದೆ ಎಂಬ ಭಾವನೆಯೇ ಇರುತ್ತದೆಯೇ ವಿನಃ ಆತ ನಿಮ್ಮನ್ನು ಸರ್ವಥಾ ಕಡೆಗಣಿಸುತ್ತಿಲ್ಲ.

ಒಂದೇ ಬಗೆಯ ಗರ್ಭನಿರೋಧಕ ಗುಳಿಗೆ ಅಥವಾ ಕಾಂಡೋಮ್ ಗೆ ಜೋತುಬೀಳಬೇಕಾಗಿಲ್ಲ

ಒಂದೇ ಬಗೆಯ ಗರ್ಭನಿರೋಧಕ ಗುಳಿಗೆ ಅಥವಾ ಕಾಂಡೋಮ್ ಗೆ ಜೋತುಬೀಳಬೇಕಾಗಿಲ್ಲ

ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಪ್ರಯತ್ನಿಸುವ ಯಾವುದೇ ವಿಧಾನದಲ್ಲಿ ಕೆಲವು ವಿಷಯಗಳನ್ನು ಅರಿತಿರುವುದು ಆಗತ್ಯವಾಗಿದೆ. ಗರ್ಭನಿರೋಧಕ ಗುಳಿಗೆ ನಿಮ್ಮ ಲೈಂಗಿಕ ಅನುಭವದ ಮೇಲೆ ಪರಿಣಾಮವನ್ನುಂಟುಮಾಡಬಹುದು ಹಾಗೂ ಕೆಲವೊಮ್ಮೆ ನಿಮ್ಮ ಆಸಕ್ತಿಯನ್ನು ಕುಂದಿಸಿ ಜಾರುವಿಕೆಯನ್ನೂ ಕಡಿಮೆಗೊಳಿಸಬಹುದು. ಮೊದಲೇ ತಿಳಿಸಿದಂತೆ ತಿಂಗಳಿಗೆ ಕಾಡುವ ಎರಡು ದಿನಗಳ ಒಣ ಅನುಭವವನ್ನು ಹೆಚ್ಚಿನ ದಿನಗಳಿಗೆ ವಿಸ್ತರಿಸಬಹುದು! ಈ ದಿನಗಳಲ್ಲಿ ಹೆಚ್ಚೇ ಜಾರುಕದ್ರವವನ್ನು ಬಳಸಬೇಕಾಗಿ ಬರಬಹುದು. ಇವೆಲ್ಲವೂ ಈ ಗುಳಿಗೆಗಳ ಅಡ್ಡಪರಿಣಾಮಗಳಾಗಿವೆ. ಒಂದು ವೇಳೆ ಈ ಅಡ್ಡಪರಿಣಾಮಗಳು ಹೆಚ್ಚೇ ಆಗಿದ್ದರೆ ಈ ಗುಳಿಗೆಗಳನ್ನು ಬದಲಿಸುವುದೊಳಿತು. ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ ಮಾತ್ರೆಗಳು ಲಭ್ಯವಿವೆ ಹಾಗೂ ಒಂದು ವೇಳೆ ನಿಮ್ಮ ಇತರ ಅನಾರೋಗ್ಯಕ್ಕಾಗಿ ಸೇವಿಸುವ ಔಷಧಿಗಳೂ ನಿಮ್ಮ ಕಾಮಜೀವನದ ಮೇಲೆ ಪ್ರಭಾವ ಬೀರಿದ್ದರೆ ಈ ಬಗ್ಗೆ ನಿಮ್ಮ ಪ್ರಸೂತಿತಜ್ಞ ವೈದ್ಯರು ಹೆಚ್ಚಿನ ನೆರವು ನೀಡಬಲ್ಲರು. ಇದೇ ರೀತಿ ಪುರುಷರೂ ತಮಗೆ ಇಷ್ಟವಾಗುವ ಹಾಗೂ ಸೂಕ್ತವಾಗುವ ಕಾಂಡೋಂಗಳನ್ನು ಬದಲಿಸಿಕೊಳ್ಳಬೇಕು.

