For Quick Alerts
ALLOW NOTIFICATIONS  
For Daily Alerts

ನಿಮಗೆ ಮಹಿಳೆಯರ ದೇಹದ ಬಗ್ಗೆ ತಿಳಿಯದೇ ಇರುವ ಕೆಲವೊಂದು ಸಂಗತಿಗಳು

|

ಭಾರತದಲ್ಲಿ ಲೈಂಗಿಕ ಶಿಕ್ಷಣವೆನ್ನುವುದು ಗಗನಕುಸುವಾಗಿದೆ. ಹೀಗೀಗ ಅಲ್ಲಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ನೀಡುತ್ತಲಿದ್ದರೂ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿಲ್ಲ. ನಮ್ಮ ದೇಹ ಹಾಗೂ ಅದಕ್ಕೆ ಬೇಕಾಗಿರುವಂತಹ ಅಗತ್ಯತೆಗಳ ಬಗ್ಗೆ ಅರಿವು ನಮಗಿರಬೇಕು. ಇಲ್ಲವಾದಲ್ಲಿ ಅದನ್ನು ಬೇರೆಯವರು ಬಂದು ದುರುಪಯೋಗ ಪಡಿಸಿಕೊಳ್ಳುವರು. ಲೈಂಗಿಕ ಶಿಕ್ಷಣವು ಸರಿಯಾಗಿದ್ದರೆ ಹದಿಹರೆಯದವರು ಕೆಟ್ಟ ಬಲೆಗೆ ಸಿಲುಕುವುದು ತಪ್ಪುವುದು.

ಆದರೆ ನಮ್ಮ ದೇಶದಲ್ಲಿ ಸೆಕ್ಸ್ ಎನ್ನುವ ಪದ ಬಂದರೆ ಅಂತಹ ವ್ಯಕ್ತಿಯನ್ನು ದುರುಗುಟ್ಟಿ ನೋಡುವವರೇ ಹೆಚ್ಚಾಗಿದ್ದಾರೆ. ಇದರಲ್ಲೂ ಮಹಿಳೆಯರು ತಮ್ಮ ದೇಹದ ಬಗ್ಗೆ ಹೇಳಿಕೊಳ್ಳಲು ತುಂಬಾ ಮುಜುಗರಪಡುವರು. ಇದರಿಂದಾಗಿ ಹಲವಾರು ಕಾಯಿಲೆಗಳು ಮೊದಲ ಹಂತದಲ್ಲಿ ಪತ್ತೆಯಾಗದೆ ಪ್ರಾಣಹಾನಿಯಾಗುವುದು ಇದೆ. ಮಹಿಳೆಯರ ದೇಹ ಹಾಗೂ ಲೈಂಗಿಕತೆ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಸ್ತನಗಳ ತೊಟ್ಟಿನ ಸುತ್ತ ಕೂದಲು ಇರಬಹುದು

ಸ್ತನಗಳ ತೊಟ್ಟಿನ ಸುತ್ತ ಕೂದಲು ಇರಬಹುದು

ಯುವಕನೊಬ್ಬ ಆನ್ ಲೈನ್ ನಲ್ಲಿ ಸೆಕ್ಸ್ ಬಗ್ಗೆ ವಿಚಾರಿಸುವಂತಹ ಸಮಯದಲ್ಲಿ ಈ ಪ್ರಶ್ನೆ ಕೇಳಿದ್ದಾರೆ. ತನ್ನ ಸಂಗಾತಿಯ ಸ್ತನಗಳ ತೊಟ್ಟಿನ ಸುತ್ತಲು ಕೂದಲು ಬೆಳೆದಿರುವ ಕಾರಣದಿಂದ ಇದು ಅಸಾಮಾನ್ಯ ಮತ್ತು ಇದಕ್ಕೆ ಚಿಕಿತ್ಸೆ ಬೇಕೆಂದು ಆತ ಭಾವಿಸಿದ್ದ. ಇದು ಕೇವಲ ಆತನೊಬ್ಬನ ತಪ್ಪಲ್ಲ. ಯಾಕೆಂದರೆ ನಮಗೆ ಲೈಂಗಿಕ ಶಿಕ್ಷಣವೇ ಸಿಕ್ಕಿಲ್ಲ. ಸ್ತನಗಳ ತೊಟ್ಟಿನ ಸುತ್ತಲು ಕೂದಲು ಇರುವುದು ಸಾಮಾನ್ಯ. ಔಷಧಿ ಮತ್ತು ಹಾರ್ಮೋನುಗಳಿಂದ ಇದು ಬರಬಹುದು. ಆದರೆ ಇದು ಸಾಮಾನ್ಯ.

