For Quick Alerts
ALLOW NOTIFICATIONS  
For Daily Alerts

ಈ 6 ರಾಶಿಚಕ್ರದ ಜನರು ಹಣವನ್ನು ಹೆಚ್ಚು ಖರ್ಚು ಮಾಡುತ್ತಾರಂತೆ!

|

ಹಣ ಎನ್ನುವುದು ಎಲ್ಲರಿಗೂ ಅಗತ್ಯವಾದ ವಸ್ತು. ಅದನ್ನು ಗಳಿಸುವುದು ಎಂದರೆ ಅಷ್ಟು ಸುಲಭದ ವಿಚಾರವಲ್ಲ. ಬದುಕಿಗೆ ಅತ್ಯಗತ್ಯವಾದ ವಸ್ತು ಹಣ. ಹಣ ವಿಲ್ಲದೆ ಮನುಷ್ಯ ಏನನ್ನು ಪಡೆಯಲಾರ ಎಂದೇ ಹೇಳಬಹುದು. ಹಾಗಾಗಿ ಹಣ ಕೈಯಲ್ಲಿ ಇರುವಾಗ ಅದನ್ನು ಕಾಪಾಡಿಕೊಳ್ಳುವುದು ಮತ್ತು ಸೂಕ್ತ ಕಾರಣಗಳಿಗೆ ವ್ಯಯಿಸುವ ಕೆಲಸವನ್ನು ಮಾಡಬೇಕು. ಕೆಲವರು ಕೈಗೆ ಹಣ ಸಿಕ್ಕಿದೆ ಅಥವಾ ಇದೆ ಎಂದಾಗ ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡುತ್ತಾರೆ. ಮುಂದಿನ ಭವಿಷ್ಯದ ಬಗ್ಗೆಯೂ ಚಿಂತನೆ ನಡೆಸುವುದಿಲ್ಲ.

ಕೆಲವರು ತಾವು ಹಣವನ್ನು ಖರ್ಚುಮಾಡಲು ಸಾಕಷ್ಟು ಉತ್ತಮ ಕಾರಣಗಳಿವೆ ಎನ್ನಬಹುದು. ಇಲ್ಲವೇ ತಾವು ಮಾಡುವ ಖರ್ಚುಗಳಿಗೆ ಸಾಕಷ್ಟು ಸಮರ್ಥನೆಯನ್ನು ನೀಡಬಹುದು. ಆದರೆ ಖರ್ಚು ಯಾವುದೇ ಉದ್ದೇಶಕ್ಕೆ ಅಥವಾ ಕೆಲಸಕ್ಕಾಗಿ ಮಾಡಿದ್ದರೂ ಅದು ಖರ್ಚು ಎಂದೇ ಎನಿಸಿಕೊಳ್ಳುವುದು. ಬಹುತೇಕರು ಸಾಕಷ್ಟು ದುಡಿದು ಸಂಪಾದಿಸಿದ್ದರೂ ಅವರ ಬಳಿ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಅಲ್ಪ ಆದಾಯವನ್ನು ಹೊಂದಿದ್ದರೂ ಅದರಲ್ಲಿಯೇ ಸಾಕಷ್ಟು ಹಣವನ್ನು ಉಳಿತಾಯ ಮಾಡಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣವನ್ನು ಗಳಿಸುವುದು, ಉಳಿಸುವುದು ಹಾಗೂ ಅದನ್ನು ಖರ್ಚುಮಾಡುವುದು ಎಲ್ಲವೂ ಅವರವರ ರಾಶಿಚಕ್ರ ಹಾಗೂ ಗ್ರಹಗತಿಗಳನ್ನು ಆದರಿಸಿರುತ್ತದೆ. ಅವುಗಳ ಆಧಾರದ ಮೇಲೆಯೇ ವ್ಯಕ್ತಿಯು ಶ್ರೀಮಂತಿಕೆ ಹಾಗೂ ಬಡತನವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ಹನ್ನೆರಡು ರಾಶಿಚಕ್ರದವರಲ್ಲಿ ಆರು ರಾಶಿಚಕ್ರದವರು ಹೆಚ್ಚು ಹಣವನ್ನು ವ್ಯಯಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಹಾಗಾದರೆ ಆ ಆರು ರಾಶಿಚಕ್ರಗಳು ಯಾವವು? ಅವುಗಳ ಪಟ್ಟಿಯಲ್ಲಿ ನೀವು ಇದ್ದೀರಾ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಹಠಾತ್ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಈ ಸ್ವಭಾವ ಹಣವನ್ನು ಖರ್ಚುಮಾಡುವುದರಲ್ಲೂ ಇರುತ್ತದೆ. ಏನನ್ನಾದರೂ ಪಡೆಯಬೇಕು ಎಂದು ಬಯಸಿದರೆ ಅದನ್ನು ಪಡೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಒಂದಷ್ಟು ಹಣವನ್ನು ಸಹ ವ್ಯಯಿಸುವರು.