ಕೆಲವೊಮ್ಮೆ ಮಿಲನಕ್ರಿಯೆಯಿಂದ ರಕ್ತಸ್ರಾವವೂ ಎದುರಾಗುತ್ತದೆ

ಕೆಲವೊಮ್ಮೆ ಮಿಲನಕ್ರಿಯೆಯಿಂದ ರಕ್ತಸ್ರಾವವೂ ಎದುರಾಗುತ್ತದೆ

ಮಿಲನ ಕ್ರಿಯೆಯ ಬಳಿಕ ಹಾಸಿಗೆಯ ಹೊದಿಕೆಯ ಮೇಲೆ ರಕ್ತಸ್ರಾವ ಕಂಡುಬರಬಹುದು. ಇದಕ್ಕೆ post-coital bleeding ಅಥವಾ PCB ಎಂದು ಕರೆಯುತ್ತಾರೆ. ಧೃಢೀಕೃತ ಹಾಗೂ ಅನುಭವಿ ದಾದಿಯಾಗಿರುವ ಜ್ಯಾನೆಟ್ ಹ್ಯಾರಿಸನ್ ಹೋಹ್ನರ್ ರವರು ವೆಬ್ ಎಂಡಿ ಎಂಬ ತಾಣದಲ್ಲಿ ಬರೆದಿರುವ ಲೇಖನದ ಪ್ರಕಾರ, ಈ ಸ್ರಾವಕ್ಕೆ ಕೆಲವು ಕಾರಣಗಳಿವೆ. ಮೊದಲನೆಯದು ಗರ್ಭಕಂಠಕ್ಕೆ ಸಂಬಂಧಿಸಿದ್ದಾಗಿದೆ. ಕೆಲವು ಮಹಿಳೆಯರಲ್ಲಿ ಈ ಭಾಗ ಕೊಂಚ ಹೆಚ್ಚೇ ತೆರೆದಿದ್ದು ಈ ಭಾಗದಲ್ಲಿ ಗ್ರಂಥಿಗಳಂತೆ ಊದಿಕೊಂಡಿರುತ್ತದೆ. ಇದಕ್ಕೆ cervical ectopi ಎಂದು ಕರೆಯುತ್ತಾರೆ. ಈ ಮಹಿಳೆಯರನ್ನು ತಪಾಸಣೆಗೊಳಿಸಲು ವೈದ್ಯರು ಬಳಸುವ PAP smear ಎಂಬ ಉಪಕರಣ ತಾಕಿದರೂ ಈ ಭಾಗದಿಂದ ರಕ್ತಸ್ರಾವವಾಗುತ್ತದೆ. ಹೀಗಿದ್ದಾಗ ಈ ಮಹಿಳೆಯರಿಂದ ರಕ್ತಸ್ರಾವವನ್ನು ಸದಾ ನಿರೀಕ್ಷಿಸಬಹುದು. ಉಳಿದಂತೆ ಹದಿಹರೆಯದ ತರುಣಿಯರು, ಗರ್ಭನಿರೋಧಕ ಗುಳಿಗೆಗಳ ಪರಿಣಾಮ ಅಥವಾ ಗರ್ಭಾವಸ್ಥೆ ತಲುಪಿರುವುದು ಮೊದಲಾದವೂ cervical ectopi ಸ್ಥಿತಿಯನ್ನು ಪ್ರಕಟಿಸಬಹುದು.

English summary

Things No One Ever Told You About Sex

Yup, it happens. People can be loud during sex. Really loud. Actually, there’s a lot of things we don’t know about sex because we’ve never been shown the more challenging or embarrassing aspects of it. As much as we would like it to be, sex isn’t always like the movies—it’s not smooth and perfect, it’s not seamless. In fact, it can get quite messy (literally and figuratively).
X
Desktop Bottom Promotion