Most Read: ಪುರುಷರ ಸೆಕ್ಸ್ ಪರಾಕಾಷ್ಠೆ: ನಿಮಗೆ ಇಂತಹ 7 ಸಂಗತಿಗಳು ತಿಳಿದಿದೆಯಾ?

ಸ್ತನಗಳು ಕುಗ್ಗುವುದು

ಸ್ತನಗಳು ಕುಗ್ಗುವುದು

ನೀವು ಕೇವಲ ಇಂಟರ್ನೆಟ್ ನಲ್ಲೇ ಇದನ್ನು ನೋಡಿಕೊಂಡು ನಿಜಜೀವನದಲ್ಲಿ ಇದನ್ನು ನೋಡದೇ ಇದ್ದರೆ ಆಗ ಖಂಡಿತವಾಗಿಯೂ ನಿಮಗೆ ದೊಡ್ಡ ಮಟ್ಟದ ನಿರಾಶೆಯಾಗುವುದು ಖಚಿತ. ನಿಜವಾದ ಸ್ತನಗಳು ಅಷ್ಟು ಬಿಗಿಯಾಗಿರಲ್ಲ. ನೀವು ಸಿನಿಮಾ ಅಥವಾ ಬೇರೆ ಮಾಧ್ಯಮಗಳಲ್ಲಿ ನೋಡಿದಷ್ಟು ಬಿಗಿಯಂತೂ ಇರಲ್ಲ.

ಸ್ತನಗಳು ಒಂದೇ ರೀತಿಯಾಗಿ ಇಲ್ಲದಿರಬಹುದು

ಸ್ತನಗಳು ಒಂದೇ ರೀತಿಯಾಗಿ ಇಲ್ಲದಿರಬಹುದು

ಎರಡು ಸ್ತನಗಳು ಒಂದೇ ರೀತಿಯಾಗಿ ಇಲ್ಲದೆ ಇರುವುದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಎಡಭಾಗದ ಸ್ತನ ದೊಡ್ಡದಾಗಿದ್ದು, ಬಲಭಾಗದ ಸ್ತನದ ಚಿಕ್ಕದಿರಬಹುದು. ಹೀಗೆ ಬಲದ ಸ್ತನ ದೊಡ್ಡದಾಗಿ, ಎಡದ ಸ್ತನ ಚಿಕ್ಕದಿರಬಹುದು. ಇದರಿಂದ ನಿಮ್ಮ ಸ್ತನಗಳು ಅಸ್ಥಿರವಾಗಿದೆ ಅಥವಾ ಯಾವುದೇ ಕಾಯಿಲೆಯಿದೆ ಎಂದು ಭಾವಿಸಬೇಡಿ.

ಮೊದಲ ಸಲದ ಸೆಕ್ಸ್ ಗೆ ಮೊದಲೇ ಕನ್ಯತ್ವ ಪೊರೆ ಹರಿದಿರಬಹುದು

ಮೊದಲ ಸಲದ ಸೆಕ್ಸ್ ಗೆ ಮೊದಲೇ ಕನ್ಯತ್ವ ಪೊರೆ ಹರಿದಿರಬಹುದು

ಮಹಿಳೆಯರು ಮೊದಲ ಸಲ ಸೆಕ್ಸ್ ಗೆ ಒಳಗಾದಾಗ ರಕ್ತಸ್ರಾವವಾಗುವುದು ಎನ್ನುವಂತಹ ಕೆಲವೊಂದು ಮೂಢನಂಬಿಕೆಗಳು ಇವೆ. ಕನ್ಯತ್ವ ಪೊರೆಯು ಹರಿದು ಹೀಗೆ ಆಗುವುದು ಎಂದು ನಂಬಲಾಗಿದೆ. ಆದರೆ ಮೊದಲ ಸಲ ಸೆಕ್ಸ್ ನಡೆಸುವ ಮೊದಲೇ ಸೈಕ್ಲಿಂಗ್ ಅಥವಾ ಬೇರೆ ಯಾವುದೇ ರೀತಿಯ ವ್ಯಾಯಾಮದ ವೇಳೆ ಇದು ಹರಿದುಹೋಗಬಹುದು.

Most Read: ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಯೋನಿಯ ವಾಸನೆಯು ಗುಲಾಬಿಯ ಸುವಾಸನೆ ಹೊಂದಿಲ್ಲ!