ಮೇಷ

ಮೇಷ

ಯಾವುದೇ ವಿಷಯದಲ್ಲೂ ಎಷ್ಟು ಬೇಕೋ ಅಷ್ಟೇ ಹೊಂದಬೇಕು ಎನ್ನುವುದನ್ನು ಅರಿಯುವುದಿಲ್ಲ. ಇವರು ಬಯಸುವ ವಸ್ತುಗಳು ತಮ್ಮ ಬಜೆಟ್ ಅಲ್ಲಿ ಇಲ್ಲವಾದರೂ ಅನಿಯಮಿತವಾಗಿ ವ್ಯಯಿಸುತ್ತಾರೆ.

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳು ಶಾಪಿಂಗ್ ಮಾಡುವುದು ಉಡುಗೊರೆ ನೀಡುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಎನ್ನಬಹುದು. ಯಾರ ಹುಟ್ಟುಹಬ್ಬ ಅಥವಾ ಯಾವುದೇ ಸಮಾರಂಭವಾದರೂ ಅದರಲ್ಲಿ ಪಾಲ್ಗೊಳ್ಳುವುದು, ಆ ಕಾರ್ಯಕ್ರಮಕ್ಕೆ ಕಾರಣೀಭೂತರಾದವರಿಗೆ ಉಡುಗೊರೆ ನೀಡುವುದರಲ್ಲಿ ಮುಂದಿರುತ್ತಾರೆ.

Most Read: ಸುಂದರವಾಗಿ ಕಾಣಬೇಕೆಂದರೆ, ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

ಸಿಂಹ

ಸಿಂಹ

ಎಂತಹದ್ದೇ ಮೌಲ್ಯದ್ದಾದರೂ ಅದನ್ನು ಖರೀದಿಸುವುದು ಹಾಗೂ ಉಡುಗೊರೆಯನ್ನಾಗಿ ನೀಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಮೀನ

ಮೀನ

ಇವರು ಅತ್ಯಂತ ಮೃದು ಸ್ವಭಾವದವರು ಎನ್ನಬಹುದು. ಇವರ ಮೃದು ಗುಣವನ್ನು ಇತರರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಇವರಿಂದ ಕೆಲವರು ಹಣವನ್ನು ಎರವಲು ಪಡೆಯಲು ಬಯಸುತ್ತಾರೆ. ಹಣವನ್ನು ಎರವಲು ಕೇಳಿದವರಿಗೆ ಯಾವುದೇ ಅಡೆತಡೆ ಇಲ್ಲದೆಯೇ ಹಣವನ್ನು ನೀಡುವರು.

ಮೀನ

ಮೀನ

ಯಾರಾದರೂ ಕಷ್ಟದಲ್ಲಿದ್ದಾರೆ ಅಥವಾ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತೇನೆ ಎನ್ನುವವರಿಗೆ ಸಾಕಷ್ಟು ಹಣದ ಸಹಾಯ ಮಾಡುವರು. ಕೆಲವರು ಇವರ ಗುಣವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದೊಡ್ಡ ಯೋಜನೆಗಳಿಗೆ ಹಣವನ್ನು ಇವರಿಂದ ಪಡೆದುಕೊಳ್ಳುವರು. ಮುಗ್ಧರಾದ ಇವರು ದಾರಾಳವಾಗಿ ನೀಡುತ್ತಾರೆ. ಹಾಗಾಗಿ ಇವರು ಹಣವನ್ನು ವ್ಯಯಿಸುವವರ ಪಟ್ಟಿಯಲ್ಲಿ ನಿಲ್ಲುತ್ತಾರೆ ಎನ್ನಬಹುದು.

Most Read: ಈ ಮೂರು ರಾಶಿಚಕ್ರದವರು ತಮ್ಮ ನೋವು ಅಥವಾ ದುಃಖವನ್ನು ಪರರಿಗೆ ತಿಳಿಸಲು ಬಯಸುವುದಿಲ್ಲ!

ಧನು

ಧನು

ಇವರಿಗೆ ಹಣದ ಉಳಿತಾಯದ ಬಗ್ಗೆ ಏನೂ ತಿಳಿದಿರುವುದಿಲ್ಲ ಎನ್ನಬಹುದು. ಇವರು ಸದಾ ಹಣವನ್ನು ವ್ಯಯಿಸುವುದರಲ್ಲಿಯೇ ತಲ್ಲೀನರಾಗಿರುತ್ತಾರೆ. ಸದಾ ಪ್ರಯಾಣ ಅಥವಾ ಓಡಾಟದಲ್ಲಿಯೇ ಹೆಚ್ಚು ಆಸಕ್ತಿಯನ್ನು ಹೊಂದಿರುವುದರಿಂದ ವಿಮಾನ್ ಟಿಕೆಟ್‍ಗಳಿಗೆ, ಹೋಟೇಲ್‍ಗಳಿಗೆ, ಅಲಂಕಾರಿ ವಸ್ತುಗಳಿಗೆ ಹಾಗೂ ಅದ್ದೂರಿ ಊಟಗಳಿಗೆ ಅಧಿಕ ಹಣವನ್ನು ವ್ಯಯಿಸುತ್ತಾರೆ.