ಯೋನಿಯ ವಾಸನೆಯು ಗುಲಾಬಿಯ ಸುವಾಸನೆ ಹೊಂದಿಲ್ಲ!

ಯೋನಿಯ ವಾಸನೆಯು ಅಷ್ಟು ಒಳ್ಳೆಯದಿಲ್ಲ ಮತ್ತು ಸಂಗಾತಿಗೆ ಇದು ತಿಳಿದರೆ ನಿಮಗೆ ತುಂಬಾ ಮುಜುಗರವಾಗಬಹುದು ಎಂದು ಯೋಚಿಸಬಹುದು. ಪ್ರತಿಯೊಂದು ಯೋನಿಯಿಂದಲೂ ವಾಸನೆ ಬಂದೇ ಬರುವುದು. ಯಾಕೆಂದರೆ ಇದರಲ್ಲಿ ನೈಸರ್ಗಿಕ ಸುಗಂಧದ್ರವ್ಯವಿರುವುದು. ಆದರೆ ಇದು ಹಣ್ಣುಗಳು ಅಥವಾ ಗುಲಾಬಿಯ ಸುವಾಸನೆಯಲ್ಲ. ಕೊಳೆತ ಮೀನಿನಂತಹ ವಾಸನೆ ಬರದೆ ಇದ್ದರೆ ನಿಮ್ಮ ದೇಹವು ಸಾಮಾನ್ಯವಾಗಿದೆ ಎಂದು ಹೇಳಬಹುದು.

ಚಂದ್ರನಾಡಿಯು ಜೀವನಪೂರ್ತಿ ಬೆಳೆಯುವುದು

ಚಂದ್ರನಾಡಿಯು ಜೀವನಪೂರ್ತಿ ಬೆಳೆಯುವುದು

ಚಂದ್ರನಾಡಿಯ ಗಾತ್ರವು ಜೀವನಪೂರ್ತಿ ಬೆಳೆಯುತ್ತಲಿರುವುದು. ನೀವು ಋತುಚಕ್ರಕ್ಕೆ ಒಳಗಾದ ವೇಳೆ ಇದ್ದ ಗಾತ್ರಕ್ಕಿಂತ ಇದು ಮೂರು ಪಟ್ಟು ದೊಡ್ಡದಾಗಬಹುದು. ಚಂದ್ರನಾಡಿಯ ಗಾತ್ರವು ನಿಮಗೆ ಅಚ್ಚರಿಯನ್ನುಂಟು ಮಾಡುತ್ತಿದೆಯಾ? ಹಾಗಾದರೆ ನೀವೇ ಇದನ್ನು ಅಳತೆ ಮಾಡಿಕೊಂಡು ನೋಡಿ.

40ರಲ್ಲಿ ಪರಾಕಾಷ್ಠೆಯು ಉತ್ತಮ

40ರಲ್ಲಿ ಪರಾಕಾಷ್ಠೆಯು ಉತ್ತಮ

ಮೇಲೇ ಹೇಳಿರುವಂತಹ ವಿಚಾರಕ್ಕೆ ಇದು ಸಂಬಂಧಿಸಿದ್ದಾಗಿದೆ. ಯಾಕೆಂದರೆ ಹೆಚ್ಚಿನ ಮಹಿಳೆಯರಿಗೆ ಚಂದ್ರನಾಡಿಯು ಉತ್ತೇಜಿಸುವುದರಿಂದ ಹೆಚ್ಚಿನ ಖುಷಿ ಸಿಗುವುದು, 40ರ ಹರೆಯದಲ್ಲಿ ಸೆಕ್ಸ್ ಅದ್ಭುತವಾಗಿರುವುದು. ಹೆಚ್ಚಿನ ಮಹಿಳೆಯರು ವಯಸ್ಸಾದ ಹಾಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ನಾಚಿಗೆಪಡುವರು. ಆದರೆ ಸೆಕ್ಸ್ ನಡೆಸುವುದರಿಂದ ಹಲವಾರು ರೋಗಗಳು ದೂರವಾಗಿ ನಿಮ್ಮನ್ನು ಫಿಟ್ ಆಗಿಡುವುದು ಎಂದು ನೆನಪಿರಲಿ.

ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಮಹಿಳೆಯರ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದನ್ನು ತಿಳಿಯಲು ಸಾಧ್ಯವೂ ಇಲ್ಲ. ಆದರೆ ವಿಜ್ಞಾನಿಗಳು ಮಹಿಳೆಯರ ಪರಾಕಾಷ್ಠೆ ಬಗ್ಗೆ ಸುಮಾರು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ.

Most Read: ನೀವು ಸೆಕ್ಸ್ ವೇಳೆ ಮಾಡಲೇಬಾರದ 9 ತಪ್ಪುಗಳು...

ಹೆಬ್ಬೆರಳಿನ ಪಾತ್ರ

ಹೆಬ್ಬೆರಳಿನ ಪಾತ್ರ

ಮಹಿಳೆಯ ಚಂದ್ರನಾಡಿ ಮತ್ತು ಯೋನಿ ನಡುವಿನ ಆರಂಭಿಕ ಅಂತರವು ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆಯನ್ನು ಸಂಬಂಧಿಸಿದ್ದಾಗಿದೆ. ಈ ಅಂತರ ಕಡಿಮೆಯಿದ್ದಷ್ಟು ಅಂದರೆ ಒಂದು ಹೆಬ್ಬರಳಿನಷ್ಟ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಪರಾಕಾಷ್ಠೆ ತಲುಪುವ ಸಾಧ್ಯತೆ ಹೆಚ್ಚು. ಯಾಕೆ? ಚಂದ್ರನಾಡಿಯು ಕ್ರಿಯೆಯ ವೇಳೆ ಅನಿರ್ದೇಶಿತ ಉತ್ತೇಜನಕ್ಕೆ ಒಳಗಾಗುವುದು.

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಪುರುಷರಿಗೆ ಮಾತ್ರ ಸ್ವಪ್ನ ಸ್ಖಲನವಾಗುವುದಲ್ಲ, ಇದನ್ನು ನೀವು ನಂಬಬೇಕು. ಅಲ್ಫ್ರೆಡ್ ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.37ರಷ್ಟು ಮಹಿಳೆಯರು ಒಂದು ಸಲವಾದರೂ ನಿದ್ರೆಯಲ್ಲಿ ಪರಾಕಾಷ್ಠೆ ತಲುಪುವರು.

ವ್ಯಾಯಾಮದ ವೇಳೆ ಪಾರಾಕಾಷ್ಠೆ

ವ್ಯಾಯಾಮದ ವೇಳೆ ಪಾರಾಕಾಷ್ಠೆ

ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.5ರಷ್ಟು ಮಹಿಳೆಯರಿಗೆ ನಿರ್ದಿಷ್ಟವಾಗಿರುವಂತಹ ವ್ಯಾಯಾಮ ಮಾಡಿದಾಗ ಪರಾಕಾಷ್ಠೆ ತಲುಪಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದಕ್ಕೂ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವರು. ಯೋಗ, ಓಟ, ಭಾರ ಎತ್ತುವುದು ಇತ್ಯಾದಿ ವೇಳೆಯು ಮಹಿಳೆಯರಿಗೆ ಹೀಗೆ ಆಗಿದೆ.

ತೊಟ್ಟಿನಿಂದ ಪರಾಕಾಷ್ಠೆ

ತೊಟ್ಟಿನಿಂದ ಪರಾಕಾಷ್ಠೆ

ಹೌದು, ಕೆಲವು ಮಹಿಳೆಯರಿಗೆ ಸ್ತನಗಳ ತೊಟ್ಟನ್ನು ಉದ್ರೇಕಿಸಿದರೆ ಅದರಿಂದಲೂ ಪರಾಕಾಷ್ಠೆ ತಲುಪಲು ಆಗುವುದು. ಮೆದುಳಿನ ಅಧ್ಯಯನಿಂದ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿರುವಂತಹ ವಿಚಾರವೆಂದರೆ ಚಂದ್ರನಾಡಿ ಅಥವಾ ಯೋನಿಯ ಉತ್ತೇಜನಗೊಳಿಸಿದಷ್ಟೇ ಸ್ತನಗಳ ತೊಟ್ಟಿನಿಂದಲೂ ಪರಾಕಾಷ್ಠೆ ತಲುಪಬಹುದು.