ಧನು

ಧನು

ಇವರ ಸಮಸ್ಯೆ ಎಂದರೆ ತಮ್ಮ ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳುವುದಿಲ್ಲ. ಅಲ್ಲದೆ ನಿಧಿಯನ್ನು ಹೇಗೆ ಸಂಗ್ರಹಿಸಿಕೊಳ್ಳಬೇಕು ಎನ್ನುವುದರ ಬಗ್ಗೆಯೂ ಚಿಂತನೆ ನಡೆಸುವುದಿಲ್ಲ. ಹಾಗಾಗಿ ಇವರಲ್ಲಿ ಹಣದ ಉಳಿತಾಯ ಇರುವುದಿಲ್ಲ ಎಂದು ಹೇಳಲಾಗುವುದು.

Most Read: ಯಾವ್ಯಾವ ರಾಶಿಯವರಿಗೆ ಈ ' ದೀಪಾವಳಿ' ಶುಭ ತರಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಮಿಥುನ

ಮಿಥುನ

ಇವರು ತಮ್ಮದೇ ಕಾರಣಗಳಿಗೆ ಹಣವನ್ನು ವ್ಯಯಿಸುವರು. ತಾವು ಬಯಸಿದ್ದು ಅಥವಾ ಇಷ್ಟವಾದ ವಸ್ತುಗಳ ಖರೀದಿಗೆ ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ಇವರ ದೃಷ್ಟಿಯಲ್ಲಿ ವಸ್ತುಗಿಂತ ಹಣ ಮುಖ್ಯವಾಗಿರುವುದಿಲ್ಲ ಎಂದೇ ಹೇಳಬಹುದು. ಇವರು ಜೀವದಲ್ಲಿ ಸದಾ ಅತ್ಯುತ್ತಮವಾದ ವಸ್ತುವನ್ನು ಪಡೆದುಕೊಳ್ಳಲು ಬಯಸುವರು.

ಮಿಥುನ

ಮಿಥುನ

ಇವರು ಹಣವನ್ನು ಖರ್ಚುಮಾಡಿ ಸುಖ ಭೋಗಗಳನ್ನು ಅನುಭವಿಸುವುದರಲ್ಲಿಯೇ ಹೆಚ್ಚು ಸಂತೋಷವನ್ನು ಕಾಣುತ್ತಾರೆ. ಹಾಗಾಗಿ ಇವರ ಖರ್ಚು ಆದಾಯಕ್ಕಿಂತಲೂ ಹೆಚ್ಚಾಗುವುದು. ಉಳಿತಾಯ ಮಾಡುವ ಗುಣವು ಕಡಿಮೆ ಮತ್ತು ಉಳಿತಾಯದ ಹಣವು ಅಲ್ಪವೇ ಅಗಿರುತ್ತದೆ.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಎಲೆಕ್ಟ್ರಾನಿಕ್ ವಸ್ತುಗಳು, ಹೊಸ ವ್ಯವಹಾರಗಳು, ಮಾನವೀಯತೆಯ ದೃಷ್ಟಿಯಿಂದ ದೇಣಿಗೆನೀಡುವುದಕ್ಕೆ ಹೆಚ್ಚು ಹಣವನ್ನು ವ್ಯಯಿಸುತ್ತಾರೆ. ಇವರಿಗೆ ಹೊಸ ಕೆಲಸಕ್ಕೆ ಹಣವನ್ನು ವಿನಿಯೋಗಿಸುವುದು, ಉತ್ಪನ್ನಗಳ ಹೂಡಿಕೆ ಮತ್ತು ಅಧಿಕ ಹಣವನ್ನು ಖರ್ಚುಮಾಡುವುದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ.

ಕುಂಭ

ಕುಂಭ

ಹಣದ ಕುರಿತು ಯಾವುದೇ ಹೆಚ್ಚಿನ ಗಮನ ಅಥವಾ ಉಳಿತಾಯದ ಮನಸ್ಸನ್ನು ಹೊಂದುವುದಿಲ್ಲ. ಕೆಲವೊಮ್ಮೆ ಹೂಡಿಕೆ ಮಾಡಿರುವ ಯೋಜನೆಯು ನಷ್ಟವನ್ನು ಹೊಂದುವುದರ ಮೂಲಕ ಸಾಕಷ್ಟು ಹಣ ನಷ್ಟವಾಗುವುದು. ಈ ಎಲ್ಲಾ ಕಾರಣಗಳಿಂದಾಗಿಯೂ ಹಣವನ್ನು ಹೊಂದಿಸುವುದು ಅಥವಾ ಉಳಿತಾಯ ಮಾಡುವುದು ಇವರಿಗೆ ಕಷ್ಟವಾಗುವುದು.

English summary

These Zodiac Signs Who Spend Way Too Much Money

Do you spend too much money? You may be spending money in an irresponsible way or you may have very good reasons for spending your money, but it doesn't matter because it’s always gone before you know it. That means you might be one of the zodiac signs who overspend. Luckily, astrology can help us figure out who they are. While some zodiac signs save almost every penny they make and use a number of different methods to hang on to their money, there are others who, no matter how hard they try to change, even with the help of a horoscope, they immediately spend everything.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more