ಅಕಾಲಿಕ ಪರಾಕಾಷ್ಠೆ

ಅಕಾಲಿಕ ಪರಾಕಾಷ್ಠೆ

2011ರಲ್ಲಿ ಪೋರ್ಚುಗೀಸ್ ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಶೇ.14ರಷ್ಟು ಮಹಿಳೆಯರು, ಸಾಂದರ್ಭಿಕವಾಗಿ ಅವರು ಬಯಸುವ ಮೊದಲೇ ಪರಾಕಾಷ್ಠೆ ತಲುಪುವರು. ಅದೇ ಶೇ.3ರಷ್ಟು ಮಹಿಳೆಯರಿಗೆ ಇದು ನಿರಂತರವಾಗಿರುವುದು. ಪುರುಷರಲ್ಲಿ ಮಾತ್ರ ಇಂತಹ ಪರಾಕಾಷ್ಠೆ ನಡೆಯುವುದಲ್ಲ. ಮಹಿಳೆಯರಲ್ಲೂ ಅಕಾಲಿಕ ಪರಾಕಾಷ್ಠೆಯಿದೆ ಎಂದು ತಿಳಿದುಬಂದಿದೆ.

Most Read: ಮಹಿಳೆಯರೇ ಎಚ್ಚರ-ಬಿಗಿಯಾದ ಬ್ರಾ ಧರಿಸಿದರೆ 'ಎದೆ ನೋವು' ಬರಬಹುದು!

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವು

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವು

ವೇಳೆ ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ ಮದುಳಿನ ಒಂದು ಭಾಗವು ಪ್ರತಿಕ್ರಿಯಿಸುತ್ತದೆ. ಇದರಿಂದ ನೋವು ಮತ್ತು ಸಂತೋಷಕ್ಕೆ ನರಗಳ ಸಂಬಂಧವಿದೆ ಎಂದು ಇದು ಹೇಳಿದೆ. ಮಹಿಳೆಯರು ತಮ್ಮ ಸಂಗಾತಿಯು ತುಂಬಾ ಆಕರ್ಷಕ, ಹಣವಂತ ಮತ್ತು ಆತ್ಮವಿಶ್ವಾಸಿಯಾಗಿದ್ದರೆ ಬೇಗನೆ ಪರಾಕಾಷ್ಠೆ ತಲುಪುವರು. ಮಹಿಳೆಯರ ಸಂತಾನೋತ್ಪತ್ತಿ ಫಿಟ್ನೆಸ್ ಹಾಗೂ ಪುರುಷರ ಸಾಮರ್ಥ್ಯವು ಮಹಿಳೆಯರ ಪರಾಕಾಷ್ಠೆಯಲ್ಲಿ ಪಾತ್ರ ವಹಿಸುವುದು ಎಂದು ಕೆಲವು ವಿಜ್ಞಾನಿಗಳು ಹೇಳಿರುವರು.

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು ಆಕೆ ತನ್ನ ಸಂಗಾತಿ ಜತೆಗೆ ಇದಕ್ಕೆ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆಗೆ ಒಳಪಟ್ಟಿದ್ದಾಳೆ ಎನ್ನುವುದನ್ನು ಅವಲಂಬಿಸಿದೆ. ಆ ಸಂಗಾತಿ ಬಗ್ಗೆ ಏನು ಭಾವಿಸುವಳು ಮತ್ತು ಅವರಿಬ್ಬರು ಲೈಂಗಿಕವಾಗಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ತುಂಬಾ ಅವಲಂಬಿತವಾಗಿದೆ.

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶವನ್ನು ದೊಡ್ಡ ಶಿಶ್ನಗಳು ಹೆಚ್ಚಿಸುವುದಿಲ್ಲವೆಂದು ಕೆಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಶಿಶ್ನವನ್ನು ಬಯಸುವರು. ಯಾಕೆಂದರೆ ಅವರಿಗೆ ಗರ್ಭಕಂಠದ ಉತ್ತೇಜನದ ಆನಂದ ಬೇಕಾಗುತ್ತದೆ. ಗರ್ಭಕಂಠದ ಉತ್ತೇಜನದಿಂದಾಗಿ ತಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚು ಪ್ರಖರವಾಗಿರುವ ಮೇಲ್ದುಟಿಯ ಟುರ್ಬೆಕ್ಲೆ ಇದ್ದರೆ ಆಗ ಅವರು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಪರಾಕಾಷ್ಠೆ ತಲುಪುವರು ಎಂದು ಹೇಳಲಾಗುತ್ತದೆ.

English summary

things about a womans body we bet you didn't know

Sex education is a sad affair in our country. Body-positivity only sounds like a classy word that comes from revolutionaries-of-sorts from far off lands. But, guess what? We all have bodies and we all have issues with them. Knowing about what is normal and what isn’t is nothing but mandatory.
Story first published: Saturday, October 13, 2018, 17:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more